ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಕೀವಿಸ್ ಅಂತಿಮ ಪಂದ್ಯ : ಭರ್ಜರಿಯಾಗಿ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ

IND vs NZ 5th t20 : India white washes the T20 series | India | Newzealand | T20
 India vs New Zealand 5th T20I At Mount Maunganui Live Score

ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಪಂದ್ಯವನ್ನೂ ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಸರಣಿಯ ಐದೂ ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ನಿರ್ಮಿಸಿದೆ. ನ್ಯೂಜಿಲ್ಯಾಂಡ್ ತವರಿನಲ್ಲೇ ವೈಟ್‌ವಾಶ್ ಅನುಭವಿಸಿ ಮುಖಭಂಗಕ್ಕೆ ಗುರಿಯಾಗಿದೆ.

ನ್ಯೂಜಿಲ್ಯಾಂಡ್ ವಿರುದ್ಧ ಅಂತಿಮ ಪಂದ್ಯವನ್ನೂ ಭಾರತ ಭರ್ಜರಿಯಾಗಿ ಗೆದ್ದುಕೊಂಡಿದೆ. ಈ ಮೂಲಕ ಸರಣಿಯ ಐದೂ ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ನಿರ್ಮಿಸಿದೆ. ನ್ಯೂಜಿಲ್ಯಾಂಡ್ ತವರಿನಲ್ಲೇ ವೈಟ್‌ವಾಶ್ ಅನುಭವಿಸಿ ಮುಖಭಂಗಕ್ಕೆ ಗುರಿಯಾಗಿದೆ.

ಟೀಮ್ ಇಂಡಿಯಾ ನೀಡಿದ ಗುರಿಯನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. 17 ರನ್‌ಗೆ ಆರಂಭದ ಮೂರು ವಿಕೆಟ್ ಕಳೆದುಕೊಂಡಿತು. ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ ಮತ್ತು ಟಾಮ್ ಬ್ರೂಸ್ ಬೇಗನೆ ವಿಕೆಟ್ ಕಳೆದುಕೊಂಡರು. ಬಳಿಕ ರಾಸ್‌ ಟೇಲರ್ ಮತ್ತು ಸೈಫರ್ಟ್ ತಲಾ ಅರ್ಧ ಶತಕ ಸಿಡಿಸಿ ಗೆಲುವಿಗಾಗಿ ಯತ್ನಿಸಿದರು. ಆದರೆ ಈ ವಿಕೆಟ್ ಕೆಡವಿದ ಬಳಿಕ ಟೀಮ್ ಇಂಡಿಯಾಗೆ ಗೆಲುವು ಸುಲಭವಾಯಿತು.,

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಉಪನಾಯಕ ರೋಹಿತ್ ಶರ್ಮಾ ಮುನ್ನಡೆಸಿದ್ದರು.

ಅಂತಿಮ ಟಾಸ್‌ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ನಿಗದಿತ 20 ಓವರ್‌ಗಳಲ್ಲಿ 163 ರನ್‌ಗಳಿಸಿದ ಟೀಮ್ ಇಂಡಿಯಾ ನ್ಯೂಜಿಲ್ಯಾಂಡ್‌ಗೆ ಸವಾಲಿನ ಗುರಿಯನ್ನು ನೀಡಿದೆ. ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ.

ಟೀಮ್ ಇಂಡಿಯಾ ಆರಂಭಕ ಆಟಗಾರ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲೂ ಬೇಗನೆ ವಿಕೆಟ್ ಕಳೆದುಕೊಂಡರು. ಬಳಿಕ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅರ್ಧ ಶತಕದ ಜೊತೆಯಾಟವನ್ನು ನೀಡಿದರು.

ರಾಹುಲ್ 33 ಬಾಲ್‌ಗಳಿಂದ 45 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರು. ರಾಹುಲ್ 4 ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ್ದಾರೆ. ನಾಯಕ ರೊಹಿತ್ ಶರ್ಮಾ 41 ಎಸೆತಗಳಲ್ಲಿ 60 ರನ್ ಸಿಡಿಸಿ ಮಿಂಚಿದ್ದಾರೆ. ಬಳಿಕ ಗಾಯಗೊಂಡ ಶರ್ಮಾ ನಿವೃತ್ತಿ ಪಡೆ ಹೊರ ನಡೆದರು. ಶ್ರೇಯಸ್ ಅಯ್ಯರ್ 33 ರನ್‌ ಗಳಸಿದರು.

ಭಾರತ vs ನ್ಯೂಜಿಲ್ಯಾಂಡ್: ಅಂತಿಮ ಪಂದ್ಯವನ್ನು ಗೆದ್ದು ವಿಶ್ವದಾಖಲೆಯತ್ತ ಟೀಮ್ ಇಂಡಿಯಾ ಚಿತ್ತಭಾರತ vs ನ್ಯೂಜಿಲ್ಯಾಂಡ್: ಅಂತಿಮ ಪಂದ್ಯವನ್ನು ಗೆದ್ದು ವಿಶ್ವದಾಖಲೆಯತ್ತ ಟೀಮ್ ಇಂಡಿಯಾ ಚಿತ್ತ

ರಿಷಬ್ ಪಂತ್ ಈ ಪಂದ್ಯದಲ್ಲೂ ಅವಕಾಶವನ್ನು ಕಳೆದುಕೊಳ್ಳುವ ಮೂಲಕ ಈ ಸರಣಿಯಲ್ಲಿ ಯಾವುದೇ ಪಂದ್ಯದಲ್ಲೂ ಆಡುವ ಬಳಗದಲ್ಲಿ ಕಾಣಿಸಿಕೊಳ್ಳದೆ ನಿರಾಸೆ ಅನುಭವಿಸಿದ್ದಾರೆ. ನ್ಯೂಜಿಲ್ಯಾಂಡ್‌ನಲ್ಲಿ ನಾಯಕ ಕೇನ್ ವಿಲಿಯಮ್ಸನ್ ಈ ಪಂದ್ಯದಲ್ಲೂ ಹೊರಗುಳಿದಿದ್ದಾರೆ.

1
46207

ಟೀಮ್ ಇಂಡಿಯಾ ಆಡುವ ಬಳಗ: ಲೋಕೇಶ್ ರಾಹುಲ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ರೋಹಿತ್ ಶರ್ಮಾ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ

ನ್ಯೂಜಿಲ್ಯಾಂಡ್ ಆಡುವ ಬಳಗ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ರಾಸ್ ಟೇಲರ್, ಟಾಮ್ ಬ್ರೂಸ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಗೆಲೀಜ್ನ್, ಟಿಮ್ ಸೌಥಿ (ನಾಯಕ), ಇಶ್ ಸೋಧಿ, ಹಮೀಶ್ ಬೆನೆಟ್

Story first published: Sunday, February 2, 2020, 16:28 [IST]
Other articles published on Feb 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X