ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನಂತಾ ಆಟಗಾರ ವಿಶ್ವದಲ್ಲಿ ಮತ್ತೊಬ್ಬನಿಲ್ಲ: ಈ ಆಟಗಾರನ ಅಲಭ್ಯತೆ ಭಾರತಕ್ಕೆ ಕಾಡಲಿದೆ ಎಂದ ಆಕಾಶ ಚೋಪ್ರ

India vs New zealand: Aakash Chopra names a player who will miss Team India

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಆರಂಭವಾಗಿದ್ದು ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಾತಕ ವಿರಾಟ್ ಕೊಹ್ಲಿ ಈ ಪಂದ್ಯದ ಮೂಲಕ ತಂಡಕ್ಕೆ ಮರಳಿದ್ದಾರೆ. ಟಿ20 ವಿಶ್ವಕಪ್‌ನ ನಂತರ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಹಾಗೂ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಮುಂಬೈನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರತದ ಆಟಗಾರರಿಗೆ ಗಾಯದ ಸಮಸ್ಯೆ ಆಘಾತ ನೀಡಿದ್ದಾರೆ. ತಂಡದ ಮೂವರು ಆಟಗಾರರು ಗಾಯದ ಕಾರಣದಿಂದಾಗಿ ಹೊರಗುಳಿದಿದ್ದಾರೆ. ಆದರೆ ಇದರಲ್ಲಿ ಓರ್ವ ಆಟಗಾರನ ಸ್ಥಾನವನ್ನು ಯಾರು ಕೂಡ ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರ.

ಮುಂಬೈ ಟೆಸ್ಟ್‌ನ ಆಡುವ ಬಳಗದಲ್ಲಿ ಕಾನ್ಪುರದಲ್ಲಿ ಕಣಕ್ಕಿಳಿದಿದ್ದ ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜಾ ಹಾಗೂ ಇಶಾಂತ್ ಶರ್ಮಾ ಗಾಯದ ಕಾರಣದಿಂದಾಗಿ ಹೊರಗುಳಿದಿದ್ದಾರೆ. ಈ ಮೂವರ ಬದಲಿಗೆ ವಿರಾಟ್ ಕೊಹ್ಲಿ, ಜಯಂತ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಆಡುವ ಬಖಗದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಮೂವರು ಆಟಗಾರರ ಪೈಕ ಓರ್ವ ಆಟಗಾರನ ಅಲಭ್ಯತೆ ತಂಡಕ್ಕೆ ಬಹಳ ಕಾಡಲಿದೆ. ಯಾರಿಂದಲೂ ಕೂಡ ಆ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಹಾಗಾದರೆ ಟೀಮ್ ಇಂಡಿಯಾದ ಆ ಆಟಗಾರ ಯಾರು? ಯಾವ ಕಾರಣದಿಂದಾಗಿ ಟೀಮ್ ಇಂಡಿಯುಆದ ಈ ಆಟಗಾರನ ಸ್ಥಾನವನ್ನು ಬೇರೆ ಯಾರಿಂದಲೂ ತುಂಬಲು ಸಾಧ್ಯವಿಲ್ಲ ಎಂದಿದ್ದಾರೆ ಚೋಪ್ರ? ಮುಂದೆ ಓದಿ..

ಜಡೇಜಾ ಅವರನ್ನು ತಂಡ ಮಿಸ್ ಮಾಡಿಕೊಳ್ಳಲಿದೆ

ಜಡೇಜಾ ಅವರನ್ನು ತಂಡ ಮಿಸ್ ಮಾಡಿಕೊಳ್ಳಲಿದೆ

"ವಿರಾಟ್ ಕೊಹ್ಲಿ ಆಡುವ ಬಳಗಕ್ಕೆ ಸೇರಿಕೊಂಡರು ರಹಾನೆ ಹೊರಗುಳಿದರು. ಹೀಗಾಗಿ ಶ್ರೇಯಸ್ ಐಯ್ಯರ್ ತಂಡದಲ್ಲಿಯೇ ಉಳಿದಿದ್ದಾರೆ. ಆರಂಭಿಕರು ಇಬ್ಬರು ಕೂಡ ಮುಂದುವರಿದಿದ್ದಾರೆ ನಿಜಕ್ಕೂ ಇದು ಉತ್ತಮವಾದ ಸಂಗತಿ. ಆದರೆ ಜಡೇಜಾ ಅವರನ್ನು ಮಾತ್ರ ತಂಡ ಮಿಸ್ ಮಾಡಿಕೊಳ್ಳಲಿದೆ. ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಆರಂಭವನ್ನು ನೀಡುವ ಇಶಾಂತ್ ಶರ್ಮಾ ಕೂಡ ಹೊರಗುಳಿದಿದ್ದು ಅವರ ಸ್ಥಾನಕ್ಕೆ ಮೊಹಮ್ಮದ್ ಸಿರಾಜ್ ಸೇರ್ಪಡೆಯಾಗಿದ್ದಾರೆ" ಎಂದು ಆಕಾಶ್ ಚೋಪ್ರ ಹೇಳಿದ್ದಾರೆ.

ಜಡೇಜಾಗೆ ಪರ್ಯಾಯ ಆಟಗಾರನಿಲ್ಲ

ಜಡೇಜಾಗೆ ಪರ್ಯಾಯ ಆಟಗಾರನಿಲ್ಲ

"ರವೀಂದ್ರ ಜಡೇಜಾ ಅವರ ಬಗ್ಗೆ ಮಾತನಾಡುವುದಾದರೆ ಆತನ ರೀತಿ ವಿಶ್ವದಲ್ಲಿ ಯಾರೂ ಕೂಡ ಇಲ್ಲ. ಆತನಿಗೆ ನೀವು ಬದಲಿಯಾಗಿ ಇನ್ನೊಬ್ಬ ಆಟಗಾರನನ್ನು ನೀಡಲು ಸಾಧ್ಯವಿಲ್ಲ. ಆತನೋರ್ವ ಮೂರು ಆಯಾಮದ ಆಟಗಾರ, ಬ್ಯಾಟಿಂಗ್ ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲಿಯೂ ಅಮೋಘ ಪ್ರದರ್ಶನ ನೀಡುತ್ತಾರೆ. ಅವರ ಅಲಭ್ಯತೆಯಲ್ಲಿ ನೀವು ನಿಮ್ಮಲ್ಲಿನ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಳ್ಳಬೇಕಿದೆ. ಜಯಂತ್ ಉತ್ತಮ ಪ್ರದರ್ಶನ ನೀಡುವ ಸಾಮರ್ಥ್ಯವನ್ನು ಹೊಂದಿದ್ದಾರೆ ಅಲ್ಲದೆ ಎದುರಾಳಿ ತಂಡದಲ್ಲಿ ಎಡಗೈ ಆಟಗಾರರು ಹೆಚ್ಚಾಗಿರುವ ಸಂದರ್ಭದಲ್ಲಿ ಅವರ ಪ್ರದರ್ಶನ ತಂಡಕ್ಕೆ ಬಹಳ ಮುಖ್ಯವಾಗಲಿದೆ. ಆದರೆ ರವೀಂದ್ರ ಜಡೇಜಾ ಅವರ ಅಲಭ್ಯತೆ ಈ ಪಂದ್ಯದಲ್ಲಿ ತಂಡಕ್ಕೆ ಬಹಳ ಕಾಡಲಿದೆ" ಎಂದಿದ್ದಾರೆ ಮಾಜಿ ಆರಂಭಿಕ ಆಟಗಾರ ಹಾಗೂ ಕಾಮೆಂಟೇಟರ್ ಆಕಾಶ್ ಚೋಪ್ರ.

ತಡವಾಗಿ ಆರಂಭವಾದ ಪಂದ್ಯ

ತಡವಾಗಿ ಆರಂಭವಾದ ಪಂದ್ಯ

ಇನ್ನು ಭಾರತ ಹಾಗೂ ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಪಂದ್ಯ ವಾಂಖೆಡೆ ಸ್ಟೇಡಿಯಂನಲ್ಲಿ ತಡವಾಗಿ ಆರಂಭವಾಯಿತು. ಮಳೆ ಸುರಿದ ಪರಿಣಾಮವಾಗಿ ಮೈದಾನ ತೇವದಿಂದ ಕೂಡಿತ್ತು. ಹೀಗಾಗಿ ಭೋಜನ ವಿರಾಮದ ಬಳಿಕ ಪಂದ್ಯವನ್ನು ಆರಂಭಿಸಲಾಗಿದೆ.

ಆಘಾತ ನೀಡಿದ ಅಜಾಜ್

ಆಘಾತ ನೀಡಿದ ಅಜಾಜ್

ಇನ್ನು ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಮ್ ಇಂಡಿಯಾ ಉತ್ತಮ ಆರಂಭವನ್ನು ಪಡೆದುಕೊಂಡಿತು. ಮೊದಲ ವಿಕೆಟ್‌ಗೆ ಮಯಾಂಕ್ ಅಗರ್ವಾಲ್ ಹಾಗೂ ಶುಬ್ಮನ್ ಗಿಲ್ 80 ರನ್‌ಗಳ ಕೊಡುಗೆ ನೀಡಿದರು. ಆದರೆ ಈ ಜೋಡಿ ಬೇರ್ಪಟ್ಟ ನಂತರ ಟೀಮ್ ಇಂಡಿಯಾ ಆಘಾತ ಅನುಭವಿಸಿತು. ಚೇತೇಶ್ವರ್ ಪೂಜಾರ ಹಾಗೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿದರು. ಈ ಮೂಲಕ ಭಾರತ 80 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ನಂತರ ಶ್ರೇಯಸ್ ಐಯ್ಯರ್ ಕೂಡ 18 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಈ ನಾಲ್ಕುಯ ವಿಕೆಟ್ ಕೂಡ ಅಜೀಜ್ ಪಾಲಾಯಿತು.

ಟೀಮ್ ಇಂಡಿಯಾ: ಮಯಾಂಕ್ ಅಗರ್ವಾಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್, ಜಯಂತ್ ಯಾದವ್, ಉಮೇಶ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್

ನ್ಯೂಜಿಲೆಂಡ್‌: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್

Story first published: Saturday, December 4, 2021, 0:11 [IST]
Other articles published on Dec 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X