ಅಂಕಿಅಂಶಗಳೆಲ್ಲಾ ಭಾರತಕ್ಕೆ ವಿರುದ್ಧ: ಶಾಹೀನ್ ಅಫ್ರಿದಿ ನಂತರ ಭಾರತಕ್ಕೆ ಕಾಡಲು ಸಜ್ಜಾದ ಮಾರಕ ವೇಗಿ!

ಕಳೆದ ಭಾನುವಾರ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲ ವಿರಾಟ್ ಕೊಹ್ಲಿ ಪಡೆಗೆ ಯುವ ವೇಗಿ ಶಾಹೀನ್ ಶಾ ಅಫ್ರಿದಿ ನೀಡಿದ ಆಘಾತ ಇನ್ನೂ ಹಸಿರಾಗಿದೆ. ಮತ್ತೊಂದು ಪ್ರಮುಖ ಎದುರಾಳಿಯನ್ನು ಎದುರಿಸಲು ಸಜ್ಜಾಗಿರುವ ಟೀಮ್ ಇಂಡಿಯಾ ಪಡೆಗೆ ಈಗ ಮತ್ತೋರ್ವ ವೇಗಿಯ ಭೀತಿ ಕಾಡ ತೊಡಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರಾದ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿಗೆ ಅಗ್ನಿ ಪರೀಕ್ಷೆ ಎದುರಾಗುವುದರಲ್ಲಿ ಅನುಮಾನವಿಲ್ಲ.

ಮುಂದಿನ ಭಾನುವಾರ ಭಾರತ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳ ಪಾಲಿಗೂ ಅತ್ಯಂತ ಮಹತ್ವದ ಪಂದ್ಯವಾಗಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾಡಿದ ತಪ್ಪನ್ನು ಪುನರಾವರ್ತಿಸದೆ ಆಡಿದರೆ ಮಾತ್ರವೇ ಭಾರತ ಯಶಸ್ಸು ಸಾಧಿಸಲು ಸಾಧ್ಯವಿದೆ. ಆದರೆ ಟೀಮ್ ಇಂಡಿಯಾಗೆ ಕಿವೀಸ್ ಪಡೆಯ ಈ ವೇಗಿಯಿಂದ ಮಾತ್ರ ಕಂಟಕ ತಪ್ಪಿದ್ದಲ್ಲ.

ಟಿ20 ವಿಶ್ವಕಪ್: ಟೀಮ್ ಇಂಡಿಯಾದ 6ನೇ ಬೌಲರ್‌ನ ಸಮಸ್ಯೆಗೆ ಸಿಕ್ಕಿತು ಉತ್ತರ!ಟಿ20 ವಿಶ್ವಕಪ್: ಟೀಮ್ ಇಂಡಿಯಾದ 6ನೇ ಬೌಲರ್‌ನ ಸಮಸ್ಯೆಗೆ ಸಿಕ್ಕಿತು ಉತ್ತರ!

ಹಾಗಾದರೆ ಆ ವೇಗಿ ಯಾರು? ಭಾರತದ ವಿರುದ್ಧ ಕಿವೀಸ್ ಪಡೆಯ ಬೌಲರ್‌ನ ಅಂಕಿಅಂಶಗಳು ಹೇಗಿದೆ? ಮುಂದೆ ಓದಿ..

ಯಾರು ಆ ಬೌಲರ್

ಯಾರು ಆ ಬೌಲರ್

ಭಾರತೀಯ ತಂಡದ ಅಗ್ರ ಕ್ರಮಾಂಕದ ಆಟಗಾರು ಎಚ್ಚರ ವಹಿಸಬೇಕಿರುವ ಆ ಪ್ರಮುಖ ವೇಗದ ಬೌಲರ್ ಬೇರೆ ಯಾರ ಅಲ್ಲ ಕಿವೀಸ್ ಪಡೆಯ ಪ್ರಮುಖ ಅಸ್ತ್ರ ಟ್ರೆಂಟ್ ಬೋಲ್ಟ್. ಭಾರತ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳಿಗೂ ಕ್ವಾರ್ಟರ್ ಫೈನಲ್ ರೀತಿಯ ಪಂದ್ಯವಾಗಿರುವ ಕಾರಣದಿಂದಾಗಿ ಬೋಲ್ಟ್ ವಿರುದ್ಧ ಭಾರತದ ದಾಂಡಿಗರು ಸೂಕ್ತ ಯೋಜನೆಯನ್ನು ರೂಪಿಸಿಕೊಳ್ಳಬೇಕಿದೆ. ಅದರಲ್ಲೂ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಆಟಗಾರರು ಯುವ ವೇಗಿ ಶಾಹೀನ್ ಅಫ್ರಿದಿಗೆ ವಿಕೆಟ್ ಒಪ್ಪಿಸಿದ ರೀತಿ ತಂಡದ ಆತ್ಮ ವಿಶ್ವಾಸಕ್ಕೂ ಹಿನ್ನಡೆಯುಂಟು ಮಾಡಿರುವುದರಲ್ಲಿ ಅನುಮಾನವಿಲ್ಲ.

ಐಪಿಎಲ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಬೋಲ್ಟ್

ಐಪಿಎಲ್‌ನಲ್ಲಿ ಹಿನ್ನಡೆ ಅನುಭವಿಸಿದ್ದ ಬೋಲ್ಟ್

ನ್ಯೂಜಿಲೆಂಡ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿರುವ ಟ್ರೆಂಟ್ ಬೋಲ್ಟ್ ಈ ಬಾರಿ ಯುಎಇನಲ್ಲಿಯೇ ನಡೆದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ ಮಿಂಚಲು ವಿಫಲವಾಗಿದ್ದರು. ಪ್ರತಿ ಬಾರಿಯೂ ರೋಹಿತ್ ಶರ್ಮಾ ಪಡೆಗೆ ವಿಕೆಟ್ ಕಬಳಿಸುವ ಮೂಲಕ ಆಸರೆಯಾಗುತ್ತಿದ್ದ ಈ ವೇಗಿ ಯುಎಇನಲ್ಲಿ ವೈಫಲ್ಯವನ್ನು ಅನುಭವಿಸಿದ್ದರು. ಯುಎಇನಲ್ಲಿ ಆಡಿದ 7 ಪಂದ್ಯಗಳಲ್ಲಿ 5 ವಿಕೆಟ್ ಮಾತ್ರವೇ ಪಡೆದುಕೊಂಡಿದ್ದರು. ಹೀಗಾಗಿ ಟ್ರೆಂಟ್ ಬೋಲ್ಟ್ ಅವರ ಫಾರ್ಮ್ ಭಾರತಕ್ಕೆ ಸಣ್ಣ ನಿಟ್ಟುಸಿರು ಬಿಡುವಂತೆ ಮಾಡಿದೆ. ಆದರೆ ಅಪಾಯಕಾರಿ ಬೌಲರ್‌ನನ್ನು ಯಾವ ಕಾರಣಕ್ಕೂ ಭಾರತೀಯ ಆಟಗಾರರು ನಿರ್ಲಕ್ಷ್ಯ ಮಾಡಲು ಸಾಧ್ಯವಿಲ್ಲ.

'ವಿಷಯ ತಿಳಿಯದೇ ಮಾತನಾಡಬೇಡಿ'; ಮಂಡಿಯೂರಲು ನಿರಾಕರಿಸಿದ್ದರ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಡಿ ಕಾಕ್

ಭಾರತದ ವಿರುದ್ಧ ಬೋಲ್ಟ್ ಸದಾ ಅಬ್ಬರ

ಭಾರತದ ವಿರುದ್ಧ ಬೋಲ್ಟ್ ಸದಾ ಅಬ್ಬರ

ಇನ್ನು ಟ್ರೆಂಟ್ ಬೋಲ್ಟ್ ಟೀಮ್ ಇಂಡಿಯಾ ವಿರುದ್ಧ ಯಾವಾಗಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಕಳೆದ ಜೂನ್ ತಿಂಗಳಿನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಒಇಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿಯೂ ಯಾರ್ಕರ್ ಹಾಗೈ ಸ್ವಿಂಗ್ ಬೌಲಿಂಗ್ ಮೂಲಕ ಬೋಲ್ಟ್ ಭಾರತೀಯ ದಾಂಡಿಗರನ್ನು ಕಾಡಿದ್ದರು. 2020ರಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತದ ಪಾಳಿಗೆ ಮಾರಕವಾಗಿದ್ದರು. ಭಾರತದ ವಿರಿದ್ಧ ಎಲ್ಲಾ ಮಾದರಿಯಲ್ಲಿಯೂ ಬೋಲ್ಟ್ 26 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 71 ವಿಕೆಟ್ ತಮ್ಮದಾಗಿಸಿದ್ದಾರೆ. ಇನ್ನು ಭಾರತದ ವಿರುದ್ಧ ಪಡೆದ ಈ 71 ವಿಕೆಟ್‌ಗಳ ಪೈಕಿ 51 ವಿಕೆಟ್ ಬಲಗೈ ದಾಂಡಿಗರದ್ದೇ ಆಗಿದೆ.

'ರಾಹುಲ್ ಬದಲು ಇಶಾನ್ ಕಿಶನ್'; ನ್ಯೂಜಿಲೆಂಡ್‌ ವಿರುದ್ಧದ ಪಂದ್ಯಕ್ಕೆ ಈ 2 ಬದಲಾವಣೆ ಮಾಡಬೇಕೆಂದ ಹರ್ಭಜನ್!

ಕನ್ನಡಿಗ KL ರಾಹುಲ್ ಗೆ ಬಿಗ್ ಶಾಕ್ ಕೊಟ್ಟ ಪಂಜಾಬ್ ಟೀಂನ ಮಾಲೀಕ | Oneindia Kannada
ಅಗ್ರ ಮೂವರು ದಾಂಡಿಗರ ವಿರುದ್ಧ ಉತ್ತಮ ದಾಖಲೆ

ಅಗ್ರ ಮೂವರು ದಾಂಡಿಗರ ವಿರುದ್ಧ ಉತ್ತಮ ದಾಖಲೆ

ಇನ್ನು ಟ್ರೆಂಟ್ ಬೋಲ್ಟ್ ಭಾರತಕ್ಕೆ ಯಾಕೆ ಅಪಾಯಕಾರಿಯಾಗಬಲ್ಲರು ಎಂಬುದಕ್ಕೆ ಮತ್ತೊಂದು ಪ್ರಮುಖ ಅಂಕಿಅಂಶವೂ ಸಾಕ್ಷಿಯನ್ನು ನುಡಿಯುತ್ತಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಭಾರತವ ಅಗ್ರ ಕ್ರಮಾಂಕದ ಮೂರು ಬ್ಯಾಟ್ಸ್‌ಮನ್‌ಗಳು. ಎಲ್ಲಾ ಮಾದರಿಯಲ್ಲಿಯೂ ಈ ಮೂವರನ್ನು ಟ್ರೆಂಟ್ ಬೋಲ್ಟ್ 15 ಬಾರಿ ಔಟ್ ಮಾಡಿದ್ದಾರೆ. ಇದರಲ್ಲಿ ಉಪ ನಾಯಕ ರೋಹಿತ್ ಶರ್ಮಾ 8 ಬಾರಿ ಔಟಾಗಿದ್ದರೆ ವಿರಾಟ್ ಕೊಹ್ಲಿ 7 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಕೆಎಲ್ ರಾಹುಲ್ 1 ಬಾರಿ ಔಟಾಗಿದ್ದಾರೆ. ಅಲ್ಲದೆ ಭಾರತದ ಬ್ಯಾಟ್ಸ್‌ಮನ್‌ಗಳು ಎಡಗೈ ಬೌಲರ್‌ಗಳ ವಿರುದ್ಧ ಹೆಚ್ಚು ಪರದಾಡುತ್ತಾರೆ. ಇದರಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕೂಡ ಹೊರತಾಗಿಲ್ಲ.

For Quick Alerts
ALLOW NOTIFICATIONS
For Daily Alerts
Story first published: Thursday, October 28, 2021, 17:46 [IST]
Other articles published on Oct 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X