ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಔಟ್ ಇದ್ದರೂ ನಾಟ್ ಔಟ್: ಕಾಲಿನಿಂದ ಒದ್ದು ಆಕ್ರೋಶ ವ್ಯಕ್ತಪಡಿಸಿದ ಅಶ್ವಿನ್; ವಿಡಿಯೋ ವೈರಲ್

India vs New Zealand: Ravichandran Ashwin kicked turf in anger after Rahane misses DRS call to dismiss Latham

ಇತ್ತೀಚೆಗಷ್ಟೇ ಮುಗಿದ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ಸದ್ಯ ಭಾರತ ಪ್ರವಾಸವನ್ನು ಕೈಗೊಂಡಿದ್ದು ಈಗಾಗಲೇ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ವಿರುದ್ಧ ಎಲ್ಲಾ 3 ಪಂದ್ಯಗಳಲ್ಲಿಯೂ ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾಗಿದೆ. ಹೀಗೆ ಟಿ ಟ್ವೆಂಟಿ ಸರಣಿಯಲ್ಲಿ ಹೀನಾಯವಾಗಿ ಸೋತ ನಂತರ ಭಾರತ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಭಾಗವಹಿಸುತ್ತಿದ್ದು ಇದರಲ್ಲಿ ಗೆಲ್ಲುವುದರ ಮೂಲಕ ಟಿ ಟ್ವೆಂಟಿ ಸರಣಿ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ಹಂಬಲದಲ್ಲಿದೆ.

ಈಗಾಗಲೇ ಇತ್ತಂಡಗಳ ನಡುವಿನ ಟೆಸ್ಟ್ ಸರಣಿ ಆರಂಭವಾಗಿದ್ದು ಮೊದಲನೇ ಪಂದ್ಯ ನವೆಂಬರ್ 25ರಿಂದ ಕಾನ್ಪುರದಲ್ಲಿ ನಡೆಯುತ್ತಿದೆ. ಈ ಪಂದ್ಯದಿಂದ ವಿಶ್ರಾಂತಿಗೆಂದು ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೊರಗುಳಿದಿರುವ ಕಾರಣ ಈ ಹಿಂದೆ ಆಸ್ಟ್ರೇಲಿಯಾ ನೆಲದಲ್ಲಿ ಉತ್ತಮವಾಗಿ ಭಾರತ ತಂಡವನ್ನು ಮುನ್ನಡೆಸಿ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಗೆಲ್ಲಿಸಿದ್ದ ಅಜಿಂಕ್ಯ ರಹಾನೆ ಟೀಮ್ ಇಂಡಿಯಾದ ನಾಯಕತ್ವದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹೀಗೆ ನಾಯಕತ್ವವನ್ನು ಹೊತ್ತುಕೊಂಡಿರುವ ಅಜಿಂಕ್ಯ ರಹಾನೆ ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುವ ವೇಳೆ ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಔಟ್ ಆಗಿದ್ದಾಗ ಡಿ ಆರ್ ಸ್ ತೆಗೆದುಕೊಳ್ಳದೇ ಇರುವುದು ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಅಶ್ವಿನ್ ಎಸೆತದಲ್ಲಿ ಟಾಮ್ ಲಾಥಮ್ ಔಟ್ ಆಗಿದ್ದರು

ಅಶ್ವಿನ್ ಎಸೆತದಲ್ಲಿ ಟಾಮ್ ಲಾಥಮ್ ಔಟ್ ಆಗಿದ್ದರು

ನ್ಯೂಜಿಲೆಂಡ್ ಮೊದಲನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿದಾಗ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಟಾಮ್ ಲಾಥಮ್ ಮತ್ತು ವಿಲ್ ಯಂಗ್ ಉತ್ತಮ ಆರಂಭವನ್ನು ಮಾಡಿದರು. ಎರಡನೇ ದಿನದಾಟದಂತ್ಯಕ್ಕೆ 129 ರನ್ ಕಲೆಹಾಕಿದ ಈ ಜೋಡಿ ವಿಕೆಟ್ ಕಳೆದುಕೊಳ್ಳದೆ ಉತ್ತಮ ಪ್ರದರ್ಶನ ನೀಡಿತು. ನಂತರ ತೃತೀಯ ದಿನ ಆರಂಭವಾದಾಗ ರವಿಚಂದ್ರನ್ ಅಶ್ವಿನ್ ಅವರ ಎಸೆತದಲ್ಲಿ ಟಾಮ್ ಲಾಥಮ್ 66 ರನ್ ಗಳಿಸಿದ್ದಾಗ ಎಲ್ ಬಿ ಡಬ್ಲ್ಯೂ ಆಗಿದ್ದರು. ರವಿಚಂದ್ರನ್ ಎಸೆದ ಸ್ಪಷ್ಟವಾದ ಎಸೆತವನ್ನು ಎದುರಿಸಲಾಗದ ಟಾಮ್ ಲಾಥಮ್ ಚೆಂಡಿಗೆ ಬ್ಯಾಟ್ ತಾಗಿಸುವಲ್ಲಿ ವಿಫಲರಾಗಿದ್ದರು, ಹೀಗಾಗಿ ಚೆಂಡು ನೇರವಾಗಿ ಟಾಮ್ ಲಾಥಮ್ ಕಾಲಿಗೆ ಬಡಿದಿತ್ತು.

ರಿವ್ಯೂ ತೆಗೆದುಕೊಳ್ಳದ ಅಜಿಂಕ್ಯ ರಹಾನೆ

ರಿವ್ಯೂ ತೆಗೆದುಕೊಳ್ಳದ ಅಜಿಂಕ್ಯ ರಹಾನೆ

ಹೀಗೆ ರವಿಚಂದ್ರನ್ ಅಶ್ವಿನ್ ಎಸೆದ ಚೆಂಡು ಟಾಮ್ ಲಾಥಮ್ ಕಾಲಿಗೆ ತಾಗುತ್ತಿದ್ದಂತೆಯೇ ಟೀಮ್ ಇಂಡಿಯಾದ ಆಟಗಾರರು ಎಲ್ ಬಿ ಡಬ್ಲ್ಯು ಔಟ್ ಸಲುವಾಗಿ ಅಂಪೈರ್ ಬಳಿ ಮನವಿ ಮಾಡಿದ್ದರು. ಆದರೆ ಟೀಮ್ ಇಂಡಿಯಾದ ಪರ ತೀರ್ಪನ್ನು ನೀಡದ ಅಂಪೈರ್ ಅದನ್ನು ನಾಟ್ ಔಟ್ ಎಂದು ಪರಿಗಣಿಸಿದ್ದರು. ಈ ಸಂದರ್ಭದಲ್ಲಿ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಡಿಆರ್ ಎಸ್ ತೆಗೆದುಕೊಳ್ಳದೇ ಇದ್ದದ್ದು ಎಲ್ಲರಲ್ಲಿಯೂ ಆಶ್ಚರ್ಯವನ್ನು ಕೂಡಾ ಮೂಡಿಸಿತ್ತು. ಆದರೆ ನಂತರ ಮೈದಾನದ ಪರದೆಯ ಮೇಲೆ ಆ ಎಸೆತದ ದೃಶ್ಯವನ್ನು ಮರು ಪ್ರಸಾರ ಮಾಡಿದಾಗ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಡಿ ಆರ್ ಎಸ್ ತೆಗೆದುಕೊಳ್ಳಬೇಕಿತ್ತು ಎಂದು ಕೈ ಕೈ ಹಿಸುಕಿಕೊಂಡರು. ಇತ್ತ ಔಟ್ ಇದ್ದರೂ ಕೂಡ ವಿಕೆಟ್ ಸಿಗದ ಹತಾಶೆಯಲ್ಲಿ ರವಿಚಂದ್ರನ್ ಅಶ್ವಿನ್ ನೆಲಕ್ಕೆ ಕಾಲಿನಿಂದ ಒದೆಯುವ ಮೂಲಕ ಬೇಸರವನ್ನು ಹೊರಹಾಕಿದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇಂತಹ ಎಸೆತಗಳಿಗೂ ಕೂಡ ಡಿ ಆರ್ ಎಸ್ ತೆಗೆದುಕೊಳ್ಳದೇ ಇರುವ ಅಜಿಂಕ್ಯ ರಹಾನೆ ಕುರಿತು ಟೀಕೆಗಳು ವ್ಯಕ್ತವಾಗುತ್ತಿವೆ.

ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ಗೆ ಹಿನ್ನಡೆ

ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ಗೆ ಹಿನ್ನಡೆ

66 ರನ್ ಗಳಿಸಿರುವಾಗಲೇ ಪೆವಿಲಿಯನ್ ಸೇರಬೇಕಿದ್ದ ಟಾಮ್ ಲಾಥಮ್ ತೀರ್ಪುಗಾರನ ತಪ್ಪಾದ ನಿರ್ಣಯದಿಂದ ಮೈದಾನದಲ್ಲಿ ಮತ್ತೊಂದಷ್ಟು ಸಮಯ ಬ್ಯಾಟ್ ಬೀಸುವ ಅವಕಾಶ ಪಡೆದರು. ಅಂತಿಮವಾಗಿ 95 ರನ್‌ಗಳಿಗೆ ತನ್ನ ಆಟವನ್ನು ಮುಗಿಸಿದೆ ಟಾಮ್ ಲಾಥಮ್ ಅಕ್ಷರ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು ನ್ಯೂಜಿಲೆಂಡ್ ಮೊದಲನೇ ಇನ್ನಿಂಗ್ಸ್ ಅಂತ್ಯಕ್ಕೆ 296 ರನ್‌ಗಳಿಗೆ ಆಲ್ ಔಟ್ ಆಗಿದ್ದು 49 ರನ್ ಹಿನ್ನಡೆ ಅನುಭವಿಸಿದೆ.

Story first published: Saturday, November 27, 2021, 19:09 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X