ಕಾನ್ಪುರ ಟೆಸ್ಟ್: ನ್ಯೂಜಿಲೆಂಡ್ ವಿರುದ್ಧದ ತನ್ನ ಉತ್ತಮ ಪ್ರದರ್ಶನವನ್ನು ತಂದೆಗೆ ಅರ್ಪಿಸಿದ ಅಕ್ಷರ್

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಂಡಿದ್ದು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸುತ್ತಿದೆ. ಇತ್ತಂಡಗಳ ನಡುವೆ ಈಗಾಗಲೇ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮುಗಿದಿದ್ದು, ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಟಿಮ್ ಸೌಥಿ ನಾಯಕತ್ವದ ನ್ಯೂಜಿಲೆಂಡ್‌ ವಿರುದ್ಧ 3-0 ಅಂತರದಲ್ಲಿ ಜಯ ಗಳಿಸುವುದರ ಮೂಲಕ ವೈಟ್ ವಾಶ್ ಬಳಿದಿದೆ. ಈಗ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ಆರಂಭವಾಗಿದ್ದು ಚೊಚ್ಚಲ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ.

ನಾಯಕತ್ವ ಸಿಗದೇ ಡಿಸಿಯಿಂದ ಹೊರಬಿದ್ದ ಶ್ರೇಯಸ್‌ಗೆ ಆರ್‌ಸಿಬಿ ಸೇರಿ 4 ತಂಡಗಳ ನಾಯಕನಾಗುವ ಅವಕಾಶ!ನಾಯಕತ್ವ ಸಿಗದೇ ಡಿಸಿಯಿಂದ ಹೊರಬಿದ್ದ ಶ್ರೇಯಸ್‌ಗೆ ಆರ್‌ಸಿಬಿ ಸೇರಿ 4 ತಂಡಗಳ ನಾಯಕನಾಗುವ ಅವಕಾಶ!

ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ವಿರುದ್ಧ ಹೀನಾಯವಾಗಿ ಸೋಲುವುದರ ಮೂಲಕ ಮುಖಭಂಗಕ್ಕೊಳಗಾಗಿರುವ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳುವುದರ ಮೂಲಕ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ. ಅದರಂತೆಯೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಕಾನ್ಪುರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ವಿರುದ್ಧ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ ನ್ಯೂಜಿಲೆಂಡ್ ಅಜಿಂಕ್ಯ ರಹಾನೆ ಹುಡುಗರನ್ನು 354 ರನ್‌ಗಳಿಗೆ ಕಟ್ಟಿಹಾಕಿತು. ಅಷ್ಟೇ ಅಲ್ಲದೆ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ದ್ವಿತೀಯ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಉತ್ತಮ ಸ್ಥಿತಿಯಲ್ಲಿತ್ತು.

ಕೊನೆಗೂ ಷರತ್ತನ್ನು ಗೆದ್ದು ತನ್ನ ಕೋಚ್‌ನ್ನು ಮನೆಗೆ ಆಹ್ವಾನಿಸುವ ಅವಕಾಶ ಪಡೆದ ಶ್ರೇಯಸ್ ಐಯ್ಯರ್ಕೊನೆಗೂ ಷರತ್ತನ್ನು ಗೆದ್ದು ತನ್ನ ಕೋಚ್‌ನ್ನು ಮನೆಗೆ ಆಹ್ವಾನಿಸುವ ಅವಕಾಶ ಪಡೆದ ಶ್ರೇಯಸ್ ಐಯ್ಯರ್

ಹೌದು, ನ್ಯೂಜಿಲೆಂಡ್ ತಂಡದ ಪರ ಮೊದಲನೇ ಇನ್ನಿಂಗ್ಸ್‌ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಟಾಮ್ ಲಥಾಮ್ ಮತ್ತು ವಿಲ್ ಯಾಂಗ್ ಉತ್ತಮ ಆರಂಭವನ್ನು ಕಟ್ಟಿಕೊಟ್ಟರು. ಈ ಇಬ್ಬರ ಆಟ ಈ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಮೇಲುಗೈ ಸಾಧಿಸಲಿದೆ ಎಂಬ ಊಹೆ ಹುಟ್ಟುವಂತೆ ಮಾಡಿತ್ತು. ಆದರೆ ದ್ವಿತೀಯ ದಿನದಾಟದಂದು ಇದ್ದ ಈ ವಿಶ್ವಾಸಕ್ಕೆ ಮೂರನೇ ದಿನದಾಟದಂದು ಭಾರತದ ಪ್ರಮುಖ ಸ್ಪಿನ್ ಬೌಲರ್ ಅಕ್ಷರ್ ಪಟೇಲ್ ತಿಲಾಂಜಲಿ ಹಾಡಿದರು. ಹೌದು, ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ತೃತೀಯ ದಿನದಾಟದಂದು ಅಕ್ಷರ್ ಪಟೇಲ್ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. 6 ಮೇಡನ್ ಓವರ್ ಸಹಿತ 34 ಓವರ್ ಬೌಲಿಂಗ್ ಮಾಡಿದ ಅಕ್ಷರ್ ಪಟೇಲ್ 62 ರನ್ ಮಾತ್ರ ನೀಡಿದರು ಮತ್ತು 5 ವಿಕೆಟ್‍ಗಳನ್ನು ಪಡೆದು ಮಿಂಚಿದರು.

ಈ ಮೂಲಕ ಈ ವರ್ಷ ನಡೆದಿರುವ ಟೆಸ್ಟ್ ಪಂದ್ಯಗಳ ಪೈಕಿ ಅತಿಹೆಚ್ಚು ಬಾರಿ 5 ವಿಕೆಟ್ ಗೊಂಚಲು ಪಡೆದಿರುವ ಆಟಗಾರ ಎಂಬ ದಾಖಲೆಯನ್ನು ಕೂಡ ಅಕ್ಷರ್ ಪಟೇಲ್ ಬರೆದರು. ಹೌದು ಅಕ್ಷರ್ ಪಟೇಲ್ ಈ ವರ್ಷ ಪಡೆದಿರುವ ಐದನೇ 5 ವಿಕೆಟ್‍ಗಳ ಗೊಂಚಲು ಇದಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಪ್ರಶಂಸೆಗೆ ಕಾರಣವಾಗಿದೆ. ಹೀಗೆ ಮೂರನೇ ದಿನದಾಟ ಅಂತ್ಯವಾದ ನಂತರ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇಂದಿನ ಪಂದ್ಯದ ತಮ್ಮ ಭಾವಚಿತ್ರ ಮತ್ತು ತಮ್ಮ ತಂದೆಯ ಜೊತೆಗಿರುವ ಭಾವಚಿತ್ರಗಳನ್ನು ಹಂಚಿಕೊಂಡಿರುವ ಅಕ್ಷರ್ ಪಟೇಲ್ "ನಂಬರ್ 5, ಸಂದೇಶ ಕಳುಹಿಸಿ ಶುಭಕೋರಿದ ಎಲ್ಲರಿಗೂ ಧನ್ಯವಾದಗಳು. ಇಂದಿನ 5 ವಿಕೆಟ್‍ಗಳ ಗೊಂಚಲನ್ನು ನನ್ನ ತಂದೆಗೆ ಅರ್ಪಿಸುತ್ತಿದ್ದೇನೆ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪ" ಎಂದು ಬರೆದುಕೊಂಡಿದ್ದಾರೆ.

7 ಇನ್ನಿಂಗ್ಸ್‌ನಲ್ಲಿಯೇ 32 ವಿಕೆಟ್ ಪಡೆದ ಅಕ್ಷರ್ ಪಟೇಲ್!

ಅಕ್ಷರ್ ಪಟೇಲ್ ಇದುವರೆಗೂ ಆಡಿರುವ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯಗಳ ಸಂಖ್ಯೆ ಕೇವಲ 4 (ಪ್ರಸ್ತುತ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯವನ್ನೂ ಸೇರಿ). ಹೀಗೆ ಅಕ್ಷರ್ ಪಟೇಲ್ ಆಡಿರುವ ಕೇವಲ 4 ಟೆಸ್ಟ್ ಪಂದ್ಯದಲ್ಲಿಯೇ 5 ಬಾರಿ 5 ವಿಕೆಟ್ ಗೊಂಚಲು ಪಡೆದ ದಾಖಲೆ ಬರೆದಿದ್ದಾರೆ. ಹೀಗೆ ಈ ದಾಖಲೆ ಬರೆದ ಮೊದಲನೆಯ ಭಾರತೀಯ ಎಂಬ ಖ್ಯಾತಿಗೂ ಸಹ ಅಕ್ಷರ್ ಪಟೇಲ್ ಪಾತ್ರರಾಗಿದ್ದಾರೆ. ಇದುವರೆಗೂ ಒಟ್ಟು 7 ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡಿರುವ ಅಕ್ಷರ್ ಪಟೇಲ್ 32 ವಿಕೆಟ್ ಪಡೆದು ಹುಬ್ಬೇರುವಂತೆ ಮಾಡಿದ್ದಾರೆ.

KS Bharath ಪಂದ್ಯಕ್ಕೆ ಸಿದ್ದವಾಗಿದ್ದು ಕೇವಲ 12 ನಿಮಿಷದಲ್ಲಿ | Oneindia Kannada

For Quick Alerts
ALLOW NOTIFICATIONS
For Daily Alerts
Story first published: Saturday, November 27, 2021, 22:40 [IST]
Other articles published on Nov 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X