ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತಕ್ಕೆ ಕಠಿಣ ಸವಾಲೊಡ್ಡಲು ಕಿವೀಸ್ ಇಷ್ಟು ಗುರಿ ನೀಡಬೇಕಿತ್ತು: ಮೆಕಲಮ್

India vs New Zealand: Brendom McCullum predicts what target will be difficult for India

ಮ್ಯಾಂಚೆಸ್ಟರ್, ಜುಲೈ 10: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಮೊದಲ ಸೆಮಿಫೈನಲ್ ಪಂದ್ಯ ಮಂಗಳವಾರ (ಜುಲೈ 9) ಅರ್ಧಕ್ಕೆ ನಿಂತಿತ್ತು. ಆ ಪಂದ್ಯ ಬುಧವಾರ (ಜುಲೈ 10) ಮುಂದುವರೆದಿದೆ. ಈ ಪಂದ್ಯದಲ್ಲಿ ಭಾರತವನ್ನು ಒತ್ತಡಕ್ಕೀಡು ಮಾಡಲು ಕಿವೀಸ್ ಎಷ್ಟು ರನ್ ಗುರಿ ನೀಡಬೇಕಿತ್ತೆಂದು ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡಮ್ ಮೆಕಲಮ್ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಂಗಳವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಕೇನ್ ವಿಲಿಯಮ್ಸ್ ಪಡೆ 46.1 ಓವರ್‌ವರೆಗೂ ಪಂದ್ಯವನ್ನಾಡಿತ್ತು. 5 ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿತ್ತು. ಬುಧವಾರ ಇನ್ನಿಂಗ್ಸ್ ಮುಂದುವರೆಸಿದ ಕಿವೀಸ್ ಪ್ರತೀ ಓವರ್‌ಗೆ ಕನಿಷ್ಠ 10 ರನ್‌ ಗಳಿಸಿದರೆ ಭಾರತದ ಮೇಲೆ ಒತ್ತಡ ಬೀಳಲಿದೆ ಎಂದಿದ್ದರು.

ಭಾರತ vs ನ್ಯೂಜಿಲೆಂಡ್, ಸೆ.ಫೈನಲ್, ದಿನ 2, ಬುಧವಾರ (ಜುಲೈ 10), Live ಸ್ಕೋರ್‌ಕಾರ್ಡ್

1
43689

ಟ್ವೀಟ್ ಮಾಡಿರುವ ಮೆಕಲಮ್, 'ಇತ್ತಂಡಗಳಿಗೆ 250 ರನ್ ಗುರಿ ಸಾಕಷ್ಟು ದೊಡ್ಡದೇನಲ್ಲ. ಆದರೆ ಈ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಈ ರನ್ ಗುರಿ ಬೇಕಾದಷ್ಟು ಸಾಕು' ಎಂದು ಬರೆದುಕೊಂಡಿದ್ದರು. ಅಂದರೆ 250 ರನ್ ಟಾರ್ಗೆಟ್ ನೀಡಿದರೆ ಎದುರಾಳಿ ಭಾರತಕ್ಕೆ ಸಹಜವಾಗೇ ಮಾನಸಿಕ ಒತ್ತಡ ಬೀಳಲಿದೆ ಎಂಬುದು ಅವರ ಟ್ವೀಟಿನಾರ್ಥವಾಗಿತ್ತು.

India vs New Zealand: Brendom McCullum predicts what target will be difficult for India

ಬುಧವಾರದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವುದನ್ನು ನಿರೀಕ್ಷಿಸಲಾಗಿದೆಯಾದರೂ ಪಂದ್ಯ 50 ಓವರ್‌ಗಳವರೆಗೆ ನಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಇನ್ನಿಂಗ್ಸ್ ಮುಗಿಸುವಾಗ ಕಿವೀಸ್ ಸಾಧ್ಯವಾದಷ್ಟು ಹೆಚ್ಚಿನ ರನ್ ಗುರಿ ನೀಡಿದರೆ ಭಾರತ ಕೊಂಚ ಒತ್ತಡಕ್ಕೊಳಗಾಗಲಿದೆ. ಕಿವೀಸ್ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 239 ರನ್ ಪೇರಿಸಿದೆ.

Story first published: Wednesday, July 10, 2019, 15:42 [IST]
Other articles published on Jul 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X