ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಐಯ್ಯರ್‌ಗೆ ರಹಾನೆ ಅವಕಾಶ ಮಾಡಿಕೊಡಲಿ ಎಂದ ಅನುಭವಿ ಕ್ರಿಕೆಟಿಗ

India vs New Zealand: Dropping Ajinkya Rahane from 2nd test Test will ease some pressure says Dinesh Karthik

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು ಈಗ ಎರಡನೇ ಟೆಸ್ಟ್ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಡುವ ಬಳಗ ಹೇಗಿರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿದೆ. ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಟೀಮ್ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಮರಳಲಿದ್ದಾರೆ. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಸಂಯೋಜನೆ ಹೇಗಿರಲಿದೆ ಎಂಬುದು ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಟೀಮ್ ಇಂಡಿಯಾ ಪರವಾಗಿ ಕಳೆದ ಹಲವು ಸರಣಿಗಳಲ್ಲಿ ವಿಫಲವಾಗಿರುವ ಅಜಿಂಕ್ಯಾ ರಹಾನೆ ಮತ್ತೆ ಮತ್ತೆ ಅವಕಾಶವನ್ನು ಪಡೆಯುತ್ತಲೇ ಇದ್ದಾರೆ. ಕಿವಿಸ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಶ್ರೇಯಸ್ ಐಯ್ಯರ್ ಮೊದಲ ಪಂದ್ಯದಲ್ಲಿಯೇ ಭರ್ಜರಿ ಶತಕ ಹಾಗೂ ಅರ್ಧ ಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿಯೂ ತಾನೆಂತಾ ಅಮೂಲ್ಯ ಆಟಗಾರ ಎಂಬುದನ್ನು ಸಾರಿದ್ದಾರೆ. ಹೀಗಾಗಿ ಅಜಿಂಕ್ಯಾ ರಹಾನೆ ಬದಲಿಗೆ ಶ್ರೇಯಸ್ ಐಯ್ಯರ್‌ಗೆ ಎರಡನೇ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂಬ ಮಾತುಗಳು ಜೋರಾಗಿ ವ್ಯಕ್ತವಾಗುತ್ತಿದೆ.

ಐಪಿಎಲ್: ರಿಟೈನ್ ಆದ ಎಲ್ಲಾ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ; ಈ ಮೂವರಿಗೆ ಅತಿಹೆಚ್ಚು ಹಣಐಪಿಎಲ್: ರಿಟೈನ್ ಆದ ಎಲ್ಲಾ ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ; ಈ ಮೂವರಿಗೆ ಅತಿಹೆಚ್ಚು ಹಣ

ಇದೇ ವಿಚಾರವಾಗಿ ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹಾಗೂ ಕಾಮೆಂಟೇಟರ್ ಆಗಿರುವ ದಿನೇಶ್ ಕಾರ್ತಿಕ್ ಮಾತನಾಡಿದ್ದಾರೆ. ಡಿಕೆ ಕೂಡ ಇದೇ ರೀತಿಯಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು ಯುವ ಆಟಗಾರ ಶ್ರೇಯಸ್ ಐಯ್ಯರ್‌ಗಾಗಿ ಅಜಿಂಕ್ಯಾ ರಹಾನೆ ಅವಕಾಶ ಮಾಡಿಕೊಡುವುದು ಉತ್ತಮ ಎಂದಿದ್ದಾರೆ.

ಮುಂಬೈನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯಾ ರಹಾನೆ ವಿರಾಮ ತೆಗೆದುಕೊಳ್ಳುವುದು ಉತ್ತಮ. ಅದರಿಂದ ಆತನಿಗೂ ಸಹಾಯವಾಗಲಿದೆ. ರಹಾನೆ ಮೇಲಿನ ಒತ್ತಡ ಇದರಿಂದಾಗಿ ಕಡಿಮೆಯಾಗಲಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.

ಭಾರತ vs ನ್ಯೂಜಿಲೆಂಡ್‌: 2ನೇ ಟೆಸ್ಟ್‌ನಿಂದ ಯಾರು ಹೊರಕ್ಕೆ? ದ್ರಾವಿಡ್ ಹೇಳಿದ್ದಿಷ್ಟುಭಾರತ vs ನ್ಯೂಜಿಲೆಂಡ್‌: 2ನೇ ಟೆಸ್ಟ್‌ನಿಂದ ಯಾರು ಹೊರಕ್ಕೆ? ದ್ರಾವಿಡ್ ಹೇಳಿದ್ದಿಷ್ಟು

ಶ್ರೇಯಸ್ ಐಯ್ಯರ್ ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಪಡೆದುಕೊಂಡು ಉತ್ತಮ ಪ್ರದರ್ಶನ ನೀಡಿರುವ ಕಾರಣದಿಂದಾಗಿ ಖಂಡಿತವಾಗಿಯೂ ದಿನೇಶ್ ಕಾರ್ತಿಕ್ ಮೇಲೆ ಒತ್ತಡ ಹೆಚ್ಚಾಗಿರುತ್ತದೆ. ಹಾಗಾಗಿ ಅವರು ಆಡುವ ಬಳಗದಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಅವರನ್ನು ಒಂದು ಪಂದ್ಯದಿಂದ ಕೈಬಿಟ್ಟರೆ ನಂತರ ಅವರನ್ನು ಮತ್ತೆ ಸೇರಿಸಿಕೊಳ್ಳಬಹುದು. ಇದರಿಂದಾಗಿ ಯಾವುದೇ ಹಾನಿಯಾಗಲಾರದು" ಎಂದಿದ್ದಾರೆ ದಿನೇಶ್ ಕಾರ್ತಿಕ್.

ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!ದೊಡ್ಡ ಮೊತ್ತ ಪಡೆಯುತ್ತಿದ್ದ ಧೋನಿಗೆ ಈ ಸಲ ಕಡಿಮೆ ಮೊತ್ತ ಸಿಕ್ಕಿದ್ದಕ್ಕೆ ಕಾರಣ ಆ ಒಬ್ಬ ಆಟಗಾರ!

"ಜೈಪುರ ಟೆಸ್ಟ್‌ನಲ್ಲಿ ಶ್ರೇಯಸ್ ಐಯ್ಯರ್ ನೀಡಿದ ಪ್ರದರ್ಶನ ಅಮೋಘವಾಗಿತ್ತು. ಆತನಿಂದಾಗಿ ಭಾರತ ಸುರಕ್ಷಿತ ಸ್ಥಾನದಲ್ಲಿತ್ತು. ಆತನಿಂದ ನಿಜಕ್ಕೂ ಅದ್ಭುತವಾದ ಪ್ರದರ್ಶನ ಬಂದಿದೆ. ಇನ್ನು ರಹಾನೆ ಒಂದೆರಡು ಟೆಸ್ಟ್ ಪಂದ್ಯಗಳಲ್ಲಿ ಮಾತ್ರವೇ ರನ್ ಗಳಿಸಿಲ್ಲ ಎಂಬುದಲ್ಲ. ಸುದೀರ್ಘ ಕಾಲದಿಂದ ಆತನಿಮದ ಇದೇ ರೀತಿಯ ಪ್ರದರ್ಶನ ಬರುತ್ತಿದೆ. ಆಡುವ ಬಳಗದಿಂದ ಹೊರಗಿಡುವುದರಿಂದಾಗಿ ಆತನಿಗೆ ಕೆಟ್ಟ ಪರಿಣಾಮ ಬೀರಲಿದೆ ಎಂದು ನನಗೆ ಅನಿಸುವುದಿಲ್ಲ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಬಹಿರಂಗವಾಗೇ ಎಲ್ಲರ ಮುಂದೆ ಬಂದು ನಿಂತ KL Rahul-Athiya Shetty | Oneindia Kannada

ಭಾರತ ಹಾಘೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ನ್ಯೂಜಿಲೆಂಡ್ ವಿರುದ್ಧದ ಮೂರು ಟಿ20 ಹಾಗೂ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ ಸೇರಿಕೊಳ್ಳಲಿದ್ದು ತಂಡವನ್ನು ಮುನ್ನಡೆಸಲಿದ್ದಾರೆ.

Story first published: Wednesday, December 1, 2021, 22:28 [IST]
Other articles published on Dec 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X