ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ವಿರುದ್ಧ ಗೆದ್ದು ಸರಣಿ ಸಮಬಲಗೊಳಿಸಿದರೂ ಅಚ್ಚರಿ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ

India vs New Zealand: Hardik Pandya lashes out at Lucknow pitch says It was a shocker of a wicket

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಿದ್ದು ಊರು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಹೀಹಾಗಿ ಸರಣಿಯ ಅಂತಿಮ ಪಂದ್ಯ ಈಗ ನಿರ್ಣಾಯಕವಾಗಿದ್ದು ಕುತೂಹಲ ಮೂಡಿಸಿದೆ. 2ನೇ ಪಂದ್ಯದಲ್ಲಿ ಗೆಲುವಿನ ಬಳಿಕ ಟೀಮ್ ಇಂಡಿಯಾದ ನಾಯಕ ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ ನೀಡಿದ್ದು ಲಕ್ನೋ ಪಿಚ್ ಟಿ20 ಕ್ರಿಕೆಟ್‌ಗೆ ಮಾಡಿಸಿದ ಪಿಚ್ ಅಲ್ಲ ಎಂದು ಪಿಚ್ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 99 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಗಿತ್ತು. ಇದನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಕೂಡ 4 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್‌ನ ಅಂತಿಮ ಓವರ್‌ನ 5ನೇ ಎಸೆತದಲ್ಲಿ ಪ್ರಯಾಸದ ಗೆಲುವು ಸಾಧಿಸಿ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿತ್ತು.

U-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾU-19 ಮಹಿಳಾ ಟಿ20 ವಿಶ್ವಕಪ್‌ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, "ಈ ಪಂದ್ಯದಲ್ಲಿ ಯಶಸ್ವಿಯಾಗಿ ಗೆಲುವು ಸಾಧಿಸಬಹುದು ಎಂದು ನಾನು ಯಾವಾಗಲೂ ಭಾವಿಸಿದ್ದೆ, ಆದರೆ ಅದು ನಿಧಾನವಾಗಿ ಆಯಿತು. ಈ ಎಲ್ಲಾ ಪಂದ್ಯಗಳು ಕೂಡ ಬಹಳ ಪ್ರಮುಖವಾಗಿದೆ. ಇಲ್ಲಿ ನೀವು ಒತ್ತಡಕ್ಕೆ ಒಳಗಾಗಬೇಕಿಲ್ಲ, ಯಾಕೆಂದರೆ ಇಲ್ಲಿ ಸ್ಟ್ರೈಕ್ ರೊಟೇಟ್ ಮಾಡಬೇಕಷ್ಟೆ. ನಾವು ಮಾಡಿದ್ದು ಅದನ್ನೇ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

ಇನ್ನು ಈ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ಲಕ್ನೋ ಪಿಚ್ ಬಗ್ಗೆ ಟೀಕೆ ಮಾಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಷ್ಟು ಆಘಾತಕಾರಿ ಪಿಚ್ ಆಗಿದೆ. ಆಡಿದ ಎರಡು ಪಂದ್ಯಗಳು ಕೂಡ ಇದೇ ರೀತಿ ಆಗಿದೆ. ಪಿಚ್‌ಗಳು ಕಠಿಣವಾಗಿದ್ದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿ ನಾನು ಅದಕ್ಕೆಲ್ಲಾ ಸಿದ್ಧನಿದ್ದೇನೆ. ಆದರೆ ಈ ಎರಡು ಪಿಚ್‌ಗಳು ಟಿ20 ಕ್ರಿಕೆಟ್‌ಗೆ ಮಾಡಿಸಿದ ಪಿಚ್‌ಗಳು ಅಲ್ಲ. ಹಾಗಾಗಿ ಪಿಚ್ ಕ್ಯೂರೇಟರ್‌ಗಳು ಅಥವಾ ಮೈದಾಣಕ್ಕೆ ಸಂಬಂಧಿಸಿದವರು ಪಿದ್ಧಪಡಿಸಿರುವ ಪಿಚ್ ಬಗ್ಗೆ ಪಂದ್ಯಗಳನ್ನಾಡುವುದಕ್ಕೂ ಮುನ್ನ ಮೊದಲೇ ಖಚಿತಪಡಿಸಿಕೊಳ್ಳಬೇಕು" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

ಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿಭಾರತ ತಂಡಕ್ಕೆ ಏಕದಿನ ವಿಶ್ವಕಪ್ ಗೆಲ್ಲುವ ಆಸೆಯಿದ್ದರೆ ಹೀಗೆ ಮಾಡಲಿ ಎಂದ ಸೌರವ್ ಗಂಗೂಲಿ

"ಪಿಚ್ ಹೊರತುಪಡಿಸಿದರೆ ಉಳಿದಂತೆ ನಾನು ಸಂತಸಗೊಂಡಿದ್ದೇನೆ. ಇಲ್ಲಿ 120 ರನ್‌ಗಳಿಸಿದರೂ ಅದು ಗೆಲುವಿನ ಮೊತ್ತವಾಗಿರುತ್ತಿತ್ತು. ಬೌಲರ್‌ಗಳು ತಮ್ಮ ಯೋಜನೆಗೆ ಪೂರಕವಾಗಿ ದಾಳಿ ನಡೆಸಿ ಸ್ಟ್ರೈಕ್‌ರೊಟೇಟ್ ನಡೆಸದಂತೆ ನೋಡಿಕೊಂಡರು. ಸ್ಪಿನ್ನರ್‌ಗಳಿಗೆ ಹೆಚ್ಚಿನ ಅವಕಾಶ ನೀಡಿದೆವು. ಇಬ್ಬನಿ ಇಲ್ಲಿ ಹೆಚ್ಚಿನ ಪರಿಣಾಮ ಬೀರಲಿಲ್ಲ. ಹಾಗಾಗಿ ನ್ಯೂಜಿಲೆಂಡ್ ಬೌಲರ್‌ಗಳು ನಮಗಿಂತಲೂ ಹೆಚ್ಚಿ ಸ್ಪಿನ್ ಮಾಡಲು ಸಾಧ್ಯವಾಗಿತ್ತು. ಇದು ಅಚ್ಚರಿಯ ಪಿಚ್ ಆಗಿದೆ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ

ಮೂರು ಪಂದ್ಯಗಳ ಟಿ20 ಸರಣಿಯನ್ನು ಟೀಮ್ ಇಂಡಿಯಾ ಈಗ 1-1 ಅಂತರದಿಂದ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಈ ಸರಣಿಯ ಅಂತಿಮ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದ್ದು ಫೆಬ್ರವರಿ 1 ಬುಧವಾರದಂದು ಈ ಪಂದ್ಯ ಆಯೋಜನೆಯಾಗಲಿದೆ.

Story first published: Monday, January 30, 2023, 8:26 [IST]
Other articles published on Jan 30, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X