ಕೊನೆಗೂ ಷರತ್ತನ್ನು ಗೆದ್ದು ತನ್ನ ಕೋಚ್‌ನ್ನು ಮನೆಗೆ ಆಹ್ವಾನಿಸುವ ಅವಕಾಶ ಪಡೆದ ಶ್ರೇಯಸ್ ಐಯ್ಯರ್

Shreyas Iyer ತಂದ ಈ ದಿನಕ್ಕಾಗಿ ಕಾದು ಕುಳಿತಿದ್ದರು | Oneindia Kannada

ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನ್ಯೂಜಿಲೆಂಡ್ ತನ್ನ ಚೊಚ್ಚಲ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವ ಕನಸನ್ನು ನನಸು ಮಾಡಿಕೊಳ್ಳಲಾಗದೇ ಟೂರ್ನಿಯಿಂದ ಹೊರಬಂದ ನಂತರ ಇದೀಗ ಭಾರತ ಪ್ರವಾಸವನ್ನು ಕೈಗೊಂಡಿದ್ದು ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್‌ಗೆ ವೈಟ್ ವಾಶ್ ಬಳಿದು ಸಾಧನೆ ಮಾಡಿತು. ಈಗ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ಆರಂಭವಾಗಿದ್ದು ಚೊಚ್ಚಲ ಪಂದ್ಯ ಕಾನ್ಪುರದಲ್ಲಿ ನಡೆಯುತ್ತಿದೆ.

ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯಿಂದ ಪ್ರಮುಖ ಬ್ಯಾಟ್ಸ್‌ಮನ್‌ ಹೊರಕ್ಕೆ; ಈ 4 ಆಟಗಾರರು ಸೇಫ್ಐಪಿಎಲ್ 2022 ರಿಟೆನ್ಷನ್: ಆರ್‌ಸಿಬಿಯಿಂದ ಪ್ರಮುಖ ಬ್ಯಾಟ್ಸ್‌ಮನ್‌ ಹೊರಕ್ಕೆ; ಈ 4 ಆಟಗಾರರು ಸೇಫ್

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಉತ್ತಮ ಆರಂಭವನ್ನು ಕಟ್ಟಿಕೊಟ್ಟರೆ, ಮಧ್ಯಮ ಕ್ರಮಾಂಕದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯ ಆಡಿದ ಶ್ರೇಯಸ್ ಅಯ್ಯರ್ ಶತಕ ಬಾರಿಸುವುದರ ಮೂಲಕ ಉತ್ತಮ ಇನಿಂಗ್ಸ್ ಕಟ್ಟಿದರು. 171 ಎಸೆತಗಳಲ್ಲಿ 105 ರನ್ ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಡಿದ ಚೊಚ್ಚಲ ಪಂದ್ಯದಲ್ಲಿಯೇ ಶತಕ ಸಿಡಿಸಿದ 16ನೇ ಭಾರತೀಯ ಕ್ರಿಕೆಟಿಗ ಎಂಬ ದಾಖಲೆಯನ್ನೂ ಕೂಡ ಬರೆದಿದ್ದಾರೆ.

ಹೀಗೆ ಪದಾರ್ಪಣೆ ಮಾಡಿದ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿಯೇ ಶತಕವನ್ನು ಬಾರಿಸುವ ಮೂಲಕ ಶ್ರೇಯಸ್ ಅಯ್ಯರ್ ಈ ಹಿಂದೆ ತನ್ನ ಕೋಚ್ ಪ್ರವೀಣ್ ಆಮ್ರೆ ವಿಧಿಸಿದ್ದ ಷರತ್ತನ್ನು ಗೆದ್ದಿದ್ದಾರೆ. ಹೌದು, "ನೀನು ಯಾವ ದಿನ ಅಂತರರಾಷ್ಟ್ರೀಯ ಟೆಸ್ಟ್ ಶತಕವನ್ನು ಬಾರಿಸುತ್ತೀಯೋ, ಅಂದೇ ನಾನು ನಿಮ್ಮ ಮನೆಗೆ ಊಟಕ್ಕೆ ಬರುತ್ತೇನೆ. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ನನ್ನನ್ನು ಆಹ್ವಾನಿಸಬೇಡ" ಎಂದು ತರಬೇತುದಾರ ಪ್ರವೀಣ್ ಆಮ್ರೆ ಶ್ರೇಯಸ್ ಅಯ್ಯರ್ ಅವರಿಗೆ ಷರತ್ತನ್ನು ವಿಧಿಸಿದ್ದರು.

 ಧೋನಿ vs ಕೊಹ್ಲಿ vs ರೋಹಿತ್: ನಾಯಕತ್ವದ ಸಕ್ಸಸ್ ರೇಟ್‌ನಲ್ಲಿ ಈ ನಾಯಕನೇ ನಂಬರ್ ಒನ್! ಧೋನಿ vs ಕೊಹ್ಲಿ vs ರೋಹಿತ್: ನಾಯಕತ್ವದ ಸಕ್ಸಸ್ ರೇಟ್‌ನಲ್ಲಿ ಈ ನಾಯಕನೇ ನಂಬರ್ ಒನ್!

ಹೀಗೆ ಈ ಹಿಂದೆ ತನ್ನ ಕೋಚ್ ಪ್ರವೀಣ್ ಆಮ್ರೆ ವಿಧಿಸಿದ್ದ ಷರತ್ತನ್ನು ಚೊಚ್ಚಲ ಟೆಸ್ಟ್ ಪಂದ್ಯದಲ್ಲಿಯೇ ಗೆದ್ದಿರುವ ಶ್ರೇಯಸ್ ಅಯ್ಯರ್ ಇನಿಂಗ್ಸ್ ಮುಗಿದ ಬಳಿಕ ಮಾತನಾಡಿದ್ದು "ಇಂದಿನ ಪಂದ್ಯ ಮುಗಿದ ನಂತರ, ನಿಜ ಹೇಳಬೇಕೆಂದರೆ ಪಂದ್ಯವಲ್ಲ ಇಂದಿನ ಶತಕ ಮುಗಿದ ನಂತರ ನಾನು ನನ್ನ ಕೋಚ್ ಪ್ರವೀಣ್ ಆಮ್ರೆ ಅವರಿಗೆ ಸಂದೇಶ ಕಳುಹಿಸುವುದರ ಮೂಲಕ ಊಟಕ್ಕೆ ಆಹ್ವಾನಿಸಲಿದ್ದೇನೆ" ಎಂದು ಹೇಳಿಕೆಯನ್ನು ನೀಡಿದರು.

ವಾರ್ನರ್ ಆಯಿತು ಈಗ ರಶೀದ್ ಖಾನ್ ಮತ್ತು ಎಸ್ಆರ್‌ಎಚ್ ನಡುವೆ ವೈಮನಸ್ಸು; ಕಾರಣ ವಿಲಿಯಮ್ಸನ್!ವಾರ್ನರ್ ಆಯಿತು ಈಗ ರಶೀದ್ ಖಾನ್ ಮತ್ತು ಎಸ್ಆರ್‌ಎಚ್ ನಡುವೆ ವೈಮನಸ್ಸು; ಕಾರಣ ವಿಲಿಯಮ್ಸನ್!

ಒಂದೆಡೆ ಶ್ರೇಯಸ್ ಅಯ್ಯರ್ ಕೋಚ್ ಪ್ರವೀಣ್ ಆಮ್ರೆ ಶ್ರೇಯಸ್ ಅಯ್ಯರ್ ಟೆಸ್ಟ್ ಶತಕವನ್ನು ಬಾರಿಸುವವರೆಗೂ ಯಾವುದೇ ಕಾರಣಕ್ಕೂ ನಿಮ್ಮ ಮನೆಗೆ ಊಟಕ್ಕೆ ಬರುವುದಿಲ್ಲ ಎಂದು ಷರತ್ತನ್ನು ವಿಧಿಸಿದ್ದರೆ, ಮತ್ತೊಂದೆಡೆ ಶ್ರೇಯಸ್ ಅಯ್ಯರ್ ಅವರ ತಂದೆ ಸಂತೋಷ್ ಅಯ್ಯರ್ 4 ವರ್ಷಗಳಿಂದ ತಮ್ಮ ವಾಟ್ಸಾಪ್ ಡಿಪಿಯನ್ನು ಬದಲಿಸದೇ ಹಾಗೆಯೇ ಇಟ್ಟುಕೊಂಡಿದ್ದರು. ಹೌದು, ತಮ್ಮ ಮಗ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಬೇಕೆಂಬ ಕನಸನ್ನು ಹೊತ್ತಿದ್ದ ಸಂತೋಷ್ ಅಯ್ಯರ್ ಈ ಹಿಂದೆ ಭಾರತ ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡು ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದಾಗ ಗುಂಪಿನೊಂದಿಗೆ ಟ್ರೋಫಿಯ ಜೊತೆ ಇದ್ದ ತಮ್ಮ ಮಗನ ಚಿತ್ರವನ್ನು ವಾಟ್ಸಾಪ್ ಡಿಪಿ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾ ಪ್ರವಾಸವನ್ನು ಕೈಗೊಂಡಿದ್ದ ಶ್ರೇಯಸ್ ಅಯ್ಯರ್ ಆ ಸರಣಿಯಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯುವ ಅವಕಾಶವನ್ನು ಮಾತ್ರ ಪಡೆದುಕೊಂಡಿರಲಿಲ್ಲ . ಆದರೆ ಇದೀಗ ಸಂತೋಷ್ ಅಯ್ಯರ್ ಅವರ ಆಸೆ ಈಡೇರಿದ್ದು ತಮ್ಮ ಮಗ ಶ್ರೇಯಸ್ ಅಯ್ಯರ್ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದು ಮಾತ್ರವಲ್ಲದೇ ಚೊಚ್ಚಲ ಪಂದ್ಯದಲ್ಲಿಯೇ ಶತಕವನ್ನು ಬಾರಿಸಿ ದಾಖಲೆಯನ್ನು ಕೂಡ ನಿರ್ಮಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, November 26, 2021, 23:25 [IST]
Other articles published on Nov 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X