ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಕೀವಿಸ್ ಟೆಸ್ಟ್ live: 90 ರನ್‌ಗೆ 6 ವಿಕೆಟ್ ಕಳೆದುಕೊಂದು ಸಂಕಷ್ಟದಲ್ಲಿ ಭಾರತ

India Vs New Zealand Live Score 2nd Test Match At Christchurch Day 2

ಕ್ರೈಸ್ಟ್‌ಚರ್ಚ್: ಬೌಲಿಂಗ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ 7 ರನ್‌ಗಳ ಮೊದಲ ಇನ್ನಿಂಗ್ಸ್‌ ಲೀಡ್ ಪಡೆದ ಟೀಮ್ ಇಂಡಿಯಾ ಬ್ಯಾಟಿಂಗ್‌ನಲ್ಲಿ ಮತ್ತೆ ವೈಫಲ್ಯವನ್ನು ಮುಂದುವರಿಸಿದೆ. ಎರಡನೇ ದಿನದಂತ್ಯಕ್ಕೆ ಟೀಮ್ ಇಂಡಿಯಾ ತನ್ನ ಆರು ವಿಕೆಟನ್ನು ಕಳೆದುಕೊಂಡು 90 ರನ್‌ಗಳಿಸಿದೆ. ಆರಂಭಿಕರಿಬ್ಬರೂ ಅಲ್ಪ ಮೊತ್ತಕ್ಕೆ ಔಟಾದ ಬಳಿಕ ನಾಯಕ ವಿರಾಟ್ ಕೊಹ್ಲಿ ಕೂಡ ಎರಡನೇ ಇನ್ನಿಂಗ್ಸ್‌ನಲ್ಲೂ ಬೇಗನೆ ವಿಕೆಟ್ ಒಪ್ಪಿಸಿದ್ದಾರೆ.

ಎರಡನೇ ದಿನ ಟೀಮ್ ಇಂಡಿಯಾ ಬೌಲರ್‌ಗಳು ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ. ನ್ಯೂಜಿಲೆಂಡ್ ತಂಡದ ಎಲ್ಲಾ ವಿಕೆಟ್‌ಗಳನ್ನು ಪಡೆಯುವಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಯಶಸ್ವಿಯಾಗಿದ್ದಾರೆ.

ಎರಡನೇ ದಿನ ನ್ಯೂಜಿಲೆಂಡ್ ತಂಡ ಇನ್ನಿಂಗ್ಸ್‌ ಹಿನ್ನಡೆಯನ್ನು ಅನುಭವಿಸಿದೆ. 235 ರನ್‌ಗಳಿಗೆ ಆಲೌಟ್‌ ಆಗಿರುವ ನ್ಯೂಜಿಲೆಂಡ್ 7 ರನ್‌ಗಳ ಅಲ್ಪ ಹಿನ್ನೆಡೆಯನ್ನು ಅನುಭವಿಸಿದೆ.

live ಸ್ಕೋರ್ ಪಟ್ಟಿ ಹೀಗಿದೆ:

1
46212

ಟೀಮ್ ಇಂಡಿಯಾ ಬೌಲರ್‌ ಜಸ್ಪ್ರಿತ್ ಬೂಮ್ರಾ ಎರಡನೇ ಟೆಸ್ಟ್‌ನ ಎರಡನೇ ದಿನ ತಮ್ಮ ಹಿಂದಿನ ಫಾರ್ಮ್‌ಅನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಕೆಲ ಸರಣಿಗಳಲ್ಲಿ ಬೂಮ್ರಾ ವಿಕೆಟ್ ಪಡೆಯಲು ಪರದಾಡುತ್ತಿದ್ದರು. ಇಂದು ಮೂರು ವಿಕೆಟ್ ಪಡೆಯುವಲ್ಲಿ ಬೂಮ್ರಾ ಯಶಸ್ವಿಯಾಗಿದ್ದಾರೆ.

ಭಾರತ vs ನ್ಯೂಜಿಲೆಂಡ್ ಟೆಸ್ಟ್,: ಪೃಥ್ವಿ, ಪೂಜಾರ, ವಿಹಾರಿ ಅರ್ಧಶತಕಭಾರತ vs ನ್ಯೂಜಿಲೆಂಡ್ ಟೆಸ್ಟ್,: ಪೃಥ್ವಿ, ಪೂಜಾರ, ವಿಹಾರಿ ಅರ್ಧಶತಕ

ಒಂದೂ ವಿಕೆಟ್ ಕಳೆದುಕೊಳ್ಳದೆ ಉತ್ತಮ ಆರಂಭ ಪಡೆದುಕೊಂಡಿದ್ದ ನ್ಯೂಜಿಲೆಂಡ್ ತಂಡಕ್ಕೆ ಎರಡನೇ ದಿನ ಆರಂಭದಲ್ಲೇ ಆಘಾತ ಎದುರಾಯಿತು. ಬಳಿಕ ಟೀಮ್ ಇಂಡಿಯಾ ಬೌಲೆದದಗಳು ಪಂದ್ಯವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ನ್ಯೂಜಿಕೆಂಡ್‌ನ ಯಾವ ಆಟಗಾರನಿಗೂ ದೊಡ್ಡ ಇನ್ನಿಂಗ್ಸ್‌ ಆಡಲು ಅವಕಾಶವನ್ನು ನೀಡಲಿಲ್ಲ. ನ್ಯೂಜಿಲೆಂಡ್‌ನ ಆರಂಭಕ ಆಟಗಾರ ಟಾಮ್ ಲ್ಯಾಥಮ್ ಮಾತ್ರ ಕಿವೀಸ್ ಪರವಾಗಿ ಅರ್ಧ ಶತಕವನ್ನು ಸಿಡಿಸಿ ಮಿಂಚಿದ ಆಟಗಾರ..

ಮಹಿಳಾ ಟಿ20 ವಿಶ್ವಕಪ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸುಲಭ ಗೆಲುವುಮಹಿಳಾ ಟಿ20 ವಿಶ್ವಕಪ್: ಶ್ರೀಲಂಕಾ ವಿರುದ್ಧ ಭಾರತಕ್ಕೆ ಸುಲಭ ಗೆಲುವು

ಟೀಮ್ ಇಂಡಿಯಾ ಪರವಾಗಿ ಬೂಮ್ರಾ ಮೂರು ವಿಕೆಟ್ ಪಡೆದು ಮಿಂಚಿದರೆ ಮೊಹಮದ್ ಶಮಿ 4 ವಿಕೆಟ್ ಪಡೆದುಕೊಂಡರು ಮತ್ತು ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಒಂದು ವಿಕೆಟ್ ಉಮೇಶ್ ಯಾದವ್ ಪಾಲಾಗಿದೆ.

Story first published: Sunday, March 1, 2020, 11:44 [IST]
Other articles published on Mar 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X