ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಕ್ಲೆಂಡ್ ಸ್ಟೇಡಿಯಂನಲ್ಲಿ ಸಾಲು ಸಾಲು ದಾಖಲೆ ಬರೆದ ರೋಹಿತ್ ಶರ್ಮಾ!

ಆಕ್ಲೆಂಡ್ ಸ್ಟೇಡಿಯಂನಲ್ಲಿ ಸಾಲು ಸಾಲು ದಾಖಲೆ ಬರೆದ ರೋಹಿತ್ ಶರ್ಮಾ! | Oneindia Kannada
India vs New Zealand: Multiple firsts for Rohit Sharma in Auckland

ಆಕ್ಲೆಂಡ್, ಫೆಬ್ರವರಿ 8: ಆಕ್ಲೆಂಡ್‌ನ ಈಡನ್ ಪಾರ್ಕ್‌ ಸ್ಟೇಡಿಯಂನಲ್ಲಿ ಶುಕ್ರವಾರ (ಫೆಬ್ರವರಿ 8) ನಡೆದ ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್ ಸುಲಭ ಗೆಲುವನ್ನಾಚರಿಸಿತು. ಭಾರತದ ನಾಯಕತ್ವ ವಹಿಸಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಸಾಲು ದಾಖಲೆಗಳಿಗೂ ಕಾರಣರಾಗಿದ್ದಾರೆ.

ರಾಜ್ಯ ಬಜೆಟ್ 2019-20: ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿ ಪ್ರಮುಖಾಂಶಗಳುರಾಜ್ಯ ಬಜೆಟ್ 2019-20: ಕ್ರೀಡಾಕ್ಷೇತ್ರಕ್ಕೆ ಸಂಬಂಧಿಸಿ ಪ್ರಮುಖಾಂಶಗಳು

ಆಕ್ಲೆಂಡ್ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ 29 ಎಸೆತಗಳಿಗೆ ಭರ್ತಿ 50 ರನ್ ಬಾರಿಸಿದರು. ಶರ್ಮಾ ಬ್ಯಾಟಿಂಗ್‌ ನೆರವಿನಿಂದ ಭಾರತ ಜಯ ಗಳಿಸುವುದರೊಂದಿಗೆ ಮೂರು ಪಂದ್ಯಗಳ ಈ ಸರಣಿಯನ್ನು 1-1ರಿಂದ ಸಮಬಲಗೊಳಿಸಿಕೊಂಡಿತು.

ಆಕ್ಲೆಂಡ್, 2ನೇ ಟಿ20: 7 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್ ಸದೆಬಡಿದ ಭಾರತಆಕ್ಲೆಂಡ್, 2ನೇ ಟಿ20: 7 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್ ಸದೆಬಡಿದ ಭಾರತ

ಇಷ್ಟೇ ಅಲ್ಲ, ಬ್ಯಾಟಿಂಗ್‌ಗಾಗಿ ರೋಹಿತ್ ಹೆಸರಿನಲ್ಲಿ ದಾಖಲೆಗಳೂ ಸೃಷ್ಟಿಯಾಯಿತು. ದ್ವಿತೀಯ ಟಿ20 ಪಂದ್ಯದಲ್ಲಿ ರೋಹಿತ್ ಭಾರತ ಪರ ಅಧಿಕ ಸಿಕ್ಸ್ ಬಾರಿಸಿದ ಆಟಗಾರನಾಗಿ, ಹೆಚ್ಚಿನ ಸಾರಿ 50+ ರನ್ ಗಳಿಸಿದ ಆಟಗಾರನಾರನಾಗಿ ಮತ್ತು ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಸಾಧಕನಾಗಿ ಗುರುತಿಸಿಕೊಂಡಿದ್ದಾರೆ.

ಸಿಕ್ಸರ್ ಸರದಾರ ರೋಹಿತ್

ಸಿಕ್ಸರ್ ಸರದಾರ ರೋಹಿತ್

ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ 100 ಸಿಕ್ಸ್ ಬಾರಿಸಿದ ಮೊದಲ ಆಟಗಾರನಾಗಿ ರೋಹಿತ್ ಶರ್ಮಾ ಮಿಂಚಿದ್ದಾರೆ. ಚುಟುಕು ಕ್ರಿಕೆಟ್‌ನಲ್ಲಿ ರೋಹಿತ್ ಒಟ್ಟು 102 ಸಿಕ್ಸ್‌ಗಳನ್ನು ಬಾರಿಸಿದ್ದಾರೆ. ಇನ್ನೊಂದೇ ಸಿಕ್ಸ್ ಬಾರಿಸಿದರೂ ರೋಹಿತ್ ವಿಶ್ವದ ಅಗ್ರ ಸಿಕ್ಸರ್ ಸರದಾರರ ಸಾಲಿನಲ್ಲಿ ಸೇರಲಿದ್ದಾರೆ.

ಗೇಲ್, ಗಪ್ಟಿಲ್ ಮೊದಲಿಗರು

ಗೇಲ್, ಗಪ್ಟಿಲ್ ಮೊದಲಿಗರು

ಟಿ20 ಕ್ರಿಕೆಟ್‌ನಲ್ಲಿ ಅತೀಹೆಚ್ಚು ಸಿಕ್ಸ್ ಬಾರಿಸಿದವರಲ್ಲಿ ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಮತ್ತು ನ್ಯೂಜಿಲ್ಯಾಂಡ್‌ನ ಮಾರ್ಟಿನ್ ಗಪ್ಟಿಲ್ ಅಗ್ರ ಸ್ಥಾನದಲ್ಲಿದ್ದಾರೆ. ಗೇಲ್-ಗಪ್ಟಿಲ್ ಇಬ್ಬರೂ 103 ಸಿಕ್ಸರ್‌ಗಳ ಸಾಧನೆ ಹೊಂದಿದ್ದಾರೆ. ರೋಹಿತ್ ಶರ್ಮಾ 102 ಸಿಕ್ಸರ್‌ಗೆ 84 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರೆ, ಕ್ರಿಸ್‌ಗೇಲ್ 52 ಇನ್ನಿಂಗ್ಸ್‌ಗಳಲ್ಲಿ 103 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

ಹೆಚ್ಚು 50+ ರನ್ ಸಾಧನೆ

ಹೆಚ್ಚು 50+ ರನ್ ಸಾಧನೆ

ಟಿ20ಯಲ್ಲಿ 50+ ರನ್ ಸಾಧನೆ ಮಾಡಿದ ವಿಶ್ವದ ಆಟಗಾರರಲ್ಲಿ ರೋಹಿತ್ ಶರ್ಮಾ ಮೊದಲಿಗರು. ಶರ್ಮಾ 20 ಸಾರಿ 50+ ರನ್ ಗಳಿಸಿದ್ದಾರೆ. ಇದರಲ್ಲಿ 16 ಸಾರಿ ಅರ್ಧಶತಕಗಳು ಮತ್ತು 4 ಸಾರಿ ಶತಕಗಳನ್ನು ಬಾರಿಸಿದ್ದಾರೆ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಕೊಹ್ಲಿ 19 ಸಾರಿ 50+ ರನ್ ಗಳಿಸಿದ್ದಾರೆ. ಇದರಲ್ಲಿ 19 ಅರ್ಧಶತಕಗಳಿವೆ; ಆದರೆ ಕೊಹ್ಲಿ ಶತಕ ಬಾರಿಸಿಲ್ಲ. ಈ ಸಾಧನೆಗಾಗಿ ನ್ಯೂಜಿಲ್ಯಾಂಡ್‌ನ ಮಾರ್ಟಿನ್ ಗಪ್ಟಿಲ್ (16 ಸಾರಿ), ಕ್ರಿಸ್‌ಗೇಲ್ (ವಿಡೀಸ್-15), ಬ್ರೆಂಡನ್ ಮೆಕಲನ್ (ನ್ಯೂಜಿಲ್ಯಾಂಡ್-15) ನಂತರದ ಸ್ಥಾನಗಳಲ್ಲಿದ್ದಾರೆ.

ಟಿ20ಯಲ್ಲಿ ಅತೀ ಹೆಚ್ಚು ರನ್

ಟಿ20ಯಲ್ಲಿ ಅತೀ ಹೆಚ್ಚು ರನ್

ಟಿ20ಯಲ್ಲಿ ಅತೀ ಹೆಚ್ಚು ರನ್‌ಗಾಗಿ ರೋಹಿತ್ ಶರ್ಮಾ ಅವರು ಮಾರ್ಟಿನ್ ಗಪ್ಟಿಲ್ ಅವರನ್ನು ಹಿಂದಿಕ್ಕಿದ್ದಾರೆ. ಒಟ್ಟು 2288 ರನ್ ಗಳಿಸಿ ರೋಹಿತ್ ಮೊದಲ ಸ್ಥಾನದಲ್ಲಿದ್ದರೆ, ಕಿವೀಸ್‌ನ ಮಾರ್ಟಿನ್ ಗಪ್ಟಿಲ್ (2272) ದ್ವಿತೀಯ, ಪಾಕಿಸ್ತಾನದ ಶೋಯೆಬ್ ಮಲ್ಲಿಕ್ (2263) ತೃತೀಯ, ವಿರಾಟ್ ಕೊಹ್ಲಿ (2167) ಚತುರ್ಥ, ಕಿವೀಸ್‌ನ ಬ್ರೆಂಡನ್ ಮೆಕಲಮ್ (2140) ಐದನೇ ಸ್ಥಾನದಲ್ಲಿದ್ದಾರೆ.

Story first published: Friday, February 8, 2019, 19:08 [IST]
Other articles published on Feb 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X