ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂಬೈ ಟೆಸ್ಟ್: ಮೊದಲ ದಿನವೇ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ? ವಾಂಖೆಡೆ ಸ್ಟೇಡಿಯಂ ಪಿಚ್ ರಿಪೋರ್ಟ್, ಟೆಸ್ಟ್ ದಾಖಲೆ

India vs New Zealand, Mumbai Test: Mumbai Weather, Wankhede Pitch Report, Test Statistics

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಶುಕ್ರವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ಕಾನ್ಪುರದಲ್ಲಿ ನಡೆದಿದ್ದು ಈ ಪಂದ್ಯ ರೋಚಕ ಡ್ರಾ ದಲ್ಲಿ ಅಂತ್ಯ ಕಂಡಿತ್ತು. ಹೀಗಾಗಿ ಸರಣಿಯನ್ನು ಗೆಲ್ಲಲು ಎರಡು ತಂಡಗಳು ಕೂಡ ಮುಂಬೈನಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ.

ಇನ್ನು ಈ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಲಭ್ಯವಾಗುತ್ತಿದ್ದಾರೆ. ಟಿ20 ಸರಣಿ ಹಾಗೂ ಟೆಸ್ಟ್ ಸರಣಿಯ ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ವಿರಾಟ್ ಈಗ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದರಿಂದಾಗಿ ಯಾವ ಆಟಗಾರ ಕೊಹ್ಲಿಗಾಗಿ ಸ್ಥಾನವನ್ನು ತೆರೆಯಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಶ್ರೇಯಸ್ ಐಯ್ಯರ್ ಕಾನ್ಪುರ ಟೆಸ್ಟ್‌ನಲ್ಲಿ ಚೊಚ್ಚಲ ಬಾರಿಗೆ ಟೆಸ್ಟ್‌ನಲ್ಲಿ ಆಡಲಿಳಿದು ಮೊದಲ ಪಂದ್ಯದಲ್ಲಿಯೇ ಶತಕ ಹಾಗೂ ಅರ್ಧ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಮುಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಐಪಿಎಲ್ 2022: ಕಡಿಮೆ ಬೆಲೆಗೆ ರೀಟೈನ್ ಆದ ಕೊಹ್ಲಿ, ಧೋನಿ: ವೇತನ ಕಡಿತಕ್ಕೆ ಹೇಗೆ ಒಪ್ಪಿಕೊಂಡ್ರು?ಐಪಿಎಲ್ 2022: ಕಡಿಮೆ ಬೆಲೆಗೆ ರೀಟೈನ್ ಆದ ಕೊಹ್ಲಿ, ಧೋನಿ: ವೇತನ ಕಡಿತಕ್ಕೆ ಹೇಗೆ ಒಪ್ಪಿಕೊಂಡ್ರು?

ಹೀಗಾಗಿ ವಿರಾಟ್ ಕೊಹ್ಲಿಗಾಗಿ ಶ್ರೇಯಸ್ ಐಯ್ಯರ್ ಅವರನ್ನು ಆಡುವ ಬಳಗದಿಂದ ಹೊರಗಿಡುವುದು ಸುಲಭವಲ್ಲ. ಸತತವಾಗಿ ವಿಫಲವಾಗುತ್ತಿರುವ ಉಪ ನಾಯಕ ಅಜಿಂಕ್ಯಾ ರಹಾಣೆ ಹಾಗೂ ಚೇತೇಶ್ವರ್ ಪೂಜಾರ ಈ ಇಬ್ಬರಲ್ಲಿ ಯಾರನ್ನಾದರೂ ಹೊರಗಿಡುವ ನಿರ್ಧಾರವನ್ನು ಮ್ಯಾನೇಜ್‌ಮೆಂಟ್ ತೆಗೆದುಕೊಳ್ಳಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಈ ಟೆಸ್ಟ್ ಪಂದ್ಯಕ್ಕೆ ಸಂಬಂಧಿಸಿದ ಕೆಲ ಪ್ರಮುಖ ಮಾಹಿತಿಗಳು ಇಲ್ಲಿದೆ.

ಮುಂಬೈ ಪಿಚ್ ರಿಪೋರ್ಟ್

ಮುಂಬೈ ಪಿಚ್ ರಿಪೋರ್ಟ್

ವಾಂಖೆಡೆ ಸ್ಟೇಡಿಯಂನಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ನೆರವು ನೀಡುವ ಪಿಚ್ ಆಗಿದ್ದು ಪಮದ್ಯ ಮುಂದುವರಿದಂತೆಯೇ ಸ್ಪಿನ್ನರ್‌ಗಳು ಇಲ್ಲಿ ಹೆಚ್ಚಿನ ಪ್ರಾಬಲ್ಯ ಸಾಧಿಸುತ್ತಾ ಸಾಗುತ್ತಾರೆ. ಆದರೆ ಈ ಬಾರಿ ಮುಂಬೈನಲ್ಲಿ ಮಳೆಯಾಗುತ್ತಿರುವ ಕಾರಣದಿಂದಾಗಿ ಪಿಚ್‌ನ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಮಳೆಯ ಕಾರಣದಿಂದಾಗಿ ವೇಗಿಗಳು ಕೂಡ ಇಲ್ಲಿ ಲಾಭ ಗಳಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಮುಂಬೈ ಹವಾಮಾನ ವರದಿ

ಮುಂಬೈ ಹವಾಮಾನ ವರದಿ

ಮುಂಬೈನಲ್ಲಿ ಗುರುವಾರ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದಾಗಿ ಶುಕ್ರವಾರದ ಪಂದ್ಯದ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ. ಯಾಕೆಂದರೆ ಒದ್ದೆಯಾದ ಪಿಚ್‌ನ ಹೊರಾಂಗಣ ಪಂದ್ಯಕ್ಕೆ ಪರಿಣಾಮವುಂಟು ಮಾಡಬಹುದು. ಅಲ್ಲದೆ ಹವಾಮಾನ ತಜ್ಞರ ಮಾಹಿತಿ ಪ್ರಕಾರ ಶುಕ್ರವಾರ ಕೂಡ ಮಳೆಯುಆಗುವ ಸಾಧ್ಯತೆಯಿದ್ದು ಮೊದಲ ದಿನದ ಆಟಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹೀಗಾಘಿ ಮೊದಲ ದಿನ ಸಂಪೂರ್ಣ ಪ್ರಮಾಣದಲ್ಲಿ ಆಟ ನಡೆಯುವ ಸಾಧ್ಯತೆ ಕಡಿಮೆಯಿದೆ. ಆದರೆ ನಂತರದ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದ್ದು ಉತ್ತಮ ಪ್ರಮಾಣದ ಬಿಸಿಲಿನೊಂದಿಗೆ ಪಂದ್ಯ ಸಾಗುವ ನಿರೀಕ್ಷೆಯಿದೆ. 25-30 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವಿರಲಿದೆ.

Virat Kohliಗೆ ಮೊದಲ ಬಾರಿಗೆ ಅಭ್ಯಾಸ ಮಾಡಿಸಿದ Rahul Dravid | Oneindia Kannada
ವಾಂಖೆಡೆ ಕ್ರೀಡಾಂಗಣದಲ್ಲಿ ಟೆಸ್ಟ್ ದಾಖಲೆಗಳು

ವಾಂಖೆಡೆ ಕ್ರೀಡಾಂಗಣದಲ್ಲಿ ಟೆಸ್ಟ್ ದಾಖಲೆಗಳು

ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಈವರೆಗೆ 25 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 11 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಇಲ್ಲಿ 7 ಪಂದ್ಯಗಳಲ್ಲಿ ಭಾರತ ಸೋತಿದ್ದು, 7ರಲ್ಲಿ ಡ್ರಾ ಸಾಧಿಸಿದೆ. ಈ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಎರಡು ಬಾರಿಮುಖಾಮುಖಿಯಾಗಿದೆ. 1976 ರಲ್ಲಿ ನಡೆದ ಮೊದಲ ಮುಖಾಮುಖಿಯಲ್ಲಿ ಭಾರತವು 162 ರನ್‌ಗಳ ಅಂತರದಿಂದ ಗೆದ್ದು ಬೀಗಿತ್ತು. ಆದರೆ 12 ವರ್ಷಗಳ ನಂತರ ನಡೆದ ಮತ್ತೊಂದು ಮುಖಾಮುಖಿಯಲ್ಲಿ ಕಿವೀಸ್ ಪಡೆ 136 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.

ಇನ್ನು ಈ ಮೈದಾನದಲ್ಲಿ ಅನುಭವಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ನಾಲ್ಕು ಪಂದ್ಯಗಳಿಂದ 30 ವಿಕೆಟ್‌ಗಳನ್ನು ಕಬಳಿಸುವ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ವಿರಾಟ್ ಕೊಹ್ಲಿ 72.16 ಸರಾಸರಿಯಲ್ಲಿ 433 ರನ್ ಗಳಿಸಿದ್ದರೆ ಚೇತೇಶ್ವರ ಪೂಜಾರ 75.25 ಸರಾಸರಿಯಲ್ಲಿ 301 ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಈ ಅಂಕಿಅಂಶಗಳು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಸ್ಪೂರ್ತಿಯಾಗಲಿದೆ.

Story first published: Friday, December 3, 2021, 9:34 [IST]
Other articles published on Dec 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X