ಭಾರತದ ವಿರುದ್ಧ 62ಕ್ಕೆ ಆಲ್ಔಟ್ ಆಗುವ ಮೂಲಕ ನ್ಯೂಜಿಲೆಂಡ್‌ ಬರೆದ ಕೆಟ್ಟ ದಾಖಲೆ ಒಂದೆರಡಲ್ಲ!

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ ನಂತರ ಭಾರತ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವೆ ಮೊದಲಿಗೆ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ನಡೆದಿದ್ದು, ಈ ಎಲ್ಲಾ 3 ಪಂದ್ಯಗಳಲ್ಲಿಯೂ ನ್ಯೂಜಿಲೆಂಡ್ ವಿರುದ್ಧ ಭಾರತ ಜಯ ಸಾಧಿಸುವುದರ ಮೂಲಕ ವೈಟ್ ವಾಷ್ ಸಾಧನೆ ಮಾಡಿತು. ಹೀಗೆ ಟಿ ಟ್ವೆಂಟಿ ಸರಣಿಯಲ್ಲಿ ವೈಟ್ ವಾಷ್ ಮುಖಭಂಗಕ್ಕೆ ಒಳಗಾದ ನ್ಯೂಜಿಲೆಂಡ್ ಭಾರತ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ಸುಳಿಯಿಂದ ಪಾರಾಗಿ ಡ್ರಾ ಮಾಡಿಕೊಂಡಿತು.

ತಮ್ಮ 10 ವಿಕೆಟ್ ದಾಖಲೆ ಸರಿದೂಗಿಸಿದ ಅಜಾಜ್ ಪಟೇಲ್ ಕುರಿತು ಪ್ರತಿಕ್ರಿಯಿಸಿದ ಕುಂಬ್ಳೆ ಹೇಳಿದ್ದಿಷ್ಟುತಮ್ಮ 10 ವಿಕೆಟ್ ದಾಖಲೆ ಸರಿದೂಗಿಸಿದ ಅಜಾಜ್ ಪಟೇಲ್ ಕುರಿತು ಪ್ರತಿಕ್ರಿಯಿಸಿದ ಕುಂಬ್ಳೆ ಹೇಳಿದ್ದಿಷ್ಟು

ಹೀಗಾಗಿ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ದ್ವಿತೀಯ ಟೆಸ್ಟ್ ಪಂದ್ಯ ಇತ್ತಂಡಗಳಿಗೂ ಕೂಡ ಬಹಳ ಪ್ರಮುಖವಾದದ್ದಾಗಿದ್ದು, ಈ ಪಂದ್ಯದಲ್ಲಿ ಜಯಗಳಿಸುವ ತಂಡ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ. ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಭಾರತದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ 150 ರನ್ ಗಳಿಸಿ ಭಾರತದ ಪರ ಆಪದ್ಭಾಂಧವರಾದರು. ಇನ್ನು ಮತ್ತೋರ್ವ ಆರಂಭಿಕ ಆಟಗಾರ ಶುಭ್ ಮನ್ ಗಿಲ್ 44 ರನ್ ಗಳಿಸಿದರೆ, ಅಂತಿಮ ಹಂತದಲ್ಲಿ ಅಕ್ಷರ್ ಪಟೇಲ್ ಅರ್ಧಶತಕ ಬಾರಿಸಿದರು. ಹೀಗೆ ಈ ಮೂವರು ಆಟಗಾರರ ಜವಾಬ್ದಾರಿಯುತ ಪ್ರದರ್ಶನದಿಂದ ಟೀಂ ಇಂಡಿಯಾ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 325 ರನ್ ಗಳಿಸಿತು.

ಮುಂಬೈ ಟೆಸ್ಟ್: ಭಾರತೀಯ ಬೌಲರ್‌ಗಳ ದಾಳಿಗೆ ಕಿವೀಸ್ ತತ್ತರ; 2ನೇ ದಿನದಾಟದಂತ್ಯಕ್ಕೆ ಭಾರತಕ್ಕೆ 332 ಲೀಡ್ಮುಂಬೈ ಟೆಸ್ಟ್: ಭಾರತೀಯ ಬೌಲರ್‌ಗಳ ದಾಳಿಗೆ ಕಿವೀಸ್ ತತ್ತರ; 2ನೇ ದಿನದಾಟದಂತ್ಯಕ್ಕೆ ಭಾರತಕ್ಕೆ 332 ಲೀಡ್

ಅತ್ತ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ ಭಾರತದ ಎಲ್ಲಾ 10 ವಿಕೆಟ್ ಪಡೆಯುವುದರ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ 10 ವಿಕೆಟ್ ಗೊಂಚಲು ಪಡೆದ ವಿಶ್ವದ ಮೂರನೇ ಕ್ರಿಕೆಟಿಗ ಎಂಬ ದಾಖಲೆ ನಿರ್ಮಿಸಿದರು. ಹೀಗೆ ಟೀಮ್ ಇಂಡಿಯಾವನ್ನು 325 ರನ್‌ಗಳಿಗೆ ಕಟ್ಟಿ ಹಾಕಿ ತನ್ನ ಪಾಲಿನ ಮೊದಲನೇ ಇನ್ನಿಂಗ್ಸ್‌ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್‌ ಭಾರತೀಯ ಬೌಲರ್‌ಗಳ ದಾಳಿಗೆ ಅಕ್ಷರಷಃ ತತ್ತರಿಸಿದೆ. 28.1 ಓವರ್‌ಗಳಲ್ಲಿ ಕೇವಲ 62 ರನ್‌ಗಳಿಗೆ ನ್ಯೂಜಿಲೆಂಡ್‌ ಆಲ್ಔಟ್ ಆಯಿತು. ಹೀಗೆ ಇಷ್ಟು ಕಡಿಮೆ ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಈ ಕೆಳಕಂಡ ಬೇಡವಾದ ದಾಖಲೆಗಳನ್ನು ನ್ಯೂಜಿಲೆಂಡ್ ತನ್ನ ಹೆಸರಿಗೆ ಬರೆದುಕೊಂಡಿದೆ..

ಭಾರತ ನೆಲದಲ್ಲಿ ಇದೇ ಅತೀ ಕಡಿಮೆ ಟೆಸ್ಟ್ ಟೋಟಲ್

ಭಾರತ ನೆಲದಲ್ಲಿ ಇದೇ ಅತೀ ಕಡಿಮೆ ಟೆಸ್ಟ್ ಟೋಟಲ್

ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ 62 ರನ್‌ಗಳಿಗೆ ಆಲ್ಔಟ್ ಆಗಿದ್ದು ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತ ನೆಲದಲ್ಲಿ ತಂಡವೊಂದು ಗಳಿಸಿದ ಅತೀ ಕಡಿಮೆ ಮೊತ್ತವಾಗಿದೆ.

ಭಾರತ ನೆಲದಲ್ಲಿ ದಾಖಲಾಗಿರುವ ಅತೀ ಕಡಿಮೆ ಟೆಸ್ಟ್ ಮೊತ್ತಗಳು

ನ್ಯೂಜಿಲೆಂಡ್‌ vs ಭಾರತ 62, ಮುಂಬೈ 2021

ಭಾರತ vs ವೆಸ್ಟ್ ಇಂಡೀಸ್ 75, ದೆಹಲಿ 1987

ಭಾರತ vs ದಕ್ಷಿಣ ಆಫ್ರಿಕಾ 76, ಅಹ್ಮದಾಬಾದ್ 2008

ದಕ್ಷಿಣ ಆಫ್ರಿಕಾ vs ಭಾರತ 79, ನಾಗ್ಪುರ್ 2015

ಭಾರತ ವಿರುದ್ಧ ಅತಿ ಕಡಿಮೆ ರನ್ ಗಳಿಕೆ!

ಭಾರತ ವಿರುದ್ಧ ಅತಿ ಕಡಿಮೆ ರನ್ ಗಳಿಕೆ!

ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ 62 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ನ್ಯೂಜಿಲೆಂಡ್‌ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಭಾರತದ ವಿರುದ್ಧ ಅತಿ ಕಡಿಮೆ ರನ್ ಗಳಿಸಿದ ತಂಡ ಎಂಬ ಕೆಟ್ಟ ದಾಖಲೆ ಬರೆದಿದೆ.

ಭಾರತ ವಿರುದ್ಧ ಅತಿ ಕಡಿಮೆ ಟೆಸ್ಟ್ ರನ್ ಗಳಿಸಿದ ತಂಡಗಳು:

ನ್ಯೂಜಿಲೆಂಡ್‌ vs ಭಾರತ 62, ಮುಂಬೈ 2021

ದಕ್ಷಿಣ ಆಫ್ರಿಕಾ vs ಭಾರತ 79, ನಾಗ್ಪುರ್ 2015

ಇಂಗ್ಲೆಂಡ್ va ಭಾರತ 81, ಅಹ್ಮದಾಬಾದ್ 2021

ಶ್ರೀಲಂಕಾ vs ಭಾರತ 90, ಚಂಡೀಗಢ 1990

ಭಾರತ ವಿರುದ್ಧ ನ್ಯೂಜಿಲೆಂಡ್‌ನ ಅತಿ ಕಡಿಮೆ ಟೆಸ್ಟ್‌ ಮೊತ್ತವಿದು!

ಭಾರತ ವಿರುದ್ಧ ನ್ಯೂಜಿಲೆಂಡ್‌ನ ಅತಿ ಕಡಿಮೆ ಟೆಸ್ಟ್‌ ಮೊತ್ತವಿದು!

ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ 62 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಾನು ಭಾರತದ ವಿರುದ್ಧ ಗಳಿಸಿದ ಅತೀ ಕಡಿಮೆ ಮೊತ್ತ ಎಂಬ ಕೆಟ್ಟ ದಾಖಲೆಯನ್ನೂ ನ್ಯೂಜಿಲೆಂಡ್‌ ಬರೆದಿದೆ.

ಭಾರತದ ವಿರುದ್ಧ ನ್ಯೂಜಿಲೆಂಡ್‌ನ ಕಡಿಮೆ ಟೆಸ್ಟ್ ಮೊತ್ತಗಳ ಪಟ್ಟಿ

ನ್ಯೂಜಿಲೆಂಡ್‌ vs ಭಾರತ 62, ಮುಂಬೈ 2021

ನ್ಯೂಜಿಲೆಂಡ್‌ vs ಭಾರತ 94, ಹ್ಯಾಮಿಲ್ಟನ್ 2002

ನ್ಯೂಜಿಲೆಂಡ್‌ vs ಭಾರತ 100, ವೆಲ್ಲಿಂಗ್ಟನ್ 1981

ನ್ಯೂಜಿಲೆಂಡ್‌ vs ಭಾರತ 101, ಆಕ್ಲೆಂಡ್‌ 1968

ವಿಭಿನ್ನವಾಗಿ ಶ್ರದ್ಧಾಂಜಲಿ ಹೇಳಿದ ವಾರ್ನರ್ | Oneindia Kannada
ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲಾದ ಅತಿ ಕಡಿಮೆ ಟೆಸ್ಟ್ ಮೊತ್ತ

ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲಾದ ಅತಿ ಕಡಿಮೆ ಟೆಸ್ಟ್ ಮೊತ್ತ

ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ 62 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ವಾಂಖೆಡೆ ಕ್ರೀಡಾಂಗಣದ ಇತಿಹಾಸದಲ್ಲಿಯೇ ದಾಖಲಾದ ಅತಿ ಕಡಿಮೆ ಟೆಸ್ಟ್ ಮೊತ್ತ ಎಂಬ ಕೆಟ್ಟ ದಾಖಲೆಯೊಂದನ್ನೂ ಕೂಡ ಬರೆದಿದೆ.

ವಾಂಖೆಡೆ ಕ್ರೀಡಾಂಗಣದಲ್ಲಿ ದಾಖಲಾದ ಅತಿ ಕಡಿಮೆ ಟೆಸ್ಟ್ ಮೊತ್ತಗಳು

ನ್ಯೂಜಿಲೆಂಡ್‌ vs ಭಾರತ 62, ಮುಂಬೈ 2021

ಆಸ್ಟ್ರೇಲಿಯಾ vs ಭಾರತ 93, 2004

ಭಾರತ vs ಇಂಗ್ಲೆಂಡ್ 100, 2006

ಇಂಗ್ಲೆಂಡ್ vs ಭಾರತ 102, 1981

ಆಸ್ಟ್ರೇಲಿಯಾ vs ಭಾರತ 104, 2004

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, December 4, 2021, 19:48 [IST]
Other articles published on Dec 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X