ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಎದುರಿಸುವ ಸವಾಲೇನೆಂದು ಬಾಯ್ಬಿಟ್ಟ ಆರ್‌ಸಿಬಿ ಕೋಚ್!

RCB Coach points out at Virat Kohli's weakness | Royal Challengers Bangalore | RCB | Coach
India vs New Zealand: RCB coach points out biggest test for Virat Kohli

ಆಕ್ಲೆಂಡ್, ಜನವರಿ 23: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಜಯಿಸಿರುವ ಟೀಮ್ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಯನ್ನಾಡಲಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಎದುರಿಸಲಿರುವ ಸವಾಲಿನ ಬಗ್ಗೆ ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ಕೋಚ್‌ ಮೈಕ್ ಹೆಸನ್ ಮಾತನಾಡಿದ್ದಾರೆ.

ನ್ಯೂಜಿಲ್ಯಾಂಡ್‌ ನಾಯಕನ ಬೆನ್ನಿಗೆ ನಿಂತ ಟೀಮ್ ಇಂಡಿಯಾ ನಾಯಕ ಕೊಹ್ಲಿನ್ಯೂಜಿಲ್ಯಾಂಡ್‌ ನಾಯಕನ ಬೆನ್ನಿಗೆ ನಿಂತ ಟೀಮ್ ಇಂಡಿಯಾ ನಾಯಕ ಕೊಹ್ಲಿ

ಮುಂಬರಲಿರುವ ಟಿ20 ಸರಣಿಯಲ್ಲಿ ಕೊಹ್ಲಿಗೆ ನ್ಯೂಜಿಲೆಂಡ್‌ ವೇಗಿಗಳನ್ನು ಎದುರಿಸಲು ಕಷ್ಟವಾಗಲಿದೆ ಎಂದು ಮೈಕ್ ಹೆಸನ್ ಅಭಿಪ್ರಾಯಿಸಿದ್ದಾರೆ. ಕಿವೀಸ್‌ ವೇಗಗಳ ಮೊದಲ 10-20 ಎಸೆತಗಳನ್ನು ವಿರಾಟ್ ಹೇಗೆ ಆಡಲಿದ್ದಾರೆ ಎಂದು ನೋಡಲು ತಾನು ಕಾತರನಾಗಿರುವುದಾಗಿಯೂ ಮೈಕ್ ಹೇಳಿಕೊಂಡಿದ್ದಾರೆ.

ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್ಆಸಿಸ್ ಟಿ20 ವಿಶ್ವಕಪ್‌ ಗೆಲ್ಲಲು ವಿರಾಟ್ ಕೊಹ್ಲಿ ಅಡ್ಡಿ : ಸ್ಟೀವ್ ಸ್ಮಿತ್

ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿರುವ ಭಾರತ, ಅಲ್ಲಿ 5 ಪಂದ್ಯಗಳ ಟಿ20 ಸರಣಿ, 3 ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ. ಈ ಪ್ರವಾಸ ಸರಣಿಯ ಪಂದ್ಯಗಳು ಜನವರಿ 24ರಿಂದ ಟಿ20 ಪಂದ್ಯಗಳ ಮೂಲಕ ಆರಂಭಗೊಳ್ಳಲಿದೆ. ಮೊದಲ ಟಿ20 12:20 pmಗೆ ಶುರುವಾಗಲಿದೆ.

ರಣಜಿ ಟ್ರೋಫಿ: ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ತ್ರಿಶತದಾಟರಣಜಿ ಟ್ರೋಫಿ: ಮುಂಬೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ತ್ರಿಶತದಾಟ

ನ್ಯೂಜಿಲೆಂಡ್‌ ವೇಗಿಗಳ ಮೊದಲ 10-20 ಎಸೆತಗಳನ್ನು ಕೊಹ್ಲಿ ಹೇಗೆ ನಿಭಾಯಿಸಲಿದ್ದಾರೆ ಎಂದು ನೋಡಲು ನಾನು ಆಸಕ್ತನಾಗಿದ್ದೇನೆ. ಕೊಹ್ಲಿ ಒಂದುವೇಳೆ ಆರಂಭಿಕ ಎಸೆತಗಳನ್ನು ಯಶಸ್ವಿಯಾಗಿ ನಿಭಾಯಿಸಿ ತಯಾರಾದರೆ, ಆಮೇಲೆ ಅವರ ರನ್‌ ಹಸಿವನ್ನು ತಡೆದು ನಿಲ್ಲಿಸಲು ಕೇನ್ ವಿಲಿಯಮ್ಸ್ ಬಳಗಕ್ಕೆ ಕಷ್ಟವಾಗಲಿದೆ,' ಎಂದು ಹೆಸನ್ ಹೇಳಿದ್ದಾರೆ.

ಐಪಿಎಲ್ ಬಳಿಕ ಮತ್ತೊಂದು ಟೂರ್ನಿಗೆ ಸಚಿನ್ ತೆಂಡೂಲ್ಕರ್ ಕೋಚ್ಐಪಿಎಲ್ ಬಳಿಕ ಮತ್ತೊಂದು ಟೂರ್ನಿಗೆ ಸಚಿನ್ ತೆಂಡೂಲ್ಕರ್ ಕೋಚ್

ಮಾತು ಮುಂದುವರೆಸಿದ ಮೈಕ್, 'ನ್ಯೂಜಿಲಂಡ್‌ನ ಇತ್ತೀಚಿನ ದಾಖಲೆಗಳನ್ನು ಗಮನಿಸಿದರೆ ಅವರನ್ನು ಸೋಲಿಸೋದು ತುಂಬಾ ಕಷ್ಟ. ಹಾಗಂತ ಭಾರತದಲ್ಲೂ 2014ರಲ್ಲಿದ್ದ ವೇಗಿಗಳ ಅಪಾಯಕಾರಿ ಬೌಲಿಂಗ್‌ ಬಣವಿದೆ. ಹೀಗಾಗಿ ಇತ್ತಂಡಗಳ ಸರಣಿ ಜಿದ್ದಾಜಿದ್ದಿಯದ್ದೆನಿಸಲಿದೆ. ಟ್ರೆಂಟ್‌ ಬೌಲ್ಟ್‌ ಮತ್ತು ರೋಹಿತ್ ಶರ್ಮಾ ಮುಖಾಮುಖಿಯೂ ಕುತೂಹಲಕಾರಿಯಾಗಿರಲಿದೆ,' ಎಂದರು.

Story first published: Thursday, January 23, 2020, 15:33 [IST]
Other articles published on Jan 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X