ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸೂಪರ್‌ ಓವರ್‌ನಲ್ಲಿದ್ದ ಕೆಟ್ಟ ದಾಖಲೆ ಕೊನೆಗೊಳಿಸಿದ ರೋಹಿತ್ ಶರ್ಮಾ!

Rohit Sharma break one bad record..? | Rohit Sharma | India | Cricket | Oneindia Kannada
India vs New Zealand: Rohit Sharma breaks Super Over jinx

ಹ್ಯಾಮಿಲ್ಟನ್, ಜನವರಿ 30: ನ್ಯೂಜಿಲೆಂಡ್‌ ವಿರುದ್ಧದ ರೋಚಕ ಪಂದ್ಯದಲ್ಲಿ ರೋಹಿಟ್‌ ಶರ್ಮಾ ಬಾರಿಸಿದ ಎರಡು ಸಿಕ್ಸ್‌ಗಳಿಂದಾಗಿ ಟೀಮ್ ಇಂಡಿಯಾ ಜಯ ದಾಖಲಿಸಿತ್ತು. ಅದೂ ಸೂಪರ್ ಓವರ್‌ನ ಕುತೂಹಲಕಾರಿ ಪಂದ್ಯದ ಕೊನೇ ಕ್ಷಣದಲ್ಲಿ ಶರ್ಮಾ ಸಿಕ್ಸ್‌ ಬಾರಿಸಿ ತಂಡಕ್ಕೆ ಗೆಲುವು ತಂದಿದ್ದರು.

ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!ರೋಹಿತ್ ಲಾಸ್ಟ್‌ಬಾಲ್‌ಗೆ 6 ಹೊಡೆದ್ರೂ ಗೆಲುವಿನ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ!

ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಬುಧವಾರ (ಜನವರಿ 29) ನಡೆದಿದ್ದ ಪಂದ್ಯದ ಫಲಿತಾಂಶ ಅಸಲಿಗೆ ಸಮಬಲ (ಎರಡೂ ತಂಡಗಳೂ 179 ರನ್) ಅನ್ನಿಸಿತ್ತು. ಸೂಪರ್ ಓವರ್‌ನಲ್ಲಿ ಭಾರತ ಗೆದ್ದಿದ್ದರಿಂದ ಐದು ಪಂದ್ಯಗಳ ಟಿ20 ಸರಣಿ 3-0ಯಿಂದ ಭಾರತದ ವಶವಾಗಿದೆ. ಇನ್ನೆರಡು ಔಪಚಾರಿಕ ಪಂದ್ಯಗಳು ನಡೆಯಬೇಕಿವೆ.

ಭಾರತ Vs ನ್ಯೂಜಿಲ್ಯಾಂಡ್: ಸೂಪರ್ ಓವರ್ ನಲ್ಲಿ ಕೊಹ್ಲಿಯ ಎಡವಟ್ಟುಭಾರತ Vs ನ್ಯೂಜಿಲ್ಯಾಂಡ್: ಸೂಪರ್ ಓವರ್ ನಲ್ಲಿ ಕೊಹ್ಲಿಯ ಎಡವಟ್ಟು

ರೋಹಿತ್‌ಶರ್ಮಾ ಮತ್ತು ಟೀಮ್ ಇಂಡಿಯಾ ಆಡಿದ ಸೂಪರ್ ಓವರ್‌ ಪಂದ್ಯಗಳ ಕುತೂಹಲಕಾರಿ ಮಾಹಿತಿ ಕೆಳಗಿದೆ.

ಭಾರತ-ಕಿವೀಸ್ ಸೂಪರ್ ಓವರ್

ಭಾರತ-ಕಿವೀಸ್ ಸೂಪರ್ ಓವರ್

ಬುಧವಾರದ ಸೂಪರ್‌ ಓವರ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ 17 ರನ್ ಬಾರಿಸಿತ್ತು. ಭಾರತ 4 ಎಸೆತಗಳಲ್ಲಿ 8 ರನ್ ಗಳಿಸಿತ್ತು. 2 ಎಸೆಗಳಲ್ಲಿ ಭಾರತದ ಗೆಲುವಿಗೆ ಇನ್ನೂ 10 ರನ್‌ಗಳು ಬೇಕಿತ್ತು. ರೋಹಿತ್ ಶರ್ಮಾ ಸಿಕ್ಸ್‌ ಬಾರಿಸಿ ಪಂದ್ಯ ಗೆಲ್ಲಿಸಿದ್ದರಲ್ಲದೆ, ಗೆಲುವಿನ ಕ್ರೆಡಿಟ್‌‌ ತಾನು ತೆಗೆದುಕೊಳ್ಳದೆ, ಗೆಲುವಿನ ಶ್ರೇಯಸ್ಸು ಬೌಲರ್‌ ಮೊಹಮ್ಮದ್ ಶಮಿಗೂ ಸಲ್ಲಬೇಕು ಎಂದಿದ್ದರು.

ಭಾರತ ಮತ್ತು ಸೂಪರ್ ಓವರ್‌

ಭಾರತ ಮತ್ತು ಸೂಪರ್ ಓವರ್‌

ಅಂದ್ಹಾಗೆ ಟಿ20 ಕ್ರಿಕೆಟ್‌ನಲ್ಲಿ ಭಾರತ ಪಂದ್ಯದ ಟೈ ಮಾಡಿಕೊಂಡಿದ್ದು ಇದು ಎರಡನೇ ಬಾರಿ. ಆದರೆ ಟೀಮ್ ಇಂಡಿಯಾ ಸೂಪರ್‌ ಓವರ್‌ನಲ್ಲಿ ಆಡಿದ್ದು ಇದೇ ಮೊದಲ ಬಾರಿ. ಇದಕ್ಕೂ ಮುನ್ನ 2007ರಲ್ಲಿ ಐಸಿಸಿ ವಿಶ್ವ ಟಿ20ಯಲ್ಲಿ ಭಾರತ, ಪಾಕಿಸ್ತಾನ ವಿರುದ್ಧ ಪಂದ್ಯ ಟೈ ಮಾಡಿಕೊಂಡಿತ್ತು. ಆಗ ಬೌಲ್ ಔಟ್ ವಿಧಾನದಿಂದ ಭಾರತ ಗೆದ್ದಿತ್ತು.

ಕೊನೆಗೊಂಡ ಕೆಟ್ಟ ದಾಖಲೆ

ಕೊನೆಗೊಂಡ ಕೆಟ್ಟ ದಾಖಲೆ

ಅಂದ್ಹಾಗೆ ರೋಹಿತ್‌ ಶರ್ಮಾ ಸೂಪರ್‌ ಓವರ್‌ನಲ್ಲಿ ರನ್‌ ಗಳಿಸಿದ್ದು ಇದೇ ಮೊದಲಬಾರಿ. ಇದಕ್ಕೂ ಮುನ್ನ ಟಿ20ಯಲ್ಲಿ ಎರಡು ಬಾರಿ ಬ್ಯಾಟಿಂಗ್‌ ಮಾಡಿದ್ದರಾದರೂ ಆಗ ರನ್‌ ಗಳಿಸಿರಲಿಲ್ಲ. ಇನ್ನೊಂದು ಬಾರಿ ರೋಹಿತ್‌ಗೆ ಬ್ಯಾಟಿಂಗ್‌ಗೆ ಸವಕಾಶವೇ ಲಭಿಸಿರಲಿಲ್ಲ. ಅಂದರೆ ಸೂಪರ್ ಓವರ್‌ನಲ್ಲಿ ರನ್ನೇ ಗಳಿಸಿರದ ಕೆಟ್ಟ ದಾಖಲೆ ರೋಹಿತ್‌ ಮೇಲಿತ್ತು.

ಶರ್ಮಾ ಮತ್ತು ಸೂಪರ್ ಓವರ್‌

ಶರ್ಮಾ ಮತ್ತು ಸೂಪರ್ ಓವರ್‌

ರೋಹಿತ್ ಮೊದಲ ಸೂಪರ್ ಓವರ್ ಪಂದ್ಯವನ್ನಾಡಿದ್ದು 2012ರಲ್ಲಿ ವೆಸ್ಟ್ ಇಂಡೀಸ್ 'ಎ' ವಿರುದ್ಧ. ಆಗ ಭಾರತ 'ಎ' ಪ್ರತಿನಿಧಿಸಿದ್ದ ಶರ್ಮಾ 1 ಎಸೆತ ಎದುರಿಸಿ ರನ್‌ ಔಟ್ ಆಗಿದ್ದರು. ಅದಾಗಿ 2017ರಲ್ಲಿ ಐಪಿಎಲ್‌ನಲ್ಲಿ ಗುಜರಾತ್‌ ಲಯನ್ಸ್ ವಿರುದ್ಧ ಮುಂಬೈ ಪ್ರತಿನಿಧಿಸಿದ್ದಾಗ ಶರ್ಮಾ ಕ್ರೀಸ್‌ನಲ್ಲಿದ್ದರಾದರೂ ಚೆಂಡು ಎದುರಿಸಿರಲಿಲ್ಲ. 2019ರ ಐಪಿಎಲ್‌ನಲ್ಲಿ ಶರ್ಮಾ ನಾಯಕತ್ವದ ಮುಂಬೈ ತಂಡ ಸೂಪರ್ ಓವರ್‌ ಆಡಿತ್ತಾದರೂ ರೋಹಿತ್ ಬ್ಯಾಟಿಂಗ್‌ ಮಾಡಿರಲಿಲ್ಲ. ಅದಾಗಿ ಬುಧವಾರ (ಜನವರಿ 29) ಭಾರತ ಪ್ರತಿನಿಧಿಸಿದ್ದ ರೋಹಿತ್ ನ್ಯೂಜಿಲೆಂಡ್‌ ವಿರುದ್ಧ 4 ಎಸೆತಗಳಲ್ಲಿ 15 ರನ್ ಕೊಡುಗೆ ನೀಡಿದ್ದರು.

Story first published: Thursday, January 30, 2020, 15:34 [IST]
Other articles published on Jan 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X