ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಏಕದಿನ, ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮಾ ಹೊರಕ್ಕೆ!

Ind vs Nz ODI : Rohit Sharma sits out of the ODI and Test series against NZ
India vs New Zealand: Rohit Sharma ruled out of ODIs and Test series

ನವದೆಹಲಿ, ಫೆಬ್ರವರಿ 3: ಭಾರತದ ಪ್ರಮುಖ ಆರಂಭಿ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ನ್ಯೂಜಿಲೆಂಡ್ ವಿರುದ್ಧದ ಏಕದಿನ ಮತ್ತು ಟೆಸ್ಟ್ ಸರಣಿಗಳಿಂದ ಹೊರ ಬಿದ್ದಿದ್ದಾರೆ. ಗಾಯಕ್ಕೀಡಾಗಿರುವ ಶರ್ಮಾ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ.

ವಿರಾಟ್ ಕೊಹ್ಲಿ ಹಿಂದಿಕ್ಕಿ ಟಿ20ಐ ವಿಶ್ವದಾಖಲೆ ಬರೆದ ರೋಹಿತ್‌ ಶರ್ಮಾವಿರಾಟ್ ಕೊಹ್ಲಿ ಹಿಂದಿಕ್ಕಿ ಟಿ20ಐ ವಿಶ್ವದಾಖಲೆ ಬರೆದ ರೋಹಿತ್‌ ಶರ್ಮಾ

ಭಾನುವಾರ (ಫೆಬ್ರವರಿ 2) ಮೌಂಟ್‌ ಮೌಂಗನ್ಯುಯಿಯ ಬೇ ಓವಲ್‌ನಲ್ಲಿ ನಡೆದಿದ್ದ ಭಾರತ-ನ್ಯೂಜಿಲೆಂಡ್ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡುತ್ತಿದ್ದಾಗ ರೋಹಿತ್ ಕಾಫ್ ಇಂಜುರಿಗೆ (ಕಾಲಿನ ಹಿಂಭಾಗದ ಸ್ನಾಯುಬೇನೆ) ಒಳಗಾಗಿದ್ದರು.

ICC T20I Rankings: ಕೆಎಲ್ ರಾಹುಲ್ ಭಾರೀ ಜಿಗಿತ, 10ಲ್ಲಿ ರೋಹಿತ್ICC T20I Rankings: ಕೆಎಲ್ ರಾಹುಲ್ ಭಾರೀ ಜಿಗಿತ, 10ಲ್ಲಿ ರೋಹಿತ್

ಭಾನುವಾರ ಭಾರತದ ಇನ್ನಿಂಗ್ಸ್‌ ವೇಳೆ ಗಾಯಕ್ಕೆ ತುತ್ತಾದ ರೋಹಿತ್‌ಗೆ ಬ್ಯಾಟಿಂಗ್ ಮುಂದುವರಿಸಲಾಗಲಿಲ್ಲ. ಶರ್ಮಾ ಪೆವಿಲಿಯನ್‌ಗೆ ತೆರಳುವಾಗ 41 ಎಸೆತಗಳಲ್ಲಿ 60 ರನ್ ಬಾರಿಸಿದ್ದರು. ಅಂತೂ ಪಂದ್ಯದಲ್ಲಿ ಭಾರತ 7 ರನ್‌ಗಳ ರೋಚಕ ಜಯಗಳಿಸಿತ್ತಲ್ಲದೆ, ಐದು ಪಂದ್ಯಗಳ ಸರಣಿಯನ್ನು 5-0ಯಿಂದ ಗೆದ್ದುಕೊಂಡಿತ್ತು.

ಭರ್ಜರಿ ಫಾರ್ಮ್‌ನಲ್ಲಿ ಕೆ.ಎಲ್ ರಾಹುಲ್: ಕೊಹ್ಲಿ ದಾಖಲೆ ಮುರಿದ ಕನ್ನಡಿಗಭರ್ಜರಿ ಫಾರ್ಮ್‌ನಲ್ಲಿ ಕೆ.ಎಲ್ ರಾಹುಲ್: ಕೊಹ್ಲಿ ದಾಖಲೆ ಮುರಿದ ಕನ್ನಡಿಗ

'ರೋಹಿತ್ ಶರ್ಮಾ ಇನ್ನುಳಿದ ನ್ಯೂಜಿಲೆಂಡ್ ಪ್ರವಾಸ ಪಂದ್ಯಗಳಿಂದ ಸದ್ಯ ಹೊರಗುಳಿಸಿದ್ದಾರೆ. ರೋಹಿತ್ ಹೊರ ಬಿದ್ದಿರುವುದು ಒಳ್ಳೆಯದಲ್ಲ. ಇದು ತಂಡಕ್ಕೆ ಎಷ್ಟರ ಮಟ್ಟಿಗೆ ಕೆಟ್ಟ ಪರಿಣಾಮ ಬೀರಲಿದೆ ಎಂಬುದು ನಮಗೆ ಗೊತ್ತಿದೆ. ಆದರೆ ರೋಹಿತ್ ಪ್ರವಾಸ ಸರಣಿಯಲ್ಲಿ ಆಡುತ್ತಿಲ್ಲ,' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ತ್ರಿಕೋನ ಸರಣಿ: ಆಸ್ಟ್ರೇಲಿಯಾಗೆ ಸೋತ ಟೀಮ್ ಇಂಡಿಯಾ ವನಿತೆಯರುತ್ರಿಕೋನ ಸರಣಿ: ಆಸ್ಟ್ರೇಲಿಯಾಗೆ ಸೋತ ಟೀಮ್ ಇಂಡಿಯಾ ವನಿತೆಯರು

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ, ಫೆಬ್ರವರಿ 5ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಡಲಿದೆ. ರೋಹಿತ್ ಶರ್ಮಾ ತಂಡದಿಂದ ಹೊರ ಬಿದ್ದಿರುವುದರಿಂದ ಮಯಾಂಕ್ ಅಗರ್ವಾಲ್‌ ಓಪನರ್ ಅವಕಾಶ ಲಭಿಸುವ ಸಾಧ್ಯತೆಯಿದೆ. ಇನ್ನು ನ್ಯೂಜಿಲೆಂಡ್ ಎ ವಿರುದ್ಧ ದ್ವಿಶತಕ ಬಾರಿಸಿರುವ ಶುಬ್‌ಮಾನ್‌ ಗಿಲ್‌ಗೂ ತಂಡ ಸೇರಿಕೊಳ್ಳಲು ದಾರಿಯಾಗಬಹುದು.

Story first published: Monday, February 3, 2020, 16:31 [IST]
Other articles published on Feb 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X