ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧ 14 ವರ್ಷಗಳ ಹಿಂದಿನ ದಾಖಲೆ ಮುರಿದ ರಾಸ್ ಟೇಲರ್

India vs New Zealand: Ross Taylor breaks Nathan Astle’s 14-year-old record

ಹ್ಯಾಮಿಲ್ಟನ್, ಫೆಬ್ರವರಿ 5: ಸ್ಫೋಟಕ ಶತಕ ಬಾರಿಸಿ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ ಗೆಲುವು ತಂದುಕೊಟ್ಟಿರುವ ರಾಸ್‌ ಟೇಲರ್ ಅಪರೂಪದ ದಾಖಲೆಯನ್ನೂ ನಿರ್ಮಿಸಿದ್ದಾರೆ. ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಬುಧವಾರ (ಫೆಬ್ರವರಿ 5) ನಡೆದ ಪಂದ್ಯದಲ್ಲಿ ಟೇಲರ್ ದೀರ್ಘ ಕಾಲದ ದಾಖಲೆಯನ್ನು ಬದಿಗೆ ಸರಿಸಿದ್ದಾರೆ.

ಸ್ವಯಂಕೃತ ಅಪರಾಧದಿಂದ ನ್ಯೂಜಿಲ್ಯಾಂಡ್ ಗೆ ಮ್ಯಾಚ್ ಒಪ್ಪಿಸಿದ ವಿರಾಟ್ ಕೊಹ್ಲಿ ಪಡೆಸ್ವಯಂಕೃತ ಅಪರಾಧದಿಂದ ನ್ಯೂಜಿಲ್ಯಾಂಡ್ ಗೆ ಮ್ಯಾಚ್ ಒಪ್ಪಿಸಿದ ವಿರಾಟ್ ಕೊಹ್ಲಿ ಪಡೆ

ರಾಸ್ ಟೇಲರ್ 84 ಎಸೆತಗಳಿಗೆ ಅಜೇಯ 109 ರನ್ ಬಾರಿಸಿದ್ದರ ಫಲವಾಗಿ ಭಾರತದೆದುರು ಐದು ಪಂದ್ಯಗಳ ಟಿ20 ಸರಣಿಯಲ್ಲಿ 5-0ಯ ಸೋಲು ಕಂಡಿದ್ದ ಕಿವೀಸ್, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.

ಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿಭಾರತ vs ಕಿವೀಸ್: ಸೌರವ್ ಗಂಗೂಲಿ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಭಾರತ ವಿರುದ್ಧ ಸುಮಾರು 14 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ದಾಖಲೆಯೊಂದನ್ನು ಟೇಲರ್ ಬದಿಗೆ ಸರಿಸಿದ್ದಾರೆ.

347 ರನ್‌ ಚೇಸ್ ಮಾಡಿದ ಕಿವೀಸ್

347 ರನ್‌ ಚೇಸ್ ಮಾಡಿದ ಕಿವೀಸ್

340+ ರನ್‌ ಚೇಸಿಂಗ್ ಭಾರತ ಪರ ಕೊಹ್ಲಿ 51, ಶ್ರೇಯಸ್ ಐಯ್ಯರ್ 103, ಕೆಎಲ್ ರಾಹುಲ್ 88, ಪೃಥ್ವಿ ಶಾ 20, ಮಯಾಂಕ್ ಅಗರ್ವಾಲ್ 32, ಕೇದಾರ್ ಜಾಧವ್ 26 ರನ್‌ನೊಂದಿಗೆ ತಂಡ 50 ಓವರ್‌ಗೆ 4 ವಿಕೆಟ್‌ ನಷ್ಟದಲ್ಲಿ 347 ರನ್ ಗಳಿಸಿತ್ತು. ಗುರಿ ಬೆಂಬತ್ತಿದ ನ್ಯೂಜಿಲೆಂಡ್, ಮಾರ್ಟಿನ್ ಗಪ್ಟಿಲ್ 32, ಹೆನ್ರಿ ನಿಕೋಲ್ಸ್ 78, ರಾಸ್ ಟೇಲರ್ 109, ನಾಯಕ ಟಾಮ್ ಲ್ಯಾಥಮ್ 69 ರನ್ ಸೇರ್ಪಡೆಯೊಂದಿಗೆ 48.1ನೇ ಓವರ್‌ಗೆ 6 ವಿಕೆಟ್‌ ಕಳೆದು 348 ರನ್ ಬಾರಿಸಿ ಗೆಲುವು ಸಂಭ್ರಮಿಸಿತು.

ಭಾರತ ವಿರುದ್ಧ ಅತ್ಯಧಿಕ ರನ್

ಭಾರತ ವಿರುದ್ಧ ಅತ್ಯಧಿಕ ರನ್

ಹ್ಯಾಮಿಲ್ಟನ್ ಪಂದ್ಯದಲ್ಲಿ 109 ರನ್ ಗಳಿಸುವುದರೊಂದಿಗೆ ರಾಸ್ ಟೇಲರ್ ಭಾರತ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್ ಬಾರಿಸಿದ ಮುಂಚೂಣಿ ನ್ಯೂಜಿಲೆಂಡ್‌ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದಾರೆ. ಭಾರತ ವಿರುದ್ಧ 32 ಇನ್ನಿಂಗ್ಸ್‌ಗಳಲ್ಲಿ 1300+ ರನ್ ಗಳಿಸಿರುವ ಟೇಲರ್ ಈ ದಾಖಲೆಗಾಗಿ ಗಮನ ಸೆಳೆದಿದ್ದಾರೆ.

14 ವರ್ಷಗಳ ಹಿಂದಿನ ದಾಖಲೆ ಪತನ

14 ವರ್ಷಗಳ ಹಿಂದಿನ ದಾಖಲೆ ಪತನ

ಏಕದಿನ ಕ್ರಿಕೆಟ್‌ನಲ್ಲಿ ಭಾರತ ವಿರುದ್ಧ, ನ್ಯೂಜಿಲೆಂಡ್‌ ಪರ ಅತ್ಯಧಿಕ ರನ್ ಬಾರಿಸಿದ ದಾಖಲೆ ನೇತನ್ ಆ್ಯಸ್ಟಲ್ ಹೆಸರಿನಲ್ಲಿತ್ತು. 2005ರಲ್ಲಿ ಜಿಂಬಾಬ್ವೆಯಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ ವಿರುದ್ಧ ಕಡೇಯ ಮತ್ತು 29ನೇ ಇನ್ನಿಂಗ್ಸ್‌ ಆಡಿದ್ದ ಆ್ಯಸ್ಟಲ್ 1207 ರನ್ ಬಾರಿಸಿ ಈ ಮೈಲಿಗಲ್ಲು ಸ್ಥಾಪಿಸಿದ್ದರು. ಈಗ ಟೇಲರ್, ಆ್ಯಸ್ಟಲ್ ಅವರನ್ನು ಹಿಂದಿಕ್ಕಿದ್ದಾರೆ.

4ನೇ ಸ್ಥಾನದಲ್ಲಿ ವಿಲಿಯಮ್ಸನ್

4ನೇ ಸ್ಥಾನದಲ್ಲಿ ವಿಲಿಯಮ್ಸನ್

ಭಾರತ ವಿರುದ್ಧ ಏಕದಿನದಲ್ಲಿ ಅತ್ಯಧಿಕ ರನ್ ಬಾರಿಸಿದ ನ್ಯೂಜಿಲೆಂಡ್ ಆಟಗಾರರಲ್ಲಿ ರಾಸ್ ಟೇಲರ್ (1300 ರನ್, 32 ಇನ್ನಿಂಗ್ಸ್) ಮೊದಲ ಸ್ಥಾನದಲ್ಲಿದ್ದರೆ, ನೇತನ್ ಆ್ಯಸ್ಟಲ್ (1207 ರನ್, 29 ಇನ್ನಿಂಗ್ಸ್‌), ಸ್ಟೀಫನ್ ಫ್ಲೆಮಿಂಗ್ (1098 ರನ್, 38 ಇನ್ನಿಂಗ್ಸ್‌), ಕೇನ್ ವಿಲಿಯಮ್ಸನ್ (962 ರನ್, 24 ಇನ್ನಿಂಗ್ಸ್‌) ಅನಂತರದ ಸ್ಥಾನಗಳಲ್ಲಿದ್ದಾರೆ.

Story first published: Wednesday, February 5, 2020, 22:05 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X