ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ರೋಹಿತ್ ಶರ್ಮಾನನ್ನು ನಾನು ಇಷ್ಟ ಪಡುತ್ತೇನೆ: ಟೀಮ್ ಇಂಡಿಯಾ ನಾಯಕನ ಬಗ್ಗೆ ಮಂಜ್ರೇಕರ್ ಪ್ರಶಂಸೆ

India vs New Zealand: Sanjay Manjrekar praises Team India skipper said This is the Rohit Sharma I like

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಅಮೋಗ ಪ್ರದರ್ಶನ ನೀಡುವ ಮೂಲಕ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಭಾರತದ ಆಕ್ರಮಣಕಾರಿ ಮನೋಭಾವದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿದೆ. ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕೂಡ ಈ ವಿಚಾರವಾಗಿ ಮಾತನಾಡಿದ್ದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ಮನೋಭಾವದ ಬಗ್ಗೆ ಮಂಜ್ರೇಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅಗ್ರ ಕ್ರಮಾಂಕದಲ್ಲಿ ನಾಯಕ ರೋಹಿತ್ ಶರ್ಮಾ ಆಕ್ರಮಣಕಾರಿಯಾಗಿ ಆಡುತ್ತಾ ತಂಡವನ್ನು ಮುನ್ನಡೆಸಿದ್ದರು. ಹೀಗಾಗಿ ಇಂದೋರ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ರೋಹಿತ್ ಭರ್ಜರಿ ಶತಕವನ್ನು ಕೂಡ ಪೂರೈಸಿದ್ದಾರೆ. ಇನ್ನು ಟೀಮ್ ಇಂಡಿಯಾ ಏಕದಿನ ಮಾದರಿಯಲ್ಲಿ ಈಗ ನಂಬರ್1 ಸ್ಥಾನಕ್ಕೇರಿದೆ.

ಟಿ20 ಕ್ರಿಕೆಟ್‌ನಿಂದ ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ; ಸ್ಪಷ್ಟನೆ ನೀಡಿದ ಕೋಚ್ ರಾಹುಲ್ ದ್ರಾವಿಡ್ಟಿ20 ಕ್ರಿಕೆಟ್‌ನಿಂದ ಕೊಹ್ಲಿ, ರೋಹಿತ್‌ಗೆ ವಿಶ್ರಾಂತಿ; ಸ್ಪಷ್ಟನೆ ನೀಡಿದ ಕೋಚ್ ರಾಹುಲ್ ದ್ರಾವಿಡ್

ಇದು ನನಗೆ ಇಷ್ಟವಾದ ರೋಹಿತ್ ಶರ್ಮಾ

ಇದು ನನಗೆ ಇಷ್ಟವಾದ ರೋಹಿತ್ ಶರ್ಮಾ

"ನನಗೆ ಈ ರೋಹಿತ್ ಶರ್ಮಾ ಇಷ್ಟವಾಗುತ್ತಾರೆ. ಟಿ20 ಮಾದರಿಯಲ್ಲಿಯೂ ಅಷ್ಟೆ. ನೀವು ಆಡಬೇಕಿರುವುದು ಈ ರೀತಿಯಾಗಿ. ಹೀಗೆ ಆಡಿದಾಗ ಶತಕಗಳು ಅದರಷ್ಟಕ್ಕೇ ಬರುತ್ತವೆ. ಶತಕಗಳು ಆಟದ ಶೈಲಿಯ ಭಾಗವಾಗಿರಬೇಕು. ಇನ್ನು ಆರಂಭಿಕ ಆಟಗಾರರು ಇಷ್ಟು ಉತ್ತಮ ಅಡಿಪಾಯವನ್ನು ಒದಗಿಸಿದ ಬಳಿಕ ಕುಸಿತವನ್ನು ಕಂಡರೂ ಸ್ಕೋರ್‌ಬೋರ್ಡ್‌ನಲ್ಲಿ ಸಾಕಷ್ಟು ರನ್‌ಗಳು ಕಲೆಹಾಕಿತು. ಈ ರೋಹಿತ್ ಶರ್ಮಾ ನನಗೆ ಇಷ್ಟವಾಗುತ್ತಾರೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಅಂತಿಮ ಪಂದ್ಯದಲ್ಲಿ ಒಟ್ಟಾರೆ ಪ್ರದರ್ಶನದ ಬಗ್ಗೆ ಮಂಜ್ರೇಕರ್ ಮೆಚ್ಚುಗೆ

ಅಂತಿಮ ಪಂದ್ಯದಲ್ಲಿ ಒಟ್ಟಾರೆ ಪ್ರದರ್ಶನದ ಬಗ್ಗೆ ಮಂಜ್ರೇಕರ್ ಮೆಚ್ಚುಗೆ

ಇನ್ನು ಮುಂದುವರಿದು ಮಾತನಾಡಿದ ಸಂಜಯ್ ಮಂಜ್ರೇಕರ್ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದ ಒಟ್ಟಾರೆ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಾಗ ಯಾವಾಗಲೂ ಎದುರಾಳಿ ಬಹಳ ಸಮೀಪಕ್ಕೆ ಬರುತ್ತಿತ್ತು. ಆದರೆ ಇಂದು ಗೆದ್ದಿರುವ ಅಂತಿರವನ್ನು ನೋಡಿ. 90 ರನ್‌ಗಳಿಂದ ಗೆದ್ದಿದೆ. ಭಾರತದ ಬ್ಯಾಟರ್‌ಗಳು ಃಆಗೂ ಬೌಲರ್‌ಗಳು ಅದ್ಭುತವಾದ ಪ್ರದರ್ಶನ ನೀಡಿದ್ದಾರೆ" ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಭರ್ಜರಿ ಶತಕ ಸಿಡಿಸಿದ ರೋಹಿತ್

ಭರ್ಜರಿ ಶತಕ ಸಿಡಿಸಿದ ರೋಹಿತ್

ಕಿವಿಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೂರು ವರ್ಷಗಳ ಬಳಿಕ ಏಕದಿನ ಮಾದರಿಯಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. 85 ಎಸೆತ ಎದುರಿಸಿದ ರೋಹಿತ್ 6 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನೊಂದಿಗೆ 101 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಶುಬ್ಮನ್ ಗಿಲ್ 78 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 13 ಬೌಂಡರಿ ನೆರವಿನೊಂದಿಗೆ 112 ರನ್‌ಗಳನ್ನು ಗಳಿಸಿ ಔಟಾದರು. ಈ ಜೋಡಿ ಮೊದಲ ವಿಕೆಟ್‌ಗೆ ಭರ್ಜರಿ 212 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾದರು. ಹೀಗಾಗಿ ಟೀಮ್ ಇಂಡಿಯಾ ಈ ಪಂದ್ಯದಲ್ಲಿ 315 ರನ್‌ಗಳ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಿತ್ತು.

Story first published: Wednesday, January 25, 2023, 11:18 [IST]
Other articles published on Jan 25, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X