ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಸರಣಿ ನಿರ್ಣಾಯಕ 3ನೇ ಟಿ20 ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ಆಡುವ 11ರ ಬಳಗ

India vs New Zealand Series-deciding 3rd T20 Match Pitch Report And Probable Playing 11

ಬುಧವಾರ, ಫೆಬ್ರವರಿ 1ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡವು ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿ ಕೈವಶಕ್ಕಾಗಿ ಸೆಣಸಾಡಲಿದೆ.

ಲಕ್ನೋದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದುಕೊಂಡಿತು ಮತ್ತು ಮೂರು ಪಂದ್ಯಗಳ ಟಿ20 ಸರಣಿಯನ್ನು 1-1ರಿಂದ ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್‌ಪ್ರೀತ್ ಕೌರ್ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್‌ಪ್ರೀತ್ ಕೌರ್

ಅಹಮದಾಬಾದ್‌ನಲ್ಲಿ ನಡೆಯುವ ಮೂರನೇ ಪಂದ್ಯವನ್ನು ಗೆದ್ದರೆ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ತಂಡವು ನಂ.1 ಶ್ರೇಯಾಂಕವನ್ನು ಕಾಯ್ದುಕೊಳ್ಳಲು ಸಹಾಯವಾಗುತ್ತದೆ ಮತ್ತು ಕಿವೀಸ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಳ್ಳುತ್ತದೆ.

ನಾಲ್ಕನೇ ಸರಣಿ ಜಯದ ಮೇಲೆ ಕಣ್ಣಿಟ್ಟ ಹಾರ್ದಿಕ್ ಪಾಂಡ್ಯ

ನಾಲ್ಕನೇ ಸರಣಿ ಜಯದ ಮೇಲೆ ಕಣ್ಣಿಟ್ಟ ಹಾರ್ದಿಕ್ ಪಾಂಡ್ಯ

ಭಾರತದ ನಾಯಕ ಹಾರ್ದಿಕ್ ಪಾಂಡ್ಯ ನಾಯಕನಾಗಿ ಈಗಾಗಲೇ ಮೂರು ಟಿ20 ಸರಣಿ ಗೆದ್ದಿದ್ದು, ನ್ಯೂಜಿಲೆಂಡ್ ವಿರುದ್ಧ ಗೆದ್ದರೆ ನಾಲ್ಕನೇ ಸರಣಿ ಗೆದ್ದಂತಾಗುತ್ತದೆ. ಇಲ್ಲಿಯವರೆಗೆ ಹಾರ್ದಿಕ್ ಪಾಂಡ್ಯ ಶಾಂತ ಮತ್ತು ಚಾಣಾಕ್ಷವಾಗಿ ಕಾಣುತ್ತಿದ್ದು, ತಂಡದಲ್ಲಿರುವ ಪ್ರತಿಭೆಗಳನ್ನು ಉತ್ತಮವಾಗಿ ಬಳಸಿಕೊಳ್ಳುತ್ತಿದ್ದಾನೆ.

ಕಳೆದ ಎರಡು ಪಂದ್ಯಗಳಿಗೆ ಹೋಲಿಸಿದರೆ ಭಾರತ ತಂಡದ ಬ್ಯಾಟಿಂಗ್ ಸ್ವಲ್ಪ ದುರ್ಬಲವಾಗಿದೆ. ಅಹಮದಾಬಾದ್ ಪಿಚ್ ರನ್ ಗಳಿಸಲು ಸಹಾಯಕವಾಗಿರುವುದರಿಂದ ಆತಿಥೇಯ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಬೇಕಿದೆ. ಮತ್ತೊಂದೆಡೆ, ಪ್ರವಾಸಿ ನ್ಯೂಜಿಲೆಂಡ್ ತಂಡದ ಬ್ಯಾಟ್ ಮತ್ತು ಬಾಲ್‌ನೊಂದಿಗೆ ಆಲ್‌ರೌಂಡ್ ಪ್ರದರ್ಶನವು ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.

ಮೂರನೇ ಟಿ20 ಪಂದ್ಯ ನಡೆಯುವ ಪಿಚ್ ವರದಿ ಮತ್ತು ಟಿವಿ ವೀಕ್ಷಣೆ

ಮೂರನೇ ಟಿ20 ಪಂದ್ಯ ನಡೆಯುವ ಪಿಚ್ ವರದಿ ಮತ್ತು ಟಿವಿ ವೀಕ್ಷಣೆ

ಮೂರನೇ ಟಿ20 ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿರುವ ಪಿಚ್ ಸಾಕಷ್ಟು ಸಮತಟ್ಟಾಗಿದೆ ಮತ್ತು ದೊಡ್ಡ ಸ್ಕೋರ್ ಗಳಿಸಲು ಸಹಾಯ ಮಾಡುತ್ತದೆ. ಚೇಸಿಂಗ್ ಇಲ್ಲಿ ಆದ್ಯತೆಯ ಆಯ್ಕೆಯಾಗಿದೆ. 180 ಚೇಸಿಂಗ್ ಸ್ಕೋರ್ ಆಗಿದೆ.

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಟಿ20 ಪಂದ್ಯವನ್ನು ರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮತ್ತು ಜಿಯೋ ಟಿವಿ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಭಾರತ vs ನ್ಯೂಜಿಲೆಂಡ್ ಫ್ಯಾಂಟಸಿ ಡ್ರೀಮ್ ಟೀಂ

ಭಾರತ vs ನ್ಯೂಜಿಲೆಂಡ್ ಫ್ಯಾಂಟಸಿ ಡ್ರೀಮ್ ಟೀಂ

ವಿಕೆಟ್ ಕೀಪರ್‌ಗಳು: ಡೆವೊನ್ ಕಾನ್ವೇ, ಇಶಾನ್ ಕಿಶನ್

ಬ್ಯಾಟರ್‌ಗಳು: ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ

ಆಲ್‌ರೌಂಡರ್‌ಗಳು: ವಾಷಿಂಗ್ಟನ್ ಸುಂದರ್, ಡೇರಿಲ್ ಮಿಚೆಲ್ (ಉಪನಾಯಕ), ಮಿಚೆಲ್ ಸ್ಯಾಂಟ್ನರ್

ಬೌಲರ್‌ಗಳು: ಜಾಕೋಬ್ ಡಫಿ, ಅರ್ಶ್‌ದೀಪ್ ಸಿಂಗ್, ಕುಲದೀಪ್ ಯಾದವ್

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ vs ನ್ಯೂಜಿಲೆಂಡ್ ಸಂಭಾವ್ಯ ಆಡುವ 11ರ ಬಳಗ

ಭಾರತ: ಪೃಥ್ವಿ ಶಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ/ರಜತ್ ಪಾಟಿದಾರ್, ಹಾರ್ದಿಕ್ ಪಾಂಡ್ಯ (ನಾಯಕ), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಅರ್ಶ್‌ದೀಪ್ ಸಿಂಗ್, ಶಿವಂ ಮಾವಿ

ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಡೇನ್ ಕ್ಲೀವರ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಮಾರ್ಕ್ ಚಾಪ್ಮನ್, ಲಾಕ್ ಫರ್ಗುಸನ್, ಜಾಕೋಬ್ ಡಫಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.

Story first published: Tuesday, January 31, 2023, 3:20 [IST]
Other articles published on Jan 31, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X