ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಮೊದಲನೇ ಟಿ20ಐಗೆ ಭಾರತ ಸಂಭಾವ್ಯ XI

INDIA VS NEW ZEALAND 1ST T20I: PREVIEW: KOHLI & CO AIM FOR WINNING START | Oneindia News
India vs New Zealand: Team India Probable XI for first T20I

ಆಕ್ಲೆಂಡ್‌, ಜನವರಿ 23: ಸುದೀರ್ಘ ಪ್ರವಾಸ ಸರಣಿಗಾಗಿ ನ್ಯೂಜಿಲೆಂಡ್‌ಗೆ ತೆರಳಿರುವ ಟೀಮ್ ಇಂಡಿಯಾ, ಜನವರಿ 24ರಿಂದ ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಲಿದೆ. ಅದಾಗಿ 3 ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳಲ್ಲಿ ಆಡಲಿದೆ.

ನ್ಯೂಜಿಲ್ಯಾಂಡ್ vs ಭಾರತ: ಪಂದ್ಯದ ಸಮಯ, ಪ್ರಸಾರ, ತಂಡದ ಮಾಹಿತಿನ್ಯೂಜಿಲ್ಯಾಂಡ್ vs ಭಾರತ: ಪಂದ್ಯದ ಸಮಯ, ಪ್ರಸಾರ, ತಂಡದ ಮಾಹಿತಿ

ಭಾರತ-ನ್ಯೂಜಿಲೆಂಡ್‌ ಪ್ರವಾಸ ಸರಣಿ ಜನವರಿ 24ರಿಂದ ಆರಂಭವಾಗಿ ಮಾರ್ಚ್ 4ರಂದು ಕೊನೆಗೊಳ್ಳಲಿದೆ. ಅಂದರೆ ಸುಮಾರು 40 ದಿನಗಳ ಕಾಲ ನಡೆಯಲಿರುವ ಈ ಪ್ರವಾಸ ಸರಣಿ ಪಂದ್ಯಗಳು ಜಿದ್ದಾಜಿದ್ದಿಯೆನಿಸುವುದನ್ನು ನಿರೀಕ್ಷಿಸಲಾಗಿದೆ.

ಭಾರತ vs ನ್ಯೂಜಿಲೆಂಡ್, 1ನೇ ಟಿ20ಐ, Live ಸ್ಕೋರ್‌ಕಾರ್ಡ್

1
46203

ಕುತೂಹಲಕಾರಿ ಈ ಪ್ರವಾಸ ಸರಣಿಯ ಆರಂಭಿಕ ಟಿ20 ಪಂದ್ಯದಲ್ಲಿ ಭಾರತ ಪರ ಮೈದಾನಕ್ಕಿಳಿಯಲಿರುವ ಆಟಗಾರರ ಪಟ್ಟಿ ಇಂತಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಶಿಖರ್ ಧವನ್ ಗಾಯಗೊಂಡು ಟಿ20 ಸರಣಿಯಿಂದ ಹೊರ ಬಿದ್ದಿರುವುದರಿಂದ ಭಾರತದ ಓಪನರ್‌ಗಳಾಗಿ ಉಪನಾಯಕ ರೋಹಿತ್ ಶರ್ಮಾ ಮತ್ತು ಕನ್ನಡಿಗ ಕೆಎಲ್ ರಾಹುಲ್ ಬರಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬರಲಿದ್ದಾರೆ (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್, 3. ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಟೀಮ್ ಇಂಡಿಯಾದ 4ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಶ್ರೇಯಸ್ ಐಯ್ಯರ್ ಬರುವ ನಿರಿಕ್ಷೆಯಿದೆ. ಇನ್ನು 5ನೇ ಕ್ರಮಾಂಕದಲ್ಲಿ ರಿಷಬ್ ಪಂತ್, 6ರಲ್ಲಿ ಕನ್ನಡಿಗ ಮನೀಶ್ ಪಾಂಡೆ ಬ್ಯಾಟ್ ಕೈಗೆತ್ತಿಕೊಳ್ಳಲಿದ್ದಾರೆ (4. ಶ್ರೇಯಸ್ ಐಯ್ಯರ್, 5. ರಿಷಬ್ ಪಂತ್, 6. ಮನೀಶ್ ಪಾಂಡೆ).

ಆಲ್ ರೌಂಡರ್‌ಗಳು

ಆಲ್ ರೌಂಡರ್‌ಗಳು

ಭಾರತದ ಆಲ್‌ ರೌಂಡರ್‌ಗಳ ಬಣದಲ್ಲಿ ಶಿವಂ ದೂಬೆ ಮತ್ತು ರವೀಂದ್ರ ಜಡೇಜಾ ಇರಲಿದ್ದಾರೆ. 7ನೇ ಕ್ರಮಾಂಕದಲ್ಲಿ ದೂಬೆ, 8ನೇ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಬರುವುದನ್ನು ನಿರೀಕ್ಷಿಸಲಾಗಿದೆ (7. ಶಿವಂ ದೂಬೆ, 8. ರವೀಂದ್ರ ಜಡೇಜಾ).

ಬೌಲರ್‌ಗಳ ಬಳಗ

ಬೌಲರ್‌ಗಳ ಬಳಗ

ಕೊಹ್ಲಿ ಪಡೆಗೆ ಬೌಲರ್‌ ಬಣದಲ್ಲಿ ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಬಲವಾಗಿ ಇರುವುದನ್ನು ನಿರೀಕ್ಷಿಸಲಾಗಿದೆ (9. ಕುಲದೀಪ್ ಯಾದವ್, 10. ಮೊಹಮ್ಮದ್ ಶಮಿ, 11. ಜಸ್‌ಪ್ರೀತ್‌ ಬೂಮ್ರಾ).

Story first published: Thursday, January 23, 2020, 22:48 [IST]
Other articles published on Jan 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X