ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತವರಿನಲ್ಲಿ ಮುಂದುವರಿದ ಸರಣಿ ಗೆಲುವಿನ ಓಟ: ನ್ಯೂಜಿಲೆಂಡ್ ಭಾರತದಲ್ಲಿ ಟೆಸ್ಟ್ ಪಂದ್ಯ ಗೆಲ್ಲದೆ 3 ದಶಕ

India vs New Zealand: Team India seal 14th successive series victory at home
ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದ ನಂತರ ವೈರಲ್ ಆದ ವಿಶೇಷ ಫೋಟೋ | Oneindia Kannada

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಭಾರೀ ಅಂತರದಿಂದ ಭಾರತ ಗೆಲ್ಲುವ ಮೂಲಕ ಸರಣಿಯನ್ನು ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಭಾರತ ತವರಿನಲ್ಲಿ ಸತತ 14ನೇ ಟೆಸ್ಟ್ ಸರಣಿಯನ್ನು ಕೂಡ ತನ್ನ ವಶಕ್ಕೆ ಪಡೆದುಕೊಂಡಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಜಯಂತ್ ಯಾದವ್ ಹಾಗೂ ಆರ್ ಅಶ್ವಿನ್ ತಲಾ 4 ವಿಕೆಟ್ ಪಡೆಯುವ ಮೂಲಕ ಪಂದ್ಯದಲ್ಲಿ ಭಾರತ 372 ರನ್‌ಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ರನ್‌ಗಳಿಗೆ ಆಲೌಟ್ ಆಗಿದ್ದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 167 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಅದರಲ್ಲೂ ನಾಲ್ಕನೇ ದಿನದ ಆಟದಲ್ಲಿ ನ್ಯೂಜಿಲೆಂಡ್ ತಂಡ ತನ್ನ ಅಂತಿಮ ಐದು ವಿಕೆಟ್‌ಗಳನ್ನು ಕೇವಲ 27 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. ಕಾನ್ಪುರ ಟೆಸ್ಟ್‌ನಲ್ಲಿ ರೋಚಕ ಡ್ರಾ ಸಾಧಿಸಿದ್ದ ಕಿವೀಸ್ ಪಡೆಗೆ ಮುಂಬೈ ಪಿಚ್ ಅರ್ಥೈಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. ಇದೀ ಪಂದ್ಯದಲ್ಲು ಬಹುತೇಕ ಸ್ಪಿನ್ನರ್‌ಗಳೇ ಅಬ್ಬರಿಸಿದ್ದಾರೆ.

ಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾಭಾರತ vs ನ್ಯೂಜಿಲೆಂಡ್: ಕಿವೀಸ್ ವಿರುದ್ಧ 372 ರನ್‌ಗಳ ಭಾರೀ ಅಂತರದಿಂದ ಗೆದ್ದು ಸರಣಿ ವಶಕ್ಕೆ ಪಡೆದ ಟೀಮ್ ಇಂಡಿಯಾ

ಇನ್ನು ಈ ಭರ್ಜರಿ ಗೆಲುವಿನ ಮೂಲಕ ಸರಣಿಯನ್ನು ವಶಕ್ಕೆ ಪಡೆದಿರುವ ಭಾರತೀಯ ಕ್ರಿಕೆಟ್ ತಂಡ ತವರಿನಲ್ಲಿ ಟೆಸ್ಟ್ ಸರಣಿಯ ಸತತ ಗೆಲುವಿನ ಸಾಧನೆಯನ್ನು 14ನೇ ಸರಣಿಗೂ ವಿಸ್ತರಿಸಿದೆ. ಅಲ್ಲದೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತದಲ್ಲಿ ಆಡಿದ 11 ಸರಣಿಗಳ ಪೈಕಿ 11ರಲ್ಲಿಯೂ ಭಾರತ ವಿಜಯ ಸಾಧಿಸಿದೆ ಎಂಬುದು ಗಮನಾರ್ಹ ಸಂಗತಿ.

ಇನ್ನು ನ್ಯೂಜಿಲೆಂಡ್ ವಿರುದ್ಧ ಭಾರತ ಕಳೆದ ಹಲವು ವರ್ಷಗಳಿಂದ 14 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು ಇದರಲ್ಲಿ ಭಾರತ ಸರಣಿಯನ್ನು ಸೋತೇ ಇಲ್ಲ. ಇದು ತವರಿನಲ್ಲಿ ನ್ಯೂಜಿಲೆಂಡ್ ತಮಡದ ವಿರುದ್ಧ ಭಾರತ ಗೆಲುವು ಸಾಧಿಸುತ್ತಿರುವ ಸತತ 4ನೇ ಸರಣಿ ಗೆಲುವಾಗಿದೆ. ನ್ಯೂಜಿಲೆಂಡ್ ಭಾರತದ ವಿರುದ್ಧ ಭಾರತದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು 1988ರಲ್ಲಿ. ಅಲ್ಲಿಂದ ಈವರೆಗೆ ಕಿವೀಸ್ ಪಡೆ ಭಾರತದಲ್ಲಿ ಒಂದೇ ಒಂಡು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.

ಈ ಶತಕ ಯಾವಾಗಲೂ ನೆನಪಿನಲ್ಲಿರುತ್ತದೆ: ಮುಂಬೈ ಟೆಸ್ಟ್ ಶತಕದ ಬಗ್ಗೆ ಮಯಾಂಕ್ ಅಗರ್ವಾಲ್ ಮಾತುಈ ಶತಕ ಯಾವಾಗಲೂ ನೆನಪಿನಲ್ಲಿರುತ್ತದೆ: ಮುಂಬೈ ಟೆಸ್ಟ್ ಶತಕದ ಬಗ್ಗೆ ಮಯಾಂಕ್ ಅಗರ್ವಾಲ್ ಮಾತು

4ನೇ ದಿನ 45 ನಿಮಿಷದಲ್ಲಿ ಪಂದ್ಯ ಮುಕ್ತಾಯ: ಇನ್ನು ಮೂರನೇ ದಿನದಂತ್ಯಕ್ಕೆ ನ್ಯೂಜಿಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ವೇಳೆ 140 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ನಾಲ್ಕನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತ್ತು. ಆದರೆ ನಾಲ್ಕನೇ ದಿನ ಸ್ವಲ್ಪವೂ ಪ್ರತಿರೋಧ ಒಡ್ಡಲು ಸಾಧ್ಯವಾಗದ ನ್ಯೂಜಿಲೆಂಡ್ ತಂಡ ಕೇವಲ 27 ರನ್‌ಗಳನ್ನು ಪೇರಿಸಿ ಆಲೌಟ್ ಆಯಿತು. ಕೇವಲ 45 ನಿಮಿಷದಲ್ಲಿ ಕೊನೆಯ ಐದು ವಿಕೆಟ್‌ಗಳನ್ನು ಕೂಡ ಭಾರತೀಯ ಬೌಲರ್‌ಗಳು ಕೀಳುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ.

ಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತಮುಂಬೈ ಟೆಸ್ಟ್ ನಂತರ ದ. ಆಪ್ರಿಕಾ ಪ್ರವಾಸಕ್ಕೆ ಭಾರತ ತಂಡ ಪ್ರಕಟ: ಅನುಭವಿ ಸ್ಥಾನ ಕಳೆದುಕೊಳ್ಳುವುದು ಬಹುತೇಕ ಖಚಿತ

ಇನ್ನು ಟೆಸ್ಟ್ ಶ್ರೇಯಾಂಕದಲ್ಲಿ ಸುದೀರ್ಘ ಕಾಲದಿಂದ ನಂಬರ್ 1 ಸ್ಥಾನದಲ್ಲಿದ್ದ ಭಾರತ ಇತ್ತೀಚೆಗೆ ಆ ಸ್ಥಾನವನ್ನು ನ್ಯೂಜಿಲೆಂಡ್ ತಂಡಕ್ಕೆ ಬಿಟ್ಟುಕೊಟ್ಟಿತ್ತು. ಇದೀಗ ಕಿವೀಸ್ ವಿರುದ್ಧದ ಸರಣಿಯಲ್ಲಿ ಗಲ್ಲುವ ಮೂಲಕ ಟೀಮ್ ಇಂಡಿಯಾ ಮತ್ತೊಮ್ಮೆ ನಂಬರ್ 1 ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಕಿವೀಸ್ ಪಡೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

Story first published: Monday, December 6, 2021, 16:21 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X