ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ನ್ಯೂಜಿಲ್ಯಾಂಡ್ ಟೆಸ್ಟ್ ಸರಣಿ: ಕೊಹ್ಲಿ ಪಡೆಗೆ ಕಾಡುತಿದೆ ಅದೇ ಕಣ್ಣು..ಅದೇ ಕಣ್ಣು ಬೇಟೆ ಆಡುತಿದೆ..

India Vs New Zealand Test Series Starts From Feb 21: Left Arm Fast Bolwer Trent Bout Is The Key Player

ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಎರಡು ಟೆಸ್ಟ್ ಪಂದ್ಯಗಳ ಸರಣಿ ಇದೇ ಶುಕ್ರವಾರ, ಮಹಾ ಶಿವರಾತ್ರಿಯ ದಿನದಂದು ಆರಂಭವಾಗುತ್ತಿದೆ. ಟಿ20 ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದರೆ, ಏಕದಿನದ ಸರಣಿಯಲ್ಲಿ ಕಿವೀಸ್ ಪ್ರಾಬಲ್ಯ ಮೆರೆದಿತ್ತು.

ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಐಸಿಸಿ ವಿಶ್ವ ಟೆಸ್ಟ್ ಚ್ಯಾಂಪಿಯನ್ ಶಿಪ್ ನ (WTC) ಪಾಯಿಂಟ್ ಟೇಬಲ್ ನಲ್ಲಿ ಟೀಂ ಇಂಡಿಯಾ ಸದ್ಯ, 360 ಅಂಕವನ್ನು ಪಡೆದು ಅಗ್ರಸ್ಥಾನದಲ್ಲಿದೆ. ಮುಂದಿನ ವರ್ಷ ಲಾರ್ಡ್ಸ್ ನಲ್ಲಿ ಇದರ ಫೈನಲ್ ಪಂದ್ಯ ನಡೆಯಲಿದೆ.

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ, ಬೌಲ್ಟ್ ಸೇರ್ಪಡೆಭಾರತ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ, ಬೌಲ್ಟ್ ಸೇರ್ಪಡೆ

ಭಾರತದ ನಂತರ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದರೆ, ಇಂಗ್ಲೆಡ್ ಮತ್ತು ಪಾಕಿಸ್ತಾನ ನಂತರದ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ಅರವತ್ತು ಅಂಕವನ್ನು ಪಡೆದು ಆರನೇ ಸ್ಥಾನದಲ್ಲಿದೆ.

ಭಾರತದ ವಿರುದ್ದ ಮೊದಲ ಟೆಸ್ಟ್ ಪಂದ್ಯಕ್ಕೆ ಕಿವೀಸ್ ತನ್ನ ತಂಡವನ್ನು ಪ್ರಕಟಿಸಿದೆ. ಮೊದಲ ಬಾರಿಗೆ ಕೈಲಿ ಜೆಮಿಸನ್ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇದಕ್ಕಿಂತ ಹೆಚ್ಚಾಗಿ, ವಿರಾಟ್ ಕೊಹ್ಲಿ ಪಡೆಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿರುವುದು, ಕಿವೀಸ್ ತಂಡಕ್ಕೆ ಸೇರ್ಪಡೆಯಾಗಿರುವ ಫಾಸ್ಟ್ ಬೌಲರ್.

ಹಿರಿಯ ಆಟಗಾರ ರಾಸ್ ಟೇಲರ್

ಹಿರಿಯ ಆಟಗಾರ ರಾಸ್ ಟೇಲರ್

ನ್ಯೂಜಿಲ್ಯಾಂಡ್ ಪ್ರಕಟಿಸಿರುವ ತಂಡದಲ್ಲಿ, ಮಿಶೆಲ್ ಸಾಂಟ್ನರ್ ಬದಲಿಗೆ ಸ್ಪಿನ್ನರ್ ಏಜಾಜ್ ಪಟೇಲ್ ಸ್ಥಾನ ಪಡೆದಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಹಿರಿಯ ಆಟಗಾರ ರಾಸ್ ಟೇಲರ್ ಕೂಡಾ ಆಡಲಿದ್ದಾರೆ. ಆ ಮೂಲಕ, ಬ್ರೆಂಡನ್ ಮೆಕಲಂ, ಡೇನಿಯಲ್ ವೆಟ್ಟೋರಿ, ಸ್ಟೀಫನ್ ಫ್ಲೆಮಿಂಗ್ ನಂತರ, ಎಲ್ಲಾ ಬಗೆಯ ಕ್ರಿಕೆಟ್ ನಲ್ಲಿ ನೂರಕ್ಕೂ ಹೆಚ್ಚು ಪಂದ್ಯಗಳನ್ನಾಡಿದ ಆಟಗಾರ ಎನಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಬಹಳ ಕಾತುರನಾಗಿದ್ದೇನೆ

ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಬಹಳ ಕಾತುರನಾಗಿದ್ದೇನೆ

ಕಿವೀಸ್ ಪ್ರಕಟಿಸಿದ ತಂಡದಲ್ಲಿ ಎಡಗೈ ಸ್ಪೀಡ್ ಬೌಲರ್ ಟ್ರೆಂಟ್ ಬೌಲ್ಟ್ ಸೇರ್ಪಡೆಯಾಗಿರುವುದು ತಂಡಕ್ಕೆ ದೊಡ್ಡ ಶಕ್ತಿಯಾಗಲಿದೆ. ತಂಡಕ್ಕೆ ಸೇರ್ಪಡೆಯಾದ ಕೂಡಲೇ, "ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಬಹಳ ಕಾತುರನಾಗಿದ್ದೇನೆ. ನನ್ನಿಂದ ಇನ್ನು ಕಾಯಲು ಸಾಧ್ಯವಿಲ್ಲ. ನನ್ನ ಬೌಲಿಂಗ್ ನಲ್ಲಿ ಮೊನಚು ಇದೆಯೋ ಎಂದು ತಿಳಿದುಕೊಳ್ಳಲು ಅಂತಹ ಆಟಗಾರರನ್ನು ಔಟ್ ಮಾಡಬೇಕಿದೆ" ಎಂದು ಬೌಲ್ಟ್ ಹೇಳಿದ್ದಾರೆ.

ಟೀಂ ಇಂಡಿಯಾ ಅತ್ಯುತ್ತಮ ತಂಡ

ಟೀಂ ಇಂಡಿಯಾ ಅತ್ಯುತ್ತಮ ತಂಡ

"ಟೀಂ ಇಂಡಿಯಾ ಅತ್ಯುತ್ತಮ ತಂಡ, ಐಸಿಸಿ ಟೆಸ್ಟ್ ಚಾಂಪಿಯನ್‌ ಶಿಪ್‌ನಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಹೇಗೆ ಆಡಬೇಕು ಎನ್ನುವುದರಲ್ಲಿ ಭಾರತ ಸ್ಪಷ್ಟತೆಯನ್ನು ಹೊಂದಿದೆ" ಎಂದು ಟ್ರೆಂಟ್ ಬೌಲ್ಟ್ ಹೇಳಿದ್ದಾರೆ. ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ, ಮೆಲ್ಬೋರ್ನ್ ನಲ್ಲಿ ನಡೆದ ಪಂದ್ಯದಲ್ಲಿ ಬೌಲ್ಟ್ ಗಾಯಗೊಂಡು, ತಂಡದಿಂದ ಆರು ತಿಂಗಳುಗಳ ಕಾಲ ಹೊರಗುಳಿದಿದ್ದರು.

ಮೂವತ್ತು ವರ್ಷದ ಎಡಗೈ ಸ್ಪೀಡ್ ಬೌಲರ್ ಟ್ರೆಂಟ್ ಬೌಲ್ಟ್

ಮೂವತ್ತು ವರ್ಷದ ಎಡಗೈ ಸ್ಪೀಡ್ ಬೌಲರ್ ಟ್ರೆಂಟ್ ಬೌಲ್ಟ್

ಬೌಲಿಂಗ್ ನಲ್ಲಿ ಪ್ರಚಂಡ ಫಾರಂನಲ್ಲಿರುವ ಬೌಲ್ಟ್, ಇದುವರೆಗೆ 65 ಪಂದ್ಯಗಳಲ್ಲಿ 256 ವಿಕೆಟ್ ಅನ್ನು ಪಡೆದುಕೊಂಡಿದ್ದಾರೆ. ಮೂವತ್ತು ವರ್ಷದ ಎಡಗೈ ಸ್ಪೀಡ್ ಬೌಲರ್ ಆಗಿರುವ ಬೌಲ್ಟ್, ಟೆಸ್ಟ್ ಪಂದ್ಯವೊಂದರ ಇನ್ನಿಂಗ್ಸ್ ನಲ್ಲಿ, ಶ್ರೀಲಂಕಾದ ವಿರುದ್ದ ಮೂವತ್ತು ರನ್ನಿಗೆ ಆರು ವಿಕೆಟ್ ಪಡೆದುಕೊಂಡಿರುವುದು , ಇದುವರೆಗಿನ ಅವರ ಬೆಸ್ಟ್ ಸಾಧನೆ. "ಭಾರತದ ವಿರುದ್ದ ಟ್ರೆಂಟ್ ಬೌಲ್ಟ್ ನಮ್ಮ ಪ್ರಮುಖ ಅಸ್ತ್ರ" ಎಂದು ಕಿವೀಸ್ ಕೋಚ್ ಹೇಳಿದ್ದಾರೆ.

Story first published: Tuesday, February 18, 2020, 18:07 [IST]
Other articles published on Feb 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X