ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಪೂಜಾರ ಕಳಪೆ ಫಾರ್ಮ್ ಬಗ್ಗೆ ಕಳವಳ ವ್ಯಕ್ತಪಡಿಸಿದ ಲಕ್ಷ್ಮಣ್

India vs New Zealand: VVS Laxman express his worry about Cheteshwar Pujara’s Form

ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿಯೂ ಟೀಮ್ ಇಂಡಿಯಾ ಅನುಭವಿ ಚೇತೇಶ್ವರ್ ಪೂಜಾರ ಬ್ಯಾಟ್‌ನಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ಪೂಜಾರ ಎರಡನೇ ಇನ್ನಿಂಗ್ಸ್‌ನಲ್ಲಿ 47 ರನ್‌ಗಳಿಸಿದ್ದರೂ ಇದನ್ನು ದೊಡ್ಡ ಮತ್ತವಾಗಿ ಪರಿವರ್ತಿಸುವಲ್ಲಿ ಅವರು ವಿಫಲವಾದರು. ಈ ಮೂಲಕ ಕಳೆದ 42 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ ಪೂಜಾರ ಒಂದೇ ಒಂದು ಶತಕಗಳಿಸಲು ಸಾಧ್ಯವಾಗಿಲ್ಲ. ಟೀಮ್ ಇಂಡಿಯಾದ ಈ ಅನುಭವಿ ಆಟಗಾರನ ಈ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕಳವಳ ವ್ಯಕ್ತಪಡಿಸಿದ್ದಾರೆ.

ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅನುಭವಿ ಆಟಗಾರ ಚೇತೇಶ್ವರ್ ಪೂಜಾರ ಸುದೀರ್ಘ ಅವಧಿಯಿಂದ ಶತಕ ಗಳಿಸಲು ಅಸಾಧ್ತವಾಗಿರುವುದು ತಂಡಕ್ಕೆ ಸಹಜವಾಗಿ ಆತಂಕವನ್ನು ಮೂಡಿಸುತ್ತದೆ ಎಂದಿದ್ದಾರೆ ವಿವಿಎಸ್ ಲಕ್ಷ್ಮಣ್. 2019ರ ಜನವರಿಯಲ್ಲಿ ಸಿಡ್ಇಯಲ್ಲಿ ನಡೆದ ಟೆಸ್ಟ್‌ನಲ್ಲಿ ಪೂಜಾರ ತಮ್ಮ ಕೊನೆಯ ಶತಕವನ್ನು ಸಿಡಿಸಿದ್ದರು.

 ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆ ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್‌: ಡಿಕ್ಲೇರ್ ಘೋಷಿಸಿದ ಟೀಂ ಇಂಡಿಯಾ, ಭಾರತಕ್ಕೆ 539 ರನ್‌ಗಳ ಮುನ್ನಡೆ

ಈ ಮಧ್ಯೆ ಟೀಮ್ ಇಂಡಿಯಾದ ಕೆಲ ಯುವ ಆಟಗಾರರಿಂದ ಅದ್ಭುತ ಪ್ರದರ್ಶನಗಳು ಬರುತ್ತಿದೆ. ಶ್ರೇಯಸ್ ಐಯ್ಯರ್, ಮಯಾಂಕ್ ಅಗರ್ವಾಲ್ ಹಾಗೂ ಶುಬ್ಮನ್ ಗಿಲ್ ಅವರಿಂದ ಉತ್ತಮ ಕೊಡುಗೆಗಳು ಬರುತ್ತಿದ್ದು ತಂಡದಲ್ಲಿ ಖಾಯಂ ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ. ಮತ್ತೊಂದೆಡೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದ ಬಳಿಕ ಮುಂಬೈ ಟೆಸ್ಟ್‌ನ ಮೂಲಕ ತಂಡಕ್ಕೆ ಮರಳುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿಗೆ ಪೂಜಾರ ಸ್ಥಾನ ಬಿಟ್ಟುಕೊಡಬೇಕಾಗಬಹುದು ಎಂಬ ಚರ್ಚೆಗಳು ನಡೆದಿತ್ತು. ಆದರೆ ಮತ್ತೀರ್ವ ಅನುಬವಿ ಆಟಗಾರರ ಕಳಪೆ ಪ್ರದರ್ಶಣದಿಂದ ಟೀಕೆಗೆ ಗುರಿಯಾಗಿರುವ ಅಜಿಂಕ್ಯಾ ರಹಾನೆ ಗಾಯದ ಕಾರಣದಿಂದಾಗಿ ಹೊರಗುಳಿದ ಕಾರಣದಿಂದಾಗಿ ಪೂಜಾರ ಮತ್ತೊಂದು ಅವಕಾಶ ಪಡೆದುಕೊಂಡಿದ್ದಾರೆ.

"ಖಂಡಿತವಾಗಿಯೂ ಪೂಜಾರ ಪ್ರದರ್ಶನ ಕಳವಳವುಂಟು ಮಾಡುತ್ತದೆ. ಯಾಕೆಂದರೆ ಪುಜಾರ ಅವರ ಬ್ಯಾಟಿಂಗ್ ಕ್ರಮಾಂಕ ಸಾಮಾನ್ಯ ವಾಗಿ ಮೂರನೇ ಕ್ರಮಾಂಕದಲ್ಲಿ ಉಳಿಯುತ್ತಾರೆ. ಇಂತಾ ಸಂದರ್ಭದಲ್ಲಿ ನೀವು ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡುವವರಿಗಿಂತ ಶತಕಗಳಿಸಲು ಹೆಚ್ಚಿನ ಅವಕಾಶವನ್ನು ಹೊಂದಿರುತ್ತೀರಿ" ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಅಲ್ಲದೆ ಚೇತೇಶ್ವರ್ ಪೂಜಾರ ವಿಕೆಟ್ ಕಳೆದುಕೊಳಳುತ್ತಿರುವ ರೀತಿಯ ಬಗ್ಗೆಯೂ ಲಕ್ಷ್ಮಣ್ ವಿವರಣೆ ನೀಡಿದ್ದಾರೆ.

ಆ್ಯಷಸ್ ಟೆಸ್ಟ್ ಸರಣಿ: ಬ್ರಿಸ್ಬೇನ್ ಟೆಸ್ಟ್‌ಗೆ ಪ್ಲೇಯಿಂಗ್ 11 ಘೋಷಿಸಿದ ಆಸ್ಟ್ರೇಲಿಯಾಆ್ಯಷಸ್ ಟೆಸ್ಟ್ ಸರಣಿ: ಬ್ರಿಸ್ಬೇನ್ ಟೆಸ್ಟ್‌ಗೆ ಪ್ಲೇಯಿಂಗ್ 11 ಘೋಷಿಸಿದ ಆಸ್ಟ್ರೇಲಿಯಾ

"ಪೂಜಾರ ಇದೇ ರೀತಿಯಾಗಿ ಔಟಾಗುತ್ತಿರುವುದನ್ನು ನಾವು ಇಂಗ್ಲೆಂಡ್‌ನಲ್ಲಿ ಜಾಕ್ ಲೀಚ್ ವಿರುದ್ಧವೂ ನಾವು ನೋಡಿದ್ದೇವೆ. ಜಾಕ್ ಲೀಚ್ ಪೂಜಾರ ಅವರನ್ನು ಇದೇ ರೀತಿಯಾಗಿ 2-3 ಬಾರಿ ಔಟ್ ಮಾಡಿದ್ದಾರೆ. ಅವರು ರಕ್ಷಣಾತ್ಮಕ ಆಟವನ್ನು ಆಡುವಾಗ ಚೆಂಡಿನ ತಿರುವನ್ನು ಕವರ್ ಮಾಡಲು ಸಾಧ್ಯವಾಗಲಿಲ್ಲ. ಇಂತಾ ಪಿಚ್‌ನಲ್ಲಿ ನೀವು ವಿಕೆಟ್‌ಗೆ ಕವರ್ ಮಾಡುವುದು ಕೂಡ ಬಹಳ ಮುಖ್ಯವಾಗುತ್ತದೆ. ಅಲ್ಲದೆ ಅವರ ಬ್ಯಾಟ್‌ನ ಕೋನ ಕೂಡ ನೇರವಾಗಿರಲಿಲ್ಲ. ಆ ಕಾರಣದಿಂದಾಗಿಯೇ ಆ ಚೆಂಡು ರಾಸ್ ಟೇಯ್ಲರ್ ಅವರ ಬೊಗಸೆಗೆ ಸೇರಿಕೊಂಡಿತು" ಎಂದಿದ್ದಾರೆ ವಿವಿಎಸ್ ಲಕ್ಷ್ನಣ್.

ಇನ್ನು ಎರಡನೇ ಇನ್ನಿಂಗ್ಸ್‌ನಲ್ಲಿ ಚೇತೇಶ್ವರ್ ಪೂಜಾರಾಗೆ ಶತಕ ಸಿಡಿಸಲು ಅತ್ಯುತ್ತಮವಾದ ಅವಕಾಶವಿತ್ತು ಎಂದು ಪೂಜಾರ ಹೇಳಿದ್ದಾರೆ. ಬೆರಳಿಗೆ ಗಾಯವಾಗಿದ್ದ ಕಾರಣ ಫಿಲ್ಡಿಂಗ್‌ಗೆ ಇಳಿಯದಿದ್ದ ಶುಬ್ಮನ್ ಗಿಲ್ ಆರಂಭಿಕನಾಗಿ ಎರಡನೇ ಇನ್ನಿಂಗ್ಸ್‌ನಲ್ಲಿ ಕಣಕ್ಕಿಳಿಯಲಿಲ್ಲ. ಹಾಗಾಗಿ ಮಯಾಂಕ್ ಅಗರ್ವಾಲ್ ಜೊತೆಗೆ ಪೂಜಾರ ಆರಂಭಿಕನಾಗಿ ಕಣಕ್ಕಿಳಿದರು. ಮೊದಲ ವಿಕೆಟ್‌ಗೆ ಉತ್ತಮ ಪ್ರದರ್ಶನ ನೀಡಿದ ಈ ಆರಂಭಿಕ ಜೋಡಿ 107 ರನ್‌ಗಳ ಕೊಡುಗೆ ನೀಡಿದರು. ಎರಡನೇ ವಿಕೆಟ್ ರೂಪದಲ್ಲಿ ಔಟ್‌ ಆದ ಪೂಜಾರ 47 ರನ್‌ಗಳನ್ನು ಗಳಿಸಿದ್ದರು. ನಂತರ ಅಜಾಜ್ ಪಟೇಲ್ ಎಸೆತದಲ್ಲಿ ರಾಸ್ ಟೇಲರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

"ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರಂತೆಯೇ ಪೂಜಾರಾಗೂ ಅತ್ಯುತ್ತಮ ಅವಕಾಶವಿತ್ತು. ಕೇವಲ ಅರ್ಧ ಶತಕ ತಪ್ಪಿಸಿಕೊಂಡ ಮಾತ್ರಕ್ಕೆ ಅವರು ಬೇಸರಗೊಂಡಿರಲಿಕ್ಕಿಲ್ಲ. ದೊಡ್ಡ ಶತಕಗಳಿಸುವ ಅವಕಾಶವೂ ಅವರ ಮುಂದಿತ್ತು. ಆದರೆ ಅವರು ಟಿಮ್ ಸೌಥಿ ಅವರ ರಣ ತಂತ್ರಕ್ಕೆ ಉತ್ತಮ ಪ್ರತ್ಯುತ್ತರ ನೀಡಿದರು. ಆತನಿಗೆ ಶತಕಗಳಿಸುವ ಅದ್ಭುತವಾದ ಅವಕಾಶವಿತ್ತು ಎಂದು ನಾನು ಭಾವಿಸಿದ್ದೆ" ಎಮದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

ನ್ಯೂಜಿಲೆಂಡ್ 62ರನ್‌ಗೆ ಆಲೌಟ್ ಆದ್ರೂ, ಭಾರತ ಏಕೆ ಫಾಲೋ ಆನ್ ಹೇರಲಿಲ್ಲ? ದಿನೇಶ್ ಕಾರ್ತಿಕ್ ಉತ್ತರನ್ಯೂಜಿಲೆಂಡ್ 62ರನ್‌ಗೆ ಆಲೌಟ್ ಆದ್ರೂ, ಭಾರತ ಏಕೆ ಫಾಲೋ ಆನ್ ಹೇರಲಿಲ್ಲ? ದಿನೇಶ್ ಕಾರ್ತಿಕ್ ಉತ್ತರ

ಟೀಮ್ ಇಂಡಿಯಾ ಆಡುವ ಬಳಗ: ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯಂತ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬೆಂಚ್: ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಇಶಾಂತ್ ಶರ್ಮಾ, ಶ್ರೀಕರ್ ಭರತ್, ಪ್ರಸಿದ್ಧ್ ಕೃಷ್ಣ, ಸೂರ್ಯಕುಮಾರ್ ಯಾದವ್

ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೇರಿಲ್ ಮಿಚೆಲ್, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ವಿಲಿಯಂ ಸೋಮರ್ವಿಲ್ಲೆ, ಅಜಾಜ್ ಪಟೇಲ್
ಬೆಂಚ್: ಕೇನ್ ವಿಲಿಯಮ್ಸನ್, ಮಿಚೆಲ್ ಸ್ಯಾಂಟ್ನರ್, ನೀಲ್ ವ್ಯಾಗ್ನರ್, ಗ್ಲೆನ್ ಫಿಲಿಪ್ಸ್

ವಿಭಿನ್ನವಾಗಿ ಶ್ರದ್ಧಾಂಜಲಿ ಹೇಳಿದ ವಾರ್ನರ್ | Oneindia Kannada

Story first published: Sunday, December 5, 2021, 15:22 [IST]
Other articles published on Dec 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X