ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲೆಂಡ್: ಟೆಸ್ಟ್ ಸರಣಿಗೆ ರಣತಂತ್ರದೊಂದಿಗೆ ನಾವು ಸಿದ್ಧ: ಅಕ್ಷರ್ ಪಟೇಲ್

India vs New Zealand: We cant take NZ easily in Test series, they are test champions said Axar Patel

ಟಿ20 ವಿಶ್ವಕಪ್‌ನ ನಂತರ ಭಾರತ ಹಾಗೂ ನ್ಯೂಜಿಲೆಂಡ್ ವಿರುದ್ಧ ದ್ವಿಪಕ್ಷೀಯ ಸರಣಿ ನಡೆಯಲಿದ್ದು ಬುಧವಾರದಿಂದ ಈ ಸರಣಿ ಆರಂಭವಾಗಲಿದೆ. ಮೊದಲಿಗೆ ಮೂರು ಪಮದ್ಯಗಳ ಟಿ20 ನಡೆಯಲಿದ್ದು ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆಯಾಗಲಿದೆ. ತವರಿನಲ್ಲಿ ನಡೆಯಲಿರುವ ಈ ಸರಣಿಯ ಬಗ್ಗೆ ಟೀಮ್ ಇಂಡಿಯಾದ ಅಕ್ಷರ್ ಪಟೇಲ್ ಪ್ರತಿಕ್ರಿಯಿಸಿದ್ದಾರೆ. ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡವನ್ನು ನಾವು ಹಗುರವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹಾಗಾಗಿ ಎಲ್ಲಾ ರೀತಿಯ ರಣತಂ್ರದೊಂದಿಗೆ ನಾವು ಸರಣಿಗೆ ಸಜ್ಜಾಗುತ್ತಿದ್ದೇವೆ ಎಂದಿದ್ದಾರೆ ಅಕ್ಷರ್ ಪಟೇಲ್.

ಭಾರತದ ಸ್ಪಿನ್‌ಗೆ ಸಹಕಾರಿಯಾಗುವ ಪಿಚ್‌ನಲ್ಲಿ ನ್ಯೂಜಿಲೆಂಡ್ ಪರದಾಡಬಹುದು. ಹಾಗಂತ ನಾವು ಅವರನ್ನು ಸುಲಣವಾಗಿ ಪರಿಗಣಿಸುವುದು ಸಾಧ್ಯವಿಲ್ಲ. ಯಾಕೆಂದರೆ ಅವರು ವಿಶ್ವ ಟೆಸ್ಟ್ ಚಾಂಪಿಯನ್ನರು ಎಂದು ಅಕ್ಷರ್ ಪಟೇಲ್ ಹೇಳಿದ್ದಾರೆ. ನವೆಂಬರ್ 25ರಿಂದ ನ್ಯೂಜಿಲೆಂಡ್ ವಿರುದ್ಧ ಟೆಸ್ಟ ಸರಣಿ ನಡೆಯಲಿದೆ.

ಗುಂಪು ಬೇಡ; ಟಿ20 ವಿಶ್ವಕಪ್‌ನಲ್ಲಾದ ತಪ್ಪು ಮತ್ತೆ ಆಗದಿರಲು ಮಾಸ್ಟರ್‌ಪ್ಲಾನ್ ಹಾಕಿದ ಕೋಚ್ ದ್ರಾವಿಡ್ಗುಂಪು ಬೇಡ; ಟಿ20 ವಿಶ್ವಕಪ್‌ನಲ್ಲಾದ ತಪ್ಪು ಮತ್ತೆ ಆಗದಿರಲು ಮಾಸ್ಟರ್‌ಪ್ಲಾನ್ ಹಾಕಿದ ಕೋಚ್ ದ್ರಾವಿಡ್

ನ್ಯೂಜಿಲೆಂಡ್ ತಂಡ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಯುವ ಪಿಚ್‌ಗಳಿಗಿಂತ ವೇಗದ ಬೌಲಿಂಗ್‌ಗೆ ಸಹಕಾರಿಯಾಗುವ ಪಿಚ್‌ನಲ್ಲಿ ಉತ್ತಮವಾಗಿ ಆಡುತ್ತಾರೆ. ಹಾಗಾಗಿ ಭಾರತದಲಕ್ಲಿ ಆಡುವುದು ಅವರಿಗೆ ಸವಾಲೆನಿಸಲಿದೆ. ನಮಗೆ ಇಲ್ಲಿ ತವರಿನ ಲಾಭ ದೊರೆಯಲಿದೆ ಎಂದಿದ್ದಾರೆ ಅಕ್ಷರ್ ಪಟೇಲ್. ನ್ಯೂಜಿಲೆಂಡ್ ತಂಡ ವೈಟ್ ಬಾಲ್ ಹಾಗೂ ರೆಡ್ ಬಾಲ್ ಮಾದರಿಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ.ಅವರು ನಮ್ಮನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲಿಸಿದ್ದಾರೆ. ಹಾಗಾಗಿ ನಾವು ಅವರನ್ನು ಹಗುರವಾಗಿ ಪರಿಗಳಿಸುವುದು ಸಾಧ್ಯವಿಲ್ಲ. ನಾವು ನಮ್ಮ ರಣತಂತ್ರ್ಗಳೊಂದಿಗೆ ಸಿದ್ಧವಾಗಿಯೇ ಇರಬೇಕು" ಎಂದಿದ್ದಾರೆ ಅಕ್ಷರ್ ಪಟೇಲ್.

ಅಕ್ಷರ್ ಪಟೇಲ್ ಈ ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದಲ್ಲಿ ನಡೆದ ಟೆಸ್ಟ್ ಸರಣಿಯ ಮೂಲಕ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದ್ದರು. ಈ ಸರಣಿಯಲ್ಲಿ ಅಕ್ಷರ್ ಅಮೋಘ ಪ್ರದರ್ಶನ ನೀಡುವ ಮೂಲಕ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದರು. ಆಡಿದ ಮೂರು ಪಂದ್ಯಗಳಲ್ಲಿ ಅಕ್ಷರ್ ಪಟೇಲ್ 27 ವಿಕೆಟ್ ಸಂಪಾದಿಸಿದ್ದಾರೆ. ಇದರಲ್ಲಿ ಮೂರು ಐದು ವಿಕೆಟ್‌ಗಳ ಗೊಂಚಲು ಹಾಗೂ ಒಂದು ಆರು ವಿಕೆಟ್‌ಗಳ ಗೊಂಚಲು ಸೇರಿದೆ. ಈ ಅದ್ಭುತ ಫಾರ್ಮ್‌ಅನ್ನು ಅಕ್ಷರ್ ಪಟೇಲ್ ನ್ಯೂಹಿಲೆಂಡ್ ವಿರುದ್ಧವೂ ಮುಂದುವರಿಸಲು ಬಯಸಿದ್ದಾರೆ ಅಕ್ಷರ್ ಪಟೇಲ್. "ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ನೀಡಿದ ಪ್ರದರ್ಶನವನ್ನು ನ್ಯೂಜಿಲೆಂಡ್ ವಿರುದ್ಧವೂ ಮುಂದುವರಿಸಲು ನಾನು ಪ್ರಯತ್ನಿಸುತ್ತೇನೆ. ಇದೊಂದು ಅತ್ಯುತ್ತಮ ಸರಂಇಯಾಗಿರಲಿದೆ" ಎಂದಿದ್ದಾರೆ ಅಕ್ಷರ್ ಪಟೇಲ್.

ಈ ಸೆಮಿಫೈನಲ್ ಪಂದ್ಯವೇ ನನ್ನ ಕೊನೆಯ ಪಂದ್ಯ: ಮ್ಯಾಚ್ ವಿನ್ನರ್ ಮ್ಯಾಥ್ಯೂ ವೇಡ್‌ಗೆ ಹೀಗನ್ನಿಸಿದ್ದೇಕೆ?!ಈ ಸೆಮಿಫೈನಲ್ ಪಂದ್ಯವೇ ನನ್ನ ಕೊನೆಯ ಪಂದ್ಯ: ಮ್ಯಾಚ್ ವಿನ್ನರ್ ಮ್ಯಾಥ್ಯೂ ವೇಡ್‌ಗೆ ಹೀಗನ್ನಿಸಿದ್ದೇಕೆ?!

ಭಾರತ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದಿಂದ ಹೊರಬಿದ್ದ ನಂತರ ಈಗ ಮೂರು ಪಂದ್ಯಗಳ ಟಿ20 ಸರಣಿಗೆ ಸಿದ್ಧವಾಗಿದೆ. ನವೆಂಬರ್ 17ರಿಂದ ಆರಂಭವಾಗಲಿರುವ ಟಿ20 ಸರಣಿ ಜೈಪುರ, ರಾಂಚಿ ಹಾಗೂ ಕೊಲ್ಕತ್ತಾದಲ್ಲಿ ನಡೆಯಲಿದೆ. ನಂತರ ಕಾನ್ಪುರ ಹಾಗೂ ಮುಂಬೈನಲ್ಲಿ ಟೆಸ್ಟ್ ಪಮದ್ಯಗಳು ನಡೆಯಲಿದೆ.

ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವದ ಹೊಣೆಯನ್ನು ರೋಹಿತ್ ಶರ್ಮಾ ಹೊತ್ತುಕೊಂಡಿದ್ದು ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಮೊದಲ ಒಂದ್ಯದ ನಾಯಕತ್ವ ಅಜಿಂಕ್ಯಾ ರಹಾನೆ ಹೆಗಲೇರಿದೆ. ಎರಡನೇ ಪಂದ್ಯದಲ್ಲ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆ ನಡೆದಾಗ ಕೊಹ್ಲಿಯನ್ನು ಕೇಳಲೇ ಇಲ್ಲ ಎಂದ ರವಿಶಾಸ್ತ್ರಿ!ಟಿ20 ವಿಶ್ವಕಪ್‌ಗೆ ಆಟಗಾರರ ಆಯ್ಕೆ ನಡೆದಾಗ ಕೊಹ್ಲಿಯನ್ನು ಕೇಳಲೇ ಇಲ್ಲ ಎಂದ ರವಿಶಾಸ್ತ್ರಿ!

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತದ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಇಶಾನ್ ಕಿಶನ್ (ವಿಕೆಟ್-ಕೀಪರ್), ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ಆರ್ ಅಶ್ವಿನ್, ಅಕ್ಷರ್ ಪಟೇಲ್ , ಅವೇಶ್ ಖಾನ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್

ಟೀಂ ಇಂಡಿಯಾ ಟೆಸ್ಟ್ ತಂಡ: ಅಜಿಂಕ್ಯಾ ರಹಾನೆ (ನಾಯಕ), ಚೇತೇಶ್ವರ ಪೂಜಾರ (ಉಪನಾಯಕ), ಕೆ.ಎಲ್. ರಾಹುಲ್, ಮಯಾಂಕ್ ಅಗರ್ವಾಲ್, ಶುಭ್‌ಮನ್ ಗಿಲ್, ಶ್ರೇಯಸ್‌ ಅಯ್ಯರ್, ವೃದ್ದಿಮಾನ್ ಸಹಾ (ಡಬ್ಲ್ಯುಕೆ), ಕೆ.ಎಸ್ ಭರತ್ (ವಿಕೆಟ್ ಕೀಪರ್), ಆರ್ ಜಡೇಜಾ, ಆರ್. ಅಶ್ವಿನ್, ಅಕ್ಷರ್ ಪಟೇಲ್, ಜಯಂತ್ ಯಾದವ್, ಇಶಾಂತ್ ಶರ್ಮಾ , ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್‌ ಕೃಷ್ಣ

ವರಿಷ್ಟರಿಂದ ಬಸವರಾಜ್ ಬೊಮ್ಮಾಯಿ ಭೇಟೆ! | Oneindia Kannada

Story first published: Monday, November 15, 2021, 19:27 [IST]
Other articles published on Nov 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X