ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ಪ್ರವಾಸಕ್ಕೆ ಮಯಾಂಕ್ ಬದಲು ಪೃಥ್ವಿ ಆಯ್ಕೆಯಾಗಲು ಇದು ಕಾರಣ!

India vs New Zealand: Why Prithvi Shaw and why not Mayank Agarwal?

ಬೆಂಗಳೂರು, ಜನವರಿ 22: ನ್ಯೂಜಿಲೆಂಡ್ ಏಕದಿನ ಸರಣಿಗಾಗಿ, ಗಾಯಗೊಂಡಿರುವ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಬದಲಿಗೆ ಬಿಸಿಸಿಐಯು ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಅವರನ್ನು ಹೆಸರಿಸಿದೆ. ಕಿವೀಸ್ ಏಕದಿನ ಸರಣಿಯ ಮೂಲಕ ಪೃಥ್ವಿ ಏಕದಿನಕ್ಕೆ ಪಾದಾರ್ಪಣೆ ಮಾಡುವುದರಲ್ಲಿದ್ದಾರೆ.

ಭಾರತ vs ಕೀವಿಸ್: ಟಿ20 ಸರಣಿಯಲ್ಲಿ ದಾಖಲಾಗಬಹುದಾದ 4 ರೆಕಾರ್ಡ್‌ಗಳುಭಾರತ vs ಕೀವಿಸ್: ಟಿ20 ಸರಣಿಯಲ್ಲಿ ದಾಖಲಾಗಬಹುದಾದ 4 ರೆಕಾರ್ಡ್‌ಗಳು

ಬಿಸಿಸಿಐ ಮಂಗಳವಾರ (ಜನವರಿ 21) ಪ್ರಕಟಿಸಿರುವ ಭಾರತ ತಂಡಗಳಲ್ಲಿ ಪೃಥ್ವಿ ಶಾ ಹೆಸರು 3 ಪಂದ್ಯಗಳ ಏಕದಿನ ಸರಣಿಯ ತಂಡದಲ್ಲಿದ್ದರೆ, ಯುವ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಸಂಸಜು ಸ್ಯಾಮ್ಸನ್ ಹೆಸರು ಐದು ಪಂದ್ಯಗಳ ಟಿ20ಐ ಸರಣಿಗಾಗಿ ಪ್ರಕಟಿತ ತಂಡದಲ್ಲಿದೆ.

ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್

ನ್ಯೂಜಿಲೆಂಡ್‌ ಪ್ರವಾಸಕ್ಕಾಗಿ ಭಾರತ ತಂಡ ಪ್ರಕಟಗೊಂಡಾಗ ಕ್ರಿಕೆಟ್‌ ಅಭಿಮಾನಿಗಳ ಚಿತ್ತ ಕನ್ನಡಿಗ ಮಯಾಂಕ್ ಅಗರ್ವಾಲ್ ಕಡೆಗಿತ್ತು. ಆದರೆ ಮಯಾಂಕ್‌ಗೆ ಸ್ಥಾನ ನೀಡಿರಲಿಲ್ಲ. ಹಾಗಾದರೆ ಮಯಾಂಕ್ ಬದಲು ಪೃಥ್ವಿ ಆಯ್ಕೆಯಾಗಲು ಕಾರಣವೇನು? ಕೆಳಗೊಂದಿಷ್ಟು ಕಾರಣಗಳಿವೆ.

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್

ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಭಾರತ 'ಎ' ತಂಡ ಅಲ್ಲಿ ಆತಿಥೇಯರ ವಿರುದ್ಧ ಅನಧಿಕೃತ ಏಕದಿನ ಪಂದ್ಯವನ್ನಾಡುತ್ತಿದೆ. ಈ ಏಕದಿನ ಸರಣಿಯಲ್ಲಿ ಪೃಥ್ವಿ ಉತ್ತಮ ಬ್ಯಾಟಿಂಗ್ ತೋರಿದ್ದರು. ದ್ವಿತೀಯ ಅಭ್ಯಾಸ ಪಂದ್ಯದಲ್ಲಿ 100 ಎಸೆತಗಳಲ್ಲಿ 150 ರನ್‌, ಮೊದಲ ಏಕದಿನ ಪಂದ್ಯದಲ್ಲಿ 48 ರನ್ ಕೊಡುಗೆ ನೀಡಿದ್ದರು. ಆಯ್ಕೆದಾರರನ್ನು ಪೃಥ್ವಿ ಆಕರ್ಷಿಸಿದ್ದು ಇದೇ ಪ್ರದರ್ಶನಕ್ಕಾಗಿ. ಇದೇ ಸರಣಿಯಲ್ಲಿ ಆಡಿದ್ದ ಮಯಾಂಕ್ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ 32, ಮೊದಲ ಏಕದಿನದಲ್ಲಿ 29 ರನ್‌ಗಳ ಕೊಡುಗೆ ನೀಡಿದ್ದರು.

ದೇಸಿ ಕ್ರಿಕೆಟ್‌ ಅಂಕಿ-ಅಂಶಗಳು

ದೇಸಿ ಕ್ರಿಕೆಟ್‌ ಅಂಕಿ-ಅಂಶಗಳು

ಪೃಥ್ವಿ ಶಾ ಮತ್ತು ಮಯಾಂಕ್ ಅಗರ್ವಾಲ್ ಇಬ್ಬರೂ ಟೀಮ್ ಇಂಡಿಯಾ ಪರ ಏಕದಿನಕ್ಕೆ ಪಾದಾರ್ಪಣೆ ಮಾಡಿಲ್ಲ. ಅಗರ್ವಾಲ್ ಮತ್ತು ಶುಬ್‌ಮಾನ್‌ ಗಿಲ್‌ಗೆ ಬದಲು ಪೃಥ್ವಿಗೆ ಅವಕಾಶ ಲಭಿಸಲು ಕಾರಣ ದೇಸೀ ಕ್ರಿಕೆಟ್‌ನ ಅಂಕಿ ಅಂಶಗಳು. ದೇಸಿ ಕ್ರಿಕೆಟ್‌ನಲ್ಲಿ ಪೃಥ್ವಿ 27 ಇನ್ನಿಂಗ್ಸ್‌ಗಳಲ್ಲಿ 44.25ರ ಸರಾಸರಿಯಂತೆ 1195 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 6 ಅರ್ಧ ಶತಕ, 4 ಶತಕಗಳು ಸೇರಿವೆ. ಮತ್ತು 117.85 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅದೇ ಮಯಾಂಕ್ 81 ಇನ್ನಿಂಗ್ಸ್‌ಗಳಲ್ಲಿ 50.11ರ ಸರಾಸರಿಯಲ್ಲಿ 3909 ರನ್ ಸಾಧನೆ ತೋರಿದ್ದಾರೆ. ಅಗರ್ವಾಲ್ ಸ್ಟ್ರೈಕ್‌ ರೇಟ್‌ 101.29 ಇದೆ.

ಕಿವೀಸ್ ಟಿ20 ಸರಣಿಗೆ ಭಾರತ ತಂಡ

ಕಿವೀಸ್ ಟಿ20 ಸರಣಿಗೆ ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ) ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್, ಶ್ರೇಯಸ್ ಐಯ್ಯರ್, ಮನೀಷ್ ಪಾಂಡೆ, ರಿಷಬ್ ಪಂತ್ (ವಿಕೆ), ಶಿವಂ ದೂಬೆ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್‌ ಬೂಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್.

ಕಿವೀಸ್ ಏಕದಿನ ಸರಣಿಗೆ ಭಾರತ ತಂಡ

ಕಿವೀಸ್ ಏಕದಿನ ಸರಣಿಗೆ ಭಾರತ ತಂಡ

ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ (ವಿಸಿ), ಪೃಥ್ವಿ ಶಾ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆ), ಶಿವಮ್ ದೂಬೆ, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ರವೀಂದ್ರ ಜಡೇಜಾ, ಜಸ್‌ಪ್ರೀತ್‌ ಶಮ್ರಾ, ಶಾರ್ದೂಲ್ ಠಾಕೂರ್, ಕೇದಾರ್ ಜಾಧವ್.

Story first published: Wednesday, January 22, 2020, 18:02 [IST]
Other articles published on Jan 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X