ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಕೀವಿಸ್: ಟಿ20 ಸರಣಿಯಲ್ಲಿ ದಾಖಲಾಗಬಹುದಾದ 4 ರೆಕಾರ್ಡ್‌ಗಳು

india vs news zealand: 4 milestones that could be achieved in the 5-match T20I series

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಿಂದ ಗೆದ್ದ ಹುಮ್ಮಸ್ಸಿನಲ್ಲಿರುವ ಭಾರತ ಕೀವಿಸ್ ನಾಡಿಗೆ ಕಾಲಿಟ್ಟಿದೆ. ಆದರೆ ಈ ಸರಣಿ ಟೀಮ್ ಇಂಡಿಯಾ ಪಾಲಿಗೆ ನಿಜಕ್ಕೂ ಅಗ್ನಿ ಪರೀಕ್ಷೆಯಾಗಿರಲಿದೆ. ಸವಾಲಿನ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ನ್ಯೂಜಿಲ್ಯಾಂಡ್‌ ತಂಡ ಟಿ20ಯಲ್ಲಿ ಯಾವಾಗಲೂ ಉತ್ತಮ ತಂಡ ಎಂಬುದು ಅದರ ದಾಖಲೆಯಲ್ಲೇ ಸ್ಪಷ್ಟವಾಗುತ್ತದೆ. ಅದರಲ್ಲೂ ಟೀಮ್ ಇಂಡಿಯಾ ವಿರುದ್ಧ ನ್ಯೂಜಿಲ್ಯಾಂಡ್ ತನ್ನ ತವರು ನೆಲದಲ್ಲಿ ಅದ್ಭುತ ದಾಖಲೆಯನ್ನು ಹೊಂದಿದೆ. ಹೀಗಾಗಿ ಶುಕ್ರವಾರದಿಂದ ಆರಂಭವಾಗಲಿರುವ ಟಿ20 ಸರಣಿ ರೋಚಕವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್ನ್ಯೂಜಿಲೆಂಡ್‌ನಲ್ಲಿ ರೋಹಿತ್‌ಗೆ ದೊಡ್ಡ ಸವಾಲಿನ ಸಂಗತಿಯೊಂದಿದೆ: ಸಚಿನ್

ಈ ಟಿ20 ಸರಣಿ ಕೂಡ ಸಾಕಷ್ಟು ದಾಖಲೆ ಹಾಗೂ ಮೈಲಿಗಲ್ಲುಗಳಿಗೆ ಸಾಕ್ಷಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ನ್ಯೂಜಿಲ್ಯಾಂಡ್‌ನ ರಾಸ್‌ ಟೇಯ್ಲರ್, ಕೇನ್ ವಿಲಿಯಮ್ಸನ್‌ರಂತಾ ಆಟಗಾರು ಭಾಗಿಯಾಗುತ್ತಿರುವ ಈ ಸರಣಿ ಯಾವೆಲ್ಲಾ ದಾಖಲೆಗಳಿಗೆ ಸಾಕ್ಷಿಯಾಗಬಹುದು ಎಂಬುದು ಸಹಜ ಕುತೂಹಲ. ಅದರಲ್ಲೂ ಈ ಸರಣಿ ಈ ನಾಲ್ಕು ಮೈಲುಗಲ್ಲುಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಅದ್ಯಾವುದು ಅನ್ನೋದನ್ನು ಬನ್ನಿ ನೋಡೋಣ;

ಪಂದ್ಯ ಶ್ರೇಷ್ಠ ಪ್ರಶಸ್ತಿಯಲ್ಲಿ ದಾಖಲೆ ಬರೆಯಲು ಕೊಹ್ಲಿ ಸಜ್ಜು:

ಪಂದ್ಯ ಶ್ರೇಷ್ಠ ಪ್ರಶಸ್ತಿಯಲ್ಲಿ ದಾಖಲೆ ಬರೆಯಲು ಕೊಹ್ಲಿ ಸಜ್ಜು:

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡಿದ ಪ್ರತಿ ಪಂದ್ಯವೂ ದಾಖಲೆ ಪಟ್ಟಿಗೆ ಸೇರ್ಪಡೆಯಾಗುತ್ತದೆ. ಟಿ20 ಸರಣಿಯಲ್ಲಿ ವಿರಾಟ್ ಕೊಹ್ಲಿ ಇನ್ನು ಒಂದು ಪಂದ್ಯ ಶ್ರೆಷ್ಟ ಪ್ರಶಸ್ತಿಯನ್ನು ಪಡೆದರೆ ಹೊಸ ದಾಖಲೆಗೆ ಪಾತ್ರರಾಗಲಿದ್ದಾರೆ. ಅತಿ ಹೆಚ್ಚು ಪಂದ್ಯಸ್ರೇಷ್ಟ ಪ್ರಶಸ್ತಿ ಪಡೆದ ಹೆಗ್ಗಳಿಕೆ ಟೀಮ್ ಇಂಡಿಯಾ ನಾಯಕನ ಪಾಲಾಗಲಿದೆ. 78 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 2689 ರನ್‌ಗಳನ್ನು ಬಾರಿಸಿದ್ದಾರೆ. 138.53ರ ಸ್ಟ್ರೇಕ್‌ರೇಟ್‌ನಲ್ಲಿ 24 ಅರ್ಧ ಶತಕವನ್ನು ಬಾರಿಸಿದ್ದಾರೆ. ಸದ್ಯ ವಿರಾಟ್ ಕೊಹ್ಲಿ 12 ಟಿ20 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದು ಅಪ್ಘಾನಿಸ್ತಾನದ ಆಲ್‌ರೌಂಡರ್ ಮೊಹಮದ್ ನಬಿ ಜೊತೆಗೆ ಮೊದಲ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇನ್ನು ಒಂದು ಪ್ರಶಸ್ತಿ ಪಡೆದರೆ ಒಬ್ಬರೇ ಈ ಸ್ಥಾನದಲ್ಲಿ ವಿರಾಜಮಾನರಾಗಲಿದ್ದಾರೆ.

ನ್ಯೂಜಿಲ್ಯಾಂಡ್‌ ಪರವಾಗಿ ಟೇಲರ್ ದಾಖಲೆ

ನ್ಯೂಜಿಲ್ಯಾಂಡ್‌ ಪರವಾಗಿ ಟೇಲರ್ ದಾಖಲೆ

ನ್ಯೂಜಿಲ್ಯಾಂಡ್‌ ಕ್ರಿಕೆಟ್‌ ಕಂಡ ಪ್ರತಿಭಾವಂತ ಆಟಗಾರರಲ್ಲಿ ರಾಸ್‌ ಟೇಲರ್ ಒಬ್ಬರು. ಕ್ರಿಕೆಟ್‌ನ ಮೂರೂ ಫಾರ್ಮೆಟ್‌ನಲ್ಲಿ ರಾಸ್‌ ಟೇಲರ್ ತಮ್ಮದೇ ಆದ ಛಾಪುಮೂಡಿಸಿದ್ದಾರೆ. ನ್ಯೂಜಿಲ್ಯಾಂಡ್ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದಾರೆ ಟೇಲರ್. 2006ರಲ್ಲಿ ಶ್ರೀಲಂಕಾ ವಿರುದ್ಧ ಟಿ20ಗೆ ಪದಾರ್ಪಣೆ ಮಾಡಿದ ಟೇಲರ್ ಈವರೆಗೆ 95 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಸರಣಿಯಲ್ಲಿ ಒಂದು ಪಂದ್ಯವನ್ನೂ ತಪ್ಪಿಸದೆ ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿದರೆ ರಾಸ್ ಟೇಲರ್ ನೂರು ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಮೊದಲ ಕೀವಿಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಆರಂಭಿಕನಾಗಿ ರೋಹಿತ್ ಹೊಸ ಮೈಲಿಗಲ್ಲು

ಆರಂಭಿಕನಾಗಿ ರೋಹಿತ್ ಹೊಸ ಮೈಲಿಗಲ್ಲು

ರೋಹಿತ್ ಶರ್ಮಾ 2013ರಲ್ಲಿ ಆರಂಭಿಕರಾಗಿ ಕಣಕ್ಕಿಳಿದ ಬಳಿಕ ಅದೃಷ್ಟವೇ ಬದಲಾಗಿಬಿಟ್ಟಿತು. ವಿಶ್ವಶ್ರೇಷ್ಠ ಅಟಗಾರನಾಗಿ ರೋಹಿತ್ ಮಿಂಚಲು ಆರಂಭಿಸಿದರು. ಇದೀಗ ಆರಂಭಿಕನಾಗಿ ರೋಹಿತ್ ಶರ್ಮಾ ಮತ್ತೊಂದು ಮೈಲಿಗಲ್ಲಿನ ಸನಿಹದಲ್ಲಿದ್ದಾರೆ. 216 ಇನ್ನಿಂಗ್ಸ್‌ಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿರುವ ಶರ್ಮಾ 9937 ರನ್‌ ಬಾರಿಸಿದ್ದಾರೆ. ಇನ್ನು ಕೇವಲ 63 ರನ್ ಬಾರಿಸಿದರೆ ಆರಂಭಿಕನಾಗಿ 10ಸಾವಿರ ರನ್ ಬಾರಿಸಿದ ಆಟಗಾರನಾಗಲಿದ್ದಾರೆ ರೋಹಿತ್ ಶರ್ಮಾ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿರುವ ಇತರ ಭಾರತೀಯರಾಗಿದ್ದಾರೆ.

ಸರಣಿ ಗೆದ್ದು ದಾಖಲೆ ಮಾಡುತ್ತಾ ಟೀಮ್ ಇಂಡಿಯಾ:

ಸರಣಿ ಗೆದ್ದು ದಾಖಲೆ ಮಾಡುತ್ತಾ ಟೀಮ್ ಇಂಡಿಯಾ:

ಏಕದಿನ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಸೋತು ಸರಣಿಯಿಂದ ಆಘಾತಕಾರಿಯಾಗಿ ಹೊರಬಿದ್ದ ಟೀಮ್ ಇಂಡಿಯಾ ಆರು ತಿಂಗಳ ಬಳಿಕ ಮತ್ತೆ ನ್ಯೂಜಿಲ್ಯಾಂಡ್‌ ತಂಡವನ್ನು ಅದರದೇ ನೆಲದಲ್ಲಿ ಎದುರಿಸುತ್ತಿದೆ. ನ್ಯೂಜಿಲ್ಯಾಂಡ್‌ ತಂಡವನ್ನು ಅವರದ್ದೇ ನೆಲದಲ್ಲಿ ಮಣಿಸುವ ಹುಮ್ಮಸ್ಸಿನಲ್ಲಿದೆ ಟೀಮ್ ಇಂಡಿಯಾ. ಆದರೆ ಇತಿಹಾಸವನ್ನೊಮ್ಮೆ ನೋಡಿದರೆ ದಾಖಲೆಗಳು ಟೀಮ್ ಇಂಡಿಯಾಗೆ ವಿರುದ್ಧವಾಗಿದ ಎಎಂಬುದನ್ನು ಮರೆಯುವಂತಿಲ್ಲ. ಅದರಲ್ಲೂ ಟಿ20ಸರಣಿಯಲ್ಲಿ ಟೀಮ್ ಇಂಡಿಯಾ ಕಳಪೆ ದಾಖಲೆಯನ್ನು ಹೊಂದಿದೆ. ಎರಡೂ ತಂಡಗಳು ಈ ವರೆಗೂ ನಾಲ್ಕು ಬಾರಿ ಟಿ20 ಸರಣಿಯಲ್ಲಿ ಮುಖಾಮುಖಿಯಾಗಿದೆ. ತಲಾ ಎರಡೆರಡು ಸೆರಣಿಗಳು ತವರಿನಲ್ಲಿ ಎರಡೂ ತಂಡಗಳು ಆಯೋಜನೆ ಮಾಡಿತ್ತು. ನಾಲ್ಕು ಸರಣಿಯಲ್ಲಿ ಟೀಮ್ ಇಂಡಿಯಾ ಕೇವಲ ಒಂದು ಸರಣಿಯನ್ನು ಮಾತ್ರವೇ ಗೆದ್ದುಕೊಂಡು ಉಳಿದ 3 ಸರಣಿಯನ್ನು ಕೀವಿಸ್‌ಗೊಪ್ಪಿಸಿದೆ. ಕೀವೀಸ್ ನೆಲದಲ್ಲಿ ಒಮ್ಮೆಯೂ ಸರಣಿ ಗೆಲ್ಲದ ಟೀಮ್ ಇಂಡಿಯಾ ಈ ಬಾರಿಯಾದರೂ ಆ ಕೆಟ್ಟ ದಾಖಲೆಯನ್ನು ಮುರಿಯುತ್ತಾ ಕಾದು ನೋಡಬೇಕಿದೆ.

Story first published: Wednesday, January 22, 2020, 13:19 [IST]
Other articles published on Jan 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X