ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ವಯಂಕೃತ ಅಪರಾಧದಿಂದ ನ್ಯೂಜಿಲ್ಯಾಂಡ್ ಗೆ ಮ್ಯಾಚ್ ಒಪ್ಪಿಸಿದ ವಿರಾಟ್ ಕೊಹ್ಲಿ ಪಡೆ

IND vs NZ 1st ODI : ಟೀಮ್ ಇಂಡಿಯಾ ಸೋಲಿಗೆ ಕಾರಣ ಇಲ್ಲಿದೆ | Virat Kohli | New Zealand | Oneindia Kannada
India Vs Newzealand Too Many Extra Runs By Team India Becomes Costlier

ಇದುವರೆಗಿನ ಅಂಕಿಅಂಶವನ್ನು ಅವಲೋಕಿಸಿದರೆ ಒಟ್ಟಾರೆಯಾಗಿ, ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಮುನ್ನೂರರ ಗೆರೆ ದಾಟಿದರೆ ಒಂದರ್ಧದಲ್ಲಿ ಮ್ಯಾಚ್ ಸೇಫ್. ಅದರಲ್ಲೂ, ಭಾರತ ಮೊದಲ ಏಕದಿನ ಪಂದ್ಯದಲ್ಲಿ 350ರ ಆಸುಪಾಸು ಬಂದಿತ್ತು.

ಅಂತೂ, ಐದು ಟಿ20 ಸರಣಿಯನ್ನು ಹೀನಾಯವಾಗಿ ಕ್ಲೀನ್ ಸ್ವೀಪ್ ಮಾಡಿಕೊಂಡ ನಂತರ, ತವರಿನಲ್ಲಿ ನ್ಯೂಜಿಲ್ಯಾಂಡ್ ಮೊದಲ ಜಯವನ್ನು ಸಾಧಿಸಿದೆ. ಅದೂ, ಭಾರೀ ಮೊತ್ತವನ್ನು ಚೇಸ್ ಮಾಡಿ ಜಯ ತನ್ನದಾಗಿಸಿಕೊಂಡಿದೆ.

ಭಾರತ vs ನ್ಯೂಜಿಲೆಂಡ್: ಟೀಮ್ ಇಂಡಿಯಾ ಬೆಂಬಿಡದ 'ಫೈನ್' ಬೇತಾಳ!ಭಾರತ vs ನ್ಯೂಜಿಲೆಂಡ್: ಟೀಮ್ ಇಂಡಿಯಾ ಬೆಂಬಿಡದ 'ಫೈನ್' ಬೇತಾಳ!

ಚುಟುಕು ಕ್ರಿಕೆಟಿನಂತೆ ಭಾರತ ಮೊದಲ ಏಕದಿನ ಪಂದ್ಯದಲ್ಲೂ ತನ್ನ ಪ್ರಚಂಡ ಬ್ಯಾಟಿಂಗ್ ಫಾರಂ ಅನ್ನು ಮುಂದುವರಿಸಿತ್ತು. ಆದರೆ, ಬೌಲರ್ ಗಳ ಅಶಿಸ್ತಿನಿಂದ, ಅಷ್ಟು ಮೊತ್ತವನ್ನು ಪೇರಿಸಿಯೂ ಪಂದ್ಯ ಸೋತಿದೆ.

ಹ್ಯಾಮಿಲ್ಟನ್ ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಿವೀಸ್ ಇನ್ನೂ ಹನ್ನೊಂದು ಬಾಲ್ ಇರುತ್ತಲೇ, ಕೊಹ್ಲಿ ಪಡೆಯ ವಿರುದ್ದ ನಾಲ್ಕು ವಿಕೆಟ್ ಗಳ ಜಯಸಾಧಿಸಿದೆ. ಬೌಲರ್ ಗಳು ಶಿಸ್ತಿನಿಂದ ಬೌಲ್ ಮಾಡಿದ್ದರೆ, ನ್ಯೂಜಿಲ್ಯಾಂಡ್ ಗೆ ಪಂದ್ಯ ಗೆಲ್ಲುವುದು ಸುಲಭವಾಗುತ್ತಿರಲಿಲ್ಲ.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ನಾಲ್ಕು ವಿಕೆಟ್ ಕಳೆದುಕೊಂಡು 347 ರನ್ ಪೇರಿಸಿತ್ತು. ಶ್ರೇಯಸ್ ಅಯ್ಯರ್ 103, ರಾಹುಲ್ 88, ವಿರಾಟ್ ಕೊಹ್ಲಿ 51 ರನ್ ಹೊಡೆದರೆ, ನ್ಯೂಜಿಲ್ಯಾಂಡ್ ಪವರ ಸೌಥಿ ಎರಡು ವಿಕೆಟ್ ಅನ್ನು ಪಡೆದರು.

ಭಾರತದ ಬೌಲರ್ ಗಳು ಬಿಟ್ಟುಕೊಟ್ಟ ಇತರ ರನ್

ಭಾರತದ ಬೌಲರ್ ಗಳು ಬಿಟ್ಟುಕೊಟ್ಟ ಇತರ ರನ್

ಕಿವೀಸ್ ಬೌಲರ್ ಗಳು ಬಿಟ್ಟುಕೊಟ್ಟ ಇತರ ರನ್ 27. ಇದರಲ್ಲಿ ವೈಡ್ 19. ಭಾರತದ ಬೌಲರ್ ಗಳು ಇದನ್ನು ಮೀರಿಸಿ 29 ಇತರ ರನ್ ಅನ್ನು ನೀಡಿದರು. ಇದರಲ್ಲಿ ವೈಡ್ 24. ವೈಡಿಗೆ ಇನ್ನೊಂದು ಬಾಲ್ ಕೂಡಾ ಹೆಚ್ಚುವರಿ ಹಾಕಬೇಕಾಗಿರುವುದರಿಂದ, ಇಂತಹ ದೊಡ್ಡಮೊತ್ತದ ಚೇಸಿಂಗ್ ಪಂದ್ಯದಲ್ಲಿ ಇದು ಎದುರಾಳಿಗಳಿಗೆ ಇನ್ನಷ್ಟು ಬಲ ನೀಡಿದಂತಾಗುತ್ತದೆ.

ಸ್ಟ್ರೈಕ್ ಬೌಲರ್ ಜಸಪ್ರೀತ್ ಬುಮ್ರಾ

ಸ್ಟ್ರೈಕ್ ಬೌಲರ್ ಜಸಪ್ರೀತ್ ಬುಮ್ರಾ

ಭಾರತದ ಸ್ಟ್ರೈಕ್ ಬೌಲರ್ ಜಸಪ್ರೀತ್ ಬುಮ್ರಾ ಒಬ್ಬರೆ ಒಂಬತ್ತು ವೈಡ್, ಮೊಹಮ್ಮದ್ ಶಮಿ ಆರು ವೈಡ್ ಎಸೆದರು. ಇನ್ನು ಶಾರ್ಧೂಲ್ ಎರಡು, ಜಡೇಜಾ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವೈಡ್ ಅನ್ನು ಎಸೆದರು.

ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ

ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ

ಮುಂದಿನ ಪಂದ್ಯಗಳಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಇತರ ರನ್ ಹೆಚ್ಚು ಹೋಗದಂತೆ ವರ್ಕೌಟ್ ಮಾಡಿಸಬೇಕಿದೆ. ಇಲ್ಲದಿದ್ದರೆ, ಇತರ ರನ್ ಗಳೇ ಪಂದ್ಯವನ್ನು ಎದುರಾಳಿಗಳಿಗೆ ಗೆಲ್ಲಿಸಿಕೊಡಬಹುದು ಎನ್ನುವುದಕ್ಕೆ ಮೊದಲ ಏಕದಿನವೇ ಸಾಕ್ಷಿ.

Story first published: Wednesday, February 5, 2020, 20:16 [IST]
Other articles published on Feb 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X