ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನಾರ್ತಂಪ್ಟನ್‌ಶೈರ್: ಅರ್ಧಶತಕ ಸಿಡಿಸಿ ಅಬ್ಬರಿಸಿದ ಹರ್ಷಲ್ ಪಟೇಲ್; ಭಾರತಕ್ಕೆ ರೋಚಕ ಜಯ

India vs Northamptonshire: India beat Northamptonshire in 2nd warmup match by 10 runs

ಒಂದೆಡೆ ಎಡ್ಜ್‌ಬ್ಯಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಕಳೆದ ವರ್ಷದಿಂದ ಮುಂದೂಡಲ್ಪಟ್ಟು ಮರು ಆಯೋಜನೆಯಾಗಿರುವ ಐದನೇ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ, ಮತ್ತೊಂದೆಡೆ ಐರ್ಲೆಂಡ್ ಪ್ರವಾಸವನ್ನು ಕೈಗೊಂಡು 2 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಗೆದ್ದು ಬೀಗಿದ್ದ ಮತ್ತೊಂದು ಟೀಮ್ ಇಂಡಿಯಾ ಇಂಗ್ಲೆಂಡ್ ತಲುಪಿದ್ದು ಅಭ್ಯಾಸ ಪಂದ್ಯಗಳಲ್ಲಿ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ತಂಡಗಳ ವಿರುದ್ಧ ಸೆಣಸಾಟವನ್ನು ನಡೆಸುತ್ತಿದೆ.

ಕೆಲವೇ ಪಂದ್ಯ ಆಡಿರುವ ಈ ಐವರು ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ಹಲವರಿಗೆ ಗೊತ್ತೇ ಇಲ್ಲ!ಕೆಲವೇ ಪಂದ್ಯ ಆಡಿರುವ ಈ ಐವರು ಟಿ20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವುದು ಹಲವರಿಗೆ ಗೊತ್ತೇ ಇಲ್ಲ!

ಈ ಅಭ್ಯಾಸ ಪಂದ್ಯಗಳು ಹಾಗೂ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯ ಏಕಕಾಲಕ್ಕೆ ನಡೆಯುತ್ತಿರುವ ಕಾರಣ ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಕಣಕ್ಕಿಳಿದಿದೆ. ಮೊದಲಿಗೆ ಜುಲೈ 1ರಂದು ಭಾರತ ಮತ್ತು ಡರ್ಬಿಶೈರ್ ತಂಡಗಳ ನಡುವೆ ನಡೆದ ಪ್ರಥಮ ಅಭ್ಯಾಸ ಪಂದ್ಯದಲ್ಲಿ ಜಯ ಸಾಧಿಸಿದ್ದ ಭಾರತ ತಂಡ ಇದೀಗ ನಿನ್ನೆ ( ಜುಲೈ 3 ) ನಾರ್ತಂಪ್ಟನ್‌ಶೈರ್ ತಂಡದ ವಿರುದ್ಧ ನಡೆದ ದ್ವಿತೀಯ ಅಭ್ಯಾಸ ಪಂದ್ಯದಲ್ಲಿ 10 ರನ್‌ಗಳ ಜಯವನ್ನು ಸಾಧಿಸಿದೆ.

ಟೀಮ್ ಇಂಡಿಯಾಗೆ ದಿನೇಶ್ ಕಾರ್ತಿಕ್ ಮತ್ತು ಹರ್ಷಲ್ ಪಟೇಲ್ ಆಸರೆ

ಟೀಮ್ ಇಂಡಿಯಾಗೆ ದಿನೇಶ್ ಕಾರ್ತಿಕ್ ಮತ್ತು ಹರ್ಷಲ್ ಪಟೇಲ್ ಆಸರೆ

ನಾರ್ತಂಪ್ಟನ್ ಕೌಂಟಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ನಾರ್ತಂಪ್ಟನ್‌ಶೈರ್ ಫೀಲ್ಡಿಂಗ್ ಆಯ್ದುಕೊಂಡು ಪ್ರವಾಸಿ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ದಿನೇಶ್ ಕಾರ್ತಿಕ್ ಬಳಗ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆಹಾಕಿ ಎದುರಾಳಿಗೆ ತಂಡಕ್ಕೆ 150 ರನ್‌ಗಳ ಗುರಿಯನ್ನು ನೀಡಿತು. ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಡಕ್ ಔಟ್ ಆದರೆ, ಇಶಾನ್ ಕಿಶನ್ 16 ರನ್ ಕಲೆ ಹಾಕಿದರು. ಇನ್ನುಳಿದಂತೆ ರಾಹುಲ್ ತ್ರಿಪಾಠಿ 7, ಸೂರ್ಯಕುಮಾರ್ ಯಾದವ್ 0, ದಿನೇಶ್ ಕಾರ್ತಿಕ್ 34, ವೆಂಕಟೇಶ್ ಅಯ್ಯರ್ 20, ಹರ್ಷಲ್ ಪಟೇಲ್ 54, ಅವೇಶ್ ಖಾನ್ ಡಕ್ ಔಟ್, ಯುಜುವೇಂದ್ರ ಚಾಹಲ್ ಅಜೇಯ 2 ರನ್ ಗಳಿಸಿದರು ಹಾಗೂ ಅರ್ಷದೀಪ್ ಸಿಂಗ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಟೀಮ್ ಇಂಡಿಯಾದ ಬಹುತೇಕ ಪ್ರಮುಖ ಆಟಗಾರರು ವಿಫಲರಾದರೆ ದಿನೇಶ್ ಕಾರ್ತಿಕ್ 26 ಎಸೆತಗಳಲ್ಲಿ 34 ರನ್ ಮತ್ತು ಹರ್ಷಲ್ ಪಟೇಲ್ 36 ಎಸೆತಗಳಲ್ಲಿ 54 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಹೀಗೆ ಅರ್ಧ ಶತಕ ಸಿಡಿಸಿ ಅಬ್ಬರಿಸಿದ ಬೌಲರ್ ಹರ್ಷಲ್ ಪಟೇಲ್ 5 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು.

139ಕ್ಕೆ ನಾರ್ತಂಪ್ಟನ್‌ಶೈರ್ ಆಲ್ ಔಟ್

139ಕ್ಕೆ ನಾರ್ತಂಪ್ಟನ್‌ಶೈರ್ ಆಲ್ ಔಟ್

ನಾರ್ತಂಪ್ಟನ್‌ಶೈರ್ ಪರ ಎಮಿಲಿಯೋ ಗೇ 22 ರನ್ ಮತ್ತು ಸೈಫ್ ಜೈಬ್ 33 ರನ್ ಕಲೆ ಹಾಕಿದ್ದು ಬಿಟ್ಟರೆ ಉಳಿದ ಯಾವುದೇ ಬ್ಯಾಟ್ಸ್‌ಮನ್‌ ಕೂಡ 20 ರನ್ ಮುಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ನಾರ್ತಂಪ್ಟನ್‌ಶೈರ್ 19.3 ಓವರ್‌ಗಳಲ್ಲಿ 139 ರನ್‌ಗಳಿಗೆ ಆಲ್ಔಟ್ ಆಯಿತು. ಈ ಮೂಲಕ ಭಾರತ 10 ರನ್‌ಗಳ ಗೆಲುವನ್ನು ಕಂಡಿತು.

ಟೀಮ್ ಇಂಡಿಯಾ ಪರ ಅರ್ಷದೀಪ್ ಸಿಂಗ್‌, ಅವೇಶ್ ಖಾನ್, ಹರ್ಷಲ್ ಪಟೇಲ್ ಮತ್ತು ಯುಜುವೇಂದ್ರ ಚಹಲ್ ತಲಾ 2 ವಿಕೆಟ್ ಪಡೆದರೆ, ಪ್ರಸಿದ್ಧ್ ಕೃಷ್ಣ ಮತ್ತು ವೆಂಕಟೇಶ್ ಅಯ್ಯರ್ ತಲಾ ಒಂದೊಂದು ವಿಕೆಟ್ ಪಡೆದರು.

Kohli ಆಟದ ಬಗ್ಗೆ ಚರ್ಚೆ, Rohit ವಾಪಸ್ Reverse swing 01 | *CricketWrap | OneIndia Kannada
ಆಡುವ ಬಳಗಗಳು

ಆಡುವ ಬಳಗಗಳು

ಭಾರತ: ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್ (ನಾಯಕ ಮತ್ತು ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ


ನಾರ್ತಂಪ್ಟನ್‌ಶೈರ್: ರಿಕಾರ್ಡೊ ವಾಸ್ಕೊನ್ಸೆಲೋಸ್, ಎಮಿಲಿಯೊ ಗೇ, ಜೋಶುವಾ ಕಾಬ್ (ನಾಯಕ), ಸೈಫ್ ಜೈಬ್, ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್), ಗಸ್ ಮಿಲ್ಲರ್, ಜೇಮ್ಸ್ ಸೇಲ್ಸ್, ನಾಥನ್ ಬಕ್, ಬ್ರಾಂಡನ್ ಗ್ಲೋವರ್, ಫ್ರೆಡ್ಡಿ ಹೆಲ್ಡ್ರೀಚ್, ಅಲೆಕ್ಸ್ ರಸ್ಸೆಲ್

Story first published: Monday, July 4, 2022, 9:10 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X