ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India vs Northants: 2ನೇ ಅಭ್ಯಾಸ ಪಂದ್ಯಕ್ಕೆ ಸಜ್ಜಾದ ಭಾರತ: ಪಂದ್ಯದ ಸಮಯ ಹಾಗೂ ಇತರೆ ಮಾಹಿತಿ

India vs Northants Warm-Up match: Live Streaming and Squad details

ಭಾರತೀಯ ಟಿ20 ತಂಡ ಎರಡನೇ ಅಭ್ಯಾಸ ಪಂದ್ಯವನ್ನು ಆಡಲು ಸಜ್ಜಾಗಿದೆ. ಭಾನುವಾರ ಈ ಪಂದ್ಯ ನಡೆಯಲಿದ್ದು ನಾರ್ಥನ್ಸ್ ತಂಡದ ವಿರುದ್ಧ ದಿನೇಶ್ ಕಾರ್ತಿಕ್ ನೇತೃತ್ವದ ತಂಡ ಸೆಣೆಸಾಟ ನಡೆಸಲಿದೆ. ಮೊದಲ ಪಂದ್ಯದಲ್ಲಿ ಡರ್ಬುಶೈರ್ ವಿರುದ್ಧ ಆಡಿದ್ದ ದಿನೇಶ್ ಕಾರ್ತಿಕ್ ನೇತೃತ್ವದ ತಂಡ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಹಾರ್ದಿಕ್ ಪಾಂಡ್ಯ ಈ ಪಂದ್ಯದಿಂದಲೂ ವಿಶ್ರಾಂತಿ ಪಡೆದುಕೊಂಡಿದ್ದು ದಿನೇಶ್ ಕಾರ್ತಿಕ್ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಡರ್ಬಿಶೈರ್‌ಗೆ ಹೋಲಿಸಿದರೆ ನಾರ್ಥಾಂಪ್ಟನ್‌ಶೈರ್ ಟಿ20 ತಂಡ ಉತ್ತಮವಾಗಿದ್ದು ಭಾರತೀಯ ತಂಡಕ್ಕೆ ಪೈಪೋಟಿ ನೀಡಲು ಸಜ್ಜಾಗಿದೆ. ಇನ್ನು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಮುನ್ನ ಭಾರತ ಟಿ20 ತಂಡಕ್ಕೆ ಇದು ಕೊನೆಯ ಅಭ್ಯಾಸ ಪಂದ್ಯವಾಗಿದೆ.

Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!Eng vs Ind: ಕುತೂಹಲ ಮೂಡಿಸಿದೆ ಸೆಣೆಸಾಟ: 3ನೇ ದಿನದ ಆರಂಭಿಕ ಸೆಶನ್ ಭಾರತಕ್ಕೆ ಬಹಳ ಮುಖ್ಯ!

ಸಮಯ ಹಾಗೂ ನೇರಪ್ರಸಾರ

ಸಮಯ ಹಾಗೂ ನೇರಪ್ರಸಾರ

ಭಾರತ ಹಾಗೂ ನಾರ್ಥನ್ಸ್ ತಂಡದ ನಡುವಿನ ಅಭ್ಯಾಸ ಪಂದ್ಯ ಜುಲೈ 3 ಭಾನುವಾರ ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಆರಂಭವಾಗಲಿದೆ. ನಾರ್ಥಾಂಪ್ಟನ್‌ಶೈರ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಪಂದ್ಯದ ನೇರಪ್ರಸಾರವಾಗಲಿದೆ. ಇ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೂಡ ಈ ಪಂದ್ಯದ ನೇರಪ್ರಸಾರವನ್ನು ವೀಕ್ಷಿಸಬಹುದಾಗಿದೆ. ನಾರ್ಥಾಂಪ್ಟನ್‌ನ ಕೌಂಟಿ ಕ್ರೀಡಾಂಗಣದಲ್ಲಿ ಈ ಪಂದ್ಯ ಆಯೋಜನೆಯಾಗಲಿದೆ.

ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ

ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ

ಇನ್ನು ಡರ್ಬಿಶೈರ್ ವಿರುದ್ಧದ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತೀಯ ತಂಡ ಅದ್ಭಯತ ಪ್ರದರ್ಶನ ನೀಡಿತ್ತು. ಭಾರತದ ಯುವ ಬೌಲಿಂಗ್ ಪಡೆ ಮೊದಲಿಗೆ ಡರ್ಬಿಶೈರ್ ತಂಡವನ್ನಿ 150 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿತ್ತು. ಇದನ್ನು ಬೆನ್ನಟ್ಟಿದ ಭಾರತ ತಂಡಕ್ಕೆ ದೀಪಕ್ ಹೂಡಾ, ಸಂಜು ಸ್ಯಾಮ್ಸನ್ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಪ್ರದರ್ಶನದ ಮೂಲಕ 7 ವಿಕೆಟ್‌ಗಳ ಅಂತರದಿಂದ ಸುಲಭವಾಗಿ ಗೆಲ್ಲಲು ಸಾಧ್ಯವಾಯಿತು.

ನಾರ್ಥಾಂಪ್ಟನ್‌ಶೈರ್ ಸ್ಕ್ವಾಡ್

ನಾರ್ಥಾಂಪ್ಟನ್‌ಶೈರ್ ಸ್ಕ್ವಾಡ್

ಜೋಶುವಾ ಕಾಬ್ (ನಾಯಕ), ಬೆನ್ ಕರ್ರಾನ್, ಸೈಫ್ ಜೈಬ್, ನಾಥನ್ ಬಕ್, ಎಮಿಲಿಯೊ ಗೇ, ಬ್ರಾಂಡನ್ ಗ್ಲೋವರ್, ರಿಕಾರ್ಡೊ ವಾಸ್ಕೊನ್ಸೆಲೋಸ್, ಫ್ರೆಡ್ಡಿ ಹೆಲ್ಡ್ರೀಚ್, ಗಸ್ ಮಿಲ್ಲರ್, ರಯಾನ್ ರಿಕೆಲ್ಟನ್, ಅಲೆಕ್ಸ್ ರಸ್ಸೆಲ್, ಜೇಮ್ಸ್ ಸೇಲ್ಸ್, ಚಾರ್ಲಿ ಥರ್ಸ್ಟನ್

ಟೀಂ ಇಂಡಿಯಾ ನಾಯಕನಾಗಿದ್ದಕ್ಕೆ ರನ್ ಹೊಳೆ ಹರಿಸಿದ ಬುಮ್ರಾ | OneIndia Kannada
ಭಾರತ ಸ್ಕ್ವಾಡ್

ಭಾರತ ಸ್ಕ್ವಾಡ್

ದಿನೇಶ್ ಕಾರ್ತಿಕ್ (ನಾಯಕ & ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರಾಹುಲ್ ತ್ರಿಪಾಠಿ, ಹರ್ಷಲ್ ಪಟೇಲ್ ಯುಜ್ವೇಂದ್ರ ಚಹಾಲ್, ಭುವನೇಶ್ವರ್ ಕುಮಾರ್

Story first published: Sunday, July 3, 2022, 15:34 [IST]
Other articles published on Jul 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X