ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಉತ್ತಮದಿಂದ ಅದ್ಭುತದ ಕಡೆಗೆ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ!

By ಆರ್‌. ಕೌಶಿಕ್‌, ಲಂಡನ್‌
India vs Pakistan: hitman Rohit Sharma enacts lead act to perfection

ಮ್ಯಾಂಚೆಸ್ಟರ್‌, ಜೂನ್‌ 17: ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್‌ ಇಂಡಿಯಾ ಪರ ಆಡುತ್ತಿರುವ ಆಟಗಾರರಲ್ಲಿ ದಿನೇಶ್‌ ಕಾರ್ತಿಕ್‌ ಮತ್ತು ಎಂ.ಎಸ್‌ ಧೋನಿ ಬಳಿಕ ಇರುವ ಅತ್ಯಂತ ಹಿರಿಯ ಆಟಗಾರ ರೋಹಿತ್‌ ಶರ್ಮಾ. ಇನ್ನೊಂದು ವಾರದ ಅವಧಿಯಲ್ಲಿ ರೋಹಿತ್‌ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ 13 ವರ್ಷವಾಗಲಿದೆ. 2007ರ ಜೂನ್‌ನಲ್ಲಿ ಬೆಲ್ಫಾಸ್ಟ್‌ನಲ್ಲಿ ನಡೆದ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಟೀಮ್‌ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಕ್ರಿಕೆಟ್‌ನ ತಂತ್ರಗಳನ್ನು ವರದಾನವಾಗಿ ಪಡೆದಿರುವ ಪ್ರತಿಭಾನ್ವಿತ ಆಟಗಾರ ರೋಹಿತ್‌, ತಾವು ಈಗಿರುವ ಸ್ಥಾನ ತಲುಪಲು ಸಾಕಷ್ಟು ಸಮಯ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಟೀಮ್‌ ಇಂಡಿಯಾದಲ್ಲಿ ತಂಡವನ್ನು ಮುನ್ನಡೆಸಬಲ್ಲ ಆಟಗಾರರಲ್ಲಿ ಒಬ್ಬರಾಗಿ ಮೂಡಿಬಂದಿದ್ದಾರೆ. ಅಂದಹಾಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಉಪನಾಯಕನಾಗಿ ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತಿದ್ದಾರೆ ಎನ್ನುವ ಕಾರಣಕ್ಕೆ ಈ ಮಾತನನ್ನು ಹೇಳುತ್ತಿಲ್ಲ. ಕ್ರಿಕೆಟ್‌ ಕುರಿತಾದ ಜ್ಞಾನ ಮತ್ತು ಆಟಗಾರರನ್ನು ನಿರ್ವಹಿಸುವ ಕಲೆಯಿಂದ ಅವರೊಬ್ಬ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿದ್ದು, ಮುಂಬೈ ಇಂಡಿಯನ್ಸ್‌ಗೆ ದಾಖಲೆಯ ನಾಲ್ಕು ಬಾರಿ ಐಪಿಎಲ್‌ ಪ್ರಶಸ್ತಿಗಳನ್ನು ಗೆದ್ದುಕೊಟ್ಟಿದ್ದಾರೆ. ಹೀಗಾಗಿಯೇ ಅವರು ಟೀಮ್‌ ಇಂಡಿಯಾದ ನಾಯಕರ ಗುಂಪಿನಲ್ಲಿ ಪ್ರಮುಖ ಸದಸ್ಯನಾಗಿ ಸ್ಥಾನ ಪಡೆದಿದ್ದಾರೆ.

 ವಿಶ್ವಕಪ್‌: ಪಾಕ್‌ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್‌! ವಿಶ್ವಕಪ್‌: ಪಾಕ್‌ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್‌!

ಇದೇ ವರ್ಷ ಜನವರಿಯಲ್ಲಿ ರೋಹಿತ್‌ ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿ ಬದುಕನ್ನು ಮೇಲೆತ್ತುವ ಪ್ರಯತ್ನ ಆರಂಭಿಸಿದ್ದರು. ಈ ಸಂದರ್ಭದಲ್ಲಿ ತಮ್ಮ ಮೊದಲ ಮಗುವಿಗಾಗಿ ಗರ್ಭವತಿ ಪತ್ನಿ ಜೊತೆಗಿರುವ ಸಲುವಾಗಿ ಭಾರತ ತಂಡ ಟೆಸ್ಟ್‌ ಸರಣಿ ಸಲುವಾಗಿ ವಿದೇಶಕ್ಕೆ ತೆರಳಿದ್ದಾಗ ತಂಡದಿಂದ ಹೊರಗುಳಿದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೆಲ್ಬೋರ್ನ್‌ನಲ್ಲಿ ಅಮೋಘ ಅರ್ಧಶತಕ ದಾಖಲಿಸಿದ್ದ ರೋಹಿತ್‌, ಬೇರೆ ಏನನ್ನೂ ಆಲೋಚಿಸದೆ ಸಿಡ್ನಿಯಲ್ಲಿ ನಡೆಯಬೇಕಿದ್ದ ಮುಂದಿನ ಟೆಸ್ಟ್‌ ಪಂದ್ಯದಿಂದ ಹೊರಗುಳಿದು ಕೂಡಲೇ ತಮ್ಮ ಪತ್ನಿಯನ್ನು ಕಾಣಲು ತಾಯ್ನಾಡಿಗೆ ಹಿಂದಿರುಗಿದ್ದರು. ಟೆಸ್ಟ್‌ ವೃತ್ತಿ ಬದುಕನ್ನು ಮೇಲೆತ್ತುವ ಹಠದಲ್ಲಿದ್ದ ರೋಹಿತ್‌ ತಮ್ಮ ಪತ್ನಿ ಹಾಗೂ ಮೊದಲ ಮಗುವಿನ ಸಲುವಾಗಿ ಎಲ್ಲವನ್ನೂ ಮರೆತು ಮುಂಬೈಗೆ ಹಿಂದಿರುಗಿದ್ದರು.

ಇದೀಗ ಶರ್ಮಾ ದಂಪತಿ 'ಸಮೈರಾ' ಎಂದು ಹೆರರಿಟ್ಟಿರುವ ಹೆಣ್ಣು ಮಗು ರೋಹಿತ್‌ ಅವರ ಸಂತಸದ ಚಿಲುಮೆಯಾಗಿದ್ದು, ಅವರ ಬಾಳಿನ ದೇವತೆಯಂತಾಗಿದ್ದಾಳೆ.

ವಿಶ್ವಕಪ್‌ನಲ್ಲಿ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ ಶತಕಗಳ ದಾಖಲೆ!ವಿಶ್ವಕಪ್‌ನಲ್ಲಿ 'ಹಿಟ್‌ಮ್ಯಾನ್‌' ರೋಹಿತ್‌ ಶರ್ಮಾ ಶತಕಗಳ ದಾಖಲೆ!

'ಸಮೈರಾ' ಆಗಮನದಿಂದ 32 ವರ್ಷದ ಕ್ರಿಕೆಟಿಗ ರೋಹಿತ್‌ ಅವರ ಉಲ್ಲಾಸವನ್ನು ಮತ್ತಷ್ಟು ಚಿಗುರುವಂತೆ ಮಾಡಿದೆ. ಈ ಉಲ್ಲಾಸದಿಂದಲೇ ರೋಹಿತ್‌ ಅವರ ಪಾಲಿಗೆ ಉತ್ತಮವಾಗಿದ್ದ ಪ್ರಸಕ್ತ ವಿಶ್ವಕಪ್‌ ಟೂರ್ನಿಯು ಓಲ್ಡ್‌ ಟ್ರಾಫರ್ಡ್‌ನಲ್ಲಿ ಅದ್ಭುತದ ಕಡೆಗೆ ತಿರುಗಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮ್ಯಾಚ್‌ ವಿನ್ನಿಂಗ್‌ ಸಾಬೀತಾದ 122 ರನ್‌ಗಳ ಅಮೋಘ ಶತಕದ ಬಳಿಕ, ಆಸ್ಟ್ರೇಲಿಯಾ ವಿರುದ್ಧ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟ 57 ರನ್‌ಗಳನ್ನು ಗಳಿಸಿದ್ದ ರೋಹಿತ್‌, ತಮ್ಮ ಮೂರನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಈ ಬಾರಿಯ ವಿಶ್ವಕಪ್‌ನಲ್ಲಿ ತಮ್ಮ ಎರಡನೇ ಶತಕ ಸಿಡಿಸಿದರು. ಅವರ ಅದ್ಭುತ 140 ರನ್‌ಗಳ ಅಮೋಘ ಇನಿಂಗ್ಸ್‌ನ ನೆರವಿನಿಂದ ಭಾರತ ತಂಡ ವಿಶ್ವಕಪ್‌ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ಸತತ 7ನೇ ಜಯ ದಾಖಲಿಸಿ ಮಿಂಚು ಮೂಡಿಸಿತ್ತು.

ಸೌಥಂಪ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್‌ ಅತ್ಯಂತ ತಾಳ್ಮೆಯುತವಾಗಿ ಆಟವಾಡಿ ಶತಕ ದಾಖಲಿಸಿದ್ದರು. ಏಕೆಂದರೆ ಅಲ್ಲಿನ ಪಿಚ್‌ನಲ್ಲಿ ಅಂತಹ ಎಚ್ಚರಿಕೆಯ ಆಟದ ಅನಿವಾರ್ಯತೆ ಇತ್ತು. ಆದರೆ, ಓಲ್ಡ್‌ ಟ್ರಾಫರ್ಡ್‌ನಲ್ಲಿ ಆರಂಭದಲ್ಲಿ ಕೊಂಚ ಎಚ್ಚರಿಕೆ ವಹಿಸಿದರೂ, ಬಳಿಕ ತಮ್ಮ ಗಿಯರ್‌ ಬದಲಾಯಿಸಿದ್ದರು. ಹಸನ್‌ ಅಲಿ ಮತ್ತು ವಹಾಬ್‌ ರಿಯಾಝ್‌ ಅವರ ಶಾರ್ಟ್‌ಪಿಚ್‌ ಬೌಲಿಂಗ್‌ ದಾಳಿ ಎದುರು ರೋಹಿತ್‌ ತಮ್ಮ ಸಿಗ್ನೇಚರ್‌ ಹೊಡೆತಗಳಾದ ಕಟ್‌ ಶಾಟ್ಸ್‌ ಮತ್ತು ಅಪ್‌ರೈಟ್‌ ಪುಲ್‌ಶಾಟ್‌ಗಳ ಅಸ್ತ್ರವನ್ನು ಬಳಕೆಗೆ ತಂದಿದ್ದರು.

ರೋಹಿತ್‌ ಅವರ ಈ ಅಬ್ಬರದ ಬ್ಯಾಟಿಂಗ್‌ನಿಂದಲೇ ಟೀಮ್‌ ಇಂಡಿಯಾದಲ್ಲಿ ಮರಳಿ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುವ ಅವಕಾಶ ಪಡೆದುಕೊಂಡ ಕೆ.ಎಲ್‌ ರಾಹುಲ್‌ಗೆ ತಮ್ಮ ಸ್ಥಾನದಲ್ಲಿ ಭದ್ರವಾಗಿ ಆಡಲು ನೆರವಾಯಿತು. ಟೀಮ್‌ ಇಂಡಿಯಾದ ಉಪನಾಯಕ ನೆಚ್ಚಿನ ಆರಂಭಿಕ ಜೊತೆಗಾರ ಶಿಖರ್‌ ಧವನ್‌ ಗಾಯಗೊಂಡ ಕಾರಣ ಕೆ.ಎಲ್‌ ರಾಹುಲ್‌ ನೂತನ ಆರಂಭಿಕ ಜೊತೆಗಾರನಾಗಿ ರೋಹಿತ್‌ ಜೊತೆಗೆ ಕಣಕ್ಕಿಳಿದಿದ್ದರು.

ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!ವಿಶ್ವಕಪ್‌: ಸಚಿನ್‌ ವಿಶ್ವ ದಾಖಲೆಯನ್ನು ಮುರಿದ ವಿರಾಟ್‌ ಕೊಹ್ಲಿ!

ಕಳೆದ ನಾಲ್ಕೂ ವರೆ ವರ್ಷಗಳಿಂದಲೂ ರೋಹಿತ್‌ ಮತ್ತು ರಾಹುಲ್‌ ಟೀಮ್‌ ಇಂಡಿಯಾದಲ್ಲಿ ಸಹ ಆಟಗಾರರಾಗಿದ್ದಾರೆ. ಆದರೆ, ಅವರಿಗೆ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಆರಂಭಿಕ ಜೋಡಿಯಾಗಿ ಕಣಕ್ಕಿಳಿಯುವ ಅವಕಾಶ ಒಮ್ಮೆಯೂ ಲಭ್ಯವಾಗಿರಲಿಲ್ಲ. ಹೀಗಾಗಿ ಪಾಕ್‌ ವಿರುದ್ಧದ ಪಂದ್ಯದಲ್ಲಿ ಈ ನೂತನ ಜೋಡಿಯ ನಡುವೆ ಹೊಂದಾಣಿಕೆಯ ಆಟದ ಕೊರತೆ ಎದ್ದು ಕಾಣುತ್ತಿತ್ತು. ಪ್ರಮುಖವಾಗಿ ರನ್ನಿಂಗ್‌ ಬಿಟ್ವೀನ್‌ ವಿಕೆಟ್‌ನಲ್ಲಿ ತೊಂದರೆ ಎದುರಾಗುತ್ತಿತ್ತು. ಇದರಿಂದಾಗಿ 32 ಮತ್ತು 38 ರನ್‌ ಗಳಿಸಿದ್ದಾಗಲೇ ರೋಹಿತ್‌ ರನ್‌ಔಟ್‌ ಆಗುವ ಸನ್ನಿವೇಶಗಳು ಎದುರಾಗಿದ್ದವು. ಇವೆಲ್ಲದರ ಹೊರತಾಗಿಯೂ ಟೀಮ್‌ ಇಂಡಿಯಾದ ನೂತನ ಜೋಡಿ 136 ರನ್‌ಗಳ ಅಮೋಘ ಜೊತೆಯಾಟ ನಡೆಸಿತ್ತು.

ಇನಿಂಗ್ಸ್‌ನ ಮೊದಲ ಎಸೆತವನ್ನು ಎದುರಿಸುವುದೆಂದರೆ ರೋಹಿತ್‌ಗೆ ಅಚ್ಚುಮೆಚ್ಚು. ಆರಂಭಿಕ ಆಟಗಾರನಾಗೇ ಆಡಬೇಕೆಂಬ ಹಂಬಲ ಹೊಂದಿರುವ ಕೆ.ಎಲ್‌ ರಾಹುಲ್‌ಗೂ ಕೂಡ ಇಂಥದ್ದೇ ತುಡಿತವಿದೆ. ಒಬ್ಬ ಯುವ ಆಟಗಾರನ ಈ ತುಡಿತವನ್ನು ಅರಿತುಕೊಂಡ ರೋಹಿತ್‌, ಅವರ ಆಸೆ ನಿರಾಶೆಯಾಗದಂತೆ ಮೊದಲ ಎಸೆತವನ್ನು ಎದುರಿಸುವ ಸೌಭಾಗ್ಯವನ್ನು ಬಿಟ್ಟುಕೊಟ್ಟರು. ಹಲವು ಸಮಯದ ನಂತರ ರಾಹುಲ್‌ ಆರಂಭಿಕರಾಗಿ ಆಡುತ್ತಿರುವ ಕಾರಣ ಅವರ ಮೇಲಿನ ಒತ್ತಡ ಕಡಿಮೆ ಮಾಡಿ ಅವರಲ್ಲಿನ ಅತ್ಯುತ್ತಮ ಆಟವನ್ನು ಹೊರತರಲು ನೆರವಾಗಲು ರೋಹಿತ್‌ ಈ ರೀತಿ ಮಾಡಿ ಪ್ರೌಢಿಮೆ ಮೆರೆದಿದ್ದರು.

ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?ವಿಶ್ವಕಪ್‌: ಪಾಕ್‌ ವಿರುದ್ಧ ಔಟಾಗದೇ ಇದ್ದರೂ ವಿರಾಟ್‌ ಹೊರನಡೆದದ್ದೇಕೆ?

"ನನಗೆ, ರಾಹುಲ್‌ ಅವರಿಗೆ ಹಿತವೆನಿಸುವ (ಮೊದಲ ಎಸೆತವನ್ನು ಎದುರಿಸುವುದು) ಸಂಗತಿಯನ್ನು ಒದಗಿಸಿಕೊಡುವುದು ಮುಖ್ಯವಾಗಿತ್ತು. ಅವರು ಆರಂಭಿಕರಾಗಿ ಮೊದಲ ಪಂದ್ಯವನ್ನು ಇಲ್ಲಿ ಆಡುತ್ತಿದ್ದಾರೆ. ಹೀಗಾಗಿ ಅವರ ಹಿತ ಕಾಯ್ದುಕೊಳ್ಳುವಂತೆ ಮಾಡುವುದು ನನ್ನ ಉದ್ದೇಶವಾಗಿತ್ತು,'' ಎಂದು ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ಈ ವಿಚಾರವನ್ನು ಬಹಿರಂಗ ಪಡಿಸಿದ್ದರು.

ರೋಹಿತ್‌ ಅವರ ನೆರವಿಗೆ ಧನ್ಯವಾದ ಸೂಚಿಸುವಂತೆ ಕೆ.ಎಲ್‌ ರಾಹುಲ್‌ ಅತ್ಯಾಕರ್ಷಕ ಅರ್ಧಶತಕ ದಾಖಲಿಸಿದ್ದರು. ಜೊತೆಯಾಗಿ ರನ್‌ ಗಳಿಸುವುದಷ್ಟೇ ಜೊತೆಗಾರಿಕೆಯಲ್ಲ. ಒಬ್ಬರನ್ನೊಬ್ಬರು ಬೆಂಬಲಿಸುವುದು, ಕಾಳಜಿ ವಹಿಸುವುದು, ಕೆಲವೊಮ್ಮೆ ಅತ್ಯುತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನೂ ಆಧರಿಸಿರುತ್ತದೆ.

ಒಂದು ವಿಚಾರ ಸ್ಪಷ್ಟವಾಗಿರುವುದೇನೆಂದರೆ , ತಂದೆಯಾಗಿರುವುದು ರೋಹಿತ್‌ ಅವರಲ್ಲಿ ಹೊಸ ಜಗತ್ತನ್ನು ಸೃಷ್ಠಿಸಿದೆ. ಅವರ ಮಗಳೇ ಅವರಿಗೆ ಪ್ರಪಂಚ ಎಂಬುದನ್ನು ಅವರು ಇಡೀ ಜಗತ್ತಿಗೆ ಸಾರುವುದರಲ್ಲಿ ಹಿಂದೇಟಾಕುವುದಿಲ್ಲ. "ನಾನೀಗ ಅದ್ಭುತ ಸಮಯವನ್ನು ಕಳೆಯುತ್ತಿದ್ದೇನೆ. ನನ್ನ ಜೀವನದ ಅತ್ಯುತ್ತಮ ಸಮಯವಿದು. ಮಗಳ ಆಗಮನ, ನನ್ನ ಜೀವನದಲ್ಲಿ ಮಗಳ ಪ್ರವೇಶವು ನನ್ನನು ಉತ್ತಮ ಸಮಯ ಕಳೆಯುವಂತೆ ಮಾಡಿದೆ. ನನ್ನ ಕ್ರಿಕೆಟ್‌ ಅನ್ನು ಆನಂದಿಸುತ್ತಿದ್ದೇನೆ. ಐಪಿಎಲ್‌ನ ಅಮೋಘ ಯಶಸ್ಸಿನ ಬಳಿಕ ವಿಶ್ವಕಪ್‌ ಟೂರ್ನಿಯಲ್ಲೂ ಅದ್ಭುತ ಆರಂಭ ಪಡೆದಿದ್ದೇನೆ," ಎಂದು ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ಶರ್ಮಾ ತಮ್ಮ ಅನುಭವ ಮತ್ತು ಸಂಭ್ರಮ ಎಲ್ಲವನ್ನು ಹಂಚಿಕೊಂಡಿದ್ದಾರೆ.

ಪಾಕ್‌ ವಿರುದ್ಧ 1 ರನ್‌ಗಳಿಸಿದರೂ ಹೊಸ ದಾಖಲೆ ಬರೆದ ಧೋನಿ!ಪಾಕ್‌ ವಿರುದ್ಧ 1 ರನ್‌ಗಳಿಸಿದರೂ ಹೊಸ ದಾಖಲೆ ಬರೆದ ಧೋನಿ!

ಟೂರ್ನಿಯಲ್ಲಿ ಆಡಿದ ಮೂರು ಇನಿಂಗ್ಸ್‌ಗಳಿಂದ 319 ರನ್‌ಗಳನ್ನು ಸಿಡಿಸಿರುವ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌, ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಕೇವಲ ಆಸ್ಟ್ರೇಲಿಯಾ ತಂಡದ ನಾಯಕ ಆರೊನ್‌ ಫಿಂಚ್‌ (343) ಮಾತ್ರವೇ ರೋಹಿತ್‌ಗಿಂತಲೂ ಮುಂದಿದ್ದಾರೆ.

ಇದೀಗ ರೋಹಿತ್‌ ಅವರ ಅಭಿಮಾನಿಗಳು ಮತ್ತು ತಂಡದ ಸಹ ಆಟಗಾರರೆಲ್ಲಾ ಅವರು ಇದೇ ರೀತಿಯ ಬ್ಯಾಟಿಂಗ್‌ ಮುಂದುವರಿಸಿ ಟೂರ್ನಿಯಲ್ಲಿ ಅದ್ಭುತ ಅಂತ್ಯ ಕಣುವಂತೆ ಆಶಿಸುತ್ತಿದ್ದಾರೆ.

Story first published: Monday, June 17, 2019, 17:54 [IST]
Other articles published on Jun 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X