ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್: ಪಾಕಿಸ್ತಾನದ ವಿರುದ್ಧ ಭಾರತ ದೊಡ್ಡ ತಪ್ಪನ್ನು ಮಾಡಿತು: ಬ್ರಾಡ್ ಹಾಜ್

India vs Pakistan: India made big mistake by including Hardik Pandya in palying XI - Brad Hogg

ಭಾರತ ಹಾಗೂ ಪಾಕಿಸ್ತಾನದ ನಡುವಿನ ಟಿ20 ವಿಶ್ವಕಪ್‌ನ ಮೊದಲ ಪಂದ್ಯ ಭಾರತದ ಪಾಲಿಗೆ ನಿರಾಸೆಯುಂಟು ಮಾಡಿದೆ. ಪಾಕಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಪಡೆ 10 ವಿಕೆಟ್‌ಗಳ ಭಾರೀ ಅಂತರದಿಂದ ಸೋಲು ಕಂಡು ಆಘಾತ ಅನುಭವಿಸಿದೆ. ಈ ಸೋಲಿನ ಬಳಿಕ ಸೋಲಿಗೆ ಕಾರಣಗಳೇನು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ವಿಮರ್ಶೆಗಳು ನಡೆಯುತ್ತಿದೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಜ್ ಈ ಪಂದ್ಯದಲ್ಲಿ ಭಾರತ ಪಂದ್ಯದ ಆರಂಭಕ್ಕೂ ಮುನ್ನವೇ ದೊಡ್ಡದೊಂದು ತಪ್ಪೆಸಗಿತು ಎಂದಿದ್ದಾರೆ.

ಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶಭಾರತ vs ಪಾಕ್: ಕೆಎಲ್ ರಾಹುಲ್ ಔಟ್ ಅಲ್ಲ, ಅದು ನೋ ಬಾಲ್!; ನೆಟ್ಟಿಗರ ಆಕ್ರೋಶ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಎಲ್ಲಾ ವಿಭಾಗದಲ್ಲಿಯೂ ಪಾಕಿಸ್ತಾನ ತಂಡದ ವಿರುದ್ಧ ಹಿನ್ನಡೆ ಅನುಭವಿಸಿತು. ಮೊದಲಿಗೆ ಪಾಕಿಸ್ತಾನದ ಬೌಲಿಂಗ್ ದಾಳಿಯ ವಿರುದ್ಧ ಕಂಗೆಟ್ಟ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ನಂತರ ಬೌಲಿಂಗ್‌ನಲ್ಲಿಯೂ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಆ ಒಬ್ಬ ಆಟಗಾರನನ್ನು ಸೇರಿಸಿಕೊಂಡಿದ್ದು ಭಾರತದ ಪಾಲಿಗೆ ಅತ್ಯಂತ ದುಬಾರಿಯಾಯಿತು ಎಂದಿದ್ದಾರೆ ಬ್ರಾಡ್ ಹಾಜ್.

ಬೌಲಿಂಗ್ ಮಾಡುವಂತಿದ್ದರೆ ಮಾತ್ರವೇ ಆತ ಆಡುವ ಬಳಗದಲ್ಲಿರಲು ಅರ್ಹ

ಬೌಲಿಂಗ್ ಮಾಡುವಂತಿದ್ದರೆ ಮಾತ್ರವೇ ಆತ ಆಡುವ ಬಳಗದಲ್ಲಿರಲು ಅರ್ಹ

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಜ್ ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡುವಂತಿದ್ದರೆ ಮಾತ್ರವೇ ಆತ ಆಡುವ ಬಳಗದಲ್ಲಿ ಸೇರ್ಪಡೆಯಾಗಲು ಅರ್ಹವಾದ ಆಟಗಾರ. ಬೌಲಿಂಗ್ ಮಾಡಲು ಅಸಮರ್ಥನಾಗಿದ್ದರೂ ಆಡುವ ಬಳಗದಲ್ಲಿ ಬ್ಯಾಟರ್ ಆಗಿ ಸೇರಿಸಿಕೊಳ್ಳುವ ಮೂಲಕ ಭಾರತ ಪಂದ್ಯದ ಆರಂಭಕ್ಕೂ ಮುನ್ನವೇ ದೊಡ್ಡ ತಪ್ಪೆಸಗಿತು ಎಂದಿದ್ದಾರೆ ಬ್ರಾಡ್ ಹಾಜ್.

ನೀರಸ ಪ್ರದರ್ಶನ ನೀಡಿದ ಪಾಂಡ್ಯ

ನೀರಸ ಪ್ರದರ್ಶನ ನೀಡಿದ ಪಾಂಡ್ಯ

ಇನ್ನು ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಸ್ಪೆಶಲಿಸ್ಟ್ ಬ್ಯಾಟರ್ ಆಗಿ ಕಣಕ್ಕಿಳಿದು ವೈಫಲ್ಯ ಅನುಭವಿಸಿದರು. 8 ಎಸೆತ ಎದುರಿಸಿದ ಹಾರ್ದಿಕ್ ಪಾಂಡ್ಯ 11 ರನ್‌ಗಳಿಸಲಷ್ಟೇ ಶಕ್ತರಾದರು. ಬ್ಯಾಟಿಂಗ್ ವೇಳೆ ಚೆಂಡಿನ ಹೊಡೆ ತಿಂದ ಹಾರ್ದಿಕ್ ಪಾಂಡ್ಯ ನಂತರ ಫೀಲ್ಡಿಂಗ್‌ನಿಂದಲೂ ಹೊರಗುಳಿದಿದ್ದರು. ಹಾರ್ದಿಕ್ ಪಾಂಡ್ಯ ಸ್ಕ್ಯಾನಿಂಗ್‌ಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ನಂತರ ಖಚಿತಪಡಿಸಿದೆ.

ನನ್ನ ಪ್ರಕಾರ ಭಾರತ ಮಾಡಿದ್ದು ಅತಿ ದೊಡ್ಡ ತಪ್ಪು

ನನ್ನ ಪ್ರಕಾರ ಭಾರತ ಮಾಡಿದ್ದು ಅತಿ ದೊಡ್ಡ ತಪ್ಪು

"ನನ್ನ ಪ್ರಕಾರ ಹಾರ್ದಿಕ್ ಪಾಂಡ್ಯ ಅವರನ್ನು ಆಡುವ ಬಳಗದಲ್ಲಿ ಸೇರ್ಪಡೆಗೊಳಿಸುವ ಮೂಲಕ ಭಾರತ ಅತಿ ದೊಡ್ಡ ತಪ್ಪೆಸಗಿತು. ಇದಕ್ಕಾಗಿ ನನ್ನ ಬಳಿಯಿರುವ ಆಯ್ಕೆಯೆಂದರೆ ಶಾರ್ದೂಲ್ ಠಾಕೂರ್ ಅವರನ್ನು ಮೊಹಮ್ಮದ್ ಶಮಿ ಬದಲಿಗೆ ಹಾಗೂ ಹಾರ್ದಿಕ್ ಪಾಂಡ್ಯ ಬದಲಿಗೆ ಆರ್ ಅಶ್ವಿನ್ ಆಡುವ ಬಳಗಕ್ಕೆ ಸೇರ್ಒಡೆಗೊಳಿಸಬಹುದು. ಅಂಥಾ ಸಂದರ್ಭದಲ್ಲಿ ರವೀಂದ್ರ ಜಡೇಜಾ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರೆ ಶಾರ್ದೂಲ್ 7 ಹಾಗೂ ಆರ್ ಅಶ್ವಿನ್ 8ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಾರೆ. ಆತ ಆಡುವ ಬಳಗದಲ್ಲಿ ಸೇರಿಕೊಳ್ಳಬೇಕಾದರೆ ಬೌಲಿಂಗ್ ಮಾಡಲೇಬೇಕಿದೆ. ಆತನೋರ್ವ ಅದ್ಭುತ ಪ್ರತಿಭಾನ್ವಿತ ಆಟಗಾರ. ಆದರೆ ಆತ ಫ್ರಂಟ್‌ಲೈನ್ ಬ್ಯಾಟರ್ ಅಲ್ಲ" ಎಂದಿದ್ದಾರೆ ಬ್ರಾಡ್ ಹಾಜ್.

ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧ

ಮುಂದಿನ ಪಂದ್ಯ ನ್ಯೂಜಿಲೆಂಡ್ ವಿರುದ್ಧ

ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಾಡಲಿದೆ. ಈ ಪಂದ್ಯ ಮುಂದಿನ ಭಾನುವಾರ ನಡೆಯಲಿದ್ದು ಬಲಿಷ್ಠ ಕಿವೀಸ್ ಪಡೆಯ ಮುಂದೆ ಭಾರತ ಗೆಲ್ಲಬೇಕಿದೆ. ಈ ಮೂಲಕ ಭಾರತ ಕಮ್‌ಬ್ಯಾಕ್ ಮಾಡುವುದು ಅಗತ್ಯವಾಗಿದೆ.

Story first published: Monday, October 25, 2021, 15:46 [IST]
Other articles published on Oct 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X