ಭಾರತ vs ಪಾಕಿಸ್ತಾನ: ಟಿ20 ಸೆಣೆಸಾಟದಲ್ಲಿ ಹೆಚ್ಚು ಗೆದ್ದಿದ್ಯಾರು? ಅಂಕಿಅಂಶಗಳ ಕುತೂಹಲಕರ ಮಾಹಿತಿ

ಏಷ್ಯಾಕಪ್‌ಗೆ ದಿನಗಣನೆ ಆರಂಭವಾಗಿದ್ದು ಕ್ರಿಕೆಟ್ ಅಭಿಮಾನಿಗಳು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿಯ ಮೇಲೆ ಚಿತ್ತ ನೆಟ್ಟಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಈ ಎರಡು ಸಾಂಪ್ರದಾಯಿಯ ಎದುರಾಳಿಗಳು ಮುಖಾಮುಖಿಯಾದ ಬಳಿಕ ಮತ್ತೆ ಮುಖಾಮುಖಿಯಾಗಲು ಸಜ್ಜಾಗಿದೆ. ಜುಲೈ 28ರಂದು ದುಬೈನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಸುದೀರ್ಘ ಕಾಲದಿಂದ ದ್ವಿಪಕ್ಷೀಯ ಸರಣಿಗಳಲ್ಲಿ ಮುಖಾಮುಖಿಯಾಗದಿರುವ ಕಾರಣ ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರವೇ ಹಣಾಹಣಿ ನಡೆಸುತ್ತಿವೆ. ಹೀಗಾಗಿ ಈ ಪಂದ್ಯಗಳ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯೊಟ್ಟು ಕಾಯುತ್ತಿರುತ್ತಾರೆ. ಇನ್ನು ಕಳೆದ ವರ್ಷಾಂತ್ಯದಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಭಾರತ ಸೋಲು ಅನುಭವಿಸಿದ ಕಾರಣ ಈ ಬಾರಿಯ ಮುಖಾಮುಖಿ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

Asia Cup 2022: ಭಾರತದಿಂದ ಮೊಹಮ್ಮದ್ ಶಮಿ ಕೈಬಿಟ್ಟಿದ್ದನ್ನು ಬೆಂಬಲಿಸಿ ಕಾರಣ ಕೊಟ್ಟ ಪಾಕ್ ಕ್ರಿಕೆಟಿಗ

ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಟಿ20 ಮುಖಾಮುಖಿಯಲ್ಲಿ ಎರಡು ತಂಡಗಳ ಅಂಕಿಅಂಶಗಳು ಹೇಗಿದೆ? ಟಿ20 ಮುಖಾಮುಖಿಯಲ್ಲಿ ಯಾವ ತಂಡ ಹೆಚ್ಚು ಗೆಲುವು ಸಾಧಿಸಿದೆ? ಈ ಎರಡು ತಂಡಗಳ ಮುಖಾಮುಖಿಯ ಇತರ ಕೆಲ ಕುತೂಹಲಕಾರಿ ಅಂಕಿಅಂಶಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಭಾರತ vs ಪಾಕಿಸ್ತಾನ ಟಿ20I ಹೆಡ್ 2 ಹೆಡ್

ಭಾರತ vs ಪಾಕಿಸ್ತಾನ ಟಿ20I ಹೆಡ್ 2 ಹೆಡ್

ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈವರೆಗೆ ಒಟ್ಟು ಮುಖಾಮುಖಿಯಾಗಿದ್ದು ಕೇವಲ 9 ಬಾರಿ ಮಾತ್ರ. ಇದರಲ್ಲಿ ಭಾರತ ಸಂಪೂರ್ಣ ಮೇಲಯಗೈ ಸಾಧಿಸುವಲ್ಲಿ ಯಶಸ್ವಿಯಾಗಿದ್ದು 7 ಬಾರಿ ಗೆಲುವು ಸಾಧಿಸಿದೆ. ಇನ್ನು ಪಾಕಿಸ್ತಾನ ತಂಡ ಗೆದ್ದಿರುವುದು ಕೇವಲ ಎರಡು ಬಾರಿ ಮಾತ್ರ. ಇದರಲ್ಲಿ ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಗೆಲುವು ಕೂಡ ಸೇರಿದೆ.

ಭಾರತ vs ಪಾಕಿಸ್ತಾನ T20 ಬ್ಯಾಟಿಂಗ್ ಅಂಕಿಅಂಶಗಳು

ಭಾರತ vs ಪಾಕಿಸ್ತಾನ T20 ಬ್ಯಾಟಿಂಗ್ ಅಂಕಿಅಂಶಗಳು

ಹೈಯೆಸ್ಟ್ ಸ್ಕೋರ್, ಭಾರತ: 192/5
ಹೈಯೆಸ್ಟ್ ಸ್ಕೋರ್, ಪಾಕಿಸ್ತಾನ: 181/7
ಕನಿಷ್ಠ ಮೊತ್ತ, ಭಾರತ: 133/9
ಕನಿಷ್ಠ ಮೊತ್ತ: ಪಾಕಿಸ್ತಾನ: 83 ಆಲೌಟ್
ಭಾರತದ ಪರ ಹೆಚ್ಚು ರನ್ ಗಳಿಸಿದ ಆಟಗಾರ: ವಿರಾಟ್ ಕೊಹ್ಲಿ: 311
ಪಾಕಿಸ್ತಾನದ ಪರ ಹೆಚ್ಚು ರನ್‌ಗಳಿಸಿದ ಆಟಗಾರ: ಶೋಯೆಬ್ ಮಲಿಕ್: 164
ಭಾರತದ ಪರ ಹೈಯೆಸ್ಟ್ ಸ್ಕೋರ್: ವಿರಾಟ್ ಕೊಹ್ಲಿ: 78 ರನ್
ಪಾಕಿಸ್ತಾನದ ಪರ ಹೈಯೆಸ್ಟ್ ಸ್ಕೋರ್: ಮೊಹಮ್ಮದ್ ರಿಜ್ವಾನ್: 79 ರನ್
ಭಾರತದ ಹೆಚ್ಚು ಸಿಕ್ಸರ್: ಯುವರಾಜ್ ಸಿಂಗ್: 9
ಪಾಕಿಸ್ತಾನದ ಪರ ಹೆಚ್ಚು ಸಿಕ್ಸರ್: ಮಿಸ್ಬಾ-ಉಲ್-ಹಕ್: 5

ಭಾರತ vs ಪಾಕಿಸ್ತಾನ T20 ಬೌಲಿಂಗ್ ಅಂಕಿಅಂಶಗಳು

ಭಾರತ vs ಪಾಕಿಸ್ತಾನ T20 ಬೌಲಿಂಗ್ ಅಂಕಿಅಂಶಗಳು

ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌: ಇರ್ಫಾನ್ ಪಠಾಣ್: 6
ಪಾಕಿಸ್ತಾನದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌: ಉಮರ್ ಗುಲ್: 11
ಭಾರತದ ಪರ ಅತ್ಯುತ್ತಮ ಬೌಲಿಂಗ್ ಸಾಧನೆ: ಹಾರ್ದಿಕ್ ಪಾಂಡ್ಯ: 3/8
ಪಾಕಿಸ್ತಾನದ ಪರ ಅತ್ಯುತ್ತಮ ಬೌಲಿಂಗ್ ಸಾಧನೆ: ಮೊಹಮ್ಮದ್ ಆಸಿಫ್: 4/18

Asia cupಗೆ Rahul ಆಯ್ಕೆಯಾಗಿದ್ದರೂ ಆಡುವುದು ಅನುಮಾನವೇಕೆ | Oneindia Kannada
ಭಾರತ vs ಪಾಕಿಸ್ತಾನ ಒಟ್ಟಾರೆ ಟಿ20 ಅಂಕಿಅಂಶಗಳು

ಭಾರತ vs ಪಾಕಿಸ್ತಾನ ಒಟ್ಟಾರೆ ಟಿ20 ಅಂಕಿಅಂಶಗಳು

ಭಾರತದ ಪರ ಅತಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್: ಎಂಎಸ್ ಧೋನಿ: 11
ಪಾಕಿಸ್ತಾನದ ಪರ ಅತಿ ಹೆಚ್ಚು ಬಲಿ ಪಡೆದ ವಿಕೆಟ್ ಕೀಪರ್: ಕಮ್ರಾನ್ ಅಕ್ಮಲ್: 11
ಭಾರತದ ಪರ ಅತಿ ಹೆಚ್ಚು ಕ್ಯಾಚ್ ಫೀಲ್ಡರ್: ಸುರೇಶ್ ರೈನಾ: 7
ಪಾಕಿಸ್ತಾನದ ಪರ ಅತಿ ಹೆಚ್ಚು ಕ್ಯಾಚ್ ಫೀಲ್ಡರ್: ಶೋಯೆಬ್ ಮಲಿಕ್: 4
ಭಾರತದ ಪರ ಹೈಯೆಸ್ಟ್ ಜೊತೆಯಾಟ: ಎಂಎಸ್ ಧೋನಿ ಹಾಗೂ ಯುವರಾಜ್ ಸಿಂಗ್: 97 ರನ್
ಪಾಕಿಸ್ತಾನದ ಪರ ಹೈಯೆಸ್ಟ್ ಜೊತೆಯಾಟ: ಮೊಹಮ್ಮದ್ ರಿಜ್ವಾನ್ ಹಾಗೂ ಬಾಬರ್ ಅಜಂ: 152

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Wednesday, August 10, 2022, 17:14 [IST]
Other articles published on Aug 10, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X