ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಪಾಕ್ ಅವಮಾನಕರ ಸೋಲಿಗೆ ಕಾರಣ ಹೇಳಿದ ತೆಂಡೂಲ್ಕರ್!

ICC World Cup 2019: ಈ ಟೀಮ್ ನ ಹೀನಾಯ ಸೋಲಿಗೆ ಕಾರಣ ತಿಳಿಸಿದ ಸಚಿನ್ ತೆಂಡೂಲ್ಕರ್
India vs Pakistan: Tendulkar identifies big reason behind Pakistan’s humiliating defeat

ಲಂಡನ್, ಜೂನ್ 17: ಭಾನುವಾರ (ಜೂನ್ 16) ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಣ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಸತತ 7ನೇ ಬಾರಿಗೆ ಪಾಕ್‌ಗೆ ಸೋಲಿನ ಮುಖಭಂಗ ಅನುಭವಿಸುವಂತೆ ಮಾಡಿತ್ತು. ಪಾಕ್‌ನ ಈ ಅವಮಾನಕರ ಹಿನ್ನಡೆಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಕಾರಣ ಹೇಳಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಾನ್ಚೆಸ್ಟರ್‌ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆದ ಪಾಕ್-ಭಾರತ ಮುಖಾಮುಖಿಯಲ್ಲಿ ಟಾಸ್ ಗೆದ್ದಿದ್ದ ಪಾಕ್ ನಾಯಕ ಸರ್ಫರಾಜ್ ಅಹ್ಮದ್ ಫೀಲ್ಡಿಂಗ್ ಆಯ್ದುಕೊಂಡಿದ್ದರು. ಅಲ್ಲದೇ ಪಂದ್ಯದ ವೇಳೆ ಸರ್ಫರಾಜ್ ಗೊಂದಲದಲ್ಲಿದ್ದಂತೆ ಕಾಣಿಸುತ್ತಿತ್ತು. ತಂಡದ ಸೋಲಿಗೆ ಇದೇ ಕಾರಣ ಎಂದು ತೆಂಡೂಲ್ಕರ್ ತಿಳಿಸಿದ್ದಾರೆ.

ಪಾಕ್‌ ವಿರುದ್ಧ 1 ರನ್‌ಗಳಿಸಿದರೂ ಹೊಸ ದಾಖಲೆ ಬರೆದ ಧೋನಿ!ಪಾಕ್‌ ವಿರುದ್ಧ 1 ರನ್‌ಗಳಿಸಿದರೂ ಹೊಸ ದಾಖಲೆ ಬರೆದ ಧೋನಿ!

ಭಾರತ ತಂಡದ ಚತುರ ಆಟ, ಪೂರ್ವ ಯೋಜನೆಗಳಿಲ್ಲದೆ ಸರ್ಫರಾಜ್ ಬಳಗ ವಿಶ್ವಕಪ್ 7ನೇ ಮುಖಾಮುಖಿಯಲ್ಲೂ ಭಾರತಕ್ಕೆ ತಲೆಬಾಗಿದೆ ಎಂದು ಸಚಿನ್ ಹೇಳಿಕೊಂಡಿದ್ದಾರೆ.

ಅಹ್ಮದ್ ಗೊಂದಲದಲ್ಲಿದ್ದರು

ಅಹ್ಮದ್ ಗೊಂದಲದಲ್ಲಿದ್ದರು

ಪಾಕ್ ಸೋಲನ್ನು ವಿಶ್ಲೇಷಿಸಿ ಮಾತನಾಡಿದ ಸಚಿನ್, 'ಪಾಕ್ ನಾಯಕ, ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಗೊಂದಲದಲ್ಲಿದ್ದರು ಎಂದು ನನಗನ್ನಿಸುತ್ತಿದೆ. ಯಾಕೆಂದರೆ ವಹಾಬ್ ರಿಯಾಝ್ ಬೌಲಿಂಗ್‌ಗೆ ಬಂದಾಗ ಅವರು ಶಾರ್ಟ್ ಮಿಡ್ ವಿಕೆಟ್‌ನತ್ತ ಲಕ್ಷ್ಯ ಕೊಟ್ಟರು. ಶದಾಬ್ ಖಾನ್ ಬೌಲಿಂಗ್‌ಗೆ ಬಂದಾಗ ಸ್ಲಿಪ್‌ನತ್ತ ಗಮನ ಹರಿಸಿದರು' ಎಂದಿದ್ದಾರೆ.

ಇದು ಸರಿಯಾದ ದಾರಿಯಲ್ಲ

ಇದು ಸರಿಯಾದ ದಾರಿಯಲ್ಲ

'ಇಂಥ ಗೊಂದಲಗಳಿದ್ದಾಗ ಲೆಗ್ ಸ್ಪಿನ್ನರ್‌ಗಳ ಎಸೆತವನ್ನು ಸಮರ್ಥವಾಗಿ ಬಳಸಿಕೊಳ್ಳೋದು ಸವಾಲಾಗುತ್ತದೆ. ಸರಿಯಾದ ಸ್ಥಾನದಲ್ಲಿ, ಎಸೆತಕ್ಕೆ ಬೇಕಾದಷ್ಟು ದೂರದಲ್ಲಿ ಫೀಲ್ಡಿಂಗ್ ನಿಲ್ಲದಿದ್ದರೆ ಚೆಂಡಿನ ಮೇಲೆ ಹಿಡಿತ ಸಾಧಿಸೋದು ಕಷ್ಟವಾಗುತ್ತದೆ. ದೊಡ್ಡ ಪಂದ್ಯವೊಂದನ್ನು ಗೆದ್ದುಕೊಳ್ಳಲು ಇದು ಹಿನ್ನಡೆಯಾಗುತ್ತದೆ' ಎಂದು ತೆಂಡೂಲ್ಕರ್ ವಿವರಿಸಿದರು.

ಕಲ್ಪನೆಯ ಕೊರತೆಯಿದೆ

ಕಲ್ಪನೆಯ ಕೊರತೆಯಿದೆ

'ಪಾಕ್ ಆಟಗಾರರಿಗೆ ಆಟದ ಬಗೆಗಿನ ಕಲ್ಪನೆಯ ಕೊರತೆಯಿದೆ. ಅವರಲ್ಲಿ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿಯೂ ಕೊರತೆಯಿದೆ. ಚೆಂಡಿನ ಚಲನೆಯತ್ತ ನಾವು ಗಮನ ಹರಿಸದಿದ್ದರೆ ವಿಕೆಟ್ ಗಳಿಸೋದು ಸಾಧ್ಯವಿಲ್ಲ' ಎಂದು ಸಚಿನ್, ಪಾಕಿಸ್ತಾನ ತಂಡದ ಸೋಲಿನ ಗುಟ್ಟು ಬಿಚ್ಚಿಟ್ಟರು.

ಸತತ 7ನೇ ಮುಖಭಂಗ

ಸತತ 7ನೇ ಮುಖಭಂಗ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತಕ್ಕೆ ಕೆಎಲ್ ರಾಹುಲ್ (57 ರನ್) ಮತ್ತು ರೋಹಿತ್ ಶರ್ಮಾ (140 ರನ್) ಅವರ ಭರ್ಜರಿ ಜೊತೆಯಾಟದ ಆರಂಭ ಲಭಿಸಿತು. ಭಾರತ, ಪಾಕ್‌ಗೆ 337 ರನ್ ಗುರಿ ನೀಡಿತ್ತು. ಮಳೆಯ ಕಾರಣ ಡಿಎಲ್‌ಎಸ್ ನಿಯಮದ ಆಧಾರದಲ್ಲಿ 40 ಓವರ್‌ಗೆ ಪಾಕ್‌ಗೆ 302 ರನ್ ಗುರಿ ನೀಡಲಾಗಿತ್ತು. ಆದರೆ ಪಾಕ್ 212 ರನ್ ಬಾರಿಸಿ 89 ರನ್‌ನಿಂದ ಶರಣಾಯಿತು. ಇದು ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಾಕ್ ಅನುಭವಿಸುತ್ತಿರುವ ಸತತ 7ನೇ ಮುಖಭಂಗ.

Story first published: Monday, June 17, 2019, 12:40 [IST]
Other articles published on Jun 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X