ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೋಯೆಬ್ ಮಲ್ಲಿಕ್ ರನ್ನು ಎಂಎಸ್ ಧೋನಿಗೆ ಹೋಲಿಸಿದ ವಾಸಿಮ್ ಅಕ್ರಮ್

India vs Pakistan: Wasim Akram compares Shoaib Malik to MS Dhoni

ದುಬೈ, ಸೆಪ್ಟೆಂಬರ್ 23: ಏಷ್ಯಾ ಕಪ್ 2018ರ ಸೂಪರ್ ಫೋರ್ ಮೂರನೇ ಪಂದ್ಯದಲ್ಲಿ ಮತ್ತೆ ಇಂದು (ಸೆಪ್ಟೆಂಬರ್ 23) ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರುಬದುರಾಗಿವೆ. ಈ ಹೈ ವೋಲ್ಟೇಜ್ ಪಂದ್ಯ ಎದುರಿರುವಾಗಲೇ ಪಾಕಿಸ್ತಾನ ಕ್ರಿಕೆಟ್ ದಿಗ್ಗಜ ವಾಸಿಮ್ ಅಕ್ರಮ್, ಶೋಯೆಬ್ ಮಲ್ಲಿಕ್ ಅವರನ್ನು ಎಂಎಸ್ ಧೋನಿಗೆ ಹೋಲಿಸಿದ್ದಾರೆ.

ಜಿಯೋಟೀವಿಯಲ್ಲಿ 5 ವರ್ಷಗಳ ಕಾಲ ಕ್ರಿಕೆಟ್ ವೀಕ್ಷಿಸಿ, ಆನಂದಿಸಿಜಿಯೋಟೀವಿಯಲ್ಲಿ 5 ವರ್ಷಗಳ ಕಾಲ ಕ್ರಿಕೆಟ್ ವೀಕ್ಷಿಸಿ, ಆನಂದಿಸಿ

ಈ ಏಷ್ಯಾ ಕಪ್ ಪಂದ್ಯಾಟದಲ್ಲಿ ಎರಡೂ ತಂಡಗಳ ಮುಖಾಮುಖಿ ಇದು ಎರಡನೇ ಬಾರಿಯದ್ದು. ಮೊದಲ ಮುಖಾಮುಖಿಯಲ್ಲಿ ಭಾರತ 8 ವಿಕೆಟ್ ಭರ್ಜರಿ ಜಯ ಗಳಿಸಿತ್ತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು ಸುಲಭ ಗೆಲುವು ಸಾಧಿಸಲು ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಅವರ ಅರ್ಧ ಶತಕ (52 ರನ್) ಮತ್ತು ಶಿಖರ್ ಧವನ್ 46 ರನ್ ನೆರವಾಗಿತ್ತು.

ಭಾರತದೆದುರು ಮೊದಲ ಸೆಣಸಾಟದಲ್ಲಿ ಹೀನಾಯ ಸೋಲು ಕಂಡಿದ್ದ ಪಾಕಿಸ್ತಾನ ಮುಂದೆ ಅಫ್ಘಾನಿಸ್ತಾನ ತಂಡದೆದುರಿನ ಸೂಪರ್ ಫೋರ್ ದ್ವಿತೀಯ ಪಂದ್ಯದಲ್ಲಿ 3 ವಿಕೆಟ್ ರೋಚಕ ಜಯ ಸಾಧಿಸಿತ್ತು. ಈ ವೇಳೆ ಶೋಯೆಬ್ ಮಲ್ಲಿಕ್, ಪಾಕ್ ಗೆಲುವನ್ನು ಬರೆದಿದ್ದರು. ಅಮೂಲ್ಯ ವಿಕೆಟ್ ಗಳನ್ನು ಕಳೆದು ಅಂತಿಮ ಓವರ್ ನಲ್ಲಿ ಸೋಲಿನ ಅಂಚಿನಲ್ಲಿದ್ದ ಪಾಕಿಸ್ತಾನವನ್ನು ಮಲ್ಲಿಕ್ ಸಿಕ್ಸ್ ಚಚ್ಚಿ ಗೆಲ್ಲಿಸಿದ್ದರು.

ಏಕದಿನದಲ್ಲಿ 500 ವಿಕೆಟ್ ಗಳ ಸರದಾರ ಅಕ್ರಮ್ ಈ ಬಗ್ಗೆ ಮಾತನಾಡಿ, 'ಅನುಭವದ ಮೌಲ್ಯಕ್ಕೆ ಇನ್ನೊಂದನ್ನು ಹೋಲಿಸಲಾಗದು. ಶೋಯೆಬ್ ಮಲ್ಲಿಕ್ ಇದನ್ನು ಅಫ್ಘಾನಿಸ್ತಾನ ತಂಡದೆದುರು ನಿರೂಪಿಸಿ ತೋರಿಸಿದ್ದಾರೆ. ಶೋಯೆಬ್ ಅವರು ರೋಚಕ ರೀತಿಯಲ್ಲಿ ಪಂದ್ಯ ಮುಗಿಸಿದ್ದು ನೋಡುವಾಗ ನನಗೆ ಭಾರತದ ಎಂಎಸ್ ಧೋನಿ ನೆನಪಾದರು. ಶ್ರೇಷ್ಠ ಬ್ಯಾಟ್ಸ್ಮನ್ ಧೋನಿ ಕೂಡ ಹೀಗೆ ಪಂದ್ಯ ಗೆಲ್ಲಿಸಿಕೊಟ್ಟಿದ್ದಿದೆ' ಎಂದರು.

Story first published: Sunday, September 23, 2018, 16:07 [IST]
Other articles published on Sep 23, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X