ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಕಿ-ಅಂಶ: ಭಾರತ-ಪಾಕಿಸ್ತಾನ, ಯಾರು ಹೆಚ್ಚು ಪಂದ್ಯ ಗೆದ್ದಿದ್ದಾರೆ?

India vs Pakistan who win the most matches

ದುಬೈ, ಸೆಪ್ಟೆಂಬರ್ 19: ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವೆಂದರೆ ವಿಶ್ವ ಕ್ರಿಕೆಟ್ ಪ್ರೇಮಿಗಳೆಲ್ಲಾ ತುದಿ ಬೆರಳ ಮೇಲೆ ನಿಂತು ನೋಡುತ್ತಾರೆ. ಇತ್ತಂಡಗಳ ನಡುವೆ ಕ್ರಿಕೆಟ್‌ ಮೈದಾನದಲ್ಲಿ ಇರುವ ವೈರತ್ವ ಅಂತದ್ದು. ಆಷಸ್ ಸರಣಿ ಕೂಡ ಇದಕ್ಕೆ ಸಮವಾಗಲಾರದು.

ಇಂತಹದ್ದೇ ಒಂದು ಜಿದ್ದಾಜಿದ್ದಿನ ಪಂದ್ಯ ಇಂದು ದುಬೈನ ಕ್ರಿಕೆಟ್‌ ಮೈದಾನದಲ್ಲಿ ನಡೆಯಲಿದೆ. ಏಷ್ಯಾಕಪ್‌ 2018 ರ ಎ ಗ್ರೂಫ್‌ನ ಎರಡನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಇಂದು ಮುಖಾ-ಮುಖಿ ಆಗುತ್ತಿದ್ದಾರೆ.

ಏಷ್ಯಾ ಕಪ್ 2018: ಭಾರತ-ಪಾಕಿಸ್ತಾನದ ಸರ್ವಕಾಲಿಕ 11 ಆಟಗಾರರಿವರು ಏಷ್ಯಾ ಕಪ್ 2018: ಭಾರತ-ಪಾಕಿಸ್ತಾನದ ಸರ್ವಕಾಲಿಕ 11 ಆಟಗಾರರಿವರು

ಇಂದಿನ ಮುಖಾಮುಖಿಗೂ ಮುನ್ನಾ ಇತ್ತಂಡಗಳು ಎಷ್ಟು ಬಾರಿ ಮುಖಾ-ಮುಖಿ ಆಗಿವೆ ಯಾವ ತಂಡದ ಸಾಧನೆ ಎಷ್ಟು. ಹೆಚ್ಚು ಗೆದ್ದಿರುವುದು ಯಾವ ತಂಡ ಎಂಬೆಲ್ಲಾ ಲೆಕ್ಕ ಹಾಕಿದರೆ ಯಾವ ತಂಡದ ಬಲಾಬಲ ಎಷ್ಟು ಎಂಬುದು ತಿಳಿಯುತ್ತದೆ. ಇಲ್ಲಿದೆ ಅಂತಹದ ಒಂದು ಅಂಕಿ-ಅಂಶ.

ಪಾಕಿಸ್ತಾನವೇ ಹೆಚ್ಚು ಪಂದ್ಯ ಗೆದ್ದಿದೆ

ಪಾಕಿಸ್ತಾನವೇ ಹೆಚ್ಚು ಪಂದ್ಯ ಗೆದ್ದಿದೆ

ಹೌದು, ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರಾದಾಗ ಅತಿ ಹೆಚ್ಚು ಬಾರಿ ಗೆದ್ದಿರುವುದು ಪಾಕಿಸ್ತಾನ ತಂಡವೇ. ಪಾಕಿಸ್ತಾನ ಭಾರತದ ವಿರುದ್ಧ 73 ಏಕದಿನ ಪಂದ್ಯಗಳನ್ನು ಗೆದ್ದಿದ್ದರೆ ಭಾರತವು 52 ಏಕದಿನ ಪಂದ್ಯಗಳನ್ನಷ್ಟೆ ಗೆದ್ದಿದೆ. ನಾಲ್ಕು ಪಂದ್ಯಗಳು ಟೈ ಅಥವಾ ಫಲಿತಾಂಶ ಬಂದಿಲ್ಲ. ಎರಡೂ ತಂಡಗಳು ಪರಸ್ಪರ 129 ಏಕದಿನ ಪಂದ್ಯಗಳನ್ನು ಆಡಿವೆ.

ಏಷ್ಯಾಕಪ್‌ನಲ್ಲಿ ಭಾರತ ಮೇಲುಗೈ

ಏಷ್ಯಾಕಪ್‌ನಲ್ಲಿ ಭಾರತ ಮೇಲುಗೈ

1984 ರಲ್ಲಿ ಪ್ರಾರಂಭವಾದ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಅಲ್ಪ ಮೇಲುಗೈ ಸಾಧಿಸಿದೆ. ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ 6 ಬಾರಿ ಗೆದ್ದಿದ್ದರೆ ಪಾಕಿಸ್ತಾನ 4 ಪಂದ್ಯಗಳನ್ನು ಗೆದ್ದಿದೆ. ಇಂದು ಆಡುತ್ತಿರುವ ಪಂದ್ಯ ಗೆದ್ದ ತಂಡದ ಖಾತೆಗೆ ಮತ್ತೊಂದು ಗೆಲುವು ಸೇರ್ಪಡೆ ಆಗಲಿದೆ.

ಏಷ್ಯಾಕಪ್: ಭಾರತ-ಪಾಕಿಸ್ತಾನ ಮುಖಾಮುಖಿಯ ಕುತೂಹಲಕಾರಿ ಅಂಶಗಳಿವು!

ಯುಎಇಯಲ್ಲಿ ಪಾಕಿಸ್ತಾನವೇ ಸ್ಟ್ರಾಂಗ್

ಯುಎಇಯಲ್ಲಿ ಪಾಕಿಸ್ತಾನವೇ ಸ್ಟ್ರಾಂಗ್

ಯುಎಇಯಲ್ಲಿ ಪಾಕಿಸ್ತಾನ ತಂಡ ಹೆಚ್ಚು ಶಕ್ತಿಶಾಲಿ. ಯುಎಇ ಯಲ್ಲಿ ಆಡಿದ ಪಂದ್ಯಗಳಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಬರೋಬ್ಬರಿ 19 ಪಂದ್ಯಗಳನ್ನು ಗೆದ್ದಿದ್ದರೆ ಭಾರತ ಗೆದ್ದಿರುವುದು ಕೇವಲ 5 ಪಂದ್ಯಗಳನ್ನಷ್ಟೆ. ಯುಎಇಯು ಭಾರತಕ್ಕೆ ಅದೃಷ್ಟಶಾಲಿಯೇನೂ ಅಲ್ಲ.

ಕಳೆದ 10 ವರ್ಷದಲ್ಲಿ ಭಾರತವೇ ಹೆಚ್ಚು ಗೆದ್ದಿದೆ

ಕಳೆದ 10 ವರ್ಷದಲ್ಲಿ ಭಾರತವೇ ಹೆಚ್ಚು ಗೆದ್ದಿದೆ

ಭಾರತ ಪಾಕಿಸ್ತಾನವು ಕಳೆದ 10 ವರ್ಷದಲ್ಲಿ ಆಡಿರುವ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯ ಗೆದ್ದಿರುವುದು ಭಾರತವೇ. ಕಳೆದ. ಕಳೆದ 10 ವರ್ಷದಲ್ಲಿ ಭಾರತ 7 ಪಂದ್ಯಗಳಲ್ಲಿ ಗೆದ್ದು ಬೀಗಿದ್ದರೆ. ಪಾಕಿಸ್ತಾನ ಕೇವಲ 4 ಪಂದ್ಯಗಳನ್ನು ಮಾತ್ರವೇ ಭಾರತದ ವಿರುದ್ಧ ಗೆದ್ದಿದೆ.

ಭಾರತ vs ಪಾಕಿಸ್ತಾನ: ಹೈವೋಲ್ಟೇಜ್ ಪಂದ್ಯದಲ್ಲಿ ಯಾರಿಗೆ ಮೇಲುಗೈ?

ವಿಶ್ವಕಪ್‌ನಲ್ಲಿ ಭಾರತವೇ ಚಾಂಪಿಯನ್‌

ವಿಶ್ವಕಪ್‌ನಲ್ಲಿ ಭಾರತವೇ ಚಾಂಪಿಯನ್‌

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನವು ಈವರೆಗೆ ಭಾರತವನ್ನು ಸೋಲಿಸಲು ಸಾಧ್ಯವೇ ಆಗಿಲ್ಲ. ಈ ವರೆಗೆ ಭಾರತ-ಪಾಕಿಸ್ತಾನ ತಂಡಗಳು ಆರು ಬಾರಿ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಎದುರಾಗಿವೆ. ಅಷ್ಟೂ ಬಾರಿಯೂ ಭಾರತವೇ ಗೆದ್ದಿದೆ. ಪಾಕಿಸ್ತಾನವು 1992ರಲ್ಲಿ ವಿಶ್ವಕಪ್ ಗೆದ್ದು ಬೀಗಿತ್ತು. ಆದರೆ ಆ ಟೂರ್ನಿಯಲ್ಲಿ ಸಹ ಭಾರತ ಪಾಕಿಸ್ತಾನವನ್ನು ಸೋಲಿಸಿತ್ತು.

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನದ ಮೇಲುಗೈ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನದ ಮೇಲುಗೈ

ವಿಶ್ವಕಪ್‌ನಲ್ಲಿ ಭಾರತ ಮೇಲುಗೈ ಸಾಧಿಸಿದ್ದರೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಪಾಕಿಸ್ತಾನ ಅಲ್ಪ ಮೇಲುಗೈ ಸಾಧಿಸಿದೆ. ಪರಸ್ಪರ 5 ಬಾರಿ ಎರಡೂ ತಂಡಗಳು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಎದುರಾಗಿವೆ. ಅದರಲ್ಲಿ ಪಾಕಿಸ್ತಾನ 5 ಬಾರಿ ಗೆದ್ದಿದ್ದರೆ ಭಾರತ ಎರಡು ಬಾರಿ ಗೆದ್ದಿದೆ.

ಹೆಚ್ಚು ಬಾರಿ ಏಷ್ಯಾ ಕಪ್ ಟೂರ್ನಿ ಗೆದ್ದಿರುವುದು ಭಾರತ

ಹೆಚ್ಚು ಬಾರಿ ಏಷ್ಯಾ ಕಪ್ ಟೂರ್ನಿ ಗೆದ್ದಿರುವುದು ಭಾರತ

ಏಷ್ಯಾಕಪ್ ಪ್ರಾರಂಭವಾದಾಗಿನಿಂದಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಏಷ್ಯಾಕಪ್‌ ಟ್ರೋಫಿಗಾಗಿ ಬಿರುಸಿನ ಹಣಾಹಣಿ ನಡೆಯುತ್ತಲೇ ಬರುತ್ತಿದೆ. ಆದರೆ ಅತಿ ಹೆಚ್ಚು ಭಾರಿ ಚಾಂಪಿಯನ್ ಆಗಿ ಹೊರಹೊಮ್ಮಿರುವುದು ಭಾರತ ತಂಡ. ಭಾರತವು ಐದು ಬಾರಿ ಏಷ್ಯಾಕಪ್‌ ಟ್ರೋಫಿಯನ್ನು ಗೆದ್ದಿದ್ದರೆ ಪಾಕಿಸ್ತಾನವು ಎರಡು ಬಾರಿ ಏಷ್ಯಾಕಪ್‌ ಗೆದ್ದಿದೆ. ಭಾರತವು 1986 ರ ಏಷ್ಯಾಕಪ್‌ನಲ್ಲಿ ಆಡಿರಲಿಲ್ಲ. ಪಾಕಿಸ್ತಾನವು 1990ರ ಏಷ್ಯಾಕಪ್‌ನಲ್ಲಿ ಆಡಿರಲಿಲ್ಲ.

Story first published: Wednesday, September 19, 2018, 12:08 [IST]
Other articles published on Sep 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X