ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಮ್ಮ ಜೊತೆ ಕ್ರಿಕೆಟ್ ಆಡಿ ಅಂತ ನಾವು ಭಾರತವನ್ನು ಬೇಡಲ್ಲ: ಪಾಕ್

ICC World Cup 2019 : ಏನೇ ಆದ್ರು ಇವರ ಅಹಂಕಾರ ಮಾತ್ರ ಕಮ್ಮಿ ಆಗಲ್ಲ..? | Oneindia Kannada
India vs Pakistan: Will not beg India to play cricket with us: PCB chief

ಇಸ್ಲಮಾಬಾದ್, ಜೂನ್ 14: ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಡಲು ಇನ್ನೆರಡೇ ದಿನಗಳು (ಜೂನ್ 16ರಂದು ಪಂದ್ಯ) ಬಾಕಿ ಉಳಿದಿವೆ. ಈ ನಡುವೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ (ಪಿಸಿಬಿ) ಮುಖ್ಯಸ್ಥ ಎಹ್ಸಾನ್ ಮನಿ ಅವರು ದ್ವಿಪಕ್ಷೀಯ ಸರಣಿಯಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳಿ ಎಂದು ನಾವು ಭಾರತವನ್ನು ಬೇಡಲ್ಲ ಎಂದಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

'ನಾವು ಭಾರತ ಅಥವಾ ಯಾವುದೇ ರಾಷ್ಟ್ರಗಳ ಜೊತೆ ನಮ್ಮೊಂದಿಗೆ ಕ್ರಿಕೆಟ್ ಆಡುವಂತೆ ಬೇಡಲಾರೆವು. ಆದರೆ ಭಾರತ-ಪಾಕ್ ದ್ವಿಪಕ್ಷೀಯ ಸರಣಿ ಯೋಗ್ಯ ಮತ್ತು ಘನತೆ ರೀತಿಯಲ್ಲಿ ನಡೆಯೋದನ್ನು ನಾವು ಬಯಸಿದ್ದೇವೆ' ಎಂದು ಎಹ್ಸಾನ್ ಮನಿ ಗುರುವಾರ (ಜೂನ್ 13) ಹೇಳಿದ್ದಾರೆ.

ಪಾಕಿಸ್ತಾನ vs ಭಾರತ: ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿಪಾಕಿಸ್ತಾನ vs ಭಾರತ: ಹೈ ವೋಲ್ಟೇಜ್ ಪಂದ್ಯದ ಬಗ್ಗೆ ಮಾತನಾಡಿದ ಕೊಹ್ಲಿ

2013ರಿಂದಲೂ ಅಂದರೆ ಸುಮಾರು 6 ವರ್ಷಗಳಿಂದಲೂ ಪುರುಷರ ವಿಭಾಗದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಯಾವುದೇ ದ್ವಿಪಕ್ಷೀಯ ಸರಣಿಗಳಲ್ಲಿ ಪಾಲ್ಗೊಂಡಿಲ್ಲ. ಆದರೆ ಬಹುಪಕ್ಷೀಯ ಸರಣಿಗಳಲ್ಲಿ ಎರಡೂ ತಂಡಗಳು ಪಂದ್ಯಗಳನ್ನಾಡುತ್ತಿವೆಯಷ್ಟೆ.

ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?ಧೋನಿ-ಯುವಿ ನಡುವಣ ಗೆಳೆತನ ವೈರತ್ವಕ್ಕೆ ತಿರುಗಿದೆಯೇ?

ಬೇಡುವುದರ ಬದಲು ಎರಡೂ ದೇಶಗಳು ಸೌಹಾರ್ದ ನೆಲೆಯಲ್ಲಿ ಪಂದ್ಯಗಳನ್ನು ನಡೆಸಲು ಅವಕಾಶ ಮಾಡಿಕೊಡಬೇಕು ಎಂಬರ್ಥದಲ್ಲಿ ಮಾತನಾಡಿದ ಮನಿ, ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ನವೆಂಬರ್‌ನಲ್ಲಿ ಭಾರತದಲ್ಲಿ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್ ಪಂದ್ಯಗಳನ್ನಾಡಲಿದೆ ಎಂದೂ ಖಾತರಿಪಡಿಸಿದ್ದಾರೆ.

Story first published: Friday, June 14, 2019, 13:02 [IST]
Other articles published on Jun 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X