ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ : ಮೊದಲ ಏಕದಿನ ಪಂದ್ಯದ ಸಂಪೂರ್ಣ ಮಾಹಿತಿ

India vs South Africa, 1st Odi At Dharmashala Full Details

ಧರ್ಮಶಾಲಾ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯ ನಾಳೆ ನಡೆಯಲಿದೆ. ಈ ಸರಣಿಗಾಗಿ ಎರಡೂ ತಂಡಗಳು ಸಿದ್ಧವಾಗಿದ್ದು ಮೊದಲ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಮೇಲುಗೈ ಸಾಧಿಸುವ ಹಂಬಲದಲ್ಲಿದೆ. ಹೀಗಾಗಿ ನಾಳಿನ ಪಂದ್ಯದಲ್ಲಿ ಯಾರೆಲ್ಲಾ ಕಣಕ್ಕಿಳಿಯಬಹುದು ಎಂಬುದು ಕುತೂಹಲ ಮೂಡಿಸಿದೆ.

ಮೊದಲನೇ ಪಂದ್ಯದ ಆತಿಥ್ಯವನ್ನು ಧರ್ಮಶಾಲಾ ಕ್ರೀಡಾಂಗಣ ವಹಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಿಂದ ಗೆದ್ದು ಬೀಗಿರುವ ದಕ್ಷಿಣ ಆಫ್ರಿಕಾ ತಂಡ ಅದೇ ಹುಮ್ಮಸ್ಸಿನಲ್ಲಿ ಭಾರತಕ್ಕೆ ಬಂದಿಳಿದಿದೆ. ಮತ್ತೊಂದೆಡೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಕಳೆದುಕೊಂಡಿರುವ ಭಾರತ ತವರಿನಲ್ಲಿ ಎದುರಾಳಿಗಳ ವಿರುದ್ಧ ಭರ್ಜರಿ ಪ್ರದರ್ಶನ ನೀಡಲು ಕಾಯುತ್ತಿದೆ.

1
46133

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು ಅದಕ್ಕೆ ಪೂರಕವಾದ ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಟೀಮ್ ನ್ಯೂಸ್- ಭಾರತ

ಟೀಮ್ ನ್ಯೂಸ್- ಭಾರತ

ಟೀಮ್ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಈ ಸರಣಿಯ ಮೂಲಕ ಮತ್ತೆ ತಂಡಕ್ಕೆ ವಾಪಾಸ್ಸಾಗಿದ್ದಾರೆ. ಗಾಯಗೊಂಡು ಸುಧೀರ್ಘವಾಗಿ ತಂಡದಿಂದ ಹೊರಗುಳಿದಿದ್ದರು. ಈ ಸರಣಿಯ ಮೂಲಕ ಮತ್ತೆ ತಮ್ಮ ವಾಪಾಸಾತಿಯನ್ನು ಸಾರಿ ಹೇಳಬೇಕಿದೆ. ಇನ್ನು ಈ ಸರಣಿಯಲ್ಲಿ ಕೆ.ಎಲ್ ರಾಹುಲ್ ಶಿಖರ್ ಧವನ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಇವರಿಗೆ ಪೃಥ್ವಿ ಶಾ ಮೀಸಲು ಆಟಗಾರನಾಗಿ ಇರಲಿದ್ದಾರೆ.

ಟೀಮ್ ನ್ಯೂಸ್-ದಕ್ಷಿಣ ಆಫ್ರಿಕಾ

ಟೀಮ್ ನ್ಯೂಸ್-ದಕ್ಷಿಣ ಆಫ್ರಿಕಾ

ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ತವರಿನಲ್ಲಿ ಮಣಿಸಿದ ಹುಮ್ಮಸ್ಸಿನಲ್ಲಿ ದಕ್ಷಿಣ ಆಫ್ರಿಕಾ ತಂಡವಿದೆ. 3-0 ಅಂತರದಿಂದ ಮಣಿಸಿದ ಆಫ್ರಿಕಾ ಭಾರತದ ವಿರುದ್ಧದ ಸರಣಿಗೂ ಕಣ್ಣಿಟ್ಟಿದೆ. ದಕ್ಷಿಣ ಆಫ್ರಿಕಾ ತಂಡದಲ್ಲಿ ಆರಂಭಿಕ ಆಟಗಾರ ಜನ್ನೆಮನ್ ಮಲನ್ ಮತ್ತು ಹೆನ್ರಿಕ್ ಕ್ಲಾಸೆನ್ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ವೇಗಿ ಲುಂಗಿ ಎನ್‌ಗಿಡಿ ಕೂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಅದ್ಭುತ ದಾಳಿಯನ್ನು ಸಂಘಟಿಸಿದ್ದರು. ಎರಡು ಪಂದ್ಯಗಳಿಂದ ಎನ್‌ಗಿಡಿ 9 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದರು. ಭಾರತಕ್ಕೂ ಈ ಆಟಗಾರರು ಕಂಟಕವಾಗುವ ಸಾಧ್ಯತೆ ಖಂಡಿತಾ ಇದೆ.

ಸಂಭಾವ್ಯ ಪ್ಲೇಯಿಂಗ್ xi- ಭಾರತ

ಸಂಭಾವ್ಯ ಪ್ಲೇಯಿಂಗ್ xi- ಭಾರತ

ಕೆ.ಎಲ್.ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ನವದೀಪ್ ಸೈನಿ.

ಸಂಭಾವ್ಯ ಪ್ಲೇಯಿಂಗ್ xi- ದಕ್ಷಿಣ ಆಫ್ರಿಕಾ

ಸಂಭಾವ್ಯ ಪ್ಲೇಯಿಂಗ್ xi- ದಕ್ಷಿಣ ಆಫ್ರಿಕಾ

ಕ್ವಿಂಟನ್ ಡಿ ಕಾಕ್, ಜನ್ನೆಮನ್ ಮಲನ್, ಹೆನ್ರಿಕ್ ಕ್ಲಾಸೆನ್, ಜಾನ್-ಜಾನ್ ಸ್ಮಟ್ಸ್, ಫಾಫ್ ಡು ಪ್ಲೆಸಿಸ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಅನ್ರಿಕ್ ನಾರ್ಟ್ಜೆ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಜಾರ್ಜ್ ಲಿಂಡೆ.

ನೇರಪ್ರಸಾರದ ಮಾಹಿತಿ

ನೇರಪ್ರಸಾರದ ಮಾಹಿತಿ

ಭಾರತೀಯ ಕಾಲಮಾನ ಮಧ್ಯಾಹ್ನ 1.30ಕ್ಕೆ ಪಂದ್ಯ ಪ್ರಾರಂಭವಾಗಲಿದೆ. ಸ್ಟಾರ್‌ಸ್ಪೋರ್ಟ್ಸ್ ನೆಟ್‌ವರ್ಕ್ ಪಂದ್ಯದ ನೇರಪ್ರಸಾರವನ್ನು ಮಾಡಲಿದೆ. ಹಾಟ್‌ಸ್ಟಾರ್‌ನಲ್ಲೂ ನೇರಪ್ರಸಾರವನ್ನು ವೀಕ್ಷಿಸಲು ಸಾಧ್ಯವಿದೆ. 'ಮೈಖೇಲ್ ಕನ್ನಡ' ಪಂದ್ಯದ ಕ್ಷಣಕ್ಷಣದ ಮಾಹಿತಿಯನ್ನು ಓದುಗರಿಗೆ ನೀಡಲಿದೆ.

Story first published: Thursday, March 12, 2020, 10:08 [IST]
Other articles published on Mar 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X