IND vs SA: ಮೊದಲ ODI ಪಂದ್ಯದ ಟಾಸ್ ವರದಿ & ಆಡುವ 11ರ ಬಳಗ; ಪ್ರತಿ ತಂಡಕ್ಕೆ 40 ಓವರ್

ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೇ ಸರಣಿಯ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡುತ್ತಿದೆ.

ಮಧ್ಯಾಹ್ನ 1.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಲಕ್ನೋದಲ್ಲಿ ಮಳೆಯಿಂದಾಗಿ ಟಾಸ್ ಮುಂದೂಡಲಾಗಿತ್ತು. ಇದೀಗ ಮಳೆ ನಿಂತಿದ್ದರಿಂದ ಪಿಚ್‌ಗೆ ಹೊದೊಸಲಾಗಿದ್ದ ಕವರ್‌ಗಳನ್ನು ತೆಗೆಯಲಾಗಿದೆ. ಈಗ ಟಾಸ್‌ಗೆ ನಿಗದಿತ ಸಮಯವು 3:30 PM IST ಆಗಿದ್ದು, ಮುಂದೆ ಮಳೆಯಾಗದಿದ್ದರೆ ಆಟವು 3:45 PM ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ. ವಿಶೇಷವೆಂದರೆ, ಪಂದ್ಯದಲ್ಲಿ ಪ್ರತಿ ತಂಡಕ್ಕೆ 40-ಓವರ್‌ಗಳಿಗೆ ಇಳಿಸಲಾಗಿದೆ.

IND vs SA 1st ODI: ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬIND vs SA 1st ODI: ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿ; ಟಾಸ್ ವಿಳಂಬ

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಶಿಖರ್ ಧವನ್ ಬೌಲಿಂಗ್ ಆಯ್ದುಕೊಂಡಿದ್ದು, ಹೀಗಾಗಿ ಟೆಂಬಾ ಬವುಮಾ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡ ಮೊದಲು ಬೌಲಿಂಗ್ ಮಾಡಲಿದೆ.

ಆತಿಥೇಯ ಭಾರತ ತಂಡವನ್ನು ಶಿಖರ್ ಧವನ್ ಮುನ್ನಡೆಸಲಿದ್ದು, ತಂಡದಲ್ಲಿ ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ರಜತ್ ಪಾಟಿದಾರ್ ಮತ್ತು ಕುಲದೀಪ್ ಯಾದವ್ ಇದ್ದಾರೆ.

ರಜತ್ ಪಾಟಿದಾರ್ ಮತ್ತು ಮುಖೇಶ್ ಕುಮಾರ್ ಅವರಂತಹ ಯುವ ಆಟಗಾರರಿಗೆ ಈ ಸರಣಿಯಲ್ಲಿ ತಮ್ಮ ಚೊಚ್ಚಲ ಏಕದಿನ ಕ್ಯಾಪ್‌ಗಳನ್ನು ಧರಿಸುವ ಅವಕಾಶ ಸಿಕ್ಕಿಲ್ಲ ಮತ್ತು ರುತುರಾಜ್ ಗಾಯಕ್ವಾಡ್ ಚೊಚ್ಚಲ ಬಾರಿಗೆ ಟೀಂ ಇಂಡಿಯಾ ತಂಡದ ಆಡುವ 11ರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ವಲ್ಪ ತೇವಾಂಶ ಇರುವುದರಿಂದ ಮೊದಲು ಬೌಲಿಂಗ್ ಮಾಡುತ್ತೇವೆ ಮತ್ತು ಅದನ್ನು ಬಳಸಿಕೊಳ್ಳಲು ಬಯಸುತ್ತೇವೆ ಎಂದು ಭಾರತದ ನಾಯಕ ಶಿಖರ್ ಧವನ್ ಹೇಳಿದರು. ರುತುರಾಜ್ ಗಾಯಕ್ವಾಡ್ ಅವರ ಏಕದಿನ ಚೊಚ್ಚಲ ಪಂದ್ಯದೊಂದಿಗೆ 6 ಬ್ಯಾಟರ್‌ಗಳು ಮತ್ತು 5 ಬೌಲರ್‌ಗಳನ್ನು ಆಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಭಾರತ vs ದಕ್ಷಿಣ ಆಫ್ರಿಕಾ ಮೊದಲ ಏಕದಿನ ಪಂದ್ಯದ ಆಡುವ 11ರ ಬಳಗ
ಭಾರತ: ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್/ಉಪನಾಯಕ), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್.

ದಕ್ಷಿಣ ಆಫ್ರಿಕಾ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್, ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ.

For Quick Alerts
ALLOW NOTIFICATIONS
For Daily Alerts
Story first published: Thursday, October 6, 2022, 15:47 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X