ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐ: ವಿರಾಟ್ ಕೊಹ್ಲಿ ಅರ್ಧ ಶತಕ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ

IND vs SA : ಕೊಹ್ಲಿ ನಿನ್ನೆ ಆಡಿದ್ದು ಅಂತಿಂತ ಇನ್ನಿಂಗ್ಸ್ ಅಲ್ಲ. | virat kohli
India vs South Africa, 2nd T20I - Live Score

ಮೊಹಾಲಿ, ಸೆಪ್ಟೆಂಬರ್ 18: ಮೊಹಾಲಿಯಲ್ಲಿ ಬುಧವಾರ (ಸೆಪ್ಟೆಂಬರ್ 18) ನಡೆದ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ 7 ವಿಕೆಟ್‌ಗಳ ಗೆಲುವನ್ನಾಚರಿಸಿದೆ. ನಾಯಕ ವಿರಾಟ್ ಕೊಹ್ಲಿ ಅರ್ಧ ಶತಕದ ನೆರವಿನೊಂದಿಗೆ ಭಾರತ ಅಧಿಕಾರಯುತ ಗೆಲುವು ದಾಖಲಿಸಿದೆ. ತವರು ನೆಲದಲ್ಲಿ ನಡೆದ ಟಿ20ಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಲಭಿಸಿದ ಮೊದಲ ಐತಿಹಾಸಿಕ ಗೆಲುವಿದು.

ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ದಿನೇಶ್ ಮೋಂಗಿಯಾಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ದಿನೇಶ್ ಮೋಂಗಿಯಾ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾದಿಂದ ನಾಯಕ ಕ್ವಿಂಟನ್ ಡಿ ಕಾಕ್ 52 (37 ಎಸೆತ), ತೆಂಬ ಬಾವುಮ 49 (43), ಡೇವಿಡ್ ಮಿಲ್ಲರ್ 18, ಡ್ವೈನ್ ಪ್ರಿಟೋರಿಯಸ್ ಅಜೇಯ 10, ಆ್ಯಂಡಿಲೆ ಫೆಹ್ಲುಕ್ವಾಯೊ ಅಜೇಯ 8 ರನ್‌ ಕೊಡುಗೆಯಿತ್ತರು.

ಅದ್ಭುತ ಕ್ಯಾಚ್ ಮೂಲಕ ಡಿ ಕಾಕ್ ಪೆವಿಲಿಯನ್‌ಗಟ್ಟಿದ ಕೊಹ್ಲಿ: ವಿಡಿಯೋಅದ್ಭುತ ಕ್ಯಾಚ್ ಮೂಲಕ ಡಿ ಕಾಕ್ ಪೆವಿಲಿಯನ್‌ಗಟ್ಟಿದ ಕೊಹ್ಲಿ: ವಿಡಿಯೋ

ಕ್ವಿಂಟನ್ ಡಿ ಕಾಕ್ ಬಳಗ 20 ಓವರ್‌ಗೆ 5 ವಿಕೆಟ್ ಕಳೆದು 149 ರನ್ ಮಾಡಿತು. ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ದೀಪಕ್ ಚಹಾರ್ 2, ನವದೀಪ್ ಸೈನಿ, ರವೀಂದ್ರ ಜಡೇಜಾ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.

ವಿಜಯ್ ಹಝಾರೆ ಟ್ರೋಫಿ: ಡೆಲ್ಲಿಗೆ ಆನೆ ಬಲ ತಂದ ಪಂತ್, ಧವನ್, ಸೈನಿ!ವಿಜಯ್ ಹಝಾರೆ ಟ್ರೋಫಿ: ಡೆಲ್ಲಿಗೆ ಆನೆ ಬಲ ತಂದ ಪಂತ್, ಧವನ್, ಸೈನಿ!

ಭಾರತ vs ದಕ್ಷಿಣ ಆಫ್ರಿಕಾ, 2ನೇ ಟಿ20 ಪಂದ್ಯ, Live ಸ್ಕೋರ್‌ಕಾರ್ಡ್

1
46111

ಗುರಿ ಬೆನ್ನತ್ತಿದ ಭಾರತ, ರೋಹಿತ್ ಶರ್ಮಾ 12, ಶಿಖರ್ ಧವನ್ 40, ವಿರಾಟ್ ಕೊಹ್ಲಿ ಅಜೇಯ 72 (52 ಎಸೆತ), ರಿಷಬ್ ಪಂತ್ 4, ಶ್ರೇಯಸ್ ಐಯ್ಯರ್ 16 ರನ್‌ನೊಂದಿಗೆ 19 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 151 ರನ್ ಮಾಡಿತು. ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠರೆನಿಸಿದರು.

ಪಾಕ್ ಕ್ರಿಕೆಟ್‌ ತಂಡ ಬಲಿಷ್ಠಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡ ಮಿಸ್ಬಾ!ಪಾಕ್ ಕ್ರಿಕೆಟ್‌ ತಂಡ ಬಲಿಷ್ಠಗೊಳಿಸಲು ಮಹತ್ವದ ನಿರ್ಧಾರ ಕೈಗೊಂಡ ಮಿಸ್ಬಾ!

ಭಾರತ ತಂಡ: ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆ), ಹಾರ್ದಿಕ್ ಪಾಂಡ್ಯ, ಋನಾಲ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ದೀಪಕ್ ಚಹಾರ್, ನವದೀಪ್ ಸೈನಿ.

70ರ ಹರೆಯದ ಹಣ್ಣು ಮುದುಕನಿಗೆ ಪಿವಿ ಸಿಂಧು ವರಿಸುವಾಸೆಯಂತೆ!70ರ ಹರೆಯದ ಹಣ್ಣು ಮುದುಕನಿಗೆ ಪಿವಿ ಸಿಂಧು ವರಿಸುವಾಸೆಯಂತೆ!

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ಸಿ & ವಿಕೆ), ರೀಜಾ ಹೆಂಡ್ರಿಕ್ಸ್, ಟೆಂಬಾ ಬಾವುಮಾ, ರಾಸ್ಸಿ ವಾನ್ ಡೆರ್ ಡುಸೆನ್, ಡೇವಿಡ್ ಮಿಲ್ಲರ್, ಆ್ಯಂಡಿಲೆ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ಜಾರ್ನ್ ಫೋರ್ಟುಯಿನ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ.

Story first published: Wednesday, September 18, 2019, 22:53 [IST]
Other articles published on Sep 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X