ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾಕ್ಕೆ ಇನ್ನಿಂಗ್ಸ್‌ ಸಹಿತ 137 ರನ್ ಜಯ

India vs South Africa, 2nd Test, Day 4 - Live Score

ಪುಣೆ, ಅಕ್ಟೋಬರ್ 13: ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್ 13) ಮುಕ್ತಾಯಗೊಂಡ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ಇನ್ನಿಂಗ್ಸ್‌ ಸಹಿತ 137 ರನ್ ಜಯ ಗಳಿಸಿದೆ. ಉಮೇಶ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್ ಮಾರಕ ಬೌಲಿಂಗ್‌ನಿಂದ ಭಾರತ ಗೆಲುವನ್ನಾಚರಿಸಿದೆ.

ದೇವದತ್, ಮನೀಷ್ ಪಾಂಡೆ ಅಬ್ಬರ, ಸೌರಾಷ್ಟ್ರಕ್ಕೆ ಸೋಲುಣಿಸಿದ ಕರ್ನಾಟಕದೇವದತ್, ಮನೀಷ್ ಪಾಂಡೆ ಅಬ್ಬರ, ಸೌರಾಷ್ಟ್ರಕ್ಕೆ ಸೋಲುಣಿಸಿದ ಕರ್ನಾಟಕ

ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್ 48, ತೆಂಬ ಬವುಮಾ 38, ವರ್ನಾನ್ ಫಿಲಾಂಡರ್ 37, ಕೇಶವ್ ಮಹಾರಾಜ್ 22 ರನ್‌ನೊಂದಿಗೆ 67.2 ಓವರ್‌ಗೆ 189 ರನ್ ಪೇರಿಸಿ ಶರಣಾಯಿತು. ಈ ವೇಳೆ ಭಾರತದ ಉಮೇಶ್ ಯಾದವ್ 3, ಆರ್ ಅಶ್ವಿನ್ 2, ರವೀಂದ್ರ ಜಡೇಜಾ 3 ವಿಕೆಟ್‌ ಪಡೆದು ಪಾರಮ್ಯ ಮೆರೆದಿದ್ದಾರೆ. 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 2-0ಯಿಂದ ಗೆದ್ದುಕೊಂಡಿದೆ.

ಜಂಟಿ ಜೀವನಕ್ಕೆ ಪಾದಾರ್ಪಣೆ ಮಾಡಲು ಕರುಣ್ ನಾಯರ್-ಸನಾಯ ಸಜ್ಜುಜಂಟಿ ಜೀವನಕ್ಕೆ ಪಾದಾರ್ಪಣೆ ಮಾಡಲು ಕರುಣ್ ನಾಯರ್-ಸನಾಯ ಸಜ್ಜು

ಫಾ ಡು ಪ್ಲೆಸಿಸ್ ಬಳಗ ಮೊದಲ ಇನ್ನಿಂಗ್ಸ್‌ನಲ್ಲಿ ಥ್ಯೂನಿಸ್ ಡಿ ಬ್ರೂಯಿನ್ 30, ಫಾ ಡು ಪ್ಲೆಸಿಸ್ 64, ಕ್ವಿಂಟನ್ ಡಿ ಕಾಕ್ 31, ವರ್ನಾನ್ ಫಿಲಾಂಡರ್ 44, ಕೇಶವ್ ಮಹಾರಾಜ್ 72 ರನ್‌ನೊಂದಿಗೆ 105.4 ಓವರ್‌ನಲ್ಲಿ 275 ರನ್ ಪೇರಿಸಿತ್ತು. ಆರ್ ಅಶ್ವಿನ್ 4, ಉಮೇಶ್ ಯಾದವ್ 3, ಮೊಹಮ್ಮದ್ ಶಮಿ 2, ರವೀಂದ್ರ ಜಡೇಜಾ 1 ವಿಕೆಟ್ ಪಡೆದು ಪಾರಮ್ಯ ಮೆರೆದರು. ಭಾರತ, ಆಫ್ರಿಕಾಕ್ಕೆ ಫಾಲೋ ಆನ್ ನೀಡಿದೆ.

ಭಾರತ vs ದ.ಆಫ್ರಿಕಾ, 2ನೇ ಟೆಸ್ಟ್, ಸ್ಕೋರ್‌ಕಾರ್ಡ್

1
46114

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ, ಮಯಾಂಕ್ ಅಗರ್ವಾಲ್ 108, ಚೇತೇಶ್ವರ ಪೂಜಾರ 58, ವಿರಾಟ್ ಕೊಹ್ಲಿ 254, ಅಜಿಂಕ್ಯ ರಹಾನೆ 59, ರವೀಂದ್ರ ಜಡೇಜಾ 91 ರನ್‌ನೊಂದಿಗೆ 156.3 ಓವರ್‌ಗೆ 5 ವಿಕೆಟ್ ಕಳೆದು 601 ರನ್ ಬಾರಿಸಿ ಡಿಕ್ಲೇರ್ ಘೋಷಿಸಿತ್ತು.

ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!ಸಾಲು ಸಾಲು ದಾಖಲೆ ಬರೆದು ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ!

ಭಾರತ ತಂಡ: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ವೃದ್ಧಿಮಾನ್ ಸಹಾ (ವಿಕೆ), ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ.

ದಕ್ಷಿಣ ಆಫ್ರಿಕಾ ತಂಡ: ಡೀನ್ ಎಲ್ಗರ್, ಐಡೆನ್ ಮಾರ್ಕ್ರಮ್, ಥ್ಯೂನಿಸ್ ಡಿ ಬ್ರೂಯಿನ್, ಟೆಂಬಾ ಬವುಮಾ, ಫಾಫ್ ಡು ಪ್ಲೆಸಿಸ್ (ಸಿ), ಕ್ವಿಂಟನ್ ಡಿ ಕಾಕ್ (ವಿಕೆ), ಸೆನುರನ್ ಮುತ್ತುಸಾಮಿ, ವೆರ್ನಾನ್ ಫಿಲಾಂಡರ್, ಕೇಶವ್ ಮಹಾರಾಜ್, ಕಾಗಿಸೊ ರಬಾಡಾ, ಅನ್ರಿಕ್ ನಾರ್ಟ್ಜೆ.

Story first published: Sunday, October 13, 2019, 15:15 [IST]
Other articles published on Oct 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X