ಭಾರತ vs ದ. ಆಫ್ರಿಕಾ: ಅಂತಿಮ ಏಕದಿನ ಪಂದ್ಯದಲ್ಲಿಯೂ ಭಾರತಕ್ಕೆ ಸೋಲು: ಸರಣಿ ವೈಟ್‌ವಾಶ್ ಮಾಡಿದ ದ. ಆಫ್ರಿಕಾ

ಭಾರತ ಹಾಗೂ ದಕ್ಷಿಣ ಆಪ್ರಿಕಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿಯೂ ಭಾರತ ಸೋಲನ್ನು ಅನುಭವಿಸಿದೆ. ಕೊನೇಯ ಹಂತದವರೆಗೂ ಭಾರತ ರೋಚಕವಾಗಿ ಹೋರಾಡಿತಾದರೂ ಗೆಲುವು ಸಾಧ್ಯವಾಗಲಿಲ್ಲ. ಅದರಲ್ಲೂ ಅಂತಿಮ ಹಂತದಲ್ಲಿ ದೀಪಕ್ ಚಾಹರ್ ಮಾಡಿದ ಅದ್ಭುತ ಹೋರಾಟ ವ್ಯರ್ಥವಾಯಿತು. ದಕ್ಷಿಣ ಆಪ್ರಿಕಾ ತಂಡ ಅಂತಿಮ ಪಂದ್ಯವನ್ನು ಕೇವಲ 4 ರನ್‌ಗಳಿಂದ ಮಣಿಸಿದೆ. ಈ ಮೂಲಕ ಏಕದಿನ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡ 3-0 ಅಂತರದಿಂದ ವೈಟ್‌ವಾಶ್ ಮಾಡಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. 8 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಹರಿಣಪಡೆ 34 ರನ್‌ಗಳಿಸಿದ್ದಾಗ ನಾಯಕ ಟೆಂಬಾ ಬವುಮಾ ವಿಕೆಟ್ ಕೂಡ ಕಳೆದುಕೊಂಡಿತು. ನಂತರ ಮರ್ಕ್ರಮ್ ಕೂಡ ತಂಡ 70 ರನ್‌ಗಳಿಸಿದ್ದಾಗ ಔಟ್ ಆಗುವ ಮೂಲಕ ಮೂರನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ನಂತರ ಕ್ವಿಂಟನ್ ಡಿಕಾಕ್ ಹಾಗು ವಾನ್‌ ಡರ್‌ ಡುಸ್ಸೆನ್ ಶತಕದ ಜೊತೆಯಾಟವನ್ನು ನೀಡಿದರು. ಡೆಸ್ಸಿನ್ ಭರ್ಜರಿ ಅರ್ಧ ಶತಕ ಗಳಿಸಿದರೆ ಅನುಬವಿ ಕ್ವಿಂಡನ್ ಡಿಕಾಕ್ 124 ರನ್‌ಗಳ ಕೊಡುಗೆ ನೀಡಿದರು. ಡೇವಿಡ್ ಮಿಲ್ಲರ್ 39 ರನ್‌ಗಳಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 287 ರನ್‌ಗಳಿಗೆ ಆಲೌಟ್ ಆಯಿತು.

ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಇವರೇ, ಇದಕ್ಕೆಲ್ಲಾ ವಿರಾಟ್ ಭಯ ಪಡಬಾರದು: ಮಾಜಿ ಕ್ರಿಕೆಟಿಗ!

ಈ ಮೊತ್ತವನ್ನು ಬೆನ್ನಟ್ಟಿದ ಭಾರತ ಕೂಡ ಆರಂಭಿಕ ಆಘಾತವನ್ನು ಅನುಭವಿಸಿತು. ನಾಯಕ ಕೆಎಲ್ ರಾಹುಲ್ ಭಾರತ 18 ರನ್‌ಗಳಿದ್ದಾಗ ವಿಕೆಟ್ ಕಳೆದುಕೊಂಡರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಮತ್ತೊಂದು ಅದ್ಭುತ ಜೊತೆಯಾಟವನ್ನಾಡಿದರು. ಶಿಖರ್ ಧವನ್ ಹಾಗೂ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 98 ರನ್‌ಗಳ ಅದ್ಭುತ ಜೊತೆಯಾಟವನ್ನು ನೀಡಿದರು. ಈ ಸಂದರ್ಭದಲ್ಲಿ 61 ರನ್‌ಗಳಿಸಿದ್ದ ಧವನ್ ವಿಕೆಟ್ ಕಳೆದುಕೊಂಡರು. ನಂತರ ವಿರಾಟ್ ಕೊಹ್ಲಿ ತಮ್ಮ ಎಚ್ಚರಿಕೆಯ ಆಟವನ್ನು ಮುಂದುವರಿಸಿದ್ದರು. ತಾಳ್ಮೆಯಿಂದ ಇನ್ನಿಂಗ್ಸ್ ಕಟ್ಟಿದ ಕೊಹ್ಲಿ 84 ಎಸೆತಗಳನ್ನು ಎದುರಿಸಿ 5 ಬೌಂಡರಿಗಳ ನೆರವಿನಿಂದ 65 ರನ್‌ಗಳಿಸಿ ಔಟಾದರು.

ನಂತರ ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ರಿಷಭ್ ಪಂತ್ ಮೊದಲ ಎಸೆತದಲ್ಲಿಯೇ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರೆ ಶ್ರೇಯಸ್ ಐಯ್ಯರ್ 26 ರನ್‌ಗಳಿಗೆ ಔಟಾದರು. ಜಯಂತ್ ಯಾದವ್ ಕೂಡ ಕೇವಲ 2 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಸೂರ್ಯಕುಮಾರ್ ಯಾದವ್ 39 ರನ್‌ಗಳ ಕೊಡುಗೆ ನೀಡಿದರು. ಈ ಹಂತದಲ್ಲಿ ವೇಗಿ ರಾಹುಲ್ ಚಾಹರ್ ಅಮೋಘ ಆಟವನ್ನು ಪ್ರದರ್ಶಿಸಿದರು. 34 ಎಸೆತಗಳನ್ನು ಎದುರಿಸಿದ ಚಾಹರ್ ಭರ್ಜರಿ 54 ರನ್‌ ಸಿಡಿಸಿದರು. ಚಾಹರ್ ಅವರ ಈ ಪ್ರದರ್ಶನದಿಂದಾಗಿ ಭಾರತ ಗೆಲುವಿನ ಸನಿಹಕ್ಕೆ ತಲುಪಿತ್ತು. ಆದರೆ ಅದ್ಭುತ ಪ್ರದರ್ಶನ ನೀಡಿದ ಚಾಹರ್ ತಂಡದ ಗೆಲುವಿಗೆ 9 ರನ್‌ಗಳಿದ್ದಾಗ ವಿಕೆಟ್ ಕಳೆದುಕೊಂಡರು. ನಂತರ ಜಸ್ಪರೀತ್ ಬೂಮ್ರಾ ಹಾಗೂ ಚಾಹಲ್ ಕೂಡ ಔಟ್ ಆಗುವ ಮೂಲಕ ಭಾರತ ತಂಡ ಕೇವಲ 4 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.

 ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್! ಭಾರತ vs ದ.ಆಫ್ರಿಕಾ 3ನೇ ಏಕದಿನ: ಕಳಪೆ ಆಟವಾಡಿದ್ದ ಈ ಮೂವರು ಟೀಮ್ ಇಂಡಿಯಾದಿಂದ ಔಟ್!

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಜಯಂತ್ ಯಾದವ್, ದೀಪಕ್ ಚಹಾರ್, ಪ್ರಸಿದ್ಧ್ ಕೃಷ್ಣ, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್
ಬೆಂಚ್: ಋತುರಾಜ್ ಗಾಯಕ್ವಾಡ್, ನವದೀಪ್ ಸೈನಿ, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ವೆಂಕಟೇಶ್ ಅಯ್ಯರ್, ಭುವನೇಶ್ವರ್ ಕುಮಾರ್

ವೈರಲ್ ಆಯ್ತು ವಾಮಿಕ ವಿರಾಟ್ ಫೋಟೋ | Oneindia Kannada

ದಕ್ಷಿಣ ಆಫ್ರಿಕಾ ಆಡುವ ಬಳಗ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಡ್ವೈನ್ ಪ್ರಿಟೋರಿಯಸ್, ಸಿಸಂದಾ ಮಗಾಲಾ
ಬೆಂಚ್: ವೇಯ್ನ್ ಪಾರ್ನೆಲ್, ಜಾರ್ಜ್ ಲಿಂಡೆ, ಕೈಲ್ ವೆರ್ರೆನ್ನೆ, ಜುಬೇರ್ ಹಮ್ಜಾ, ಮಾರ್ಕೊ ಜಾನ್ಸೆನ್, ತಬ್ರೈಜ್ ಶಮ್ಸಿ

For Quick Alerts
ALLOW NOTIFICATIONS
For Daily Alerts
Story first published: Sunday, January 23, 2022, 22:45 [IST]
Other articles published on Jan 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X