ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: 3ನೇ ಏಕದಿನ, ಬೌಲಿಂಗ್ ಆಯ್ದ ಭಾರತ, Live ಸ್ಕೋರ್‌ಕಾರ್ಡ್, ಪ್ಲೇಯಿಂಗ್ XI

India vs South Africa: 3rd ODI, Live Score and playing XI details, Cape Town

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಕೇಪ್‌ಟೌನ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಸೋಲು ಅನುಭವಿಸಿರುವ ಭಾರತ ಸರಣಿಯನ್ನು ಆತಿಥೇಯರಿಗೆ ಒಪ್ಪಿಸಿದೆ. ಆದರೆ ಈ ಪಂದ್ಯವನ್ನು ಗೆದ್ದು ವೈಟ್‌ವಾಶ್ ಅವಮಾನದಿಮದ ಪಾರಾಗುವ ಪ್ರಯತ್ನವನ್ನು ತಂಡ ನಡೆಸಲಿದೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ದೊಡ್ಡ ಬದಲಾವಣೆ ಮಾಡಿಕೊಂಡಿದೆ. ಕಳೆದ ಎರಡು ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದ ನಾಲ್ವರು ಆಟಗಾರರನ್ನು ಈ ಪಂದ್ಯದಿಂದ ಹೊರಗಿಟ್ಟಿದ್ದು ನಾಲ್ವರು ಆಟಗಾರರು ಅವಕಾಶ ಪಡೆದುಕೊಂಡಿದ್ದಾರೆ. ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ವೆಂಕಟೇಶ್ ಅಯ್ಯರ್, ಭುವನೇಶ್ವರ್ ಕುಮಾರ್ ಈ ಪಮದ್ಯದಿಮದ ಹೊರಗುಳಿದಿದ್ದಾರೆ. ಇವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್, ಜಯಂತ್ ಯಾದವ್, ಪ್ರಸಿದ್ದ್ ಕೃಷ್ಣ ಹಾಗೂ ದೀಪಕ್ ಚಾಹರ್ ಅವಕಾಶ ಪಡೆದಿದ್ದಾರೆ.

ಇನ್ನು ದಕ್ಷಿಣ ಆಫ್ರಿಕಾ ಕೂಡ ಈ ಪಂದ್ಯದಲ್ಲಿ ಒಂದು ಬದಲಾವಣೆ ಮಾಡಿಕೊಂಡಿದೆ. ತಬ್ರೈಜ್ ಶಮ್ಸಿ ಆಡುವ ಬಳಗದಿಂದ ಹೊರಬಿದ್ದಿದ್ದು ಡ್ವೈನ್ ಪ್ರಿಟೋರಿಯಸ್ ಅವಕಾಶ ಪಡೆದುಕೊಂಡಿದ್ದಾರೆ. ಉಳಿದಂತೆ ಹರಿಣಗಳ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ

Live ಸ್ಕೋರ್‌ಕಾರ್ಡ್ ಹೀಗಿದೆ

1
51804

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಜಯಂತ್ ಯಾದವ್, ಪ್ರಸಿದ್ಧ್ ಕೃಷ್ಣ, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್
ಬೆಂಚ್: ರುತುರಾಜ್ ಗಾಯಕ್ವಾಡ್, ನವದೀಪ್ ಸೈನಿ, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ರವಿಚಂದ್ರನ್ ಅಶ್ವಿನ್, ವೆಂಕಟೇಶ್ ಅಯ್ಯರ್, ಭುವನೇಶ್ವರ್ ಕುಮಾರ್

ದಕ್ಷಿಣ ಆಫ್ರಿಕಾ ಆಡುವ ಬಳಗ: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಡೇವಿಡ್ ಮಿಲ್ಲರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಡ್ವೈನ್ ಪ್ರಿಟೋರಿಯಸ್, ಲುಂಗಿ ಎನ್‌ಗಿಡಿ, ಸಿಸಂದಾ ಮಗಾಲಾ
ಬೆಂಚ್: ವೇಯ್ನ್ ಪಾರ್ನೆಲ್, ಜಾರ್ಜ್ ಲಿಂಡೆ, ಜುಬೇರ್ ಹಮ್ಜಾ, ಕೈಲ್ ವೆರ್ರೆನ್ನೆ, ಮಾರ್ಕೊ ಜಾನ್ಸೆನ್, ತಬ್ರೈಜ್ ಶಮ್ಸಿ

Story first published: Sunday, January 23, 2022, 13:52 [IST]
Other articles published on Jan 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X