ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA: ಈ ಆಟಗಾರನನ್ನು 4ನೇ ಪಂದ್ಯದಿಂದ ಹೊರಗಿಡಿ: ಆಕಾಶ್ ಚೋಪ್ರ

India vs South Africa 4th t20I: Aakash Chopra suggest Team India to drop Avesh Khan in Rajkot match

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಲ್ಕನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಸರಣಿಯಲ್ಲಿ ಭಾರತ 1-2 ಅಂತರದಿಂದ ಹಿನ್ನಡೆಯಲ್ಲಿರುವ ಕಾರಣ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. ಹಾಗಿದ್ದರೆ ಮಾತ್ರವೇ ಭಾರತ ಸರಣಿಯಲ್ಲಿ ಜೀವಂತವಾಗಿರಲು ಸಾಧ್ಯವಾಗಲಿದೆ. ಆದರೆ ನಾಲ್ಕನೇ ಪಂದ್ಯಕ್ಕೆ ಮುನ್ನ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರ ಪ್ರತಿಕ್ರಿಯಸಿದ್ದು ತಂಡದಲ್ಲಿ ಒಂದು ಬದಲಾವಣೆ ಅನಿವಾರ್ಯ ಎಂದಿದ್ದಾರೆ.

ಮೊದಲ ಎರಡು ಪಂದ್ಯಗಳಲದಲಿ ಸೋಲು ಅನುಭವಿಸಿದ ಬಳಿಕ ಮೂರನೇ ಪಂದ್ಯದಲ್ಲಿಯೂ ಯಾವುದೇ ಬದಲಾವಣೆಗಳು ಇಲ್ಲದೆ ಭಾರತ ತಂಡ ಕಣಕ್ಕಿಳಿದಿತ್ತು. ಈ ಪಂದ್ಯದಲ್ಲಿ ಭೌಲಿಂಗ್ ವಿಭಾಗ ಮತ್ತೆ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಗಿತ್ತು. ಆದರೆ ಓರ್ವ ಬೌಲರ್ ಮಾತ್ರ ಲಯಕ್ಕೆ ಮರಳದಿರುವ ಕಾರಣ ಆತನ ಬದಲಿಗೆ ಯುವ ಆಟಗಾರರಿಗೆ ಅವಕಾಶ ನಿಡುವಂತೆ ಆಕಾಶ್ ಚೋಪ್ರ ಸಲಹೆ ನೀಡಿದ್ದಾರೆ.

ಲಂಕಾ ಬೌಲರ್‌ಗಳ ಅಬ್ಬರಕ್ಕೆ ಮಣಿದ ಆಸ್ಟ್ರೇಲಿಯಾ: ಲೋ ಸ್ಕೋರಿಂಗ್ ಪಂದ್ಯದಲ್ಲಿ ಶ್ರೀಲಂಕಾಗೆ ರೋಚಕ ಗೆಲುವುಲಂಕಾ ಬೌಲರ್‌ಗಳ ಅಬ್ಬರಕ್ಕೆ ಮಣಿದ ಆಸ್ಟ್ರೇಲಿಯಾ: ಲೋ ಸ್ಕೋರಿಂಗ್ ಪಂದ್ಯದಲ್ಲಿ ಶ್ರೀಲಂಕಾಗೆ ರೋಚಕ ಗೆಲುವು

ಆವೇಶ್ ಖಾನ್‌ಗೆ ಅವಕಾಶ ಸಾಕು

ಆವೇಶ್ ಖಾನ್‌ಗೆ ಅವಕಾಶ ಸಾಕು

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಮೂರು ಪಂದ್ಯದಲ್ಲಿ ಅವಕಾಶ ಪಡೆದುಕೊಂಡಿದ್ದರೂ ಆವೇಶ್ ಖಾನ್ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಹೀಗಾಗಿ ನಾಲ್ಕನೇ ಪಂದ್ಯದಿಂದ ಆತನನ್ನು ಹೊರಗಿಡುವುದು ಸೂಕ್ತ. ಆತನ ಬದಲಿಗೆ ಮೊದಲ ಬಾರಿಗೆ ಭಾರತ ತಂಡದಲ್ಲಿ ಆಡಲು ಕಾಯುತ್ತಿರುವ ಅರ್ಷ್‌ದೀಪ್ ಸಿಂಗ್ ಅಥವಾ ಉಮ್ರಾನ್ ಮಲಿಕ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ ಆಕಾಶ್ ಚೋಪ್ರ.

ಒಂದೂ ವಿಕೆಟ್ ಪಡೆದಿಲ್ಲ ಆವೇಶ್ ಖಾನ್

ಒಂದೂ ವಿಕೆಟ್ ಪಡೆದಿಲ್ಲ ಆವೇಶ್ ಖಾನ್

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ20 ಪಂದ್ಯಗಳಲ್ಲಿ ಆಡಿರುವ ಆವೇಶ್ ಖಾನ್ ಒಂದು ವಿಕೆಟ್ ಪಡೆಯುವಲ್ಲಿಯೂ ಸಫಲವಾಗಿಲ್ಲ. ಆದರೆ ಅವರ ಎಕಾನಮಿ 7.90ಯಷ್ಟಿದ್ದು ಗಮನಾರ್ಹವಾಗಿದೆ. ಆದರೆ ಮೊದಲ ಪಂದ್ಯದಲ್ಲಿ ರಾಸ್ಸಿ ವಾನ್‌ಡರ್ ಡುಸ್ಸೆನ್ ವಿಕೆಟ್ ಪಡೆಯುವ ಅವಕಾಶವಿದ್ದರೂ ಶ್ರೇಯಸ್ ಐಯ್ಯರ್ ಸುಲಭ ಕ್ಯಾಚ್ ಕೈಚೆಲ್ಲಿದ್ದ ಕಾರಣ ವಿಕೆಟ್ ಪಡೆಯಲು ವಿಫಲವಾಗಿದ್ದರು. ನಾಲ್ಕನೇ ಪಂದ್ಯಕ್ಕೆ ಮುನ್ನ ಆಕಾಶ್ ಚೋಪ್ರ ಭಾರತ ತಂಡದಲ್ಲಿ ಈ ಒಂದು ಬದಲಾವಣೆ ಮಾಡಿಕೊಳ್ಳಬಹುದು ಎಂದಿದ್ದಾರೆ.

ಅರ್ಷ್‌ದೀಪ್ ಅಥವಾ ಉಮ್ರಾನ್ ಆಡಲಿ

ಅರ್ಷ್‌ದೀಪ್ ಅಥವಾ ಉಮ್ರಾನ್ ಆಡಲಿ

ಇನ್ನು ಆವೇಶ್ ಖಾನ್ ಬದಲಿಗೆ ಯಾರು ಆಡಬೇಕು ಎಂಬ ಪ್ರಶ್ನೆಗೆ ಕೂಡ ಆಕಾಶ್ ಚೋಪ್ರ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಇಬ್ಬರು ಯುವ ಆಟಗಾರರನ್ನು ಹೆಸರಿಸಿದ್ದಾರೆ. "ಭಾರತ ನಿಜವಾಗಿಯೂ ಈ ಬದಲಾವಣೆ ಮಾಡಲು ಬಯಸಿದರೆ ಅರ್ಷ್‌ದೀಪ್ ಅಥವಾ ಉಮ್ರಾನ್ ಮಲಿಕ್‌ಗೆ ಅವಕಾಶ ನೀಡಬೇಕು. ಆದರೆ ಭಾರತ ಈ ಬದಲಾವನೆ ಮಾಡುತ್ತದೆ ಎನಿಸುವುದಿಲ್ಲ. ಆವೇಶ್ ಖಾನ್ ಅವರನ್ನೇ ನಾಲ್ಕನೇ ಪಂದ್ಯದಲ್ಲಿಯೂ ಆಡಿಸಿದರೆ ಅಚ್ಚರಿ ಪಡುವಂತದ್ದು ಏನೂ ಇಲ್ಲ ಎಂದಿದ್ದಾರೆ ಆಕಾಶ್ ಚೋಪ್ರ.

ಸ್ಕ್ವಾಡ್‌ಗಳು ಹೀಗಿದೆ

ಸ್ಕ್ವಾಡ್‌ಗಳು ಹೀಗಿದೆ

ಭಾರತ: ಋತುರಾಜ್ ಗಾಯಕ್‌ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ರವಿ ಬಿಷ್ಣೋಯ್, ದೀಪಕ್ ಹೂಡಾ, ವೆಂಕಟೇಶ್ ಸಿಂಗ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್

Story first published: Friday, June 17, 2022, 14:46 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X