ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: 1ನೇ ಟಿ20 ಪಂದ್ಯಕ್ಕೆ ಮಳೆ ತೊಂದರೆ ಕೊಡುತ್ತಾ?

India vs South Africa: Dharamsala weather: Rain to play spoilsport in 1st T20I?

ಧರ್ಮಶಾಲಾ, ಸೆಪ್ಟೆಂಬರ್ 14: ಪ್ರವಾಸ ಸರಣಿಗಾಗಿ ಭಾರತಕ್ಕೆ ಬಂದಿರುವ ದಕ್ಷಿಣ ಆಫ್ರಿಕಾ ತಂಡ ಭಾನುವಾರ (ಸೆಪ್ಟೆಂಬರ್ 15) ಆತಿಥೇಯ ಭಾರತದ ವಿರುದ್ಧ ಟಿ20 ಪಂದ್ಯದ ಮೂಲಕ ಸರಣಿ ಆರಂಭಿಸಲಿದೆ. ಮೊದಲ ಟಿ20 ಪಂದ್ಯ ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದೆ.

ಬಾಂಗ್ಲಾದೇಶ ಮಣಿಸಿ ಏಳನೇ ಬಾರಿಗೆ 'ಯು-19 ಏಷ್ಯಾ ಕಪ್' ಎತ್ತಿದ ಭಾರತಬಾಂಗ್ಲಾದೇಶ ಮಣಿಸಿ ಏಳನೇ ಬಾರಿಗೆ 'ಯು-19 ಏಷ್ಯಾ ಕಪ್' ಎತ್ತಿದ ಭಾರತ

ಆರಂಭಿಕ ಟಿ20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಲಿದೆಯಾ? ಹೌದು. ಮೊದಲ ಪಂದ್ಯಕ್ಕೆ ಶೇ. 50ರಷ್ಟು ವರುಣನ ತೊಂದರೆಯಿದೆ ಎನ್ನುತ್ತಿದೆ ಧರ್ಮಶಾಲಾ ಹವಾಮಾನ ವರದಿ. ಮಳೆಯ ಕಾರಣಕ್ಕೆ ಶನಿವಾರ (ಸೆಪ್ಟೆಂಬರ್ 14) ಟೀಮ್ ಇಂಡಿಯಾದ ಅಭ್ಯಾಸಕ್ಕೂ ಅಡ್ಡಿಯಾಗಿದೆ. ಮಳೆ ಸುರಿದಿದ್ದರಿಂದ ಕೊಹ್ಲಿ ಪಡೆ ಶನಿವಾರ ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಬೇಕಾಗಿ ಬಂದಿತ್ತು.

ನಿವೃತ್ತಿ ಯೂ ಟರ್ನ್ ಬಳಿಕ, ಹೈದರಾಬಾದ್ ತಂಡಕ್ಕೆ ರಾಯುಡು ನಾಯಕನಿವೃತ್ತಿ ಯೂ ಟರ್ನ್ ಬಳಿಕ, ಹೈದರಾಬಾದ್ ತಂಡಕ್ಕೆ ರಾಯುಡು ನಾಯಕ

ಧರ್ಮಶಾಲಾದಲ್ಲಿ ಸದ್ಯಕ್ಕಂತೂ ಮಳೆ ಸುರಿಯುತ್ತಿದೆ. ಹೀಗಾಗಿ ಭಾನುವಾರದ ಪಂದ್ಯಕ್ಕೆ ಗುಡುಗು ಸಹಿತ ಮಳೆ ಸಮಸ್ಯೆ ನೀಡುವುದು ನಿರೀಕ್ಷಿತವೇ. ಮಳೆಯಿಂದಾಗಿ ಮೈದಾನದ ಸಿಬ್ಬಂದಿಗೆ ಮೈದಾನವನ್ನು ಸಜ್ಜುಗೊಳಿಸುವುಕ್ಕೂ ತೊಂದರೆಯಾಗಿತ್ತು. ಹಾಗಂತ ಸದ್ಯದ ಮಾಹಿತಿ ಪ್ರಕಾರ, ಮಳೆ ದೀರ್ಘ ಕಾಲ ಸುರಿಯುತ್ತಿರುವ ಬದಲು ಬಿಟ್ಟು ಬಿಟ್ಟು ಬರುತ್ತಿದೆ ಎನ್ನಲಾಗಿದೆ.

ವಿಶಿಷ್ಠ ದಾಖಲೆಗಾಗಿ ಸೆಣಸಾಡಲಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ!ವಿಶಿಷ್ಠ ದಾಖಲೆಗಾಗಿ ಸೆಣಸಾಡಲಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ!

ವೆಸ್ಟ್ ಇಂಡೀಸ್ ಪ್ರವಾಸ ಸರಣಿಯನ್ನು ಯಶಸ್ವಿಯಾಗಿ ಮುಗಿಸಿರುವ ಭಾರತ ತಂಡ, ವಿಶ್ವಕಪ್‌ ಬಳಿಕ ಪಾಲ್ಗೊಳ್ಳುತ್ತಿರುವ ಎರಡನೇ ಅಧಿಕೃತ ಸರಣಿಯಿದು. ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ ಸರಣಿಯು 3 ಟಿ20, 3 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ. ಅಂದ್ಹಾಗೆ ಮೊದಲ ಟಿ20 ಪಂದ್ಯ ಭಾರತೀಯ ಕಾಲಮಾನ 7 pmಗೆ ಆರಂಭಗೊಳ್ಳಲಿದೆ.

Story first published: Saturday, September 14, 2019, 21:22 [IST]
Other articles published on Sep 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X