ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದಕ್ಷಿಣ ಆಫ್ರಿಕಾ: 2ನೇ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ‍‍XI

India vs South Africa: India’s predicted XI for 2nd T20I

ಮೊಹಾಲಿ, ಸೆಪ್ಟೆಂಬರ್ 17: ಹಿಮಾಚಲ್‌ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ ಮಳೆಗೆ ಆಹುತಿಯಾಗಿತ್ತು. ಇತ್ತಂಡಗಳ ದ್ವಿತೀಯ ಟಿ20 ಪಂದ್ಯ ಪಂಜಾಬ್‌ನ ಮೊಹಾಲಿಯಲ್ಲಿ ಸೆಪ್ಟೆಂಬರ್ 18ರ ಬುಧವಾರ ನಡೆಯಲಿದೆ.

ರಿಷಬ್ ಪಂತ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ, ವಿರಾಟ್ ಕೊಹ್ಲಿರಿಷಬ್ ಪಂತ್ ಗೆ ಖಡಕ್ ಎಚ್ಚರಿಕೆ ಕೊಟ್ಟ ರವಿಶಾಸ್ತ್ರಿ, ವಿರಾಟ್ ಕೊಹ್ಲಿ

ಆರಂಭಿಕ ಪಂದ್ಯದ ವೇಳೆ ಮಳೆ ಅಡ್ಡಿ ಪಡಿಸಿದ್ದರಿಂದ ಟಾಸ್ ಕೂಡ ನಡೆಯದೆ ಪಂದ್ಯ ರದ್ದಾಗಿತ್ತು. ದ್ವಿತೀಯ ಪಂದ್ಯದ ವೇಳೆ ತಣ್ಣಗಿನ ಮಳೆಯಾಗುವ ನಿರೀಕ್ಷೆಯಿದೆಯಾದರೂ ಪಂದ್ಯ ಬಹುತೇಕ ನಡೆಯಲಿದೆ ಎನ್ನುತ್ತಿದೆ ಮೊಹಾಲಿ ಹವಾಮಾನ ವರದಿ.

113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದ ಆಸ್ಟ್ರೇಲಿಯಾ-ಇಂಗ್ಲೆಂಡ್!113 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮುರಿದ ಆಸ್ಟ್ರೇಲಿಯಾ-ಇಂಗ್ಲೆಂಡ್!

3 ಪಂದ್ಯಗಳ ಈ ಸರಣಿಯ ದ್ವಿತೀಯ ಪಂದ್ಯ 7 pmಗೆ ನಡೆಯಲಿದ್ದು, ಭಾರತದ ಸಂಭಾವ್ಯ XI ತಂಡ ಹೀಗಿರಲಿದೆ.

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಆರಂಭಿಕ ಬ್ಯಾಟ್ಸ್‌ಮನ್‌ಗಳು

ಟಿ20 ದ್ವಿತೀಯ ಪಂದ್ಯದಲ್ಲಿ ಆರಂಭಿಕರಾಗಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಬ್ಯಾಟ್‌ ಎತ್ತಿಕೊಳ್ಳಲಿದ್ದಾರೆ. ಒಂದಿಷ್ಟು ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಎಂದಿನ ಆರಂಭಿಕ ಬ್ಯಾಟ್ಸ್‌ಮನ್ ಶರ್ಮಾ ಜೊತೆ ರಾಹುಲ್ ಆಡಿದ್ದರಾದರೂ ಗಮನಾರ್ಹ ಬ್ಯಾಟಿಂಗ್ ತೋರಿಸಿರಲಿಲ್ಲ. ಶಿಖರ್ ಧವನ್ ಅನುಪಸ್ಥಿತಿಯಲ್ಲಿ ರಾಹುಲ್ ಈ ಬಾರಿ ಹೇಗೆ ಅವಕಾಶ ಬಳಿಸಿಕೊಳ್ಳಲಿದ್ದಾರೆ ಕಾದು ನೋಡಬೇಕಿದೆ (1. ರೋಹಿತ್ ಶರ್ಮಾ, 2. ಕೆಎಲ್ ರಾಹುಲ್).

ಮಧ್ಯಮ ಕ್ರಮಾಂಕ

ಮಧ್ಯಮ ಕ್ರಮಾಂಕ

ಮೊಹಾಲಿ ಪಂದ್ಯದಲ್ಲಿ ಭಾರತದ 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬರಲಿದ್ದಾರೆ. 4ನೇ ಕ್ರಮಾಂಕದಲ್ಲಿ ಬಹು ನಿರೀಕ್ಷಿತ ರಿಷಬ್ ಪಂತ್, 5ನೇ ಕ್ರಮಾಂಕದಲ್ಲಿ ಮನೀಷ್ ಪಾಂಡೆ ಕಾಣಿಸಿಕೊಳ್ಳುವುದನ್ನು ನಿರೀಕ್ಷಿಸಲಾಗಿದೆ (3. ವಿರಾಟ್ ಕೊಹ್ಲಿ, 4. ರಿಷಬ್ ಪಂತ್, 5. ಮನೀಷ್ ಪಾಂಡೆ).

ಆಲ್ ರೌಂಡರ್‌ಗಳು

ಆಲ್ ರೌಂಡರ್‌ಗಳು

ಟೀಮ್ ಇಂಡಿಯಾದ ಆಲ್‌ ರೌಂಡರ್‌ಗಳ ಸಾಲಿನಲ್ಲಿರುವ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ, ರವೀಂದ್ರ ಜಡೇಜಾ 7ನೇ ಕ್ರಮಾಂಕದಲ್ಲಿ, ಕೃನಾಲ್ ಪಾಂಡ್ಯ 8ನೇ ಕ್ರಮಾಂಕದಲ್ಲಿ ಬರಲಿದ್ದಾರೆ (6. ಹಾರ್ದಿಕ್ ಪಾಂಡ್ಯ, 7. ರವೀಂದ್ರ ಜಡೇಜಾ, 8. ಕೃನಾಲ್ ಪಾಂಡ್ಯ).

ಬೌಲಿಂಗ್ ಬಣ

ಬೌಲಿಂಗ್ ಬಣ

ಭಾರತ ತಂಡದಲ್ಲಿ ಟಿ20ಯಲ್ಲಿ ನೂತನ ಚೆಂಡಿನ ಪರಿಣಿತ ಬೌಲರ್‌ ವಾಷಿಂಗ್ಟನ್ ಸುಂದರ್ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನು 10ನೇ ಕ್ರಮಾಂಕದಲ್ಲಿ ದೀಪಕ್ ಚಹಾರ್, 11ನೇ ಕ್ರಮಾಂಕದಲ್ಲಿ ನವದೀಪ್ ಸೈನಿ ಮೈದಾನಕ್ಕಿಳಿಯುವುದನ್ನು ನಿರೀಕ್ಷಿಸಲಾಗಿದೆ (9. ವಾಷಿಂಗ್ಟನ್ ಸುಂದರ್, 10. ದೀಪಕ ಚಹಾರ್, 11. ನವದೀಪ್ ಸೈನಿ).

Story first published: Tuesday, September 17, 2019, 20:07 [IST]
Other articles published on Sep 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X