ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧವೇ ಪಾದಾರ್ಪಣೆ ಮಾಡಿದ ಭಾರತ ಮೂಲದ ಸೇನುರಾನ್!

India vs South Africa: Indian-origin Senuran Muthusamy makes Test debut for SA

ವಿಶಾಖಪಟ್ಟಣ, ಅಕ್ಟೋಬರ್ 3: ಭಾರತ ಮೂಲದ ಆಟಗಾರ ಭಾರತ ವಿರುದ್ಧದ ಟೆಸ್ಟ್‌ನಲ್ಲಿ ಪಾದಾರ್ಪಣೆ ಮಾಡಿದ ಅಪರೂಪದ ಕ್ಷಣಕ್ಕೆ ವಿಶಾಖಪಟ್ನಂನಲ್ಲಿ ಬುಧವಾರ (ಅಕ್ಟೋಬರ್ 2) ನಡೆದ ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ಸಾಕ್ಷಿಯಾಯಿತು.

ಭಾರತ vs ದ.ಆಫ್ರಿಕಾ: 47 ವರ್ಷಗಳ ದಾಖಲೆ ಮುರಿದ ರೋಹಿತ್-ಮಯಾಂಕ್!ಭಾರತ vs ದ.ಆಫ್ರಿಕಾ: 47 ವರ್ಷಗಳ ದಾಖಲೆ ಮುರಿದ ರೋಹಿತ್-ಮಯಾಂಕ್!

ದಕ್ಷಿಣ ಆಫ್ರಿಕಾ ತಂಡದಲ್ಲಿದ್ದ ಆಲ್ ರೌಂಡರ್ ಸೇನುರಾನ್ ಮುತ್ತುಸ್ವಾಮಿ ಮೂಲತಃ ಭಾರತದವರು. ಮುತ್ತುಸ್ವಾಮಿ ಕುಟುಂಬಸ್ಥರ ಮೂಲ ತಮಿಳು ನಾಡಿನ ಚೆನ್ನೈ. ಸದ್ಯ ಡರ್ಬನ್‌ನಲ್ಲಿ ನೆಲೆಸಿರುವ ಸೇನುರಾನ್ ವಿಶಾಖಪಟ್ಟಣದಲ್ಲಿನ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಕೆಟ್ (20 ರನ್) ವಿಕೆಟ್ ಪಡೆದು ಗಮನ ಸೆಳೆದರು.

ಭಾರತ vs ದಕ್ಷಿಣ ಆಫ್ರಿಕಾ, 1ನೇ ಟೆಸ್ಟ್, 2ನೇ ದಿನ, Live ಸ್ಕೋರ್‌ಕಾರ್ಡ್

1
46113

ಹಾರ್ದಿಕ್ ಪಾಂಡ್ಯಗೆ ತೀವ್ರವಾದ ಬೆನ್ನು ನೋವು, ಮೈದಾನದಿಂದ ದೀರ್ಘಕಾಲ ದೂರ!ಹಾರ್ದಿಕ್ ಪಾಂಡ್ಯಗೆ ತೀವ್ರವಾದ ಬೆನ್ನು ನೋವು, ಮೈದಾನದಿಂದ ದೀರ್ಘಕಾಲ ದೂರ!

ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಉತ್ತಮ ರನ್ ಬಾರಿಸಿದೆ. ರೋಹಿತ್ ಶರ್ಮಾ ಶತಕ (176 ರನ್), ಮಯಾಂಕ್ ಅಗರ್ವಾಲ್ ದ್ವಿಶತಕದೊಂದಿಗೆ (215 ರನ್) ಭಾರತ 502 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.

ಭಾರತ ಪ್ರವಾಸ ಮೊದಲೇನಲ್ಲ

ಭಾರತ ಪ್ರವಾಸ ಮೊದಲೇನಲ್ಲ

25ರ ಹರೆಯದ ಸೇನುರಾನ್ ಮುತ್ತುಸ್ವಾಮಿ ದಕ್ಷಿಣ ಆಫ್ರಿಕಾ ಪರ ಭಾರತಕ್ಕೆ ಪ್ರವಾಸ ಕೈಗೊಂಡಿದ್ದು ಇದು ಮೊದಲ ಸಾರಿಯೇನಲ್ಲ. ಕಳೆದ ವರ್ಷ ದಕ್ಷಿಣ ಆಫ್ರಿಕಾ 'ಎ' ತಂಡದಲ್ಲಿದ್ದ ಮುತ್ತುಸ್ವಾಮಿ, ಭಾರತ 'ಎ' ವಿರುದ್ಧದ ಪಂದ್ಯಕ್ಕಾಗಿ ಭಾರತಕ್ಕೆ ಆಗಮಿಸಿದ್ದರು. ಬುಧವಾರದ ಪಂದ್ಯದಲ್ಲಿ ಮುತ್ತುಸ್ವಾಮಿ 5 ಓವರ್‌ ಎಸೆದು 23 ರನ್ ನೀಡಿದ್ದರು.

ಸಂಸ್ಕೃತಿಯೂ ಭಾರತದ್ದೇ

ಸಂಸ್ಕೃತಿಯೂ ಭಾರತದ್ದೇ

'ನಮ್ಮ ಮೂಲ ಭಾರತದ ಚೆನ್ನೈ. ನಮಗೆ ಈಗಲೂ ನಾಗಪಟ್ಟಿಣಂನಲ್ಲಿ (ಚೆನ್ನೈಯಿಂದ 300 ಕಿ.ಮೀ. ದೂರದಲ್ಲಿ ಸಿಗುವ ಊರು) ಸಂಬಂಧಿಕರು ಇದ್ದಾರೆ. ನಮ್ಮ ಅನೇಕ ತಲೆಮಾರುಗಳು ಹಾದುಹೋಗಿವೆ. ಆದರೆ ಭಾರತದೊಂದಿನ ನಮ್ಮ ಸಂಬಂಧ ಈಗಲೂ ಹಾಗೇ ಇದೆ. ನಮ್ಮ ಸಂಸ್ಕೃತಿಯೂ ಭಾರತದ್ದೇ ಆಗಿದೆ,' ಎಂದು ಮುತ್ತುಸ್ವಾಮಿ ಹೇಳಿಕೊಂಡಿದ್ದಾರೆ.

ಹೆತ್ತವರು ಭಾವಪರವಶರಾದರು

ಹೆತ್ತವರು ಭಾವಪರವಶರಾದರು

ದಕ್ಷಿಣ ಆಫ್ರಿಕಾ ತಂಡಕ್ಕೆ ಆಯ್ಕೆಯಾಗಿದ್ದೇನೆ ಮತ್ತು ನನ್ನ ಟೆಸ್ಟ್ ಪಾದಾರ್ಪಣೆ ಭಾರತದ ವಿರುದ್ಧವೇ ಆಗಿದೆ ಎಂದು ತಿಳಿದಾಗ ನನ್ನ ಹೆತ್ತವರು ಭಾವಪರವಶರಾದರು. ಇದು ನನ್ನ ಪಾಲಿಗೆ ಇನ್ನೂ ವಿಶೇಷ ಅನ್ನಿಸಿದೆ,' ಎಂದು ಸೇನುರಾನ್ ಖುಷಿ ಹಂಚಿಕೊಂಡಿದ್ದಾರೆ.

ರೋಹಿತ್, ಮಯಾಂಕ್ ಅಬ್ಬರ

ರೋಹಿತ್, ಮಯಾಂಕ್ ಅಬ್ಬರ

ಟೆಸ್ಟ್‌ನಲ್ಲಿ ಆರಂಭಿಕರಾಗಿ ಚೊಚ್ಚಲ ಪಂದ್ಯವನ್ನಾಡಿದ್ದ ರೋಹಿತ್ ಶರ್ಮಾ 176 ರನ್, ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಮಯಾಂಕ್ ಅಗರ್ವಾಲ್ 215 ರನ್ ಬಾರಿಸಿದ್ದಾರೆ. 136 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 502 ರನ್ ಬಾರಿಸಿ ಡಿಕ್ಲೇರ್ ಘೋಷಿಸಿದೆ.

Story first published: Thursday, October 3, 2019, 16:31 [IST]
Other articles published on Oct 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X