ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಿಷಬ್ ಪಂತ್ ಮೈನಸ್ ಪಾಯಿಂಟ್ ಏನೆಂದು ಹೇಳಿದ ಲ್ಯಾನ್ಸ್ ಕ್ಲುಸೆನರ್

India vs South Africa: Lance Klusener pinpoints Rishabh Pant’s shortcomings

ನವದೆಹಲಿ, ಸೆಪ್ಟೆಂಬರ್ 13: ದಕ್ಷಿಣ ಆಫ್ರಿಕಾ ತಂಡದ ಮಾಜಿ ಆಲ್ ರೌಂಡರ್ ಲ್ಯಾನ್ಸ್ ಕ್ಲುಸೆನರ್ ರಿಷಬ್ ಪಂತ್ ಅವರ ನ್ಯೂನ್ಯತೆ ಏನೆಂಬುದನ್ನು ಹೇಳಿದ್ದಾರೆ. ಪಂತ್ ಆಟದ ವೇಳೆ ತಾನೇ ಮುಂದುವರೆದು ತಪ್ಪೆಸಗುವ ಬದಲು ಆತ ಇತರರ ತಪ್ಪನ್ನು ನೋಡಿ ಕಲಿಯೋದು ಉತ್ತಮ ಎಂದು ಕ್ಲುಸೆನರ್ ಅಭಿಪ್ರಾಯ ಪಟ್ಟಿದ್ದಾರೆ.

ಅರುಣ್ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ವೊಂದಕ್ಕೆ ವಿರಾಟ್ ಕೊಹ್ಲಿ ಹೆಸರುಅರುಣ್ ಜೇಟ್ಲಿ ಸ್ಟೇಡಿಯಂನ ಸ್ಟ್ಯಾಂಡ್‌ವೊಂದಕ್ಕೆ ವಿರಾಟ್ ಕೊಹ್ಲಿ ಹೆಸರು

ರಿಷಬ್ ಪಂತ್ ಏಕದಿನದಲ್ಲಿ 22.90, ಟಿ20ಐಯಲ್ಲಿ 21.57 ಸರಾಸರಿ ಹೊಂದಿದ್ದಾರೆ. ಇದು ಪಂತ್‌ ಮೇಲಿರುವ ನಿರೀಕ್ಷೆಗೆ ನ್ಯಾಯ ಒದಗಿಸುವ ಸರಾಸರಿಯೇನಲ್ಲ. ಆಟದ ವೇಳೆ ಎಡಗೈ ಬ್ಯಾಟ್ಸ್‌ಮನ್ ಪಂತ್ ಕೆಟ್ಟ ಹೊಡೆತಗಳಿಗೆ ಮುಂದಾಗಿ ಅನೇಕ ಸಾರಿ ವಿಕೆಟ್ ಒಪ್ಪಿಸಿದ್ದಾರೆ.

ಧೋನಿ ನಿವೃತ್ತಿ ಬಗ್ಗೆ ತುಟಿ ಬಿಚ್ಚಿದ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ಧೋನಿ ನಿವೃತ್ತಿ ಬಗ್ಗೆ ತುಟಿ ಬಿಚ್ಚಿದ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್

ಪಿಟಿಐ ಜೊತೆ ಮಾತನಾಡಿದ 48ರ ಹರೆಯದ ಕ್ಲುಸೆನರ್, 'ರಿಷಬ್ ಪಂತ್ ಅವರಂತ ಅದ್ಭುತ ಪ್ರತಿಭೆಯ ನ್ಯೂನ್ಯತೆ ಬಗ್ಗೆ ಮಾತಾಡೋದು ಕಷ್ಟ. ಆದರೆ ಒಂದು ಹೇಳೋದಾದ್ರೆ ಪಂತ್ ತನಗೆ ತಾನೇ ಕೊಂಚ ಮುಂದುವರೆದು ಆಡುವ ಪ್ರಯತ್ನ ಮಾಡುತ್ತಾರೆ ಅದು,' ಎಂದಿದ್ದಾರೆ.

ಡೆಲ್ಲಿ ಸೀನಿಯರ್ ತಂಡಕ್ಕೆ ವೈಟ್‌ಬಾಲ್ ಸಲಹೆಗಾರರಾಗಿ ಕಳೆದವರ್ಷ ಜವಾಬ್ದಾರಿ ನಿರ್ವಹಿಸಿದ್ದ ಕ್ಲುಸೆನರ್, ಡೆಲ್ಲಿ ಆಟಗಾರ ಪಂತ್ ಅವರನ್ನು ಗಮನಿಸಿದ್ದರು. ತನ್ನ ಸ್ವಂತ ತಪ್ಪುಗಳಿಂದ ಕಲಿಯಬೇಕು ಎನ್ನುವುದಕ್ಕೆ ವಿರುದ್ಧವಾಗಿ ಮಾತನಾಡಿರುವ ಕ್ಲುಸೆನರ್, ತನ್ನ ತಪ್ಪಿಗಿಂತ ಇತರರ ತಪ್ಪುಗಳಿಂದ ಕಲಿಯೋದು ಹೆಚ್ಚು ಅನುಕೂಲಕಾರಿ ಎಂದು ಹೇಳಿದ್ದಾರೆ.

ಟೆಸ್ಟ್ ಚಾಂಪಿಯನ್‌ಷಿಪ್ ಗೆಲ್ಲೋ ತಂಡ ಹೆಸರಿಸಿದ ಆಂಗ್ಲ ಮಾಜಿ ಕ್ರಿಕೆಟಿಗಟೆಸ್ಟ್ ಚಾಂಪಿಯನ್‌ಷಿಪ್ ಗೆಲ್ಲೋ ತಂಡ ಹೆಸರಿಸಿದ ಆಂಗ್ಲ ಮಾಜಿ ಕ್ರಿಕೆಟಿಗ

ಮಾತು ಮುಂದುವರೆಸಿದ ಕ್ಲುಸೆನರ್, 'ಪಂತ್‌ಗೆ ಇನ್ನೊಂದಿಷ್ಟು ಕಾಲಾವಕಾಶ ನೀಡಬೇಕಿದೆ. ಈ ಚೂರೇ ಕಾಲಾವಕಾಶ ಆತನ ಪ್ರತಿಭೆ ಮಿನುಗುವಂತೆ ಮಾಡುತ್ತಿದೆ,' ಎಂದರು. ಲ್ಯಾನ್ಸ್, ದಕ್ಷಿಣ ಆಫ್ರಿಕಾ ಪರ 49 ಟೆಸ್ಟ್, 171 ಏಕದಿನ ಪಂದ್ಯಗಳನ್ನಾಡಿದ್ದಾರೆ.

Story first published: Friday, September 13, 2019, 15:44 [IST]
Other articles published on Sep 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X