ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: 3ನೇ ಟೆಸ್ಟ್‌ ಪಂದ್ಯಕ್ಕೆ ಮಾಜಿ ನಾಯಕ ಎಂಎಸ್ ಧೋನಿ!?

India vs South Africa: MS Dhoni likely to attend Ranchi Test on Saturday

ರಾಂಚಿ, ಅಕ್ಟೋಬರ್ 18: ಭಾರತ vs ದಕ್ಷಿಣ ಆಫ್ರಿಕಾ ನಡುವಿನ 3ನೇ ಟೆಸ್ಟ್‌ ಪಂದ್ಯದ ವೇಳೆ ಮಾಜಿ ನಾಯಕ ಎಂಎಸ್ ಧೋನಿ ಕೂಡ ಉಪಸ್ಥಿತರಿರಲಿದ್ದಾರೆ. ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 18) ನಡೆಯುವ ಟೆಸ್ಟ್‌ ವೇಳೆ ಧೋನಿಯೂ ಸ್ಟೇಡಿಯಂನಲ್ಲಿರಲಿದ್ದಾರೆ.

ಕೋಚ್‌ಗಳಿಗೆ ಗೇಟ್‌ಪಾಸ್ ಕೊಟ್ಟ ಬಾಂಗ್ಲಾದೇಶ, ಕಾರಣ ಏನ್ ಗೊತ್ತಾ?!ಕೋಚ್‌ಗಳಿಗೆ ಗೇಟ್‌ಪಾಸ್ ಕೊಟ್ಟ ಬಾಂಗ್ಲಾದೇಶ, ಕಾರಣ ಏನ್ ಗೊತ್ತಾ?!

ಭಾರತ ಪ್ರವಾಸದಲ್ಲಿರುವ ಫಾ ಟು ಪ್ಲೆಸಿಸ್ ಪಡೆ, ಆತಿಥೇಯರ ವಿರುದ್ಧ 3 ಪಂದ್ಯಗಳ ಟೆಸ್ಟ್‌ ಸರಣಿಯ ಕೊನೇ ಪಂದ್ಯವನ್ನು ಶನಿವಾರದಿಂದ ಆಡಲಿದೆ. ಈಗಾಗಲೇ ಭಾರತ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಆಡುವ ತಂಡದಲ್ಲಿ ಧೋನಿ ಇರದಿದ್ದರೂ ಪಂದ್ಯದ ವೇಳೆ ಕೂಲ್ ಕ್ಯಾಪ್ಟನ್ ಹಾಜರಿರಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ.

ಭಾರತ vs ದಕ್ಷಿಣ ಆಫ್ರಿಕಾ, 3ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46115

ಧೋನಿ ಮತ್ತು ಅವರ ಬಾಲ್ಯದ ಸ್ನೇಹಿತ, ಜಾರ್ಖಂಡ್‌ ತಂಡದ ಮಾಜಿ ನಾಯಕ ಮಿಹಿರ್ ದಿವಾಕರ್ ಶನಿವಾರ ಮುಂಜಾನೆ ಮುಂಬೈನಿಂದ ರಾಂಚಿಗೆ ವಿಮಾನ ಪ್ರಯಾಣ ಹೊರಡಲಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಇಬ್ಬರೂ ಮೈದಾನಕ್ಕೆ ತಲುಪಲಿದ್ದಾರೆ. ಬಳಿಕ ಪಂದ್ಯ ವೀಕ್ಷಿಸಲಿದ್ದಾರೆ ಎಂದು ತಿಳಿದುಬಂದಿದೆ.

ಭಾರತ vs ದ.ಆಫ್ರಿಕಾ: ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ: ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ ವಿರಾಟ್ ಕೊಹ್ಲಿ

ಐಸಿಸಿ ವಿಶ್ವಕಪ್ 2019ರ ಮುಕ್ತಾಯದ ಬಳಿಕ ವೆಸ್ಟ್ ಇಂಡೀಸ್ ಪ್ರವಾಸ, ಭಾರತಕ್ಕೆ ದಕ್ಷಿಣ ಆಫ್ರಿಕಾ ಪ್ರವಾಸ, ಮುಂಬರಲಿರುವ ಬಾಂಗ್ಲಾ ವಿರುದ್ಧದ ಸರಣಿಯಲ್ಲೂ ಧೋನಿ ಪಾಲ್ಗೊಳ್ಳುತ್ತಿಲ್ಲ. ಬಿಸಿಸಿಐ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾಜಿ ನಾಯಕ ಸೌರವ್ ಗಂಗೂಲಿ, ಧೋನಿ ಭವಿಷ್ಯದ ಬಗ್ಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಈ ಮಹತ್ವದ ಬದಲಾವಣೆ ತಂದ ಮೊದಲ ತಂಡ ಆರ್‌ಸಿಬಿ!ಐಪಿಎಲ್‌ನಲ್ಲಿ ಈ ಮಹತ್ವದ ಬದಲಾವಣೆ ತಂದ ಮೊದಲ ತಂಡ ಆರ್‌ಸಿಬಿ!

3ನೇ ಟೆಸ್ಟ್‌ಗೆ ಭಾರತ ಸಂಭಾವ್ಯ XI: ಮಯಾಂಕ್ ಅಗರ್ವಾಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ವೃದ್ಧಿಮಾನ್ ಸಹಾ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್/ಕುಲದೀಪ್ ಯಾದವ್/ಹನುಮಾ ವಿಹಾರಿ.

Story first published: Friday, October 18, 2019, 18:33 [IST]
Other articles published on Oct 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X