ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ದ.ಆಫ್ರಿಕಾ: ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ?!

IND vs RSA : ಟಿ20ಗೆ ಧೋನಿ ಬದಲು ರಿಷಬ್ ಪಂತ್ ಆಯ್ಕೆ? | Oneindia Kannada
India vs South Africa: MS Dhoni unlikely for T20I series

ನವದೆಹಲಿ, ಆಗಸ್ಟ್ 28: ಭಾರತಕ್ಕೆ ಪ್ರವಾಸ ಕೈಗಳ್ಳಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ, ಆತಿಥೇಯರ ವಿರುದ್ಧ ಸೆಪ್ಟೆಂಬರ್ 15ರಿಂದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಟಿ20 ಸರಣಿಗೆ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಆಯ್ಕೆಯಾಗುವ ಸಾಧ್ಯತೆ ತೀರಾ ಕಡಿಮೆ ಎನ್ನುತ್ತಿವೆ ಮೂಲಗಳು.

85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!85ರ ಹರೆಯದಲ್ಲಿ ನಿವೃತ್ತಿ ಘೋಷಿಸಿದ 7000 ವಿಕೆಟ್‌ಗಳ ಸರದಾರ ಸೆಸಿಲ್!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ನೀಡುವ ಆಲೋಚನೆಯನ್ನು ಧೋನಿ ಸದ್ಯ ಹಿಡಿದಿಟ್ಟುಕೊಂಡಿದ್ದಾರೆ. ಆದರೆ ಮುಂಬರಲಿರುವ ಪ್ರವಾಸ ಸರಣಿಗಳಲ್ಲಿ ಧೋನಿಯನ್ನು ಆಯ್ಕೆ ಸಮಿತಿ ಪರಿಗಣಿಸಲಿದೆ ಅನ್ನೋದಕ್ಕೆ ಗ್ಯಾರಂಟಿಯಿಲ್ಲ. ಧೋನಿ ಕ್ರಮೇಣ ಮೂಲೆಗುಂಪಾಗುವುದರಲ್ಲಿದ್ದಾರೆ ಅನ್ನೋದಂತೂ ನಿಜ.

ಕೆಪಿಎಲ್: ಬಿಜಾಪುರ್ ಎದುರು ಸೋತರೂ ಪ್ಲೇ ಆಫ್ ಪ್ರವೇಶಿಸಿದ ಶಿವಮೊಗ್ಗ!ಕೆಪಿಎಲ್: ಬಿಜಾಪುರ್ ಎದುರು ಸೋತರೂ ಪ್ಲೇ ಆಫ್ ಪ್ರವೇಶಿಸಿದ ಶಿವಮೊಗ್ಗ!

ಭಾರತದ ವೆಸ್ಟ್ ಇಂಡೀಸ್‌ ಪ್ರವಾಸ ಸರಣಿಯಲ್ಲೂ ಧೋನಿ ಪಾಲ್ಗೊಂಡಿಲ್ಲ. ಈ ಸರಣಿಗೆ ಬದಲು ತಾನು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವುದಾಗಿ ಸ್ವತಃ ಧೋನಿಯೇ ಹೇಳಿಕೊಂಡಿದ್ದರು.

ಸೆಪ್ಟೆಂಬರ್ 4ರಂದು ತಂಡ ಪ್ರಕಟ

ಸೆಪ್ಟೆಂಬರ್ 4ರಂದು ತಂಡ ಪ್ರಕಟ

ಸೆಪ್ಟೆಂಬರ್‌ 15ರಂದು ಹಿಮಾಚಲ್ ಪ್ರದೇಶದ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಟಿ20 ಸರಣಿಗಾಗಿ ಸೆಪ್ಟೆಂಬರ್‌ 4ರಂದು ಬಿಸಿಸಿಐ ತಂಡ ಪ್ರಕಟಿಸುವುದನ್ನು ನಿರೀಕ್ಷಿಸಲಾಗಿದೆ. ಟಿ20 ಸರಣಿಯಲ್ಲಿ ಧೋನಿ ಆಯ್ಕೆಗೊಳ್ಳುವ ಸಾಧ್ಯತೆ ಕಡಿಮೆಯಿದೆ. ಧೋನಿ ಬದಲು ಪಂತ್‌ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಬೆಂಗಳೂರಿನಲ್ಲೂ ಪಂದ್ಯ

ಬೆಂಗಳೂರಿನಲ್ಲೂ ಪಂದ್ಯ

ಟಿ20 ಸರಣಿಯ ಆರಂಭಿಕ ಪಂದ್ಯ ಧರ್ಮಶಾಲಾದಲ್ಲಿ ನಡೆದರೆ, 2ನೇ ಪಂದ್ಯ ಸೆಪ್ಟೆಂಬರ್ 18ರಂದು ಪಂಜಾಬ್‌ನ ಮೊಹಾಲಿ ಸ್ಟೇಡಿಯಂನಲ್ಲಿ, 3ನೇ ಪಂದ್ಯ ಸೆಪ್ಟೆಂಬರ್ 22ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಧೋನಿ ಜಾಗವನ್ನು ಪಂತ್ ಆವರಿಸಿರುವುದನ್ನು ಗಮನಿಸಿದರೆ, ಭವಿಷ್ಯದ ದಿನಗಳಲ್ಲಿ ಭಾರತದ ಕೀಪರ್‌ ಆಗಿ ಪಂತ್‌ ನಿಲೆಯೂರುವುದರಲ್ಲಿದ್ದಾರೆ ಎಂಬಂತಿದೆ.

ವರ್ಲ್ಡ್ ಟಿ20 ಟೂರ್ನಿ

ವರ್ಲ್ಡ್ ಟಿ20 ಟೂರ್ನಿ

'ಭಾರತ ತಂಡ ವಿಶ್ವ ಟಿ20 ಟೂರ್ನಿಯ ಮೊದಲ ಪಂದ್ಯ ಆಡುವುದಕ್ಕೂ ಮುನ್ನ ಒಟ್ಟು 22 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲಿದೆ. ಹೀಗಾಗಿ ವರ್ಲ್ಡ್ ಟಿ20ಯತ್ತ ಮುಂದಡಿಯಿಡಲು ಆಯ್ಕೆ ಸಮಿತಿ ಬಯಸಿದೆ,' ಎಂದು ಬಿಸಿಸಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 2020ರ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ವರ್ಲ್ಡ್ ಟಿ20 ಟೂರ್ನಿ ನಡೆಯಲಿದೆ.

ಪಂತ್‌ಗೆ ಹೆಚ್ಚು ಅವಕಾಶ

ಪಂತ್‌ಗೆ ಹೆಚ್ಚು ಅವಕಾಶ

'ನಿವೃತ್ತಿ ಅವರವರ ವೈಯಕ್ತಿಕ ನಿರ್ಧಾರ. ಆಯ್ಕೆ ಸಮಿತಿ ಅಥವಾ ಇನ್ಯಾರಿಗೂ ಆ ವಿಚಾರದಲ್ಲಿ ಅಧಿಕಾರವಿಲ್ಲ. ಆದರೆ ಆಯ್ಕೆ ಸಮಿತಿ 2020ರ ವರ್ಲ್ಡ್ ಟಿ20ಯನ್ನು ಆಯೋಚನೆಯಲ್ಲಿಟ್ಟುಕೊಂಡು ಅದಕ್ಕೆ ತಕ್ಕ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿರುವುದಂತೂ ನಿಜ. ಹೀಗಾಗಿ ರಿಷಬ್‌ ಪಂತ್‌ಗೆ ಹೆಚ್ಚ ಅವಕಾಶಗಳನ್ನು ನೀಡಲು ಆಯ್ಕೆ ಸಮಿತಿ ಬಯಸಿದೆ,' ಎಂದು ಬಿಸಿಸಿಐ ಅಧಿಕಾರಿಗಳು ವಿವರಿಸಿದ್ದಾರೆ.

Story first published: Wednesday, August 28, 2019, 17:25 [IST]
Other articles published on Aug 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X