ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ತಂಡದಿಂದ ಧೋನಿ ಕೈಬಿಟ್ಟಿದ್ದೇಕೆಂದು ಬಾಯ್ಬಿಟ್ಟ ಎಂಎಸ್‌ಕೆ ಪ್ರಸಾದ್

ಮತ್ತೆ ತಂಡದಿಂದ ಧೋನಿಯನ್ನು ಕೈ ಬಿಟ್ಟುದ್ದು ಏಕೆ ಗೊತ್ತಾ..? | MS Dhoni | Oneindia Kannada
India vs South Africa: No MS Dhoni in India’s T20I squad, MSK Prasad reveals why

ನವದೆಹಲಿ, ಆಗಸ್ಟ್ 30: ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ದಕ್ಷಿಣ ಆಫ್ರಿಕಾ ತಂಡ, ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ಸರಣಿಗಾಗಿ ಪ್ರಕಟಿಸಲಾದ ಭಾರತ ತಂಡದಲ್ಲಿ ಮಾಜಿ ನಾಯಕ ಎಂಎಸ್ ಧೋನಿಯ ಹೆಸರಿಲ್ಲ. ಧೋನಿಯನ್ನು ಯಾಕೆ ತಂಡದಲ್ಲಿ ಸೇರಿಸಿಲ್ಲ ಎಂಬುದನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿಕೊಂಡಿದ್ದಾರೆ.

ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗೆ ತಂಡ ಪ್ರಕಟಿಸಿದ ವೆಸ್ಟ್ ಇಂಡೀಸ್

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗಾಗಿ ಧೋನಿಯನ್ನು ಸೇರಿಸಲಾಗಿಲ್ಲ. ಯಾಕೆಂದರೆ ಸ್ವತಃ ಧೋನಿಯೇ ಈ ಸರಣಿಗಾಗಿ ತಾನು ಲಭ್ಯವಿಲ್ಲವೆಂದು ತಿಳಿಸಿದ್ದರು. ಹೀಗಾಗಿ ಅವರ ಹೆಸರನ್ನು 15 ಜನರ ತಂಡದಲ್ಲಿ ಹೆಸರಿಸಲಾಗಿಲ್ಲ ಎಂದು ಪ್ರಸಾದ್ ತಿಳಿಸಿದ್ದಾರೆ. ಸೆಪ್ಟೆಂಬರ್ 15ರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಗೊಳ್ಳಲಿದೆ.

ಕೆಪಿಎಲ್: ಲಯನ್ಸ್ ಮಣಿಸಿ ಕ್ವಾಲಿಫೈಯರ್-2ಕ್ಕೆ ಲಗ್ಗೆಯಿಟ್ಟ ಟೈಗರ್ಸ್ಕೆಪಿಎಲ್: ಲಯನ್ಸ್ ಮಣಿಸಿ ಕ್ವಾಲಿಫೈಯರ್-2ಕ್ಕೆ ಲಗ್ಗೆಯಿಟ್ಟ ಟೈಗರ್ಸ್

ಧೋನಿ ಅಲಭ್ಯತೆ ಕುರಿತು ಎಂಎಸ್‌ಕೆ ಪ್ರಸಾದ್ ಅವರಲ್ಲಿ ಪ್ರಶ್ನಿಸಿದಾಗ, 'ಹೌದು. ಸರಣಿಗಾಗಿ ಆಯ್ಕೆಗೆ ಧೋನಿಯೇ ಲಭ್ಯರಿರಲಿಲ್ಲ,' ಎಂದು ಇಂಡಿಯಾ ಟುಡೇ ಜೊತೆ ಹೇಳಿಕೊಂಡಿದ್ದಾರೆ. ಇಲ್ಲಿ ಧೋನಿಯನ್ನು ಕಡೆಗಣಿಸಿರುವ ವಿಚಾರವೇ ಇಲ್ಲ ಎಂದೂ ಎಂಎಸ್‌ಕೆ ಸ್ಪಷ್ಟಪಡಿಸಿದ್ದಾರೆ. ವಿಶ್ವಕಪ್‌ ಬಳಿಕ ಧೋನಿ ತಾನು 2 ತಿಂಗಳ ಕಾಲ ಕ್ರಿಕೆಟ್‌ನಿಂದ ಬಿಡುವು ಪಡೆದುಕೊಳ್ಳುವುದಾಗಿ ತಿಳಿಸಿದ್ದರು.

ದ್ರಾವಿಡ್ ಬದಲಿಗೆ ಹೊಸಬರು, ಇಂಡಿಯಾ 'ಎ' ಅಂಡರ್ 19 ಕೋಚ್ ಬದಲುದ್ರಾವಿಡ್ ಬದಲಿಗೆ ಹೊಸಬರು, ಇಂಡಿಯಾ 'ಎ' ಅಂಡರ್ 19 ಕೋಚ್ ಬದಲು

ಈ ಎರಡು ತಿಂಗಳ ಬಿಡುವಿನಲ್ಲಿ ಸೇನೆಗೂ ಕೊಂಚ ಸೇವೆ ಸಲ್ಲಿಸುವುದಾಗಿ ಧೋನಿ ಹೇಳಿದ್ದರು. ಅದರಂತೆ ಧೋನಿ, ಕಾಶ್ಮೀರದಲ್ಲಿ 15 ದಿನಗಳ ಕಾಲ ಕಾವಲು ಕಾಯುವ, ಗಸ್ತು ತಿರುಗುವ ಕಾರ್ಯ ನಿರ್ವಹಿಸಿದ್ದಾರೆ. ಕ್ರಿಕೆಟ್‌ನಿಂದ ತಾನಾಗೇ ಸ್ವಲ್ಪ ದೂರ ಉಳಿದಿರುವ ಎಂಎಸ್‌ಡಿ ಸದ್ಯ ಯುನೈಟೆಡ್ ಸ್ಟೇಟ್ಸ್‌ನಲ್ಲಿ ರಜೆ ದಿನಗಳನ್ನು ಕಳೆಯುತ್ತಿದ್ದಾರೆ.

ಐಸಿಸಿ ಅಮಾನತುಗೊಳಿಸುವಂತೆ ಬಿಸಿಸಿಐ ಕೋರಿದ ಸಚಿನ್ ಅಭಿಮಾನಿ!ಐಸಿಸಿ ಅಮಾನತುಗೊಳಿಸುವಂತೆ ಬಿಸಿಸಿಐ ಕೋರಿದ ಸಚಿನ್ ಅಭಿಮಾನಿ!

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಗೆ ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ ನಾಯಕ), ಕೆಎಲ್ ರಾಹುಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೃನಾಲ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಖಲೀಲ್ ಅಹ್ಮದ್, ದೀಪಕ್ ಚಾಹರ್, ನವದೀಪ್ ಸೈನಿ.

Story first published: Friday, August 30, 2019, 15:54 [IST]
Other articles published on Aug 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X